ಮಕ್ಕಳಿದ್ದರೇ ಜೀವನಕ್ಕೆ ಅರ್ಥ ಎನ್ನುವವರು ಹಲವರಾದರೆ, ಮಕ್ಕಳೇ ಬೇಡ ಅಂತ ನಿರ್ಧರಿಸುವವರ ಸಂಖ್ಯೆಯೂ ಈಗ ಹೆಚ್ಚುತ್ತಿದೆ. ಮಕ್ಕಳೇ ಬೇಡ ಎನ್ನಲು ಇವರಲ್ಲಿ ಕಾರಣ ಕೇಳಿದರೆ ದೊಡ್ಡದೊಂದು ಪಟ್ಟಿಯನ್ನೇ ಮುಂದಿಡುತ್ತಾರೆ.
ಹೊಸ ತಲೆಮಾರಿನ ಜೋಡಿಗಳಲ್ಲಿ ಮಕ್ಕಳು ಬೇಡ ಅನ್ನೋರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚುತ್ತಿದೆ. ಮನೆ ಹಿರಿಯರ ಒತ್ತಡಕ್ಕೆ ಮಕ್ಕಳನ್ನು ಹೊಂದಲು ನಿರ್ಧರಿಸಿದರೂ ಸಾಧ್ಯವಾದಷ್ಟು ವರ್ಷಗಳ ಕಾಲ ಮಕ್ಕಳ ಜವಾಬ್ದಾರಿಯನ್ನು ಮುಂದೆ ಹಾಕುತ್ತಿದ್ದಾರೆ ಯುವ ಜೋಡಿಗಳು. ಇದಕ್ಕೆ ಅವರು ನೀಡುವ ಕಾರಣಗಳನ್ನು ಗಮನಿಸಿದರೆ ಪಕ್ಕಾ ಪ್ರಾಕ್ಟಿಕಲ್ ಥಿಂಕಿಂಗ್ ಎಂದು ಒಪ್ಪಿಕೊಳ್ಳಲೇಬೇಕು. ಹಾಗಿದ್ದರೆ ಮಕ್ಕಳು ಬೇಡ ಅನ್ನಲು ಪ್ರಮುಖ ಕಾರಣಗಳೇನು? ಇಲ್ಲಿವೆ ನೋಡಿ.
ರೊಮ್ಯಾಂಟಿಕ್ ಜೀವನಕ್ಕೆ ಅಡ್ಡಿ
ಮಗುವಾದ ಮೇಲೆ ಪತಿ ಪತ್ನಿ ಮುಂಚಿನಂತೆ ಇರುವುದು ಸಾಧ್ಯವಿಲ್ಲ. ಇದುವರೆಗೆ ಲವರ್ಸ್ ಹಾಗೆ ಇದ್ದವರು ಈಗ ಪೋಷಕರಾಗಿ ಮಗುವಿನ ಕಡೆ ಗಮನ ಹರಿಲಾರಂಭಿಸುತ್ತಾರೆ. ಮಗುವಿನ ಬೇಕುಬೇಡಗಳು, ಅಮ್ಮನ ಮೇಲಿನ ಅತಿಯಾದ ಅವಲಂಬನೆಯ ಕಾರಣಗಳಿಗಾಗಿ ದಂಪತಿಯ ರೊಮ್ಯಾಂಟಿಕ್ ಜೀವನ (romantic relationship) ಬಲಿಯಾಗುತ್ತದೆ. ಸೆಕ್ಸ್ ಲೈಫಂತೂ ಹಳ್ಳ ಹಿಡಿದಂತೇ ಲೆಕ್ಕ. ಬಳಲಿಕೆ, ಸುಸ್ತು, ನಿದ್ರಾಹೀನತೆಯ ಕಾರಣಗಳಿಂದಾಗಿ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯೂ ಕುಂದುತ್ತದೆ. ಮಗುವಿನ ಉಪಸ್ಥಿತಿ ದಂಪತಿಯ ಖಾಸಗಿ ಕ್ಷಣಗಳನ್ನು ಕಸಿಯುತ್ತದೆ. ಸಂಶೋಧಕರು(researchers) ಕೂಡಾ ಮಕ್ಕಳಾದ ಮೇಲೆ ದಂಪತಿಯ ನಡುವೆ ರಿಲೇಶನ್‌ಶಿಪ್ ಸ್ಯಾಟಿಸ್‌ಫ್ಯಾಕ್ಷನ್ ಇರುವುದಿಲ್ಲ ಎನ್ನುವುದನ್ನು ಅನುಮೋದಿಸುತ್ತಾರೆ.
