ನೌಕರರ ಭವಿಷ್ಯ ನಿಧಿ ಸಂಸ್ಥೆ ಯುಎಎನ್ ಸಕ್ರಿಯಗೊಳಿಸಲು ಮತ್ತು ಆಧಾರ್‌ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಮಾಡಲು ಗಡುವನ್ನು ಮಾರ್ಚ್ 15 ರವರೆಗೆ ವಿಸ್ತರಿಸಿದೆ. ಯುಎಎನ್ ಸಕ್ರಿಯಗೊಳಿಸುವ ಮೂಲಕ, ಉದ್ಯೋಗಿಗಳು ಪಿಎಫ್ ಖಾತೆಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳನ್ನು ಪಡೆಯಬಹುದು. ಉದ್ಯೋಗಿಗಳು ಇಎಲ್ಐ ಯೋಜನೆಯ ಲಾಭ ಪಡೆಯಲು ಯುಎಎನ್ ಸಕ್ರಿಯಗೊಳಿಸಿ, ಆಧಾರ್ ಲಿಂಕ್ ಮಾಡುವುದು ಮುಖ್ಯ.
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಸಾರ್ವತ್ರಿಕ ಖಾತೆ ಸಂಖ್ಯೆ (UAN) ಸಕ್ರಿಯಗೊಳಿಸಲು ಮತ್ತು ಬ್ಯಾಂಕ್ ಖಾತೆ (Bank account )ಯನ್ನು ಆಧಾರ್ (Aadhaar)ನೊಂದಿಗೆ ಲಿಂಕ್ ಮಾಡಲು ಇಪಿಎಫ್ ಒ ನೀಡಿದ್ದ ಗಡುವನ್ನು ವಿಸ್ತರಿಸಿದೆ. ಉದ್ಯೋಗಿಗಳು ಈ ಕೆಲಸವನ್ನು ಮಾರ್ಚ್ 15ರೊಳಗೆ ಮಾಡಿ ಮುಗಿಸ್ಬೇಕು. ಉದ್ಯೋಗಿಗಳು ಸಾರ್ವತ್ರಿಕ ಖಾತೆ ಸಂಖ್ಯೆ ಸಕ್ರಿಯಗೊಳಿಸೋದ್ರಿಂದ ಸಾಕಷ್ಟು ಲಾಭವನ್ನು ಪಡೆಯಲಿದ್ದಾರೆ. ಪಿಎಫ್ ಗೆ ಸಂಬಂಧಿಸಿದ ಎಲ್ಲ ಕೆಲಸವನ್ನು ಅವರು ಆನ್ಲೈನ್ ಮೂಲಕ ಮಾಡಬಹುದು.
ಇಪಿಎಫ್ ಒ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಸಾರ್ವತ್ರಿಕ ಖಾತೆ ಸಂಖ್ಯೆ (UAN) ಸಕ್ರಿಯಗೊಳಿಸಲು ಮತ್ತು ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನೀಡಿದ್ದ ಗಡುವು ಫೆಬ್ರವರಿ 15ರಂದು ಕೊನೆಗೊಳ್ಳಬೇಕಿತ್ತು. ಆದ್ರೆ ಈ ಗಡುವನ್ನು ಈಗ ವಿಸ್ತರಿಸಲಾಗಿದೆ. ಮಾರ್ಚ್ 15ರವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಪೋಸ್ಟ್ ನಲ್ಲಿ ಮಾಹಿತಿ ನೀಡಲಾಗಿದೆ. ಮರೆಯಬೇಡಿ ಎಂಬ ಶೀರ್ಷಿಕೆಯಲ್ಲೇ ಇಪಿಎಫ್ಒ ತನ್ನ ಮಾಹಿತಿಯನ್ನು ಹಂಚಿಕೊಂಡಿದೆ. ಪ್ರತಿಯೊಬ್ಬ ಉದ್ಯೋಗಿ ಕೊನೆಯವರೆಗೆ ಕಾಯದೆ, ಈಗ್ಲೇ ಯುಎಎನ್ ಸಕ್ರಿಯಗೊಳಿಸುವ ಜೊತೆಗೆ ಆಧಾರ್ ಲಿಂಕ್ ಮಾಡಿದ್ರೆ ಒಳ್ಳೆಯದು.
