Asianet Suvarna News Asianet Suvarna News

Ramanagara: ಕಾಂಗ್ರೆಸ್ ನಗರಸಭೆ ಸದಸ್ಯನ ಬರ್ತಡೇ ಪಾರ್ಟಿಯಲ್ಲಿ ನಂಗನಾಚ್

ಅರೆಬಟ್ಟೆ ತೊಟ್ಟ ಯುವತಿಯರಿಂದ ಭರ್ಜರಿ ಡ್ಯಾನ್ಸ್
ನೃತ್ಯ ಮಾಡುತ್ತಿದ್ದ ಯುವತಿಯರ ಮೇಲೆ ಹಣ ಎರಚಿ ಮೋಜು ಮಸ್ತಿ
ಜನರ ಸಮಸ್ಯೆ ಆಲಿಸುವುದು ಬಿಟ್ಟು ಮೋಜು ಮಾಡುತ್ತಿರುವ ಸದಸ್ಯರ ವಿರುದ್ಧ ಆಕ್ರೋಶ

Nanganach at Congress member birthday party
Author
First Published Nov 26, 2022, 8:24 PM IST

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ರಾಮನಗರ (ನ.26): ಜನರ ಸಮಸ್ಯೆಗಳನ್ನ ಬಗೆಹರಿಸಬೇಕಾದ ನಗರಸಭೆ ಸದಸ್ಯರೇ ಮೋಜು ಮಸ್ತಿಯಲ್ಲಿ ತೊಡಗಿದ್ದು, ಸದಸ್ಯರೊಬ್ಬರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಯುವತಿಯರಿಂದ ಮಾಡಿಸಿದ ನಂಗನಾಚ್ (ಅರೆನಗ್ನ ನೃತ್ಯ) ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಂತಹ ಕಾರ್ಯಕ್ರಮ ಮಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಅಂದಹಾಗೆ ಈಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ, ರಾಜಧಾನಿ ಬೆಂಗಳೂರಿನ ನೆರೆಯ ಜಿಲ್ಲೆ ರೇಷ್ಮೆನಗರಿ ರಾಮನಗರದಲ್ಲಿ ನಡೆದಿದೆ.

ರಾಮನಗರ ನಗರಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ತಮ್ಮ ಬರ್ತಡೇ ಪಾರ್ಟಿ ಆಯೋಜನೆ ಮಾಡಿದ್ದು, ಅಲ್ಲಿ ನಂಗಾನಾಚ್‌ ಅನ್ನೂ ಆಯೋಜಿಸಿದ್ದರು. ಈ ವೇಳೆ ಯುವತಿಯರ ಮೇಲೆ ಹಣವನ್ನ ಎಸೆದು ಬರ್ತಡೇ ಸೆಲಬ್ರೇಷನ್ ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದಾದರೂ ಸಮಸ್ಯೆ ಹೇಳಿಕೊಂಡು ಬಗೆಹರಿಸಲು ಕೇಳಿದರೆ ಅನುದಾನದ ನೆಪ ಹೇಳುವ ಇವರು ನಂಗಾನಾಚ್‌ ಮಾಡಿಸಿ ಮೋಜು ಮಸ್ತಿ ಮಾಡುತ್ತಿರುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಪಿತೃಗಳ ಮೋಜುಮಸ್ತಿ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಬಾರಿ ಟೀಕೆ ಕೂಡ ಎದುರಾಗಿದೆ.

ರಾಮನಗರ ಕಾಂಗ್ರೆಸ್ ನಗರಸಭೆ ಸದಸ್ಯನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ನಂಗನಾಚ್

