ಪತ್ನಿ ವಾಟ್ಸ್ ಆ್ಯಪ್ ಸ್ಟೇಟಸ್ ನೋಡಿ ಪೊಲೀಸ್ ಠಾಣೆಗೆ ಓಡಿದ ಪತಿ!
ಪತ್ನಿಯ ವಾಟ್ಸ್ ಅಪ್ ಸ್ಟೇಟಸ್ ಪತಿಯ ಮೈ ನಡುಗಿಸಿದೆ. ಭಯದಲ್ಲಿ ಪತಿಯೊಬ್ಬ ಪೊಲೀಸ್ ಠಾಣೆಗೆ ಓಡಿದ್ದಾನೆ. ಪೊಲೀಸರಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾನೆ. ಅಷ್ಟಕ್ಕೂ ಆಕೆ ಸ್ಟೇಟಸ್ ನಲ್ಲಿ ಏನಿತ್ತು ಎಂಬ ವಿವರ ಇಲ್ಲಿದೆ.
ಯುಟ್ಯೂಬ್ ಶಾರ್ಟ್, ಇನ್ಸ್ಟಾ ರೀಲ್ಸ್, ಎಕ್ಸ್ ಪೋಸ್ಟ್ ಹಾಗೂ ವಾಟ್ಸ್ ಅಪ್ ಸ್ಟೇಟಸ್.. ಸದ್ಯ ಜನರು ಮೊಬೈಲ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡುವ ಅಪ್ಲಿಕೇಷನ್‌ಗಳಿವು. ಟೈಂ ಪಾಸ್‌ಗೆ ಜನರು ಸಾಮಾಜಿಕ ಜಾಲತಾಣವನ್ನು ನೋಡ್ತಿರುತ್ತಾರೆ. ಅದ್ರಲ್ಲಿ ಗಳಿಕೆಗೂ ಅವಕಾಶ ಇದೆ. ಸಾಮಾಜಿಕ ಜಾಲತಾಣದಲ್ಲಿ ಬರೀ ಮನರಂಜನೆ ವಿಷ್ಯ ಮಾತ್ರವಲ್ಲ ಕುಟುಂಬದ ಎಲ್ಲ ವಿಷ್ಯವನ್ನು ಜನರು ಹಂಚಿಕೊಳ್ತಾರೆ. ಇದು ಎಷ್ಟು ಒಳ್ಳೆಯದೋ ಅಷ್ಟೇ ಅಪಾಯಕಾರಿ ಕೂಡ ಹೌದು.
ಕುಟುಂಬಸ್ಥರಿಗಿಂತ ಸಾಮಾಜಿಕ ಜಾಲತಾಣ (Social Network) ಈಗ ಆಪ್ತವಾಗಿದೆ. ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಸಂದೇಶ ಕಳಿಸ್ತಾ ಕುಳಿತ್ರೆ ಟೈಂ ಆಗುತ್ತೆ ಎನ್ನುವ ಕಾರಣಕ್ಕೆ ಜನರು ಸ್ಟೇಟಸ್ (Status) ಹಾಕಿ ಅನೇಕ ವಿಷ್ಯದ ಬಗ್ಗೆ ಮಾಹಿತಿ ಹಂಚಿಕೊಳ್ತಾರೆ. ಹಬ್ಬಕ್ಕೆ ಶುಭ ಕೋರುವುದ್ರಿಂದ ಹಿಡಿದು ಯಾವುದೇ ವಸ್ತು ಮಾರಾಟದವರೆಗೆ ಎಲ್ಲದರ ಬಗ್ಗೆಯೂ ಜನರು ಸ್ಟೇಟಸ್ ಹಾಕಿ ಉಳಿದವರಿಗೆ ಮಾಹಿತಿ ನೀಡ್ತಾರೆ. ಇಬ್ಬರ ಮಧ್ಯೆ ಗಲಾಟೆಯಾದ್ರೆ ಚರ್ಚೆ ಮಾಡಿ ಬಗೆಹರಿಸಿಕೊಳ್ಳುವ ಬದಲು ತಮ್ಮ ಕೋಪವನ್ನು ವಾಟ್ಸ್ ಅಪ್ (Whatsapp) ಸ್ಟೇಟಸ್ ನಲ್ಲಿ ತೋರ್ಪಡಿಸುವ ಜನರೇ ಹೆಚ್ಚು. ಪತಿ – ಪತ್ನಿ ಮಧ್ಯೆ ಜಗಳವಾದ್ರೆ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ನೀವಿದನ್ನು ಸುಲಭವಾಗಿ ನೋಡ್ಬಹುದು. ಈ ಮಹಿಳೆ ಕೂಡ ತನಗೆ ಅಗತ್ಯವಿರುವ ಮಾಹಿತಿಯೊಂದನ್ನು ವಾಟ್ಸ್ ಅಪ್ ಸ್ಟೇಟಸ್ ಗೆ ಹಾಕಿದ್ದಾಳೆ. ಆದ್ರೆ ಪತ್ನಿ ವಾಟ್ಸ್ ಅಪ್ ಸ್ಟೇಟಸ್ ನೋಡಿದ ಪತಿ ಅಚ್ಚರಿಗೊಂಡಿದ್ದಾನೆ. ಎದ್ನೋ ಬಿದ್ನೋ ಎನ್ನುತ್ತ ಪೊಲೀಸ್ (Police) ಬಳಿ ಓಡಿದ್ದಾನೆ. ನನ್ನನ್ನು ಕಾಪಾಡಿ ಅಂತ ಪೊಲೀಸರಿಗೆ ಮೊರೆ ಇಟ್ಟಿದ್ದಾನೆ.
