ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಕಿರಿಯ ಮಗನ ಅದ್ಧೂರಿಗೆ ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೀತಿವೆ. ಇತ್ತೀಚಿನ ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸೆಕೆಂಡ್ ಪ್ರಿ ವೆಡ್ಡಿಂಗ್ ಇವೆಂಟ್‌ ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಕಿರಿಯ ಮಗನ ಅದ್ಧೂರಿಗೆ ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೀತಿವೆ. ಅಂಬಾನಿ ಫ್ಯಾಮಿಲಿ ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗಾಗಿ ಮೂರು ದಿನಗಳ ಪೂರ್ವ ವಿವಾಹದ ಸಮಾರಂಭವನ್ನು ಆಯೋಜಿಸಿದ್ದರು. ಇದರಲ್ಲಿ ಅಂತಾರಾಷ್ಟ್ರೀಯ ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕಾರಣಿಗಳು ಭಾಗಿಯಾಗಿದ್ದರು. ಜುಲೈ 12, 2024ರಂದು ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ. ಇದೆಲ್ಲದರ ನಡುವೆ, ಮತ್ತೊಂದು ವರದಿಯು ಅನಂತ್ ಮತ್ತು ರಾಧಿಕಾಗಾಗಿ ಅಂಬಾನಿಗಳು ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ ಎಂದು ಸೂಚಿಸಿದೆ.

ಇತ್ತೀಚಿನ ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮತ್ತೊಂದು ವಿವಾಹಪೂರ್ವ ಆಚರಣೆಯನ್ನು ನಡೆಸಲಿದ್ದಾರೆ, ಇದು ಮೇ 28-30, 2024ರ ನಡುವೆ ನಿಗದಿಯಾಗಿದೆ. ಇದು ದಕ್ಷಿಣ ಫ್ರಾನ್ಸ್‌ನಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯಲಿದೆ ಎನ್ನಲಾಗ್ತಿದೆ. ಮಾತ್ರವಲ್ಲ ಇದರಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಭಾಗವಹಿಸಲಿದ್ದು. ಜೊತೆಗೆ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇರಲಿದ್ದಾರೆ ಎಂದು ಹೇಳಲಾಗ್ತಿದೆ.

ಪ್ರಧಾನಿ ಮೋದಿ ಮಾತಿನಿಂದ ನಿರ್ಧಾರ ಬದಲಿಸಿದ್ರಾ ಅಂಬಾನಿ? ಜಿಯೋ ಸೆಂಟರ್‌ನಲ್ಲಿ ಅನಂತ್ ಮದುವೆ!

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಎರಡನೇ ಪೂರ್ವ ವಿವಾಹದ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎಂದು ವರದಿಯಾಗಿದೆ. ಅದೇ ವರದಿಗಳ ಪ್ರಕಾರ, ದಕ್ಷಿಣ ಫ್ರಾನ್ಸ್‌ನಲ್ಲಿ ಹಡಗಿನಲ್ಲಿ ಇವೆಂಟ್ ನಡೆಯಲಿದೆ ಎಂದು ತಿಳಿಸಿದೆ.

ಜುಲೈ 12, 2024 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾಗಲಿದ್ದಾರೆ. ಮದುವೆಯ ಸ್ಥಳದ ಬಗ್ಗೆ ಇನ್ನೂ ಯಾವುದೇ ವರದಿಯಿಲ್ಲ. ಹಲವಾರು ವರದಿಗಳ ಪ್ರಕಾರ, ಇಬ್ಬರೂ ಲಂಡನ್‌ನ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ಮದುವೆಯಾಗಲಿದ್ದಾರೆ ಸಂಗೀತ ಅಬುಧಾಬಿಯಲ್ಲಿ ನಡೆಯುತ್ತದೆ ಎನ್ನಲಾಗಿದೆ. ಇದೇ ವೇಳೆ ಮತ್ತೊಂದು ವರದಿ ಪ್ರಕಾರ ಅನಂತ್ ಮತ್ತು ರಾಧಿಕಾ ಮುಂಬೈನಲ್ಲಿ ಮದುವೆಯಾಗಲಿದ್ದಾರೆ. ಅಂಬಾನಿಗಳು ಭಾರಿ ಮೊತ್ತವನ್ನು ಖರ್ಚು ಮಾಡಲಿದ್ದಾರೆ ಎಂದು ವರದಿಯಾಗಿದೆ. 

ಅಬ್ಬಬ್ಬಾ..ಅಂಬಾನಿ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ತಂದೆನೂ ಇಷ್ಟೊಂದು ಶ್ರೀಮಂತರಾ?

ಅನಂತ್ ಮತ್ತು ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್ ಇವೆಂಟ್‌ಗೆ ಬರೋಬ್ಬರಿ 1259 ಕೋಟಿ ರೂ ಖರ್ಚು ಮಾಡಲಾಗಿತ್ತು. ಹೀಗಾಗಿ ಮದುವೆಯ ಇನ್ನೊಂದು ಪ್ರಿ ವೆಡ್ಡಿಂಗ್ ಇವೆಂಟ್‌ನ್ನು ಸಹ ಅದ್ದೂರಿಯಾಗಿ ಆಚರಿಸುವ ನಿರೀಕ್ಷೆಯಿದೆ. ಅನಂತ್-ರಾಧಿಕಾ ಮದುವೆಗೂ ಮುನ್ನ ಲಂಡನ್‌ನಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಖಾಸಗಿ ಸಮಾರಂಭವನ್ನು ಆಯೋಜಿಸಿದ್ದರು. ಇದರಲ್ಲಿ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಇತರರು ಭಾಗವಹಿಸಿದ್ದರು.