56 ವರ್ಷದ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡ್ಕೊಂಡ 19 ವರ್ಷದ ಯುವಕ !

ಪ್ರೀತಿಗೆ ಕಣ್ಣಿಲ್ಲ ಅಂತಾರೆ..ಅದು ಹಲವು ಸಂದರ್ಭಗಳಲ್ಲಿ ನಿಜ ಅನ್ನೋದು ಸಾಬೀತಾಗಿದೆ. ವಯಸ್ಸು, ಜಾತಿ, ಧರ್ಮ, ಊರು, ದೇಶಗಳ ಬದಲಾವಣೆಯ ಹಂಗಿಲ್ಲದೆ ಪ್ರೀತಿ ಹುಟ್ಟುತ್ತದೆ. ಆದ್ರೆ ಇಲ್ಲೊಂದೆಡೆ 56 ವರ್ಷದ ಮಹಿಳೆಯೊಂದಿಗೆ 19 ವರ್ಷದ ಯುವಕನ ಮದುವೆ ನಿಶ್ಚಯವಾಗಿದೆ. ಅಚ್ಚರಿ ಅನಿಸಿದರೂ ಇದು ನಿಜ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

19 Year Old Thailand Boy Gets Engaged to 56 Year Old Woman Vin

ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿಯಾಗುವುದಿಲ್ಲ. ಏಜ್ ಗ್ಯಾಪ್ ಇದ್ದರೂ ಪ್ರೀತಿ ಹುಟ್ಟುವುದು, ಮದ್ವೆಯಾಗುವುದು, ಸಹಬಾಳ್ವೆಯಿಂದ ಜೀವನ ನಡೆಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅದೆಲ್ಲಾ ಒಂದೆರಡು ವರ್ಷವಾದರೆ ಸರಿ. ಆದರೆ ಅದಕ್ಕಿಂತ ಹೆಚ್ಚು ವಯಸ್ಸಿನ ಅಂತರವಿದ್ದರೆ ದಾಂಪತ್ಯ ಸರಿಯಾಗಿ ನಡೆಯಬಹುದಾ ಅನ್ನೋ ಬಗ್ಗೆ ಹಲವರಿಗೆ ಗೊಂದಲ ಎದುರಾಗುತ್ತೆ. ಆದ್ರೆ ಇಲ್ಲೊಂದು ಜೋಡಿ ಇಬ್ಬರ ನಡುವೆ ಬರೋಬ್ಬರಿ 37 ವರ್ಷದ ಅಂತರವಿದ್ದರೂ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

9ರ ಹದಿಹರೆಯದ ಹುಡುಗ ಮತ್ತು 56 ವರ್ಷದ ಮಹಿಳೆಯ ಪ್ರೀತಿ
ಥೈಲ್ಯಾಂಡ್​ನ ಈ 19ರ ಹದಿಹರೆಯದ ಹುಡುಗ (Boy) ಮತ್ತು 56 ವರ್ಷದ ಈ ಮಹಿಳೆ (Woman) ನಿಶ್ಚಿತಾರ್ಥ (Enagemnet) ಮಾಡಿಕೊಂಡು ಮದುವೆಯ ನಿರ್ಧಾರಕ್ಕೆ ಬರುತ್ತಿದ್ದಂತೆ ಎಲ್ಲೆಡೆ ಈ ವಿಚಾರ ವೈರಲ್ ಆಗಿದೆ. ಪ್ರೀತಿ ಹುಟ್ಟೋಕೆ ಯಾವ ಕಾರಣವೂ ಬೇಕಿಲ್ಲ, ವಯಸ್ಸಿನ ಅಂತರವೂ ಪ್ರೀತಿಗೆ (Love) ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಉದಾಹರಣೆ ಎಂಬಂತೆ ಇವರಿಬ್ಬರೂ ಈಗ ಸುದ್ದಿಯಲ್ಲಿದ್ದಾರೆ. ಹದಿಹರೆಯದ ಹುಡುಗ ಮತ್ತು ಈ ವಯಸ್ಸಾದ ಮಹಿಳೆಯ ಮಧ್ಯೆ ಇರುವ ಪ್ರೀತಿಗೆ ಎಲ್ಲರೂ ನಿಬ್ಬೆರಗಾಗಿದ್ದಾರೆ. ಆಕೆ ಪರಿಶ್ರಮವುಳ್ಳಾಕೆ, ಪ್ರಾಮಾಣಿಕಳು ಮತ್ತು ಆಕೆಗೆ ಮೂರು ಮಕ್ಕಳಿದ್ದಾರೆ. ಆದರೂ ಅವಳೆಂದರೆ ನನಗಿಷ್ಟ. ಆಕೆಯ ಮನೆಯನ್ನು ಸುವ್ಯವಸ್ಥಿತಗೊಳಿಸಬೇಕು, ಆಕೆ ಆರಾಮದಿಂದ ಬದುಕುವಂತಾಗಬೇಕು. ಅದಕ್ಕಾಗಿ ಏನನ್ನಾದರೂ ಮಾಡಲು ಸಿದ್ಧ' ಎಂದು 19 ವರ್ಷದ ಯುವಕ ಹೇಳಿದ್ದಾನೆ. 

