400 ಪುರಷರಿಂದಲೂ ಸಿಗಲೇ ಇಲ್ವಂತೆ ಶುದ್ಧ ಪ್ರೀತಿ, ಒಂಟಿಯಾಗಿರುವುದೇ ಇಷ್ಟವಂತೆ 55ರ ಈ ನಾರಿಗೆ!
ಪ್ರೀತಿ ಹೆಸರಿನಲ್ಲಿ ಮೋಸ ನಡೆಯೋದೇ ಹೆಚ್ಚು. ಯಾವುದು ನಿಜವಾದ ಪ್ರೀತಿ ಎಂಬುದನ್ನು ಪತ್ತೆ ಮಾಡೋದು ಸುಲಭವಲ್ಲ. ಡೇಟಿಂಗ್ ಅಪ್ಲಿಕೇಷನ್ ಮೂಲಕ ಸಾಕಷ್ಟು ಜನರ ಸಂಪರ್ಕಕ್ಕೆ ಬಂದ ಈ ಮಹಿಳೆಗೆ ಇನ್ನೂ ಶುದ್ಧ ಪ್ರೀತಿ ಸಿಕ್ಕಿಲ್ಲ.
ಶುದ್ಧವಾದ ಪ್ರೀತಿ ಸಿಗೋದು ಬಹಳ ಅಪರೂಪ. ಅದೃಷ್ಟವಂತರಿಗೆ ಮಾತ್ರ ಸ್ವಚ್ಛ ಪ್ರೀತಿ ಸಿಗಲು ಸಾಧ್ಯ. ವ್ಯಕ್ತಿ ಹಣ, ದೈಹಿಕ ರೂಪವನ್ನು ಕಡೆಗಣಿಸಿ ಅವರ ಆತ್ಮವನ್ನು ಪ್ರೀತಿಸುವ, ಅವರು ಇದ್ದ ಹಾಗೆ ಸ್ವೀಕಾರ ಮಾಡುವ ಮಂದಿ ಬಹಳ ಅಪರೂಪ. ಸಾಮಾಜಿಕ ಜಾಲತಾಣ, ಡೇಟಿಂಗ್ ಸೈಟ್ ಗಳು ಬಂದಿರುವ ಈ ಸಮಯದಲ್ಲಿ ಯಾರು ಪ್ರಾಮಾಣಿಕರು, ಯಾರು ಮೋಸಗಾರರು ಎಂಬುದನ್ನು ಪತ್ತೆ ಮಾಡೋದು ಕಷ್ಟವಾಗಿದೆ. ಫೋಟೋ, ಪರಿಚಯದಲ್ಲಿಯೇ ಮೋಸ ಶುರುವಾಗಿರುತ್ತದೆ. ಇಷ್ಟಲ್ಲ ಗೊತ್ತಿದ್ರೂ ಕೆಲವರು ತಮ್ಮ ವಯಸ್ಸನ್ನು ಲೆಕ್ಕಿಸದೆ ತಮಗೂ ಶುದ್ಧವಾದ ಪ್ರೀತಿ ಸಿಗುತ್ತೆ ಎನ್ನುವ ನಂಬಿಕೆಯಲ್ಲಿ ಬದುಕುತ್ತಿದ್ದಾರೆ. ಅದ್ರಲ್ಲಿ ಸಾಯಲ್ ಹೆಸರಿನ ಮಹಿಳೆ ಕೂಡ ಸೇರಿದ್ದಾಳೆ.
ಸಾಮಾಜಿಕ ಜಾಲತಾಣ (Social Media) ದಲ್ಲಿ ಸಾಯಲ್ ತನ್ನ ಸ್ಥಿತಿಯನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ಪ್ರಾಮಾಣಿಕ ಪ್ರೀತಿಯ ಹುಡುಕಾಟದಲ್ಲಿದ್ದು, ಆಫರ್ ಗಳು ಸಾಕಷ್ಟು ಬಂದ್ರೂ ಯಾಕೆ ಆಕೆ ಅವರನ್ನು ಒಪ್ಪಿಕೊಳ್ತಿಲ್ಲ ಎಂಬುದನ್ನು ಹೇಳಿದ್ದಾಳೆ.