Viral video: ಲೆಹೆಂಗಾ ಹಿಡಿಯಲು ಸಹಕರಿಸಿದ ಪತಿ, ಇಂಥವನು ನಮಗೂ ಸಿಗಬಾರದಾ ಎಂದ ಯುವತಿಯರು
ಮಕ್ಕಳೆಂದರೆ ಖರ್ಚು
ಮಕ್ಕಳನ್ನು ಬೆಳೆಸುವುದು ಅಲ್ಪಸ್ವಲ್ಪ ಖರ್ಚಿನಲ್ಲಿ ಮುಗಿಯುವಂಥದ್ದಲ್ಲ. ಅದು ಆನೆ ಸಾಕಿದ ಹಾಗೆ. ಮಗು ಹುಟ್ಟಿದಾಗಿನಿಂದಲೇ ಖರ್ಚುಗಳು ದ್ವಿಗುಣವಾಗುತ್ತವೆ. ಕಾಸ್ಟ್ಲಿ ಮಕ್ಕಳ ಉತ್ಪನ್ನಗಳು, ಪ್ರತಿ ವರ್ಷ ಲಕ್ಷಾಂತರ ರುಪಾಯಿ ಶಿಕ್ಷಣ ವೆಚ್ಚ, ಕೊಂಡಷ್ಟೂ ಮುಗಿಯದ ಆಟಿಕೆಗಳು, ಔಷಧಗಳು, ಪದೇ ಪದೇ ಆಸ್ಪತ್ರೆ ಖರ್ಚುಗಳು, ಬೆಳೆವ ಮಕ್ಕಳ ಬಟ್ಟೆಯ ಅಗತ್ಯ.. ಖರ್ಚುಗಳು ಮುಗಿಯೆತೆಂದು ಆಗುವುದೇ ಇಲ್ಲ.
ನಿದ್ರಾಹೀನತೆ, ಒತ್ತಡ
ಮಕ್ಕಳು ಹುಟ್ಟಿದ ಮೊದಲೆರಡು ವರ್ಷಗಳು ತೃಪ್ತಿಕರ ನಿದ್ದೆ ಎಂದರೆ ಹೇಗಿರುತ್ತದೆ ಎನ್ನುವುದೇ ಮರೆತು ಹೋಗುತ್ತದೆ. ಆ ನಂತರದಲ್ಲೂ ಮಕ್ಕಳಿಗೆ ಹುಷಾರಿಲ್ಲ, ಪದೇ ಪದೇ ಬಾತ್ರೂಂಗೆ ಹೋಗಬೇಕು, ಕೆಟ್ಟ ಕನಸು ಬಿತ್ತು- ಮುಂತಾದ ಕಾರಣಗಳು ಪೋಷಕರ ನಿದ್ದೆ ಕೆಡಿಸುತ್ತಲೇ ಇರುತ್ತವೆ. ಹೀಗೆ ನಿದ್ದೆ ಕಳೆದುಕೊಳ್ಳಬೇಕಾಗಿ ಬರುವುದರಿಂದ ಪತಿ ಪತ್ನಿಯ ನಡುವೆ ತಾಳ್ಮೆ ಕಡಿಮೆಯಾಗುತ್ತದೆ. ಸಹಜವಾಗಿಯೇ ವಾದ, ಮುನಿಸುಗಳು ಹೆಚ್ಚುತ್ತವೆ. ಮತ್ತೆ ಉದ್ಯೋಗಕ್ಕೆ ಮರಳುವುದಂತೂ ಹೆಣ್ಣುಮಕ್ಕಳಿಗೆ ಬಹಳ ತ್ರಾಸದಾಯಕ ನಿರ್ಧಾರ. ಹಾಗೆ ಮರಳಿದರೂ ಮನೆ, ಮಗು, ಉದ್ಯೋಗ ಎಲ್ಲವನ್ನೂ ನಿಭಾಯಿಸುತ್ತಾ ಒತ್ತಡ ಹೆಚ್ಚುತ್ತದೆ. ಒತ್ತಡದ ಅಡ್ಡಪರಿಣಾಮಗಲು ದಾಂಪತ್ಯದ ಮೇಲಾಗುತ್ತದೆ.
ಮಕ್ಕಳೆಂದರೆ ಮನೆ ಸಂತೆ ಮಾರ್ಕೆಟ್
ಮಕ್ಕಳಾದ ಮೇಲೆ ಮನೆಯನ್ನು ಸ್ವಚ್ಛವಾಗಿ, ನೀಟಾಗಿ ಇಟ್ಟುಕೊಳ್ಳುವುದು ಕನಸಿನ ಮಾತೇ ಸರಿ, ಮನೆ ಸ್ವಚ್ಛ ಮಾಡುವುದು ಒಂದು ದೊಡ್ಡ ಹೊರೆಯಾದರೆ, ಮಕ್ಕಳ ಡೈಪರ್‌ಗಳು, ಟಿಶ್ಯೂ ಪೇಪರ್ ಇತ್ಯಾದಿ ತ್ಯಾಜ್ಯ ನಿರ್ವಹಣೆಯದ್ದು ಮತ್ತೊಂದೇ ತಲೆನೋವು.
