Asianet Suvarna News Asianet Suvarna News

Relationship Tips: ಮಗು ಹುಟ್ಟಿದ ನಂತರ ಗಂಡನ ಸ್ವಭಾವ ಬದಲಾಗುತ್ತಾ ?

ದಾಂಪತ್ಯ ಎಂಬುದು ತುಂಬಾ ಸೂಕ್ಷ್ಮವಾದುದು. ಅದನ್ನು ಸರಿಯಾಗಿ ನಿಭಾಯಿಸಬೇಕು. ಕೆಲ ದಾಂಪತ್ಯಗಳಲ್ಲಿ ಮಗು ಹುಟ್ಟಿದ ನಂತರ ಗಂಡ-ಹೆಂಡತಿಯ ಮಧ್ಯೆ ಬಿರುಕು ಬಂದು ಬಿಡುತ್ತೆ. ಹೀಗೆಲ್ಲಾ ಆಗದಿರಲು ಏನು ಮಾಡಬಹುದು ? ಇಲ್ಲಿದೆ ಕೆಲ ಸಲಹೆಗಳು.

Baby Can ChangeYour Life With Your Partner, What You Can Do About It Vin
Author
First Published Sep 18, 2022, 5:34 PM IST

ಕುಟುಂಬವೊಂದಕ್ಕೆ ಮಗುವಿನ ಆಗಮನದಿಂದ ಮನೆಯಲ್ಲಿ ಖುಷಿಯ ಬರುವಿಕೆಯ ಜೊತೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮಾತ್ರವಲ್ಲ ಗಂಡ-ಹೆಂಡತಿ ನಡುವಿನ ಜೀವನಶೈಲಿಯಲ್ಲಿಯೂ ಬದಲಾವಣೆ ತರುತ್ತವೆ. ಮುಖ್ಯವಾಗಿ ಗಂಡ-ಹೆಂಡತಿಯ ಮಧ್ಯೆ ಹೊಸ ಮಗುವಿನ ಆಗಮನ ಹೆಚ್ಚು ಅಂತರವನ್ನುಂಟು ಮಾಡಬಹುದು. ಅದರಲ್ಲೂ ಕೆಲ ದಾಂಪತ್ಯಗಳಲ್ಲಿ ಮಗು ಹುಟ್ಟಿದ ನಂತರ ಗಂಡ-ಹೆಂಡತಿಯ ಮಧ್ಯೆ ಬಿರುಕು ಬಂದು ಬಿಡುತ್ತೆ. ಹೀಗೆಲ್ಲಾ ಆಗದಿರಲು ಏನು ಮಾಡಬಹುದು ? ಇಲ್ಲಿದೆ ಕೆಲ ಸಲಹೆಗಳು.

1. ದೈಹಿಕ ಅನ್ಯೋನ್ಯತೆ ಕೊರತೆ: ಮಗುವಿನ ಆಗಮನದ ನಂತರ, ಹೆಚ್ಚಿನ ದಂಪತಿಗಳು ಪರಸ್ಪರ ದೈಹಿಕ ಅನ್ಯೋನ್ಯತೆಯ ಕೊರತೆಯನ್ನು ಅನುಭವಿಸುತ್ತಾರೆ. ಚಿಕ್ಕ ಮಗುವನ್ನು ಕಾಳಜಿ ವಹಿಸಿದ ನಂತರ ಪೋಷಕರು ದಣಿದಿರುತ್ತಾರೆ ಮತ್ತು ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ದಂಪತಿಗಳ ನಡುವಿನ ಭಾವನಾತ್ಮಕ ತಿಳುವಳಿಕೆಯ ಮಟ್ಟದಲ್ಲಿ ಇಳಿಕೆಗೆ ಕಾರಣವಾಗಬಹುದು ಮತ್ತು ಘರ್ಷಣೆಗೆ ಕಾರಣವಾಗಬಹುದು. ಇದನ್ನು ಎದುರಿಸಲು ಒಂದು ಮಾರ್ಗವೆಂದರೆ ಪ್ರಜ್ಞಾಪೂರ್ವಕವಾಗಿ ನಿಮ್ಮ ಸಂಗಾತಿಯೊಂದಿಗೆ ಆಪ್ತತೆಯಿಂದ ಸಮಯ ಕಳೆಯಿರಿ. ಡೇಟಿಂಗ್‌, ಶಾಪಿಂಗ್ ಎಂದು ಸಮಯ ಮಾಡಿಕೊಂಡು ತಿರುಗಾಡಿ ಬನ್ನಿ. ಇದು ಇಬ್ಬರ ನಡುವೆ ಆಪ್ತತೆ ಹೆಚ್ಚಿಸುತ್ತದೆ. ದೈಹಿಕ ಅನ್ಯೋನ್ಯತೆ ಆರೋಗ್ಯಕರ ಸಂಬಂಧದ ಪ್ರಮುಖ ಭಾಗವಾಗಿದೆ ಎಂಬುದನ್ನು ಮರೆಯಬೇಡಿ.

