ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮುಖ್ಯ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ, ಕೆಲವು ಕಂಪನಿಗಳು ಉದ್ಯೋಗ ನೀಡುವ ಮುನ್ನ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತವೆ. ಉತ್ತಮ ಸ್ಕೋರ್ ಹೊಂದಿರುವವರಿಗೆ ಕೆಲ್ಸ ಬೇಗ ಸಿಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ನಲ್ಲಿ ಸಾಲ, ಕೆಲಸ ಮಾತ್ರವಲ್ಲ ವಿಮೆ ಕಂತುಗಳಲ್ಲಿ ರಿಯಾಯಿತಿ ಸಿಗಬಹುದು.
ಗೃಹ ಸಾಲ, ಕಾರಿನ ಸಾಲ, ವೈಯಕ್ತಿಕ ಸಾಲ ಅಥವಾ ಯಾವುದೇ ರೀತಿಯ ಸಾಲವನ್ನು ಪಡೆಯಲು ಕ್ರೆಡಿಟ್ ಸ್ಕೋರ್ (Credit score) ಬಹಳ ಮುಖ್ಯ. ಈ ಸಂಖ್ಯೆ 300 ರಿಂದ 900 ರ ನಡುವೆ ಇರುತ್ತೆ. ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲದಿದ್ದರೆ, ಬ್ಯಾಂಕು (Bank) ಗಳು ನಿಮಗೆ ಸಾಲ ನೀಡಲು ನಿರಾಕರಿಸಬಹುದು. ಸಾಲ ಸಿಕ್ಕಿದ್ರೂ ಅದ್ರ ಬಡ್ಡಿದರ (interest rate) ತುಂಬಾ ಹೆಚ್ಚಾಗಿರುತ್ತದೆ. ಬರೀ ಸಾಲಕ್ಕೆ ಮಾತ್ರವಲ್ಲ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ ಅಂದ್ರೆ ನಿಮ್ಗೆ ಕೆಲಸ ಸಿಗ್ದೆ ಇರ್ಬಹುದು.
ಕ್ರೆಡಿಟ್ ಸ್ಕೋರ್ ಗೂ, ಕೆಲಸಕ್ಕೂ ಏನು ಸಂಬಂಧ ಅಂಥ ನೀವು ಕೇಳ್ಬಹುದು. ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಉದ್ಯೋಗ ನೀಡುವ ಮುನ್ನ ಅಭ್ಯರ್ಥಿಯ ಕ್ರೆಡಿಟ್ ಸ್ಕೋರ್ ಚೆಕ್ ಮಾಡುತ್ತೆ. ಉದ್ಯೋಗಿ ತನ್ನ ಹಣಕಾಸಿನ ಹೊಣೆಗಾರಿಕೆಯನ್ನು ಹೇಗೆ ನಿಭಾಯಿಸ್ತಾನೆ ಎಂಬುದನ್ನು ಪರೀಕ್ಷೆ ಮಾಡೋಕೆ ಕಂಪನಿಗಳು ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ವೆ.
ವಿದೇಶದಲ್ಲಿ ಓದಿ ಅಲ್ಲೇ ಸೆಟಲ್ ಆಗೋಕೆ ಆಸೆಯೇ? ಇಲ್ಲಿವೆ ಟಾಪ್ 10 ದೇಶಗಳು!
ಹಣಕಾಸಿನ ಸೇವೆ ನೀಡೋ ಕ್ರೆಡ್ ಸಂಸ್ಥೆ ಕೂಡ ಅಭ್ಯರ್ಥಿಯ ಕ್ರೆಡಿಟ್ ಸ್ಕೋರ್ ನೋಡಿಯೇ ಜಾಬ್ ನೀಡುತ್ತೆ. ಕ್ರೆಡ್ ಕಂಪನಿ ಸಂಸ್ಥಾಪಕ ಕುನಾಲ್ ಶಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಭ್ಯರ್ಥಿ ಕ್ರೆಡಿಟ್ 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅವರಿಗೆ ಮಾತ್ರ ಕಂಪನಿ ಉದ್ಯೋಗ ನೀಡುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳೋದು ಮುಖ್ಯ. ದೇಶದ ಆರ್ಥಿಕ ಪ್ರಗತಿ, ಜನರ ಜವಾಬ್ದಾರಿಯುತ ಸಾಲ ಪದ್ಧತಿಯನ್ನು ಅವಲಂಬಿಸಿದೆ. ಉದ್ಯೋಗಿಗಳು ತಮ್ಮ ವಯಸ್ಸಿನ ಕಾರಣದಿಂದಾಗಿ ಬಹಳ ಕಡಿಮೆ ಅಥವಾ ಅಭಿವೃದ್ಧಿ ಹೊಂದಿಲ್ಲದ ಕ್ರೆಡಿಟ್ ಇತಿಹಾಸವನ್ನು ಒಮ್ಮೊಮ್ಮೆ ಹೊಂದಿರ್ತಾರೆ. ಇಂಥ ಸಮಯದಲ್ಲಿ ಕಂಪನಿ ಅವರಿಗೆ ಸಮಯ ನೀಡುತ್ತದೆ. ಕನಿಷ್ಠ ಕ್ರೆಡಿಟ್ ಸ್ಕೋರ್ 750 ರವರೆಗೆ ತಲುಪಲು ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡುತ್ತದೆ.
