Asianet Suvarna News Asianet Suvarna News

ಸಕ್ಸಸ್‌ ಪೀಪಲ್ ಡೋಂಟ್‌ ಕೇರ್ ಎಂದ 5 ವಿಚಾರಗಳಿವು..!

ಯಶಸ್ಸಿಗೆ ಹಲವು ಮುಖಗಳಿವೆ. ಒಬ್ಬರ ಕನಸು ಇನ್ನೊಬ್ಬರ ದುಃಸ್ವಪ್ನವಾಗಿರಬಹುದು. ಯಶಸ್ಸಿನ ವ್ಯಾಖ್ಯಾನ ಹಲವು ರೀತಿಯಾಗಿರಬಹುದು. ಆದರೆ ಯಶಸ್ಸು ಸಾಧಿಸಿದವರೆಲ್ಲಾ ಡೋಂಟ್‌ ಕೇರ್ ಎಂದಿರುವಂತಹ ಕೆಲವು ವಿಚಾರಗಳಿವೆ. ಇವೆಲ್ಲವೂ ಬಹುತೇಕ ಕಾಮನ್. ಯಶಸ್ಸು ಸಾಧಿಸಿದವರು ಕಡೆಗಣಿಸಿದ 5 ವಿಚಾರಗಳು ಇಲ್ಲಿವೆ.

5 things which successful people never cared about
Author
Bangalore, First Published Feb 9, 2020, 3:43 PM IST

ಯಶಸ್ಸಿಗೆ ಹಲವು ಮುಖಗಳಿವೆ. ಒಬ್ಬರ ಕನಸು ಇನ್ನೊಬ್ಬರ ದುಃಸ್ವಪ್ನವಾಗಿರಬಹುದು. ಯಶಸ್ಸಿನ ವ್ಯಾಖ್ಯಾನ ಹಲವು ರೀತಿಯಾಗಿರಬಹುದು. ಆದರೆ ಯಶಸ್ಸು ಸಾಧಿಸಿದವರೆಲ್ಲಾ ಡೋಂಟ್‌ ಕೇರ್ ಎಂದಿರುವಂತಹ ಕೆಲವು ವಿಚಾರಗಳಿವೆ. ಇವೆಲ್ಲವೂ ಬಹುತೇಕ ಕಾಮನ್. ಯಶಸ್ಸು ಸಾಧಿಸಿದವರು ಕಡೆಗಣಿಸಿದ 5 ವಿಚಾರಗಳು ಇಲ್ಲಿವೆ.

1.ಬೇರೆಯವರೇನು ಆಲೋಚಿಸುತ್ತಾರೋ ಅದನ್ನು ಅವರೇ ಮಾಡಲಿ, ನೀವಲ್ಲ

ನಿಮ್ಮನ್ನು ಡಾಕ್ಟರ್ ಆಗಿಯೋ, ಲಾಯರ್ ಆಗಿಯೋ ನೋಡುವ ಕನಸು ನಿಮ್ಮ ಪೋಷಕರಿಗಿರಬಹುದು. ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಸಹಭಾಗಿತ್ವವದಲ್ಲೊಂದು ಬ್ಯುಸಿನೆಸ್ ಆರಂಭಿಸುವ ಯೋಚನೆ ಹೊಂದಿರಬಹುದು. ನೀವು ಪರಿಗಣಿಸಿ, ಪಾಲಿಸಬೇಕೆಂದುಕೊಂಡು ನಿಮಗೆ ಹಲವಾರು ಆಪ್ಶನ್ಸ್‌, ಸಲಹೆಗಳನ್ನು ನೀಡುವವರಿರುತ್ತಾರೆ.

ಪ್ರೀತಿಸುತ್ತಾನೋ ಇಲ್ಲವೋ? ಗೊಂದಲ ದೂರ ಮಾಡ್ಕೊಳ್ಳಿ

ಯಶಸ್ಸು ಸಾಧಿಸಿದ ಎಷ್ಟೋ ಮಂದಿ ತಮ್ಮ ಸಕ್ಸ್‌ಸ್‌ ಜರ್ನಿಯಲ್ಲಿ ಇನ್ನೊಬ್ಬರ ಉದ್ದೇಶಗಳಿಗೆ ಮಣೆ ಹಾಕಿದವರಲ್ಲ. ತಾವೇನು ಮಾಡಬೇಕು, ಹೇಗೆ ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟವಾದ ಚಿತ್ರಣವಿರುತ್ತದೆ. ಅಗತ್ಯವಿದ್ದಾಗ ಮಾತ್ರ ಸಲಹೆಗಳನ್ನು ಕೇಳುತ್ತಾರೆ. ಯಶಸ್ಸು ಸಾಧಿಸಿದವರು ತಾವೇನು ಮಾಡಬೇಕೆಂಬುದನ್ನು ದೃಢವಾಗಿ ನಿರ್ಧರಿಸಿರುತ್ತಾರೆ. ಕೆಲವು ನಿರ್ದಿಷ್ಟ ಮಾರ್ಗದರ್ಶನಗಳನ್ನು ಕೇಳಿ ಪಡೆಯುತ್ತಾರೆ. ಮತ್ತು ಅದನ್ನು ಕಾರ್ಯರೂಪಕ್ಕೆ ತರುತ್ತಾರೆ.

