ಎರಡೂ ಕುಟುಂಬಗಳು ಇಬ್ಬರ ಪ್ರೀತಿಯನ್ನು ಮೆಚ್ಚಿ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಈ ಮದುವೆ ವಿಶ್ವದ ಅದ್ಧೂರಿ ವಿವಾಹ ಎಂದು ಕರೆಸಿಕೊಳ್ಳುತ್ತಿದೆ.

ಬೆಂಗಳೂರು: ಈ ವರ್ಷದ ಅದ್ಧೂರಿ ವಿವಾಹ ಭಾಗಶಃ ಮುಕ್ತಾಯವಾಗಿದ್ದು, ಇಡೀ ವಿಶ್ವವೇ ಅಂಬಾನಿ ಕುಟುಂಬದ (Ambani Family) ಮದುವೆಯನ್ನು ಕಣ್ತುಂಬಿಕೊಂಡಿದೆ. ಜುಲೈ 12ರ ಶುಕ್ರವಾರದ ಶುಭ ಮುಹೂರ್ತದಲ್ಲಿ ಅನಂತ್ ಮತ್ತು ರಾಧಿಕಾ ವೈವಾಹಿಕ (Anant Ambani - Radhika Merchant Wedding) ಬಂಧನಕ್ಕೊಳಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ದೇಶದ ಪ್ರಮುಖ ಗಣ್ಯರು ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಬಾಲ್ಯದ ಸ್ನೇಹಿತರಾಗಿದ್ದು, ಹಾಗಾಗಿ ಇಬ್ಬರ ನಡುವೆ ಪ್ರೇಮದ ಹೂ ಅರಳಿತ್ತು. ಎರಡೂ ಕುಟುಂಬಗಳು ಇಬ್ಬರ ಪ್ರೀತಿಯನ್ನು ಮೆಚ್ಚಿ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಈ ಮದುವೆ ವಿಶ್ವದ ಅದ್ಧೂರಿ ವಿವಾಹ ಎಂದು ಕರೆಸಿಕೊಳ್ಳುತ್ತಿದೆ.

90ರ ದಶಕದಲ್ಲಿ ಮದುವೆಯಾಗುವ ಹುಡುಗನಿಗೆ ಆತನಗಿಂತ ಚಿಕ್ಕ ವಯಸ್ಸಿನ ಹುಡುಗಿಯನ್ನು ಹುಡುಕಲಾಗುತ್ತಿತ್ತು. ಕೆಲವು ಜೋಡಿಗಳ ನಡುವೆ 10 ವರ್ಷಕ್ಕಿಂತಲೂ ಹೆಚ್ಚು ಇರುತ್ತಿತ್ತು. ಆದ್ರೆ ಇಂದು ಕಾಲ ಬದಲಾಗಿದೆ. ಮದುವೆಯಾಗುವ ಜೋಡಿ ನಡುವೆ ಪ್ರೀತಿಯಾದ್ರೆ ಸಾಕು. ಇಂತಹ ಸಂದರ್ಭದಲ್ಲಿ ವಯಸ್ಸು ಲೆಕ್ಕಕ್ಕೆ ಬರೋದು ಇಲ್ಲ. ಈಗ ಹುಡುಗಿಯ ವಯಸ್ಸು ತನಗಿಂತ ಹೆಚ್ಚಾಗಿದ್ದರೂ ಯುವಕರು ಮದುವೆಗೆ ಒಪ್ಪಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ಬಾಲಿವುಡ್ ಅಂಗಳದಲ್ಲಿ ಹೆಚ್ಚಾಗಿದ್ದು, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ತಮಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗಿದ್ದಾರೆ. ಅದೇ ರೀತಿ ಯಶ್‌ಗಿಂತ ರಾಧಿಕಾ ಪಂಡಿತ್ ಎರಡು ವರ್ಷ ದೊಡ್ಡವರು.