ನಗರಸಭೆಯ 19ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯ ದೌಲತ್ ಶರೀಪ್ ಅವರ 48ನೇ ಹುಟ್ಟುಹಬ್ಬ ಅಂಗವಾಗಿ ನವೆಂಬರ್ 24ರ ರಾತ್ರಿ ರಾಮನಗರದ ಯಾರಬ್ ನಗರದಲ್ಲಿರೋ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿಯನ್ನ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ನಗರಸಭೆಯ ಬಹುತೇಕ ಕೈ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು. ಇನ್ನು ಪಾರ್ಟಿಗಾಗಿ ಬೆಂಗಳೂರಿನಿಂದ ಡ್ಯಾನ್ಸರ್, ಸಿಂಗರ್ಸ್ ಕರೆಸಲಾಗಿತ್ತು. ಪಾರ್ಟಿನಲ್ಲಿ ಸದಸ್ಯರಗಳ ಸಮ್ಮುಖದಲ್ಲೇ ನಂಗನಾಚ್ ನಡೆಯಿತು. ಅಷ್ಟೇ ಅಲ್ಲದೆ ಡ್ಯಾನ್ಸರ್ ಗಳ ಮೇಲೆ ಹಣವನ್ನ ಎರಚಿ ಏಂಜಾಯ್ ಕೂಡ ಮಾಡಿದರು.  ನಗರಸಭೆ ಪುರಪಿತೃಗಳ ಮೋಜು ಮಸ್ತಿ ವಿಡಿಯೋ ಸಾಕಷ್ಟು ವೈರಲ್ ಸಹಾ ಆಗಿದೆ. ಸಾರ್ವಜನಿಕರು ಕೂಡ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ರಾಮನಗರದ ನಗರಸಭೆ ಕೈ ವಶದಲ್ಲಿದೆ. 31 ವಾರ್ಡ್ ಗಳಲ್ಲಿ 20 ಕಾಂಗ್ರೆಸ್ ಸದಸ್ಯರುಗಳೇ ಇದ್ದಾರೆ. ಇನ್ನು ರಾಮನಗರದಲ್ಲಿ ಸಮಸ್ಯೆಗಳ ಸುರಿಮಳೆಯೇ ಇದೆ. ಸರಿಯಾಗಿ ಕುಡಿಯಲು ನೀರಿಲ್ಲ, ರಸ್ತೆಗಳ ಸ್ಥಿತಿಯಂತು ಹೇಳತೀರದು. ಸರಿಯಾಗಿ ಕಸವಿಲೇವಾರಿ ಕೂಡ ಆಗುತ್ತಿಲ್ಲ. ಇಂತಹ ಸಮಸ್ಯೆಗಳ ಮಧ್ಯೆ ಕೈ ಸದಸ್ಯರ ಮೋಜುಮಸ್ತಿ ಸಾಕಷ್ಟು ಟೀಕೆಗೂ ಕೂಡ ಕಾರಣವಾಗಿದೆ. ಕಾಂಗ್ರೆಸ್ ಸದಸ್ಯರುಗಳೇ ಈ ಪಾರ್ಟಿಯನ್ನ ಆಯೋಜನೆ ಕೂಡ ಮಾಡಿದ್ದರು. ಅವರು ಡ್ಯಾನ್ಸರ್ ಅಲ್ಲ ಹಾಡುಗಾರರು. ನಾವು ಕೂಡ ಭಾಗವಹಿಸಿದ್ದೆವು. ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕೆಲವು ಕಡೆ ಕಲಾವಿದರಿಗೆ ದುಡ್ಡು ಎರಚುವುದು ಇದೆ. ಇದರಲ್ಲಿ ವಿಶೇಷ ಏನು ಇಲ್ಲ ಎಂದು ಸಮರ್ಥನೇ ಮಾಡಿಕೊಂಡಿದ್ದಾರೆ.

ಒಟ್ಟಾರೆ ಇಷ್ಟು ದಿನಗಳ ಕಾಲ ಬೆಂಗಳೂರಿನ ಪಬ್ ಗಳಲ್ಲಿ ಇದ್ದ ಸಂಸ್ಕೃತಿಯನ್ನ ರಾಮನಗರಕ್ಕೂ ಕೂಡ ಕೈ ಸದಸ್ಯರು ತಂದಿದ್ದು, ಸಾರ್ವಜನಿಕರು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ. ಇಷ್ಟೇಲ್ಲ ಆದ್ರು ಪೊಲೀಸರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

Follow Us:
Download App:
  • android
  • ios