ಹುಡುಗಿಯರೇನೋ ಪಟಪಟನೆ ಮಾತಾಡುತ್ತಾರೆ. ಭಾವನೆಗಳನ್ನು ಎಕ್ಸ್‌ಪ್ರೆಸ್ ಮಾಡುವುದರಲ್ಲಿ ಅವರ ಕಣ್ಣುಗಳಿಂದ ಹಿಡಿದು ನಗುವಿನವರೆಗೆ ಎಲ್ಲವೂ ಸಾಥ್ ನೀಡುತ್ತವೆ. ಪ್ರೀತಿಸುವ ಹುಡುಗನಿಗೆ ತಮ್ಮ ಭಾವನೆಗಳನ್ನು ಅರ್ಥ ಮಾಡಿಸುವಲ್ಲಿ ಹಿಂದೆ ಬೀಳುವವರಲ್ಲ. ಸಮಸ್ಯೆಗಳಿದ್ದರೆ ಅದನ್ನೂ ಹೇಳಿಕೊಂಡು ಕಣ್ಣೀರಾಗುತ್ತಾರೆ. ಆದರೆ, ಈ ಹುಡುಗರಿದ್ದಾರಲ್ಲ... ಅವರು ಮಾತ್ರ ಭಾವನೆಗಳನ್ನು ಬಚ್ಚಿಟ್ಟು ಬರಡುಭೂಮಿಯಂತೆ ತೋರಿಸಿಕೊಳ್ಳುವಲ್ಲಿ ಫೇಮಸ್. ಒಳಗೊಳಗೇ ಬೆಟ್ಟದಷ್ಟು ಪ್ರೀತಿಯಿದ್ದರೂ ಅದನ್ನು ಹೇಳಲು ಬಾರದೆ ಒದ್ದಾಡುತ್ತಾರೆ. ಹುಡುಗಿಯರ ವಿಷಯಕ್ಕೆ ಬಂದರೆ ಕಂಡಷ್ಟು ಖಡಕ್ ಅಲ್ಲ ಈ ಹುಡುಗರು. ಅವರಿಗೆ ಬಾಲ್ಯದಿಂದಲೂ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಹತ್ತಿಕ್ಕಲು ಅನೇರವಾಗಿ ತರಬೇತಿಯಾಗುತ್ತಲೇ ಹೋಗಿರುತ್ತದೆ. ಹೀಗಾಗಿ, ಪ್ರೀತಿಯ ವಿಷಯದಲ್ಲಿ ಆತನ ಮನಸ್ಸಿನಲ್ಲೇನಾಗುತ್ತಿದೆ ಎಂಬುದನ್ನು ಊಹಿಸುವುದು ಕಷ್ಟ. 

ಇನ್ನು, ಕಾದಂಬರಿಗಳನ್ನು ಓದಿ, ಚಿತ್ರಗಳನ್ನು ನೋಡಿ ಪ್ರೀತಿಯ ಬಗ್ಗೆ ಅಪಾರವಾದ ಅತಿಯಾದ ಕಲ್ಪನೆಗಳನ್ನು ಹೊಂದಿದ್ದಾಗ ನಿಜ ಜೀವನದಲ್ಲಿ ಸರಳವಾಗಿರುವ ಪ್ರೀತಿಯನ್ನು ಗುರುತಿಸುವುದು ಕಷ್ಟವಾಗುತ್ತದೆ. 
ಪ್ರೀತಿ ಎಂಬುದು ನಿಜಕ್ಕೂ ಬಹಳ ಟ್ರಿಕ್ಕೀ ವಿಷಯ. ಹುಡುಗ ಐ ಲವ್ ಯೂ ಎಂದು ಬಾಯಿ ಬಿಟ್ಟು ಹೇಳುತ್ತಿದ್ದೂ ಅಲ್ಲಿ ಲವ್ ಇಲ್ಲದಿರಬಹುದು, ಮತ್ತೆ ಕೆಲವರು ಏನೂ ಇಲ್ಲವೆಂದು ಹೇಳುತ್ತಿರುವಾಗಲೂ ಅಲ್ಲಿ ಪ್ರೀತಿ ಅಗಾಧವಾಗಿ ಹಬ್ಬಿ ಹರಡಿರಬಹುದು. 

ನನ್ನ ಇನ್ನೊಂದು ಕೆನ್ನೆ ಏನು ಪಾಪ ಮಾಡಿತ್ತು ಹುಡುಗಿ..?...