ಹುಡುಗೀರು ಸುಮ್ ಸುಮ್ನೆ ಬೀಳೋಲ್ಲ, ವ್ಯಕ್ತಿತ್ವ ಚೆನ್ನಾಗಿರೋ ಹಾಗೆ ನೋಡ್ಕಳ್ಳಿ ಸಾಕು!

2. ಕೆಲಸಗಳನ್ನು ವಿಭಜಿಸುವುದು: ನವಜಾತ ಶಿಶುವಿಗೆ (Baby) ನಿರಂತರ ಆರೈಕೆಯ ಅಗತ್ಯವಿರುತ್ತದೆ. ಇದನ್ನು ಒಬ್ಬರು ಮಾತ್ರ ಮಾಡಲು ಸಾಧ್ಯವಿಲ್ಲ. ಶಿಶುಗಳು ಕೇವಲ ಒಬ್ಬ ಪೋಷಕರ ಜವಾಬ್ದಾರಿ (Responsibility)ಯಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು; ಅವರು ಎರಡೂ ಪಾಲುದಾರರ ಜವಾಬ್ದಾರಿ. ಹೀಗಾಗಿ ಮಗುವಿಗೆ ಸಂಬಂಧಿಸಿದ ಕೆಲಸವನ್ನು ಜೊತೆಗೂಡಿ ಮಾಡಿ. ಪಾಲುದಾರರಾಗಿ, ನೀವು ಮನೆಯ ಕೆಲಸವನ್ನು ಮತ್ತು ಮಗುವಿನ ಕೆಲಸಗಳನ್ನು ಸರಿ ಸಮಾನವಾಗಿ ಹಂಚಿಕೊಳ್ಳಬಹುದು. ತಂಡವಾಗಿ ಕೆಲಸ ಮಾಡಲು ಪರಸ್ಪರ ಸಹಾಯ ಮಾಡಬಹುದು. ನಿಮ್ಮ ಸಂಗಾತಿಯನ್ನು ನೀವು ಬೆಂಬಲಿಸುವ ಮತ್ತು ಅರ್ಥಮಾಡಿಕೊಳ್ಳುವಂತೆ ಮಾಡಿದಾಗ, ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ಭವಿಷ್ಯದಲ್ಲಿ ನಿಮ್ಮ ದಾರಿಯಲ್ಲಿ ಬರಬಹುದಾದ ಇತರ ಪ್ರಮುಖ ಬದಲಾವಣೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

