Work From Home ಭಾರತಕ್ಕೆ ಸೂಕ್ತವಲ್ಲ ಎಂದ ಇನ್ಫಿ ನಾರಾಯಣಮೂರ್ತಿ
ಮನೆಯಿಂದ ಕೆಲಸ ಮಾಡುವ ವಿಧಾನ ಭಾರತಕ್ಕೆ ಸೂಕ್ತವಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿದ್ದು, ಈ ವಿಧಾನ ಅಭಿವೃದ್ದಿ ಪರವಾಗಿಲ್ಲ ಎಂದಿದ್ದಾರೆ.
ನವದೆಹಲಿ(ಮಾ.17): ವಿಶ್ವದಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಇಳಿಮುಖವಾಗುತ್ತಿದ್ದು, ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಛೇರಿಗಳತ್ತ ಹಿಂದಿರುಗಿಸುವ ಪ್ರಕ್ರಿಯೆಯಲ್ಲಿವೆ. ಮನೆಯಿಂದ ಕೆಲಸ ಮಾಡಲು ಒಗ್ಗಿಕೊಂಡಿರುವ ನೌಕರರು ಕಚೇರಿಗೆ ಒಲ್ಲದ ಮನಸ್ಸಿನನಿಂದ ತೆರಳುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಐಕಾನಿಕ್ ಕಂಪನಿಗಳು ಸ್ಟಾರ್ಟ್‌ಅಪ್‌ಗಳಿಗೆ ಹಂತಹಂತವಾಗಿ ತೆಗೆದುಹಾಕುತ್ತಿವೆ.
ಕೆಲವರು ಮನೆಯಿಂದ ಕೆಲಸ ಮಾಡುವ (WFH) ವಿಧಾನವನ್ನು ಬೆಂಬಲಿಸಿದರೆ, ಇತರರು WFH ನೊಂದಿಗೆ ತೊಂದರೆಗಳೊಂದಿಗೆ ಹೋರಾಡುತ್ತಿದ್ದಾರೆ. ಇತ್ತೀಚೆಗೆ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Infosys Narayana Murthy) ಅವರು ವರ್ಕ್ ಫ್ರಂ ಹೋಂ (Work from Home) ವಿಧಾನ ಭಾರತಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ. ಈ ವಿಧಾನ ಅಭಿವೃದ್ದಿ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Karnataka Medical Fees: ವೈದ್ಯಕೀಯ ಶಿಕ್ಷಣ ಶುಲ್ಕ ಇಳಿಸಲು ರಾಜ್ಯ ಸರ್ಕಾರ ತೀರ್ಮಾನ
ನೌಕರರು ಮನೆಯಿಂದಲೇ ಕೆಲಸ ಮಾಡಿದರೆ ಸಾಂಸ್ಥಿಕ ಸಂಸ್ಕೃತಿ ಕ್ರಮೇಣ ದುರ್ಬಲಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ, ಸೃಜನಶೀಲತೆ, ಕೌಶಲ್ಯ, ಪ್ರತಿಭೆಯ ಅನ್ವೇಷಣೆ ಮತ್ತು ಸಮಾಲೋಚನೆಯಂತಹ ಕ್ಷೇತ್ರಗಳಲ್ಲಿ ಸುಧಾರಣೆಗಳು ಅಸಾಧ್ಯ ಎಂದು ಹೇಳಿದ್ದಾರೆ. ಭಾರತದಂತಹ ಕಳಪೆ ಇಂಟರ್ನೆಟ್ ಬ್ಯಾಂಡ್‌ವಿಡ್ತ್ ಹೊಂದಿರುವ ಅನೇಕ ದೇಶಗಳು ವರ್ಕ್ ಫ್ರಂ ಹೋಂ ಭಾಗವಾಗಿ ಪ್ರತ್ಯೇಕ ಕೊಠಡಿಯನ್ನ ಹೊಂದಿರುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಭಾರತದ ಉತ್ಪಾದನೆಯು ಬಾಂಗ್ಲಾದೇಶಕ್ಕಿಂತ ಕಡಿಮೆಯಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ಪಾದಕತೆಯನ್ನು ಹೆಚ್ಚಿಸಲು ಕಾರ್ಪೊರೇಟ್ ಉತ್ಪಾದಕತೆಯನ್ನ ಹೆಚ್ಚಿಸಲು ತಮ್ಮ ಕಚೇರಿಗಳಿಗೆ ಮರಳಬೇಕೆಂದು ಅವರು ಮನವಿ ಮಾಡಿದರು. ಭಾರತದಂತಹ ರಾಷ್ಟ್ರಗಳು ತಲಾ ಆದಾಯದಲ್ಲಿ ಚೀನಾವನ್ನು ಹಿಂದಿಕ್ಕುವುದು ನಿರ್ಣಾಯಕ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನಾರಾಯಣಮೂರ್ತಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
NCEE survey: ಲಾಕ್‌ಡೌನ್ ನಂತರ ಮೂಲಭೂತ ಕೌಶಲ್ಯ ಕಳೆದುಕೊಂಡ ಮಕ್ಕಳು!