2. ಕನಸುಗಳನ್ನು ಹೇಳುವುದಿಲ್ಲ, ನನಸಾಗಿಸಿ ತೋರಿಸುತ್ತಾರೆ

ಯಶಸ್ಸು ಸಾಧಿಸಿದವರು ತಮ್ಮ ಕನಸುಗಳ ಬಗ್ಗೆ ಪದೇ ಪದೇ ಮಾತನಾಡುವುದಿಲ್ಲ. ಕನಸುಗಳ ಬಗ್ಗೆ ಮಾತನಾಡುವುದು ಅನಗತ್ಯ ಎಂಬುದು ಅವರನಿಸಿಕೆ. ಹೆಚ್ಚು ಚರ್ಚೆಯಾದ ವಿಷಯ ಜಾರಿಗೆ ಬರುವುದೇ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಗೆಳತಿಯರು ಬೆನ್ನಿಗಿದ್ರೆ ಉದ್ಯೋಗಸ್ಥೆ ಮಹಿಳೆಗೆ ಆನೆಬಲ

ಹಾಗಾಗಿ ಸುಮ್ಮನೆ ಬಾಯಲ್ಲಿ ಹೇಳಿ ಮಾಡಿ ತೋರಿಸದಿರುವವರಲ್ಲಿ ಒಬ್ಬರಾಗಲು ಅವರು ಖಂಡಿತಾ ಇಷ್ಟಪಡುವುದಿಲ್ಲ. ಬದಲಾಗಿ ತಮ್ಮ ಯೋಚನೆಗೆ ತಕ್ಕಂತೆ ಕೆಲಸ ಮಾಡಿ ಆ ಕೆಲಸ ಪೂರ್ತಿಯಾದ ಮೇಲೆ ಅದನ್ನು ಹೇಳುತ್ತಾರೆ. ಯಶಸ್ಸಿಗೂ ಮಹತ್ವಾಕಾಂಕ್ಷೆಗೂ ಬಹಳಷ್ಟು ಅಂತರವಿದೆ. ಸಾಧನೆ ಇಲ್ಲದೆ, ಮಹತ್ವಾಕಾಂಕ್ಷೆ ಇದ್ದರೆ ನೀವು ಸಾಧಿಸಬೇಕಾಗಿರುವುದು ಇನ್ನೂ ಬಹಳಷ್ಟಿದೆ ಎಂದು ಅರ್ಥ.

3. ಪ್ರಾಮುಖ್ಯತೆ, ಅಗತ್ಯತೆ ನಡುವಿನ ವ್ಯತ್ಯಾಸ ತಿಳಿದಿರುತ್ತಾರೆ

ಯಶಸ್ವೀ ಜನ ಚಿಕ್ಕ ಹಾಗೂ ದೊಡ್ಡ ವಿಚಾರಗಳನ್ನು ಬೇರೆ ಬೇರೆಯಾಗಿಡುತ್ತಾರೆ. ಚಿಕ್ಕ ವಿಚಾರಗಳು ಬಹಳಷ್ಟು ಸಲ ಇನ್ನೊಬ್ಬರಿಗೆ ಪ್ರಮುಖವಾಗಿರಬಹುದು. ಆದರೆ ದೊಡ್ಡ ಕೆಲಸಗಳಿಗೆ ಯೋಜನೆ ಬೇಕು, ಪ್ಲಾನಿಂಗ್ ಬೇಕು, ಅದನ್ನು ಕಾರ್ಯರೂಪಕ್ಕೆ ತರುವುದು ನಿಜಕ್ಕೂ ವ್ಯತ್ಯಾಸವನ್ನು ತರುತ್ತದೆ. ಚಿಕ್ಕ ಕೆಲಸಗಳು ಪ್ರಸ್ತುತ ಗಮನಾರ್ಹವಾಗಿ ಕಾಣಿಸಬಹುದು, ಆದರೆ ದೊಡ್ಡ ಕೆಲಸಗಳನ್ನ ಮಾಡುವುದು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ಯಶಸ್ಸು ಸಾಧಿಸಿದ ಬಳಷ್ಟು ಜನ ಪ್ರಾಮುಖ್ಯತೆ ಹಾಗೂ ಅಗತ್ಯತೆ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಯಾವುದರಿಂದ ಹೆಚ್ಚಿನ ಬದಲಾವಣೆಯಾಗುತ್ತದೆಯೋ ಅದೇ ಅವರ ಮೊದಲ ಆಯ್ಕೆಯಾಗಿರುತ್ತದೆ. ಅದು ಕಷ್ಟವಾಗಿದ್ದರೂ ಅವರು ಅದನ್ನೇ ಆಯ್ಕೆ ಮಾಡುತ್ತಾರೆ. ಯಶಸ್ವೀ ಜನ ಯಶಸ್ಸನ್ನು ಔಟ್‌ಪುಟ್‌ ಹಾಗೂ ಪರಿಣಾಮದ ಆಧಾರದ ಮೇಲೆ ತೀರ್ಮಾನಿಸುತ್ತಾರೆ.

