‘ಕ್ರೇಜಿ ರಿಚ್ ಏಷ್ಯನ್’ ಮದುವೆಯ ವಿಡಿಯೋ ವೈರಲ್ ಆಗಿದೆ. ಚೀನಾದಲ್ಲಿ ನಡೆದ ಈ ಮದುವೆಯ ಅದ್ಧೂರಿತನ ಕೇಳಿದವರು ಇದು ಚೀನಾದ ಅಂಬಾನಿ ಮನೆಯ ವಿವಾಹ ಎನ್ನುತ್ತಿದ್ದಾರೆ.  

ಕೆವಿನ್ ಕ್ವಾನ್ ಅವರ ಹೆಚ್ಚು ಮಾರಾಟವಾದ ಪುಸ್ತಕ ಸರಣಿ ‘ಕ್ರೇಜಿ ರಿಚ್ ಏಷ್ಯನ್’. ಇದು ಚಲನಚಿತ್ರವಾಗಿಯೂ ಹಿಟ್ ಆಯಿತು. ಈ ಏಷ್ಯನ್ನರು ಹೇಗೆಲ್ಲ ಖರ್ಚು ಮಾಡುತ್ತಾರೆಂಬುದು ನಿಜವಾಗಿಯೂ ಕ್ರೇಜಿಯಾಗಿದೆ. ಇದೀಗ ಅದನ್ನು ಸಾಬೀತು ಮಾಡುವಂಥ ಮದುವೆ ಚೀನಾದಲ್ಲಿ ನಡೆದಿದೆ. 

ಇಲ್ಲಿ ಅತಿಥಿಗಳೇ ಸೂಪರ್ ಸೆಲೆಬ್ರಿಟಿಗಳು. ಅವರಿಗೆಲ್ಲ ಫೈವ್ ಸ್ಟಾಪರ್ ಹೋಟೆಲ್‌ನಲ್ಲಿ ವಸತಿ, ಪ್ರತಿಯೊಬ್ಬರಿಗೂ ಇರುವಷ್ಟಪು ಸಮಯಕ್ಕೆ ಬಳಸು ರೋಲ್ಸ್ ರಾಯ್ಸ್ ಕಾರು ಮತ್ತು ಚಾಲಕ, ಇನ್ನು ಚೀನೀಯರೆಂದರೆ ಊಟದ ಮಾತು ಕೇಳೋದೇ ಬೇಡ.. ಯಾವ ಪ್ರಾಣಿ ಕ್ರಿಮಿ ಕೀಟವೂ ಉಳಿದಿರೋದೇ ಡೌಟು..! ಇಷ್ಟರ ಮೇಲೆ ಸಾಲದೆಂಬಂತೆ ಪ್ರತಿ ಅತಿಥಿಗೂ 66,000 ರೂ.ಗಳನ್ನೊಳಗೊಂಡ ಲಕೋಟೆ, ಇನ್ನೂ ಬೇಕಿದ್ದರೆ ತಗೊಳ್ಳಿ ಎಂಬ ಉದಾರತೆಯ ಪಾಕೆಟ್‌ಗಳು...

ಅಬ್ಬಬ್ಬಾ! ಅಂಬಾನಿ ಕುಟುಂಬದ ವಿವಾಹಪೂರ್ವ ಸಮಾರಂಭಗಳು ಜಗತ್ತಿನಾದ್ಯಂತ ಸದ್ದು ಮಾಡಿದ ಹೊತ್ತಿಗೇ ಅದನ್ನು ಮೀರಿಸುವಂಥ ಅದ್ಧೂರಿತನದ ಮದುವೆ ಚೀನಾದಲ್ಲಿ ನಡೆದಿದೆ. ಈ ಅದ್ಧೂರಿ ಚೀನೀ ವಿವಾಹದ ವೀಡಿಯೊವನ್ನು ಅತಿಥಿ ಡಾನಾ ವಾಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸಂಪ್ರದಾಯದಂತೆ ಪ್ರಯಾಣ ವ್ಯವಸ್ಥೆ ನಿಮ್ಮದೇ ಎನ್ನುವ ಬದಲು ದಂಪತಿಯು ಎಲ್ಲಾ ವಿದೇಶಿ ಅತಿಥಿಗಳನ್ನು ಸ್ಥಳಕ್ಕೆ ಉಚಿತವಾಗಿ ವಿಮಾನದ ಮೂಲಕ ಕರೆಸಿಕೊಂಡರು ಎಂದು ಅವರು ಹೇಳಿದ್ದಾರೆ.

ಈ ಸೂಪರ್ ಸ್ಟಾರ್ ಮಗಳು 11 ವರ್ಷದಲ್ಲೇ ಮೊದಲ ಪ್ರಾಜೆಕ್ಟಿಗೆ ಗಳಿಸಿದ್ದು 1 ಕೋಟಿ; ಇಷ್ಟೊಂದು ಹಣ ಏನ್ ಮಾಡಿದ್ಲು?

ಐದು ದಿನಗಳ ಕಾಲ ಐಷಾರಾಮಿ ಪಂಚತಾರಾ ಹೋಟೆಲ್‌ನಲ್ಲಿ ಅತಿಥಿಗಳನ್ನು ಇರಿಸಲಾಗಿತ್ತು. ಅವರು ನಗರವನ್ನು ಅನ್ವೇಷಿಸಲು ಬಯಸಿದರೆ, ಅವರನ್ನು ರೋಲ್ಸ್ ರಾಯ್ಸ್ ಮತ್ತು ಬೆಂಟ್ಲೀಸ್‌ಗಳಲ್ಲಿ ಕರೆದೊಯ್ಯಲಾಯಿತು.