ಈ ರಣವೀರ್ ಸಿಕ್ರೂ ಆ ರಣವೀರ್‌ನ್ನು ಬಿಟ್ಟಿಲ್ವಾ ದೀಪಿಕಾ? ಆಲಿಯಾ ಪತಿ ಜೊತೆ ಇದೇನಪ್ಪಾ?
ಯಾರು ಸಾಯಲ್ ? ಆಕೆ ಕಥೆ ಏನು? : ಸಾಯಲ್ ಗೆ ಈಗ 55 ವರ್ಷ ವಯಸ್ಸು. ಆಕೆ ವಿಚ್ಛೇದಿತ ಮಹಿಳೆ. ಸಾಯಲ್ ಶುದ್ಧ ಪ್ರೀತಿ (Love) ಯ ಹುಡುಕಾಟದಲ್ಲಿದ್ದಾಳೆ. ತನ್ನನ್ನು ಪ್ರೀತಿಸುವ ವ್ಯಕ್ತಿ ಸಿಗ್ತಾರೆ ಎಂಬ ನಂಬಿಕೆಯಲ್ಲಿದ್ದಾಳೆ. ಆಕೆಗೆ 400ಕ್ಕೂ ಹೆಚ್ಚು ಆಫರ್ ಬಂದಿದೆ. ಇಷ್ಟಾದ್ರೂ ಆಕೆ ಸಿಂಗಲ್ ಆಗಿಯೇ ಇದ್ದಾಳೆ. ಅನೇಕ ದಿನಗಳಿಂದ ಸಾಯಲ್ ಒಳ್ಳೆಯ ಸಂಗಾತಿ ಹುಡುಕಾಟ ನಡೆಸುತ್ತಿದ್ದಾಳೆ. ಹಿಂಜ್ ಮತ್ತು ಬಂಬಲ್‌ನಂತಹ ಆನ್‌ಲೈನ್ ಡೇಟಿಂಗ್ ಸೈಟ್‌ಗಳಲ್ಲಿಯೂ ಪ್ರಯತ್ನ ನಡೆಸಿದ್ದಾಳೆ. ಆದರೆ ಅಲ್ಲಿಯೂ ಆಕೆ ಯಶಸ್ವಿಯಾಗಲಿಲ್ಲ.
ವಾಯು ಮಾಲಿನ್ಯ: ಬರೀ ಹಾರ್ಟ್, ಲಂಗ್ಸ್ ಹಾಳಾಗೋದಲ್ಲ, ಲೈಂಗಿಕ ಜೀವನವೂ ಹದಗೆಡುತ್ತೆ!
ಸಾಯಲ್ ಗೆ ಬಂದ ಪ್ರಫೋಸಲ್ ಯಾರದ್ದು? : ಆಸಕ್ತಿಕರ ವಿಷ್ಯವೆಂದ್ರೆ ಸಾಯಲ್ ಜೊತೆ ಡೇಟಿಂಗ್ ಗೆ 18-21 ವರ್ಷ ವಯಸ್ಸಿನ ಯುವಕರು ಮುಂದೆ ಬಂದಿದ್ದಾರೆ. ಅವರು ತಮಗಿಂತ ಹಿರಿಯ ಮಹಿಳೆಯೊಂದಿಗೆ ಸಂಬಂಧ ಬೆಳೆಸಲು ಬಯಸಿದ್ದಾರೆ. ಆದ್ರೆ ಮದುವೆಯಾಗಲು ಬಯಸಿದ್ದ ಪುರುಷರ ವಯಸ್ಸು ಸಾಯಲ್ ನಷ್ಟಿತ್ತು ಇಲ್ಲವೆ ಅವಳಿಗಿಂತ ಹೆಚ್ಚಿತ್ತು. 48-50 ವಯಸ್ಸಿನ ಪುರುಷರು ನನ್ನನ್ನು ಮದುವೆಯಾಗಲು ಬಯಸಿದ್ದರು. ಇದು ಖುಷಿ ವಿಷ್ಯ ಎನ್ನುವ ಸಾಯಲ್, ಯಾಕೆ ಅವರನ್ನು ರಿಜೆಕ್ಟ್ ಮಾಡಿದ್ದು ಎಂಬುದನ್ನು ಹೇಳಿದ್ದಾರೆ.