ನಿಮ್ಮ ಜೀವನದಲ್ಲೂ ಆ ಹುಡುಗ ಒಳಗೆ ಪ್ರೀತಿಯಿದ್ದೂ ಹೇಳಿಕೊಳ್ಳುತ್ತಿಲ್ಲ ಎಂಬ ಅನುಮಾನವಿದ್ದರೆ, ಅದನ್ನು ಬಗೆಹರಿಸಿಕೊಳ್ಳೋದು ಹೇಗೆ? 
ಹುಡುಗನಿಗೆ ನಿಮ್ಮ ಮೇಲೆ ಪ್ರೀತಿ ಇದೆಯೋ ಇಲ್ಲವೋ ಎಂಬುದನ್ನು ಆತನ ನಡೆನುಡಿಗಳಿಂದ ಅರಿಯುವ ಮಾರ್ಗ ಕಂಡುಕೊಳ್ಳಲು ಇಲ್ಲಿವೆ ಟಿಪ್ಸ್...

ಆತನಿಗೆ ನಿಮ್ಮ ಮೇಲೆ ಪ್ರೀತಿ ಇದ್ದರೆ...
- ನಿಮ್ಮ ಕೆಲಸದ ವೇಳೆಯ ಬಗ್ಗೆ, ಫ್ರೀ ಟೈಂ ಬಗ್ಗೆ ಆತ ವಿಚಾರಿಸುತ್ತಿದ್ದರೆ ನಿಮ್ಮಲ್ಲಿ ಆತ ಆಸಕ್ತಿ ತೋರುತ್ತಿರುವುದು ಶತಸಿದ್ಧ.
- ನೀವು ಯಾರನ್ನಾದರೂ ನಿಜವಾಗಿ ಪ್ರೀತಿಸುವಾಗ ಅವರಿಂದ ಪಡೆಯುವುದಕ್ಕಿಂತ ಹೆಚ್ಚು ಅವರಿಗೆ ಕೊಡಬಯಸುತ್ತೀರಿ. ಕೊಡುವುದೆಂದರೆ ಕೇವಲ ಉಡುಗೊರೆಗಳಲ್ಲ, ಸದಾ ನಿಮ್ಮನ್ನು ನಗಿಸುವ ಪ್ರಯತ್ನಗಳು, ಅಗತ್ಯ ಬಿದ್ದಾಗಲೆಲ್ಲ ಸಹಾಯ ಮಾಡುವುದು, ನಿೀವು ಬೋರ್ ಎಂದಾಗ ಅದನ್ನು ಕಳೆಯಲು ಪ್ರಯತ್ನ ಹಾಕುವುದು ಮುಂತಾದ್ದನ್ನು ಆತ ಮಾಡುತ್ತಿದ್ದಾನಾದರೆ ಆತ ನಿಮ್ಮನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಿದ್ದಾನೆ. 
- ಹುಡುಗ ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯಲು ನೆಪ ಹುಡುಕುತ್ತಿದ್ದರೆ, ನಿಮ್ಮ ಫೇವರೇಟ್ ಸ್ಥಳಗಳು, ಟೈಂಪಾಸ್ ಚಾಟ್ ಅಂಗಡಿಗಳಿಗೆ ಜೊತೆಗೆ ಬರುತ್ತಿದ್ದಾನೆಂದರೆ ಆತ ನಿಮ್ಮನ್ನು ಖಂಡಿತಾ ಪ್ರೀತಿಸುತ್ತಿದ್ದಾನೆ.
- ಸುಮ್ಮನೇ ಈ ದಿನ ನಿಮ್ಮ ಬದುಕಿನಲ್ಲೇನಾಯಿತು ಎಂದು ಕೇಳಲು ಪ್ರತಿ ದಿನ ಮೆಸೇಜ್ ಮಾಡುತ್ತಾನಾದರೆ, ಮಾತನಾಡಲು ಕಾರಣ ಸಿಕ್ಕಿದರೆ ಸಾಕೆಂದು ಕರೆ ಮಾಡುತ್ತಿದ್ದರೆ ಆತ ತನ್ನ ಆಸಕ್ತಿಯನ್ನು ಪ್ರಕಟಿಸುತ್ತಿದ್ದಾನೆ. 
- ತುಂಬಾ ಬ್ಯುಸಿ ಶೆಡ್ಯೂಲ್‌ನಲ್ಲೂ ನಿಮಗಾಗಿ ಸಮಯ ಹೊಂದಿಸಿಕೊಳ್ಳುತ್ತಾನೆಂದರೆ ಆತನನ್ನು ನೀವು ಖಂಡಿತಾ ನಂಬಬಹುದು.
- ಸದಾ ನಿಮ್ಮತ್ತಲೇ ನೋಡುತ್ತಿದ್ದು, ನೀವು ನೋಡಿದೊಡನೆ ಕಣ್ಣು ಬದಲಾಯಿಸುತ್ತಿದ್ದಾನಾದರೆ, ಆತನಿಗೆ ನಿಮ್ಮನ್ನು ಕಣ್ತುಂಬಿಕೊಂಡಷ್ಟೂ ಸಾಲುತ್ತಿಲ್ಲ. ಜೊತೆಗೆ, ಆತನ ಮೆಚ್ಚುಗೆ ಹಾಗೂ ಪ್ರೀತಿ ತುಂಬಿದ ನೋಟಕ್ಕೂ, ಸಾಮಾನ್ಯ ನೋಟಕ್ಕೂ ವ್ಯತ್ಯಾಸ ನಿಮಮ್ಮ ಅರಿವಿಗೆ ಯಾರೂ ಹೇಳದೆಯೇ ಬರುತ್ತದೆ. 
- ನಿಮ್ಮ ಬಗ್ಗೆ ತನ್ನ ಗೆಳೆಯರಲ್ಲಿ, ಕುಟುಂಬದವರಲ್ಲಿ ಹೊಗಳಿ ಹಾಡಿದ್ದಾನೆ ಎಂದರೆ ಆತ ಖಂಡಿತಾ ನಿಮ್ಮ ವಿಷಯದಲ್ಲಿ ಗಂಭೀರವವಾಗಿದ್ದಾನೆ ಎಂದರ್ಥ. 
- ನಿಮ್ಮ ಗೆಳೆಯರನ್ನು, ಕುಟುಂಬಸ್ಥರನ್ನು ಭೇಟಿಯಾಗಲು ಬಯಸುತ್ತಾನೆ, ಹಾಗೆ ಭೇಟಿಯಾದಾಗ ಅವರು ತನ್ನನ್ನು ಇಷ್ಟ ಪಡಬೇಕೆಂದು ಎಕ್ಸ್ಟ್ರಾ ಪ್ರಯತ್ನ ಹಾಕುತ್ತಾನೆಂದರೆ ಅವನು ಆ ಮೂಲಕ ನಿಮ್ಮೊಂದಿಗೆ ಭವಿಷ್ಯ ಕಳೆವ ಸೂಚನೆ ನೀಡುತ್ತಿದ್ದಾನೆ. 