3. ತಾಯಿಗೆ ಹೆಚ್ಚಿನ ಕಾಳಜಿ ಅಗತ್ಯ: ದೈಹಿಕ ಮತ್ತು ಭಾವನಾತ್ಮಕ (Emotional) ಅಂಶಗಳಲ್ಲಿ ಹಠಾತ್ ಬದಲಾವಣೆ ಮತ್ತು ಮಗುವಿನ ಆರೈಕೆಯಿಂದಾಗಿ ಹೊಸ ತಾಯಂದಿರು ಸಾಮಾನ್ಯವಾಗಿ ನಂತರದ ಗರ್ಭಧಾರಣೆಯ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಹೊಸ ತಾಯಿಯ ಬಗ್ಗೆ ಹೆಚ್ಚು ಕಾಳಜಿ (Care) ವಹಿಸಬೇಕಾದುದು ಅಗತ್ಯವಾಗಿದೆ. ಇದರ ಬಗ್ಗೆ ನೀವು ಏನು ಮಾಡಬಹುದು ಎಂಬುದು ಇಲ್ಲಿದೆ. ಪಾಲುದಾರರು ಪತ್ನಿಗೆ ಹೆಚ್ಚು ಗಮನ ನೀಡುವ ಮೂಲಕ ಸಹಾಯ ಮಾಡಬಹುದು. ತಾಯಿಯ ಆಯ್ಕೆಯ ಆಹಾರ ಮತ್ತು ಕಾಳಜಿಯನ್ನು ನೀಡುವ ಮೂಲಕ ಮತ್ತು ಸಾಧ್ಯವಾದಾಗಲೆಲ್ಲಾ ಅವರಿಗೆ ಎಲ್ಲಾ ಕೆಲಸಗಳಿಂದ ಒಂದು ದಿನ ರಜೆ ನೀಡುವ ಮೂಲಕ ನೀವು ಅವರಿಗೆ ವಿಶ್ರಾಂತಿ ನೀಡಬಹುದು. ನಿಮ್ಮ ಸಂಬಂಧವು (Relationship) ತುಂಬಾ ಹದಗೆಟ್ಟಿದೆ ಎಂದು ನೀವು ಭಾವಿಸಿದರೆ ಅಥವಾ ನಿಮ್ಮ ಸಂಗಾತಿಯ ಮಾನಸಿಕ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಇಲ್ಲ ಎಂದು ನೀವು ಭಾವಿಸಿದರೆ, ನೀವು ವೃತ್ತಿಪರರಿಂದ ಸಲಹೆ ಪಡೆಯಬಹುದು ಮತ್ತು ಹೊಸ ಜೀವನಶೈಲಿಯ ಬದಲಾವಣೆಗಳ ಬಗ್ಗೆ ಮಾತನಾಡಬಹುದು.

43 ವರ್ಷದಲ್ಲಿ 53 ಮದ್ವೆಯಾದ ಸೌದಿಯ ಅಬ್ದುಲ್ಲಾ: ಕಾರಣ ಕೇಳಿ ಬೆಚ್ಚಿದ ಸಿಂಗಲ್ಸ್!

4. ಸಮಯದ ಕೊರತೆ: ಮಗುವಿನ ಕಾಳಜಿಯಲ್ಲೇ ದಿನದ ಹಲವು ಗಂಟೆಗಳು ಕಳೆದು ಹೋಗುತ್ತವೆ. ಹೀಗಾಗಿ ದಣಿದಿರುವ ನೀವು ಉಳಿದಿರುವ ಸಮಯದೊಂದಿಗೆ,  ಬೇರೆ ಏನನ್ನೂ ಮಾಡುವುದಕ್ಕಿಂತ ಹೆಚ್ಚಾಗಿ ಮಲಗಲು ಬಯಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಸಾಧ್ಯವಾಗುತ್ತಿಲ್ಲ ಮಾತ್ರವಲ್ಲದೆ ನಿಮ್ಮೊಂದಿಗೆ ನೀವು ಸಮಯ (Time) ಕಳೆಯುವುದು ಅಪರೂಪ. ಇದು ಭಾರೀ ಆಯಾಸಕ್ಕೆ ಕಾರಣವಾಗಬಹುದು. ಇಂಥಾ ಸಂದರ್ಭದಲ್ಲಿ ಕೆಲಸವನ್ನು ಹಂಚಿಕೊಂಡು ಸಮಯವನ್ನು ಹೊಂದಿಸಲು ಕಲಿಯಿರಿ. 

5. ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸಿ: ತಾಯ್ತನವು ಒತ್ತಡದಿಂದ ಕೂಡಿರಬಹುದು. ಯಾಕೆಂದರೆ ಮಗುವಿನ ಕೆಲಸವನ್ನು ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಆ ಕೆಲಸಗಳ್ನೆಲ್ಲಾ ಮಾಡುವಾಗ ನೀವು ಒತ್ತಡ (Pressure)ವನ್ನು ಅನುಭವಿಸುವ ಬದಲು ನಿಮ್ಮ ಸಂಗಾತಿಯಿಂದ ಸ್ವಲ್ಪ ಸಮಯದವರೆಗೆ ಮುಕ್ತವಾಗಿ ಸಮಯ ಕಳೆಯಿರಿ. ನೀವು ನಿಮ್ಮ ನೆಚ್ಚಿನ ಹವ್ಯಾಸಗಳಲ್ಲಿ ಪಾಲ್ಗೊಳ್ಳಬಹುದು, ವ್ಯಾಯಾಮ ಮಾಡಬಹುದು ಅಥವಾ ಸರಳವಾಗಿ, ಧ್ಯಾನವನ್ನು ಮಾಡಿ ಸಮಯ ಕಳೆಯಬಹುದು.

Follow Us:
Download App:
  • android
  • ios