ಮದ್ವೆಯಾಗಿ ಎರಡು ವರ್ಷವಾಯ್ತು, ಲೈಂಗಿಕತೆ ಬೇಡ ಅಂತಿದ್ದಾರೆ ಹ್ಯಾಪಿ ಕಪಲ್‌ !

10 ವರ್ಷದ ಬಾಲಕನಾಗಿದ್ದಾಗಲೇ ಇಬ್ಬರಿಗೆ ಪರಸ್ಪರ ಪರಿಚಯ
19 ವರ್ಷ ವುತಿಚಾಯ್​ ಚಂತರಾಜ್ 10 ವರ್ಷದ ಬಾಲಕನಾಗಿದ್ದಾಗ 56 ವರ್ಷದ ಜನ್ಲಾ ನಮುಂಗ್ರಾಕ್ ಎಂಬ ಈ ಮಹಿಳೆಗೆ ಪರಿಚಯವಾದರು. ಇವರಿಬ್ಬರೂ ನೆರೆಹೊರೆಯವರಾಗಿದ್ದರು. ಮನೆಗೆಲಸದಲ್ಲಿ ಮತ್ತು ಮನೆ ಸ್ವಚ್ಛ ಮಾಡುವಲ್ಲಿ ಆಕೆಗೆ ಈತ ಸಹಾಯ ಮಾಡುವಾಗ ಪರಸ್ಪರ ಇಬ್ಬರ ನಡುವೆ ಸ್ನೇಹ (Friendship) ಬೆಳೆಯಿತು. ನಂತರ ಅದು ಪ್ರೀತಿಯಾಗಿ ಪರಿವರ್ತನೆಯಾಯಿತು. ಕಳೆದ ಎರಡು ವರ್ಷಗಳಿಂದ ಇವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ.

ಇಬ್ಬರೂ ಖುಷಿಯಾಗಿ ಜೀವನ (Life) ನಡೆಸುತ್ತಿದ್ದೀರಾ ಎಂದು ಕೇಳಿದ್ದಕ್ಕೆ 19 ವರ್ಷ ವುತಿಚಾಯ್​ ಚಂತರಾಜ್ ಹೌದೆಂದು ಖುಷಿಯಿಂದ ಉತ್ತರ ನೀಡುತ್ತಾರೆ. 'ನನ್ನ ಜೀವನದಲ್ಲಿ ಮೊದಲ ಸಲ ಆರಾಮಾಗಿ ಬದುಕುತ್ತಿದ್ದೇನೆ. ಎರಡು ವರ್ಷಗಳಿಂದ ಜನ್ಲಾ ಜೊತೆ ವಾಸಿಸುತ್ತಿದ್ದೇನೆ. ಆಕೆಯನ್ನು ತುಂಗ್ ಎಂದು ಪ್ರೀತಿಯಿಂದ ಕರೆಯುತ್ತೇನೆ' ಎಂದು ವುತಿಚಾಯ್ ಹೇಳುತ್ತಾರೆ.

