Asianet Suvarna News Asianet Suvarna News

ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದು

ಅಸ್ಸಾಂ ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅಸ್ಸಾಂನಲ್ಲಿ ವಾಸಿಸುವ ಮುಸ್ಲಿಮರು ಮದುವೆ ಮತ್ತು ವಿಚ್ಛೇದನಗಳ ನೋಂದಣಿಯನ್ನು ಒಳಗೊಂಡ 89 ವರ್ಷಗಳ ಹಳೆಯ ಕಾಯ್ದೆ ರದ್ದುಗೊಳಿಸಲು ಅಸ್ಸಾಂ ಕ್ಯಾಬಿನೆಟ್ ನಿರ್ಧರಿಸಿದೆ.

Assam To Repeal Muslim Marriage Act In Big Push For Uniform Civil Code Vin
Author
First Published Feb 24, 2024, 9:07 AM IST

ಗುವಾಹಟಿ: ಮಹತ್ವದ ನಿರ್ಧಾರವೊಂದರಲ್ಲಿ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಅಸ್ಸಾಂ ಸಚಿವ ಸಂಪುಟವು ಶುಕ್ರವಾರ ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935 ಅನ್ನು ರದ್ದುಗೊಳಿಸಿದೆ.

ಈ ಬಗ್ಗೆ ಹೇಳಿಕೆ ನೋಡಿರುವ ಸಚಿವ ಜಯಂತ ಮಲ್ಲಬರುವ, ‘ಇದು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಾಧಿಸುವತ್ತ ಒಂದು ಹೆಜ್ಜೆ. ಈಗ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಲಿವ್ ಇನ್ ಸಂಬಂಧ, ಮದುವೆಗೆ ಮುನ್ನ ಮಗು… ಭಾರತದ ಈ ಬುಡಕಟ್ಟು ಜನಾಂಗದಲ್ಲಿ ಎಲ್ಲವೂ ನಡೆಯುತ್ತೆ

ಮುಸ್ಲಿಂ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್‌ಗಳನ್ನು ತಮ್ಮ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು. ಅವರಿಗೆ ತಲಾ 2 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಅವರು ಘೋಷಿಸಿದರು. ಇತ್ತೀಚೆಗೆ ಉತ್ತರಾಖಂಡ ಸರ್ಕಾರವು ಏಕರೂಪ ಸಂಹಿತೆ ಜಾರಿಗೆ ತಂದು, ಇದನ್ನು ಜಾರಿ ಮಾಡಿದ ಸ್ವತಂತ್ರ ಭಾರತದ ಮೊದಲ ದೇಶ ಎನ್ನಿಸಿಕೊಂಡಿತ್ತು.

Follow Us:
Download App:
  • android
  • ios