ಅಂಬಾನಿ ಮಧ್ಯಮ ವರ್ಗದ ಕುಟುಂಬವಾದರೆ.. ಅನಂತ್-ರಾಧಿಕಾ ಮದುವೆ ಹೇಗಿರುತ್ತೆ ಗೊತ್ತಾ? AI ಮ್ಯಾಜಿಕ್ ನೋಡಿ ಜನತೆ ಶಾಕ್

ಯಾರು ದೊಡ್ಡವರು? ಯಾರು ಚಿಕ್ಕವರು?

ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ - ನೀತಾ ಅಂಬಾನಿ ಕುಟುಂಬದ ಕಿರಿಯ ಕುಡಿ ಅನಂತ್ ಅಂಬಾನಿ ಮತ್ತು ಉದ್ಯಮಿ ವೀರೇನ್ ಮರ್ಚೆಂಟ್ - ಶೈಲಾ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಇಬ್ಬರಲ್ಲಿ ಯಾರು ದೊಡ್ಡವರು? ಯಾರು ಚಿಕ್ಕವರು? ಎಂಬ ಮಾಹಿತಿ ಇಲ್ಲಿದೆ. ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ರಾಧಿಕಾ ಮರ್ಚೆಂಟ್‌ಗಿಂತ ಅನಂತ್ ಅಂಬಾನಿಯೇ ಚಿಕ್ಕವರು. ಹಾಗಾದ್ರೆ ಇಬ್ಬರ ನಡುವಿನ ಅಂತರ ಎಷ್ಟು ಅಂತಾ ಗೊತ್ತಿದೆಯಾ? ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗಿನ ಸಾಲಿನಲ್ಲಿದೆ. 

ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು?

ಇಂಟರ್‌ನೆಟ್‌ನಲ್ಲಿರುವ ಮಾಹಿತಿ ಪ್ರಕಾರ, ಅನಂತ್ ಅಂಬಾನಿ 10ನೇ ಏಪ್ರಿಲ್ 1995ರಂದು ಜನಿಸಿದ್ದಾರೆ. ಜನ್ಮ ದಿನಾಂಕ ಗಮನಿಸಿದ್ರೆ ಅನಂತ್ ಅಂಬಾನಿ ಅವರಿಗೆ 29 ವರ್ಷ 3 ತಿಂಗಳು. ಇನ್ನು ರಾಧಿಕಾ ಮರ್ಚೆಂಟ್ ಜನನ 18ನೇ ಡಿಸೆಂಬರ್ 1994ರಂದು ಆಗಿದೆ. ಜನ್ಮ ದಿನಾಂಕದ ಪ್ರಕಾರ, 29 ವರ್ಷ 7 ತಿಂಗಳು. ಅಂದಾಜು ಅನಂತ್‌ ಅಂಬಾನಿಗಿಂತ ರಾಧಿಕಾ ಮರ್ಚೆಂಟ್ 4 ತಿಂಗಳು ದೊಡ್ಡವರು. ಅನಂತ್ ಮತ್ತು ರಾಧಿಕಾ ಜೊತೆಯಲ್ಲಿಯೇ ಓದಿದ್ದಾರೆ. ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್ ಮತ್ತು ಜಾನ್ ಕಾನನ್ ಸ್ಕೂಲ್ ನಲ್ಲಿ ಆರಂಭಿಕ ಶಿಕ್ಷಣ ಪಡೆದ ರಾಧಿಕಾ ಮರ್ಚೆಂಟ್ ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ರಾಧಿಕಾ ಮರ್ಚೆಂಟ್ ಉತ್ತಮ ಭರತನಾಟ್ಯ ಕಲಾವಿದೆಯಾಗಿದ್ದಾರೆ.

ಗ್ರ್ಯಾಂಡ್ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದ ಅನಂತ್ ಅಂಬಾನಿ; ಡಿಸೈನರ್ ಟೀ ಕುಡಿಯೋಕೆ ಹೋಗಿದ್ನಾ ಎಂದ ನೆಟ್ಟಿಗರು