ಬಿಎಫ್‌ಎಸ್‌ಐ ಅಂದ್ರೆ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯದಲ್ಲಿ ಉದ್ಯೋಗ ಮಾಡುವವರಿಗೆ ಕ್ರೆಡಿಟ್ ಪರಿಶೀಲನೆ ಸಾಮಾನ್ಯ ಎಂದು ತಜ್ಞರು ಹೇಳಿದ್ದಾರೆ. ಕ್ರಮೇಣ ಇತರ ವಲಯಗಳು ಸಹ ಇದರತ್ತ ಗಮನ ಹರಿಸಲು ಪ್ರಾರಂಭಿಸಿವೆ. ಈಗ ಎಗ್ಸಾಂ ಮತ್ತು ಸಂದರ್ಶನಗಳ ಹೊರತಾಗಿ, ಉದ್ಯೋಗದಾತರು ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್ ಪರಿಶೀಲಿಸ್ತಿದ್ದಾರೆ. ಉದ್ಯೋಗದಾತರು ಅಭ್ಯರ್ಥಿಯ ಕ್ರೆಡಿಟ್ ಸ್ಕೋರ್ ಅಥವಾ ಇತಿಹಾಸವನ್ನು ನೇರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಉದ್ಯೋಗಿ ಹಿನ್ನಲೆ ಪರಿಶೀಲಿಸುವ ಸಮಯದಲ್ಲಿ ಕಂಪನಿ, ಉದ್ಯೋಗಿಯ ಕ್ರೆಡಿಟ್ ಸ್ಕೋರ್ ಚೆಕ್ ಮಾಡುತ್ತದೆ.
ಪಿಎಫ್ ಖಾತೆದಾರರಿಗೆ ಖುಷಿ ಸುದ್ದಿ, ಮಾರ್ಚ್ 15ರೊಳಗೆ ಈ ಕೆಲ್ಸ ಮುಗಿಸಿ
ಉತ್ತಮ ಸ್ಕೋರ್ ನಿಂದ ಏನೆಲ್ಲ ಲಾಭ ? : ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ, ಕೆಲಸ ಮಾತ್ರವಲ್ಲ ಇನ್ನೂ ಅನೇಕ ಲಾಭವನ್ನು ಪಡೆಯಬಹುದು. ನಿಮ್ಮ ಸ್ಕೋರ್ 700 ಕ್ಕಿಂತ ಹೆಚ್ಚಿದ್ದರೆ ಅನೇಕ ಕಂಪನಿಗಳು ರಿಯಾಯಿತಿ ನೀಡುತ್ತವೆ. ಉದಾಹರಣೆಗೆ, ಉತ್ತಮ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವವರು ವಾಹನ ಮತ್ತು ಆರೋಗ್ಯ ವಿಮಾ ಕಂತುಗಳಲ್ಲಿ ರಿಯಾಯಿತಿಗಳನ್ನು ಪಡೆಯಬಹುದು. ಇದನ್ನು ನಿಯಮಿತವಾಗಿ ಮಾಡುತ್ತಿರುವ ಅನೇಕ ಕಂಪನಿಗಳಿವೆ. 800 ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರುವ ಜನರು ಕಾರು ವಿಮೆ ನವೀಕರಣದ ಸಮಯದಲ್ಲಿ ಪ್ರೀಮಿಯಂನಲ್ಲಿ ಶೇಕಡಾ 15ರಷ್ಟು ರಿಯಾಯಿತಿ ಪಡೆಯುತ್ತಿದ್ದಾರೆ.
ಕ್ರೆಡಿಟ್ ಇತಿಹಾಸವನ್ನು ಆಧರಿಸಿ ಕ್ರೆಡಿಟ್ ಸ್ಕೋರ್ ಅನ್ನು ನಿರ್ಧರಿಸಲಾಗುತ್ತದೆ. ಈ ಸಂಖ್ಯೆ 300 ರಿಂದ 900 ರವರೆಗೆ ಇರುತ್ತದೆ. ಸಾಲ ಪಡೆಯುವ ಮತ್ತು ಮರುಪಾವತಿ ಮಾಡುವ ನಿಮ್ಮ ಅಭ್ಯಾಸ ಸೇರಿದಂತೆ ಹಲವು ಅಂಶಗಳನ್ನು ಸ್ಕೋರ್ ಅವಲಂಬಿಸಿರುತ್ತದೆ.
