ಅಮೆರಿಕಾದಲ್ಲಿ 24 ವರ್ಷದ ಯುವಕನಿಗೂ 61 ಒಂದು ವರ್ಷ ಪ್ರಾಯದ ಅಜ್ಜಿಗೂ ಪ್ರೀತಿಯಾಗಿ ಮದುವೆಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದು ಕಲಿಕಾಲ, ಪ್ರಪಂಚದಲ್ಲಿ ಎಂತೆಂತಾ ವಿಚಿತ್ರಗಳು ನಡೆಯುತ್ತವೆ ಈಗ ಎಂದು ಹೇಳಲಾಗದು, ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮ ಸಂಬಂಧಗಳ ವಿಚಾರದಲ್ಲಿ ನಡೆಯುವ ಕೆಲ ಘಟನೆಗಳನ್ನು ಊಹೆಯೂ ಮಾಡಲು ಸಾಧ್ಯವಾಗದು. ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಎಂಬ ಮಾತನ್ನು ನಾವು ಕೇಳಿದ್ದೇವೆ. ಈ ಪ್ರೀತಿಯನ್ನು ಸಾಬೀತು ಮಾಡುವ ಹಲವು ಘಟನೆಗಳು ನಮ್ಮಲ್ಲಿ ನಡೆದಿವೆ. ಅದೇ ರೀತಿಯ ಒಂದು ವಿಚಿತ್ರ ಪ್ರೀತಿಯ ಕತೆ ಇದು. ಆತನಿನ್ನು ಯೌವ್ವನಕ್ಕೆ ಕಾಲಿಟ್ಟ ಕೇವಲ 24ರ ಹರೆಯದ ಯುವಕ, ಆದರೆ ಆಕೆಯೋ ಕಾಡು ಬಾ ಎನ್ನುತ್ತೆ. ನಾಡು ಹೋಗು ಎನ್ನುತ್ತೆ ಎಂದು ಹೇಳುವ 61 ವರ್ಷ ಪ್ರಾಯದ ಅಜ್ಜಿ. ಏನಿದು ಅಜ್ಜಿ ಮೊಮ್ಮಗನ ಪ್ರೀತಿಯ ಎಂದು ಕೇಳಬೇಡಿ. ಇವರಿಬ್ಬರು ಲವರ್‌ಗಳು, ಮದುವೆಯೂ ಆಗಿ ಮಕ್ಕಳನ್ನು ಪಡೆಯುವ ಆಶಯ ಹೊಂದಿರುವ ಜೋಡಿ ಇವರು ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ.
ಇವರು ಅಮೆರಿಕಾ ಪ್ರಜೆಗಳು, ಅಜ್ಜಿಯ ಹೆಸರು ಚೆರಿಲ್ ಮೆಕ್‌ಗ್ರೆಗರ್, ಇನ್ನು ಅಜ್ಜಿಯನ್ನು ಪ್ರೀತಿಸುತ್ತಿರುವ ಈ ಗಟ್ಟಿಮುಟ್ಟಾದ ಸುಂದರ ತರುಣನ ಹೆಸರು ಕುರಾನ್ ಮೆಕೇನ್ ಇವರಿಬ್ಬರಿಗೆ ಪ್ರೀತಿಯಾಗಿದೆ. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಆಳವಾಗಿ ಇವರಿಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ ಮದುವೆಯಾಗಲು ನಿರ್ಧರಿಸಿದರು. ಆದರೆ ಇವರ ಕುಟುಂಬದವರು ಮಾತ್ರ ಇವರ ಮದುವೆಗೆ ನಿರಾಕರಿಸಿದರು. ಯಾರಾದರೂ ಒಪ್ಪಲು ಸಾಧ್ಯವೇ ನೀವೇ ಹೇಳಿ. ಅಜ್ಜಿ ಚೆರಿಲ್ ಮೆಕ್‌ಗ್ರೆಗರ್ ಈಗಾಗಲೇ ಏಳು ಮಕ್ಕಳಿದ್ದಾರೆ. ಇತ್ತ ಈ ಯುವಕನಿಗೋ ಎಲ್ಲವೂ ಹೊಸದು. 61 ವರ್ಷ ಕಳೆದ ತಮ್ಮಮ್ಮ, ಮೊಮ್ಮಗನ ವಯಸ್ಸಿನ ಹುಡುಗನನ್ನು ಮದುವೆಯಾಗುತ್ತೇನೆ ಎಂದರೆ ಹೇಗೆ ಒಪ್ಪಲು ಸಾಧ್ಯ. ಅದೇ ರೀತಿ ಅಜ್ಜಿ ಹಾಗೂ ಯುವಕ ಎರಡೂ ಕುಟುಂಬದವರು ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹುಚ್ಚು ಪ್ರೀತಿ: HIV ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿಕೊಂಡ ಬಾಲಕಿ