ಸಾಯಲ್ ಗೆ ಯಾಕೆ ಸಿಕ್ಕಿಲ್ಲ ನಿಜವಾದ ಪ್ರೀತಿ? : ಸಾಯಲ್ ಪ್ರಕಾರ ಆರಂಭದಲ್ಲಿ ಜನರು ಸರಿಯಾಗಿಯೇ ಇರ್ತಾರೆ. ನಂತ್ರ ತಮ್ಮ ಬಣ್ಣ ತೋರಿಸ್ತಾರೆ . ಅವರು ತಮ್ಮ ಮಾತನ್ನು ಸ್ಪಷ್ಟವಾಗಿ ಹೇಳ್ತಾರೆ. ಅವರು ಸಂಬಂಧವನ್ನು ಮುಂದುವರೆಸುವ, ಮದುವೆ ಮಾಡಿಕೊಳ್ಳುವ ಆಸಕ್ತಿ ಹೊಂದಿಲ್ಲ ಎಂಬುದು ಅವರ ಮಾತಿನಲ್ಲೇ ಗೊತ್ತಾಗುತ್ತಂತೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಜೊತೆ ಹೇಗೆ ಮಾತನಾಡ್ಬೇಕು, ಅವರ ಜೊತೆ ಹೇಗೆ ವರ್ತಿಸಬೇಕು ಎಂಬುದು ಪುರುಷರಿಗೆ ತಿಳಿದಿಲ್ಲ ಎನ್ನುವ ಸಾಯಲ್, ಸಾಮಾಜಿಕ ಜಾಲತಾಣದ ಬಗ್ಗೆಯೂ ತನ್ನ ವಿರೋಧ ವ್ಯಕ್ತಪಡಿಸಿದ್ದಾಳೆ. ಸಾಮಾಜಿಕ ಜಾಲತಾಣ ಶುದ್ಧವಾದ ಪ್ರೀತಿ ಮತ್ತು ಸಂಬಂಧದ ಬಗ್ಗೆ ಹೆಚ್ಚು ಆದ್ಯತೆ ನೀಡಲ್ಲ. ಮುಂದೊಂದು ದಿನ ನಿಜವಾದ ಪ್ರೀತಿಯನ್ನೇ ಸಾಮಾಜಿಕ ಜಾಲತಾಣ ಹಾಳು ಮಾಡುತ್ತೆ ಎಂದು ಸಾಯಲ್ ಆರೋಪಿಸಿದ್ದಾಳೆ.
ಸಾಯಲ್ ಗೆ ಸಿಕ್ಕಿದೆ ಹತ್ಯೆ ಬೆದರಿಕೆ : ಡೇಟಿಂಗ್ ಅಪ್ಲಿಕೇಷನ್ (Dating Application)ನಲ್ಲಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪುರುಷರ ವರ್ತನೆಯನ್ನು ವಿರೋಧಿಸುವ ಸಾಯಲ್ ಗೆ ಅನೇಕರು ಬೆದರಿಸಿದ್ದಾರೆ. ಕೊಲೆ ಬೆದರಿಕೆ ಮತ್ತು ಅಶ್ಲೀಲ ಕಾಮೆಂಟ್‌ಗಳು ಬಂದಿವೆ ಎನ್ನುವ ಸಾಯಲ್, ಇಷ್ಟಾದ್ರೂ ನಂಬಿಕೆ ಕಳೆದುಕೊಂಡಿಲ್ಲ. ಮುಂದೊಂದು ದಿನ ನನಗೆ ಶುದ್ಧ ಪ್ರೀತಿ ಸಿಗುತ್ತೆ, ನಾನು ಸಂತೋಷವಾಗಿರ್ತೇನೆ ಎಂಬ ಭರವಸೆಯಲ್ಲಿ ಬದುಕುತ್ತಿದ್ದಾಳೆ.