4. ಇನ್ನೊಬ್ಬರ ದೃಷ್ಟಿಯಲ್ಲಿ ತಾವು ಸರಿ ಎಂದು ಕಾಣಿಸಿಕೊಳ್ಳಲು ಹೆಣಗಾಡುವುದಿಲ್ಲ

ಯಶಸ್ಸು ಹೊಂದಿದ ಜನ ಯಾವುತ್ತೂ ತಾವು ಸರಿಯಾಗಿಯೇ ಕಾಣಿಸಬೇಕೆಂದುಕೊಳ್ಳುವುದಿಲ್ಲ. ಅವರು ಇತರರ ಅಭಿಪ್ರಾಯಗಳನ್ನು, ದೃಷ್ಟಿಕೋನಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿಸುತ್ತಾರೆ.  ಅದರಿಂದ ಹೆಚ್ಚು ವಿಚಾರ ತಿಳಿದುಕೊಂಡು ಬೆಳೆಯಲು ಪ್ರಯತ್ನಿಸುತ್ತಾರೆ. ಅವರು ಸವಾಲುಗಳನ್ನು ಸ್ವೀಕರಿಸುವುದನ್ನು ಇಷ್ಟಪಡುತ್ತಾರೆ. ಹಾಗೆಯೇ ತಮ್ಮ ಅಭಿಪ್ರಾಯಗಳನ್ನು ಫ್ಲೆಕ್ಸಿಬಲ್ ಆಗಿಡುತ್ತಾರೆ.

ಇವರಿಗೆ ಸಮಯದ ಪ್ರಾಮುಖ್ಯತೆಯ ಅರಿವಿರುತ್ತದೆ. ಅಗತ್ಯವಿಲ್ಲ, ಅನಗತ್ಯ ಎಂದೆನಿಸಿದರೆ ಮುಲಾಜಿಲ್ಲದೆ ಎದ್ದು ಹೋಗುತ್ತಾರೆ. ಜಗಳ, ವಾಗ್ವಾದ ಅನಗತ್ಯ ಎಂಬುದು ಅವರ ಅಭಿಪ್ರಾಯ. ಅರ್ಥವಿಲ್ಲದ ಚರ್ಚೆಗಳನ್ನು ಜಯಿಸುವುದು ಅನಗತ್ಯ ಎಂಬುದು ಅವರ ವಾದ. ಹಾಗಾಗಿ ಯಾವುದೇ ಅನಗತ್ಯ ವಾಗ್ವಾದ ನಡೆಸುವುದಿಲ್ಲ. ತಾವಾಗಿಯೇ ಮಾತು ಕೊನೆಗೊಳಿಸಿ ಹೊರಟುಬಿಡುತ್ತಾರೆ.

5. ಸಮಯ, ಶ್ರಮ ಇವೆರಡಕ್ಕಿಂತ ಬೇರೆಲ್ಲ ನಗಣ್ಯ

ತಮ್ಮ ಸಮಯವನ್ನು ವ್ಯರ್ಥ ಮಾಡುವ ವಿಚಾರಗಳ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣವಿರುತ್ತದೆ. ಹಾಗಾಗಿ ಇಂತಹ ಅನಗತ್ಯ ವಿಚಾರಗಳಿಗೆ ನೋ ಹೇಳಲು ಇವರು ಯೋಚಿಸುವುದಿಲ್ಲ.

ತಮ್ಮ ಯಶಸ್ಸಿಗಾಗಿ ವಾಟ್ಸಾಪ್‌ ಗ್ರೂಪ್‌ಗಳನ್ನು ತೊರೆಯುವುದಕ್ಕೆ, ಯಾವ್ಯವುದೋ ಸಮಾರಂಭಗಳ ಭೇಟಿ ಕ್ಯಾನ್ಸಲ್ ಮಾಡುವುದಕ್ಕೆ ಅವರು ಹೆಚ್ಚು ಯೋಚಿಸುವುದಿಲ್ಲ. ಸಮಯ ಹಾಗೂ ಅವರ ಸಾಮರ್ಥ್ಯ ಅವರ ಕನಸಿಗೆ ಸಂಬಂಧಿಸಿ ಅತ್ಯಂತ ಪ್ರಮುಖ ವಿಚಾರಗಳು ಎಂಬುದನ್ನು ಅವರು ಬಲವಾಗಿ ನಂಬುತ್ತಾರೆ.

Follow Us:
Download App:
  • android
  • ios