ಅವಳು ನಂಗೆ ಬಿದ್ಲಾ? ಗೊತ್ತಾಗೋದು ಹೇಗೆ?...

ಆತನಿಗೆ ನಿಮ್ಮ ಮೇಲೆ ಆಸಕ್ತಿ ಇಲ್ಲವಾದರೆ
- ನಿಮಗೆ ಹುಷಾರಿಲ್ಲವೆಂದಾಗಲೂ ಆತ ಹೆಚ್ಚೇನು ಗಮನ ವಹಿಸದೆ, ತನ್ನ ಗೆಳೆಯರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾನೆ ಎಂದಾದಲ್ಲಿ ಆತನ ಲವ್ ಇಂಟ್ರಸ್ಟ್ ನೀವಲ್ಲ ಎಂದರ್ಥ. 
- ಆತನೊಂದಿಗೆ ಭವಿಷ್ಯದ ಕನಸುಗಳನ್ನು ನೀವು ಹಂಚಿಕೊಂಡಾಗ ಟಾಪಿಕ್ ಬದಲಿಸುವುದು, ತನ್ನ ಕನಸುಗಳನ್ನು ಹೇಳುವಾಗ ಅದರಲ್ಲಿ ನೀವಿಲ್ಲದಿರುವುದು ಕೂಡಾ ಆತ ನಿಮ್ಮನ್ನು ಪ್ರೀತಿಸುತ್ತಿಲ್ಲ, ಕೇವಲ ಗೆಳೆಯನಾಗಿ ನೋಡುತ್ತಿದ್ದಾನೆ ಎಂದರ್ಥ. 
- ನೀವು ಎಲ್ಲಿಯೇ ಕರೆದರೂ, ಬರಲಾಗದ್ದಕ್ಕೆ ಕಾರಣ ಹೇಳುವುದು, ನಿಮ್ಮೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂಜರಿಯುವುದು, ತನ್ನ ಗೆಳೆಯರಿಗೆ ನಿಮ್ಮನ್ನು ಪರಿಚಯ ಮಾಡಿಕೊಡದದೆ ಇರುವುದು ಇವೆಲ್ಲವೂ ರೆಡ್ ಸಿಗ್ನಲ್ ಸೂಚಿಸುತ್ತವೆ. 
- ನಿಮಗೆ ಸಿಗುತ್ತೇನೆಂದಾಗಲೂ ಕಡೆ ಕ್ಷಣದಲ್ಲಿ ಬದಲಾವಣೆಗಳಾಗುವುದು ರಿಪೀಟ್ ಆಗುತ್ತಿದ್ದರೆ ಆತ ನಿಮ್ಮನ್ನು ಅವಾಯ್ಡ್ ಮಾಡುತ್ತಿದ್ದಾನೆ.