Obesity: ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ, ಲೈಂಗಿಕ ಜೀವನದ ಶತ್ರುವಿದು
ದುಡಿಯುವ ಕೈಗಳಿಗೆ ಬೇಡಿ
ಮಗುವಾಗುವವರೆಗೆ ದುಡಿಯುತ್ತಿದ್ದ ಮಹಿಳೆ, ನಂತರದಲ್ಲಿ ಕೆಲಸಕ್ಕೆ ಮರಳುವುದು ಬಹಳ ತ್ರಾಸದಾಯಕ ನಿರ್ಧಾರ. ಮಗುವಿನಿಂದ ಖರ್ಚುಗಳು ಹೆಚ್ಚಾಗಿರುತ್ತದೆ. ಆದರೆ, ಮುಂಚಿನಂತೆ ದುಡಿಮೆ ಇಲ್ಲ. ಆಕೆಗೆ ದುಡಿಮೆ ಇಲ್ಲದಿರುವುದೇ ಒಂದು ಸ್ಟ್ರೆಸ್ ಆದರೆ, ಮುಂಚಿನಂತೆ ಖರ್ಚು ಮಾಡಲಾಗದಿರುವುದು ಮತ್ತಷ್ಟು ಸ್ಟ್ರೆಸ್ ಉಂಟು ಮಾಡುತ್ತದೆ. ಹೆಚ್ಚು ವರ್ಷಗಳ ಕಾಲ ಗ್ಯಾಪ್ ತೆಗೆದುಕೊಂಡರೆ ಮತ್ತೆ ಉದ್ಯೋಗ ಗಳಿಸುವುದೇ ಸವಾಲಾಗುತ್ತದೆ.
ಸೋಷ್ಯಲ್ ಲೈಫ್‌ಗೆ ಅಡ್ಡಿ
ಮಗುವಾದ ಮೇಲೆ ಸಮಯದ ಕೊರತೆ, ಪ್ರಿಯಾರಿಟಿ ಬದಲಾದ ಕಾರಣಗಳಿಂದಾಗಿ ಗೆಳೆಯರನ್ನು ಮುಂಚಿನಂತೆ ಭೇಟಿ ಮಾಡಲಾಗುವುದಿಲ್ಲ. ಹೊರಗೆ ಸುತ್ತಾಡಲಾಗುವುದಿಲ್ಲ. ಮೊದಲಿನಂತೆ ಪ್ರವಾಸ ಮಾಡಲಾಗುವುದಿಲ್ಲ. ಮಾಡಿದರೂ ಮಗುವನ್ನೆತ್ತಿಕೊಂಡು ಓಡಾಡುವುದು ಆಯಾಸದ ಬಾಬ್ತೇ. ಈ ಎಲ್ಲ ವಿಷಯಗಳು ಮಾನಸಿಕವಾಗಿ ಕುಗ್ಗಿಸುತ್ತವೆ.
ಮಿ ಟೈಂ (me time) ಇಲ್ಲವೇ ಇಲ್ಲ
ಸಾಮಾನ್ಯವಾಗಿ ತಾಯಂದಿರಿಗೆ ದಿನಕ್ಕೆ ಸರಾಸರಿ 17 ನಿಮಿಷಗಳಷ್ಟೇ ಸ್ವಂತದ ಸಮಯ ಎಂದು ಸಿಗುವುದು ಎನ್ನುತ್ತವೆ ಅಧ್ಯಯನಗಳು. ಒಂದರ್ಧ ಗಂಟೆಯೂ ಸ್ವಂತಕ್ಕೆ ಸಮಯ ಸಿಗುವುದಿಲ್ಲ ಎನ್ನುವುದನ್ನು ಯುವಸಮುದಾಯ ಯೋಚಿಸುವುದೂ ಕಷ್ಟ.
ಡೈವೋರ್ಸ್(divorce)ಗೂ ಕಾರಣವಾಗಬಹುದು
ಮಕ್ಕಳಾದ ಮೇಲೆ ಪತಿ ಪತ್ನಿಯ ನಡುವೆ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಹಾದಿ ತಪ್ಪುತ್ತದೆ, ತಾಯಿಯಾದವಳ ಪ್ರಿಯಾರಿಟಿ ಪೂರ್ತಿ ಮಗುವೇ ಆಗುವುದರಿಂದ ಪತಿಗೆ ಪರಕೀಯನೆಂಬ ಭಾವನೆ ಬರುವ ಸಂಭವಗಳಿರುತ್ತವೆ. ಪತಿ ಪತ್ನಿ ನಡುವೆ ಸಂವಹನಕ್ಕೆ ಸಮಯ ಸಿಗುವುದಿಲ್ಲ. ಜೊತೆಗೆ ಹೆಚ್ಚಾದ ಖರ್ಚುಗಳೂ ಇಬ್ಬರಿಗೂ ಒತ್ತಡ ತರುತ್ತದೆ. ಈ ಎಲ್ಲ ಕಾರಣಗಳು ನಿಧಾನವಾಗಿ ಡೈವೋರ್ಸ್‌ಗೆ ದಾರಿ ಮಾಡಿದರೂ ಅಚ್ಚರಿಯಿಲ್ಲ.