ಆದರೆ ಇವರು ಕೇಳಬೇಕಲ್ಲ. ಪ್ರೀತಿಗೆ ಬಿದ್ದ ಮೇಲೆ ಬೇರೆಯವರ ಮಾತೇಕೆ ನಿನಗೆ ನಾನು ನನಗೆ ನೀನು ಮಾತ್ರ ಎಂದು ಯೋಚಿಸಿದ ಈ ಜೋಡಿ ವಿರೋಧದ ನಡುವೆಯೂ 2021 ರಲ್ಲಿ ಮದುವೆಯಾಗಿದ್ದಾರೆ. ಅಲ್ಲದೇ ಈ ಜೋಡಿಗೆ ಈಗ ಮಗು ಪಡೆಯುವ ಆಸೆ ಆಗಿದೆಯಂತೆ. ಆದರೆ ಅಜ್ಜಿ ಚೆರಿಲ್ ಮೆಕ್‌ಗ್ರೆಗರ್‌ಗೆ ಈಗಾಗಲೇ ಮಕ್ಕಳನ್ನು ಹಡೆಯುವ ವಯಸ್ಸು ಮೀರಿರುವುದರಿಂದ ಮಗು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಇವರಿಬ್ಬರು ಬಾಡಿಗೆ ತಾಯಿ ಮೂಲಕ ಮಗು ಪಡೆಯುವ ನಿರ್ಧಾರ ಮಾಡಿದ್ದಾರಂತೆ. ಇದಕ್ಕಾಗಿ 1.14 ರೂಪಾಯಿಯನ್ನು ಖರ್ಚು ಮಾಡುತ್ತಿದ್ದಾರೆ. 2023ರ ವೇಳೆಗೆ ಇವರು ಬಾಡಿಗೆ ತಾಯಿ ಮೂಲಕ ಮಗು ಪಡೆಯಲಿದ್ದಾರಂತೆ. ಅಲ್ಲದೇ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದರು ಎಂಬಂತೆ ಚೆರಿಲ್ ಆ ಮಗುವಿಗಾಗಿ ಈಗಾಗಲೇ ಶಾಪಿಂಗ್ ಶುರು ಮಾಡಿದ್ದಾರಂತೆ.
ಮೊದಲ ಭೇಟಿ ಹೇಗೆ?
ಅಂದಹಾಗೆ ಇವರಿಬ್ಬರು ಎಲ್ಲಿ ಸಿಕ್ಕರು ಎಲ್ಲಿ ಮೊದಲ ಬಾರಿ ಭೇಟಿ ಆದರೂ ಎಂದು ಕೇಳಿದರೆ ನೀವು ಮತ್ತಷ್ಟು ಅಚ್ಚರಿಗೊಳ್ಳುವಿರಿ. ಮಹಿಳೆ ಚೆರಿಲ್ ಮೆಕ್‌ಗ್ರೆಗರ್, ಅವರ ಪುತ್ರ ನಡೆಸುತ್ತಿದ್ದ ಫಾಸ್ಟ್‌ಫುಡ್ ಅಂಗಡಿಯಲ್ಲಿ ಈ ಯುವಕ ಕುರಾನ್ ಕೆಲಸ ಮಾಡುತ್ತಿದ್ದ. ಹೀಗಾಗಿ ಇಲ್ಲಿಂದಲೇ ಇವರ ಪ್ರೇಮ ಶುರುವಾಗಿ ಮದುವೆಯೂ ಆಗಿದ್ದು, ಈಗ ಮಕ್ಕಳ ಆಗಮನಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಇವರ ಪ್ರೀತಿ ನೋಡುಗರನ್ನು ಕೇಳುಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಒಟ್ಟಿನಲ್ಲಿ ಅಮೆರಿಕಾದಲ್ಲಾದ ಕಾರಣ ಇವರು ಜೀವಂತವಾಗಿದ್ದಾರೆ ಒಂದು ವೇಳೆ ನಮ್ಮಲ್ಲೇನಾದರೂ ಈ ರೀತಿ ಆಗಿದ್ದಲ್ಲಿ ಕತೆ ಬೇರೆಯೇ ಇರುತ್ತಿತ್ತು ಎಂದು ಇವರ ಕತೆ ಕೇಳಿದ ಭಾರತೀಯರು ಮಾತನಾಡುತ್ತಿದ್ದಾರೆ.
40ನೇ ವಯಸ್ಸಿನಲ್ಲಿ ಪ್ರೀತಿ ಚಿಗುರಿದವರಿಗೆ Dating Tips
ಕೆಲ ದಿನಗಳ ಹಿಂದೆ ಅಸ್ಸಾಂನಲ್ಲಿ 15ರ ಪ್ರಾಯದ ಯುವತಿಯೊಬ್ಬಳು, ಹೆಚ್ಐವಿ ಪೀಡಿತ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದಳು. ಅಲ್ಲದೇ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಹೆಚ್ಐವಿ ಪೀಡಿತ ಗೆಳೆಯನ ರಕ್ತವನ್ನು ಸಿರಿಂಜ್ ಮೂಲಕ ತನ್ನ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಳು.