ಮದುವೆ ಸಮಾರಂಭದ ಅದ್ಧೂರಿತನ ವಿವರಣಗೆ ಮೀರುವಂತೆ ಇತ್ತು. ಗೊಂಚಲುಗಳು ಮತ್ತು ಅತಿರಂಜಿತ ಹೂವಿನ ವ್ಯವಸ್ಥೆಗಳಿಂದ ಅಲಂಕರಿಸಲ್ಪಟ್ಟ ದೊಡ್ಡ ಸ್ಥಳದಲ್ಲಿ ನಡೆಸಲಾಯಿತು. 'ಮದುವೆಯ ಅಲಂಕಾರವು ತುಂಬಾ ಸುಂದರವಾಗಿತ್ತು, ನಾನು ಯುರೋಪಿನಲ್ಲಿದ್ದೇನೆ ಎಂದು ನನಗೆ ಅನಿಸಿತು' ಎಂದು ವಾಂಗ್ ಹೇಳಿದ್ದಾರೆ.

ಆದಾಗ್ಯೂ, ತಮ್ಮ ಎಲ್ಲ ಅತಿಥಿಗಳಿಗೆ 'ಕೆಂಪು ಲಕೋಟೆಗಳನ್ನು' ಹಸ್ತಾಂತರಿಸುವ ದಂಪತಿಗಳ ಇಂಗಿತವು ಅತ್ಯಂತ ಆಶ್ಚರ್ಯಕರವಾಗಿತ್ತು.

ಸಾಂಪ್ರದಾಯಿಕ ಚೀನೀ ವಿವಾಹಗಳಲ್ಲಿ, ಭಾರತದಂತೆಯೇ ವಧುವರರಿಗೆ ಉಡುಗೊರೆ ಕಡುವ ಅಥವಾ ಕೆಂಪು ಲಕೋಟೆಯಲ್ಲಿ ಹಣ ಹಾಕಿ ಕೊಡುವ ಅಭ್ಯಾಸವಿದೆ. ಆದರೆ, ಇಲ್ಲಿ ದಂಪತಿಗಳು ಯಾವುದೇ ಅತಿಥಿಗಳಿಂದ ಹಣವನ್ನು ಸ್ವೀಕರಿಸಲು ನಿರಾಕರಿಸಿದರು. ಬದಲಾಗಿ, ಪ್ರತಿ ಅತಿಥಿಗೆ ಅವರೇ $800 (ಸುಮಾರು ₹66,700) ಒಳಗೊಂಡಿರುವ ಕೆಂಪು ಲಕೋಟೆಯನ್ನು ನೀಡಿದರು.

ಪ್ರತಿ ಟೇಬಲ್‌ನಲ್ಲಿ ಉಳಿದ ಕೆಂಪು ಪಾಕೆಟ್‌ಗಳು ಇದ್ದವು. 'ನೀವು ಬಯಸಿದರೆ ನೀವು ಹೆಚ್ಚುವರಿ ತೆಗೆದುಕೊಳ್ಳಬಹುದು' ಎಂದು ಬರೆದು ಅವನ್ನಿಡಲಾಗಿತ್ತು. ಇದು ಎಲ್ಲಾ ಅತಿಥಿಗಳು ಸ್ವೀಕರಿಸಿದ ಐಷಾರಾಮಿ ಉಡುಗೊರೆ ಪ್ಯಾಕೇಜ್‌ಗಳ ಮೇಲಿತ್ತು.

ಸಾನಿಯಾ ಮಿರ್ಜಾ ತಂಗಿ ಕೂಡಾ ವಿಚ್ಚೇದಿತೆ, ಸಧ್ಯ ಖ್ಯಾತ ಕ್ರಿಕೆಟರ್ ಸೊಸೆಯಾಗಿರುವ ಈಕೆ ವೃತ್ತಿಯೇನು?

'ನಿಜ ಜೀವನದಲ್ಲಿ ಕ್ರೇಜಿ ರಿಚ್ ಏಷ್ಯನ್ ವಿವಾಹವು ಹೀಗಿರುತ್ತದೆ' ಎಂದು ಅವರು ತಮ್ಮ ವೀಡಿಯೊದ ಆರಂಭದಲ್ಲಿ ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. X ನಲ್ಲಿ, ಇದು 6.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ವಿಡಿಯೋ ನೋಡಿದ ಕೆಲವರು ಅಂಬಾನಿಗಳಿಗೆ ಇವರನ್ನು ಹೋಲಿಸಿದ್ದರೆ, ಮತ್ತೆ ಕೆಲವರು 'ನಾವಾದರೂ ಇವರ ಅತಿಥಿಯಾಗಬಾರದಿತ್ತೇ' ಎಂದಿದ್ದಾರೆ. 

'ಅಬ್ಬಬ್ಬಾ, ದೇವರ ಅತಿ ಪ್ರಿಯ ಮಗು ಇವರೇ ಇರಬೇಕು. ಅದಕ್ಕೇ ಅವರನ್ನು ಇಷ್ಟು ಧಾರಾಳವಾಗಿ ಕೊಡುವಂತೆ ಶ್ರೀಮಂತರಾಗಿಸಲಾಗಿದೆ' ಎಂದು ಮತ್ತೆ ಕೆಲವರು ಹೇಳಿದ್ದಾರೆ.