ನಾನ್ ಟೆಕ್ನಿಕಲ್ ಏನಾದರು ತಿಳಿಸು, ಸಂದರ್ಶನದ ಗೂಗ್ಲಿ ಪ್ರಶ್ನೆಗೆ ಕೊಟ್ಟ ಉತ್ತರಕ್ಕೆ ಎಲ್ಲರು ಸುಸ್ತು
ಯುಎಎನ್ ಆಕ್ಟಿವೇಟ್ ಅಂದ್ರೇನು? : ಯುಎಎನ್ ಎಂಬುದು 12 ಅಂಕೆಗಳ ಯುನಿವರ್ಸಲ್ ನಂಬರ್ ಆಗಿದೆ. ನೀವು ಈ ನಂಬರ್ ಮೂಲಕ ನಿಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಬಹುದು. ಯುಎಎನ್ ಇದ್ದಲ್ಲಿ ಮಾತ್ರ ಆನ್ಲೈನ್ ಮೂಲಕ ನಿಮ್ಮ ಪಿಎಫ್ ಖಾತೆ ಮಾಹಿತಿ ಪಡೆಯಬಹುದು. ಇಷ್ಟೇ ಅಲ್ಲ ನಿಮ್ಮ ಪಾಸ್ ಬುಕ್ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶವನ್ನೂ ಇದ್ರಲ್ಲಿ ನೀಡಲಾಗಿದೆ. ನೀವು ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಲು ಬಯಸಿದ್ರೆ ಇಲ್ಲವೆ ಅದನ್ನು ಇನ್ನೊಂದು ಖಾತೆಗೆ ಜಮಾ ಮಾಡಲು ನಿರ್ಧರಿಸಿದ್ದರೆ ಅದನ್ನು ಕೂಡ ನೀವು ಯುಎಎನ್ ನಂಬರ್ ಸಕ್ರಿಯಗೊಳಿಸುವ ಮೂಲಕ ಮಾಡ್ಬಹುದು. ಉದ್ಯೋಗಿಗಳು ಯುಎಎನ್ ಸಕ್ರಿಯಗೊಳಿಸಿ, ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಮಾಡಿದ್ರೆ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ (ELI ಯೋಜನೆ) ಲಾಭವನ್ನು ಪಡೆಯಬಹುದು. ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲು ಇಎಲ್ ಈ ಯೋಜನೆಯಲ್ಲಿ ಕೆಲ ಪ್ರೋತ್ಸಾಹಿತ ಕಾರ್ಯಕ್ರಮವಿದೆ. ಅದ್ರಲ್ಲಿ ಇನ್ಸೆಂಟಿವ್ಸ್ ಕೂಡ ಸೇರಿದೆ.
ಏರ್‌ಪೋರ್ಟ್ ಅಥಾರಿಟಿಯಲ್ಲಿ ಭರ್ಜರಿ ನೇಮಕಾತಿ, 1.10 ಲಕ್ಷ ಸಂಬಳ!
ಯುಎಎನ್ ಸಕ್ರಿಯಗೊಳಿಸೋದು ಹೇಗೆ? : ಆನ್ಲೈನ್ ಮೂಲಕವೇ ನೀವು ಈ ಕೆಲಸವನ್ನು ಮುಗಿಸಬಹುದು. ಮೊದಲು ನೀವು epfindia.gov.in ವೆಬ್ಸೈಟ್ ಗೆ ಹೋಗ್ಬೇಕು. ಅದ್ರಲ್ಲಿ For Employees ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮೆಂಬರ್ ಯುಎಎನ್ ಆನ್ಲೈನ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಆಕ್ಟಿವ್ ಯುಎಎನ್ ಆಯ್ಕೆ ಕಾಣಿಸುತ್ತದೆ. ಅದ್ರ ಮೇಲೆ ನೀವು ಕ್ಲಿಕ್ ಮಾಡಬೇಕು. ಅಲ್ಲಿ ಕೇಳಿದ ಎಲ್ಲ ಮಾಹಿತಿಯನ್ನು ನೀವು ಭರ್ತಿ ಮಾಡ್ಬೇಕು. ಯುಎಎನ್ ನಂಬರ್, ಆಧಾರ್ ನಂಬರ್, ಜನ್ಮದಿನ ಸೇರಿದಂತೆ ಕೆಲ ಮಾಹಿತಿ ಭರ್ತಿ ಮಾಡ್ಬೇಕಾಗುತ್ತದೆ. ಇದಾದ್ಮೇಲೆ Get Authorization Pin ಮೇಲೆ ಕ್ಲಿಕ್ ಮಾಡ್ಬೇಕು. ಆಧಾರ್ ಲಿಂಕ್ ಆಗಿರುವ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ಇಷ್ಟು ಮಾಡಿದ್ರೆ ನಿಮ್ಮ ಯುಎಎನ್ ಆಕ್ಟಿವ್ ಆಗುತ್ತದೆ. ಅಲ್ಲದೆ ಮೊಬೈಲ್ ಗೆ ಪಾಸ್ವರ್ಡ್ ಬರುತ್ತದೆ. ಯುಎಎನ್ ಮತ್ತು ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಿ ನೀವು ಲಾಗಿನ್ ಆಗ್ಬೇಕು.