ಸದ್ಗುರು ಇನ್ನೂ ಬದುಕಿರುವುದೇಕೆ? ಇಲ್ಲದೆ ಸಾವಿನ ಸುತ್ತೊಂದು ಜಗ್ಗಿ ವಾಸುದೇವ್ ಸುತ್ತು
ಪೊಲೀಸ್ ಠಾಣೆ ಏರಿದ ಪತಿ : ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. 2022 ರಲ್ಲಿ ಬಹ್‌ನ ಯುವಕ ಭಿಂಡ್‌ನ ಹುಡುಗಿಯನ್ನು ಮದುವೆಯಾಗಿದ್ದ. ಮದುವೆಯಾದ ಐದು ತಿಂಗಳವರೆಗೆ ಸಂಸಾರ ಚೆನ್ನಾಗಿ ಸಾಗಿತ್ತು. ಆ ನಂತ್ರ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಗಲಾಟೆ ಮಧ್ಯೆ ಮಹಿಳೆ ತನ್ನ ತವರು ಸೇರಿದ್ದಳು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಪರಿಹಾರ ಕೋರಿದ್ದಳು. ಪತ್ನಿಗೆ ಇನ್ನೊಬ್ಬ ಯುವಕನ ಜೊತೆ ಅಕ್ರಮ ಸಂಬಂಧವಿದೆ. ಮನಸ್ಸಿಲ್ಲದೆ ಹೋದ್ರೂ ಕುಟುಂಬಸ್ಥರು ಮದುವೆ ಮಾಡಿಸಿದ್ದಾರೆಂದು ಪತಿ ಆರೋಪ ಮಾಡಿದ್ದಾನೆ. ಪತ್ನಿಯ ಬಾಯ್ ಫ್ರೆಂಡ್ ಈ ಹಿಂದೆ ನನಗೆ ಕರೆ ಮಾಡಿ ಹತ್ಯೆ ಮಾಡುವ ಧಮಕಿ ಹಾಕಿದ್ದ ಎಂದು ಪತಿ ಆರೋಪಿಸಿದ್ದಾನೆ.
ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಏನಿತ್ತು?: ಈಗ ಮಹಿಳೆ ಪತಿ ಪೊಲೀಸ್ ಮೆಟ್ಟಿಲೇರಿದ್ದಾನೆ. ಅದಕ್ಕೆ ಕಾರಣ ಮೊದಲೇ ಹೇಳಿದಂತೆ ಪತ್ನಿಯ ಸ್ಟೇಟಸ್. ಪತ್ನಿ ರಾತ್ರಿ ಪೋಸ್ಟ್ ಮಾಡಿದ ಸ್ಟೇಟಸ್ ನೋಡಿದ ಪತಿ ಬೆವರಿದ್ದಾನೆ. ಪತ್ನಿ, ವಾಟ್ಸ್ ಅಪ್ ಸ್ಟೇಟಸ್‌ನಲ್ಲಿ ಪತಿ ಹತ್ಯೆಗೆ ಸುಫಾರಿ ಆಫರ್ ನೀಡಿದ್ದಾಳೆ. ಯಾರು ತನ್ನ ಪತಿ ಹತ್ಯೆ ಮಾಡ್ತಾರೋ ಅವರಿಗೆ ಐವತ್ತು ಸಾವಿರ ರೂಪಾಯಿಯನ್ನು ಉಡುಗೊರೆಯಾಗಿ ನೀಡ್ತೇನೆ ಎಂಬ ಸ್ಟೇಟಸ್ ಹಾಕಿದ್ದಾಳೆ.
ಈ 8 ನಡುವಳಿಕೆಗಳನ್ನು ಎಲ್ಲ ಪೋಷಕರೂ ಮಕ್ಕಳಿಗೆ ಕಲಿಸ್ಲೇಬೇಕು..
ಪತ್ನಿ ಸ್ಟೇಟಸ್ ನೋಡಿದ ಪತಿ ಕಂಗಾಲಾಗಿದ್ದಾನೆ. ತನ್ನ ಜೀವಕ್ಕೆ ಅಪಾಯವಿದೆ ಎಂದು ಭಯಗೊಂಡ ಪತಿ ಪೊಲೀಸ್ ಠಾಣೆಗೆ ಓಡಿದ್ದಾನೆ. ಪೊಲೀಸರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾನೆ. ಪತ್ನಿ ವಿರುದ್ಧ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.