ವಯಸ್ಸಿನ ಅಂತರದ ಬಗ್ಗೆ ಬೇಸರವಿಲ್ಲ ಎಂದ ಜೋಡಿ
ಜನ್ಲಾ ವಿಚ್ಛೇದಿತೆ. ಈಗಾಗಲೇ ಈಕೆಗೆ ಮೂರು ಮಕ್ಕಳಿದ್ದಾರೆ. 'ವುತಿಚಾಯ್, ಮತ್ತೆ ನನ್ನನ್ನು ಯೌವನವನ್ನು ಅನುಭವಿಸುವಂತೆ ಮಾಡುತ್ತಿದ್ದಾನೆ. ಈತ ನನಗೆ ಸೂಪರ್ ಹೀರೋ ಇದ್ದಂತೆ. ಪ್ರತೀದಿನ ನನ್ನ ಮನೆಗೆಲಸಗಳಲ್ಲಿ ಸಹಾಯ ಮಾಡುತ್ತಿದ್ದ. ಅವನು ಹರೆಯಕ್ಕೆ ಬರುತ್ತಿದ್ದಂತೆ ನನ್ನ ಬಗ್ಗೆ ಭಾವನೆಗಳನ್ನು (Feelings) ಬೆಳೆಸಿಕೊಳ್ಳಲಾರಂಭಿಸಿದ. ನನಗೆ ಅಚ್ಚರಿಯಾಗತೊಡಗಿತು. ಏಕೆಂದರೆ ನಾನವನನ್ನು ಬಾಲ್ಯದಿಂದಲೂ ಬಲ್ಲವಳಾಗಿದ್ದೆ. ಅಂತೂ ಈಗ ಆದಷ್ಟು ಬೇಗ ಮದುವೆ (Marriage)ಯಾಗಲು ನಿರ್ಧರಿಸಿದ್ದೇವೆ' ಎನ್ನುತ್ತಾರೆ ಜನ್ಲಾ.

ಮದುವೆ ಎಂದರೇನು ? ಎಕ್ಸಾಂನಲ್ಲಿ ಹುಡುಗಿ ಕೊಟ್ಟ ಉತ್ತರ ಎಷ್ಟು ಮಜವಾಗಿದೆ ನೋಡಿ !

ವುತಿಚಾಯ್​ ಚಂತರಾಜ್ ಹಾಗೂ ಜನ್ಲಾ ನಮುಂಗ್ರಾಕ್ ಇವರಿಬ್ಬರಿಗೂ ತಮ್ಮ ವಯಸ್ಸಿನ ಅಂತರದ (Age gap) ಬಗ್ಗೆ ಬೇಸರವಿಲ್ಲ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮುಜುಗರಪಟ್ಟುಕೊಳ್ಳುವುದಿಲ್ಲ. ಇಬ್ಬರೂ ಖುಷಿಯಿಂದ ಡೇಟಿಂಗ್ ಹೋಗುತ್ತಾರೆ. ಊರಿನ ಹಾದಿಯಲ್ಲಿ  ಪರಸ್ಪರ ಕೈಹಿಡಿದುಕೊಂಡು ಮುತ್ತುಗಳ ವಿನಿಮಯ ಮಾಡಿಕೊಳ್ಳುತ್ತಾ ಸಾಗುತ್ತಾರೆ. ಥೈಲ್ಯಾಂಡ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಸೂಪರ್ ಜೋಡಿ ಸದ್ಯದಲ್ಲೇ ಮದ್ವೆಯಾಗಲಿದ್ದಾರೆ.

Latest Videos
Follow Us:
Download App:
  • android
  • ios