Work From Home ಗಂಡಸರು ಸೋಮಾರಿಗಳು, ಹೆಣ್ಮಕ್ಳೇ ಸ್ಟ್ರಾಂಗ್ ಗುರೂ !: ಕೊರೋನಾ (Corona) ಸಾಂಕ್ರಾಮಿಕ ಮನುಷ್ಯನ ಜೀವನವನ್ನು ಅಕ್ಷರಶಃ ಬದಲಾಯಿಸಿದೆ. ಆದ್ಯತೆಗಳು, ಅವಕಾಶಗಳು, ನಿರೀಕ್ಷೆಗಳು ಎಲ್ಲವೂ ಬದಲಾಗಿದೆ. ವರ್ಕ್ ಫ್ರಂ ಹೋಮ್ (Work From Home), ಆನ್‌ಲೈನ್ ಕ್ಲಾಸ್‌ಗಳು ಒಂದೆಡೆ ಈಝಿ ಎನಿಸಿದರೂ ಮತ್ತೊಂದೆಡೆ ಒತ್ತಡಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ವರ್ಕ್ ಫ್ರಂ ಹೋಮ್‌ನಿಂದ ಅದೆಷ್ಟೋ ಮಂದಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದಾರೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಆದರೆ ವರ್ಕ್ ಫ್ರಂ ಹೋಮ್‌ನಿಂದ ಖುಷಿಪಟ್ಟವರು ಸಹ ಅದೆಷ್ಟೋ ಮಂದಿ. ನಗರ ಬಿಟ್ಟು ಮನೆ ಸೇರಿದವರು ಖುಷಿಯಿಂದ ಸಮಯ ಕಳೆಯುತ್ತಿದ್ದಾರೆ. ಬೆಳಗ್ಗೆ ಗಡಿಬಿಡಿಯಲ್ಲಿ ಎದ್ದು ತಿಂಡಿ ತಿನ್ನದೆ ಆಫೀಸಿಗೆ ಓಡುವ ಧಾವಂತವಿಲ್ಲ. ಲ್ಯಾಪ್‌ಟ್ಯಾಪ್ (Laptop) ಹಿಡಿದು ಕೆಲಸ ಮಾಡಿದರಾಯಿತು. ಮನೆ ಮಂದಿ ರುಚಿರುಚಿಯಾದ ಅಡುಗೆಯನ್ನು ಮಾಡಿ ಬಡಿಸುತ್ತಾರೆ.
ಗಂಡಸರ ಪಾಲಿಗೇನೂ ವರ್ಕ್ ಫ್ರಂ ಹೋಮ್ ಈಜಿಯೆಸ್ಟ್ ಟಾಸ್ಕ್ ಆಗಿಬಿಟ್ಟಿದೆ. ಆದರೆ ಮನೆಯಿಂದಲೇ ಕೆಲಸ ಎಂಬ ಕಾನ್ಸೆಪ್ಟ್‌ನಿಂದ ಅತಿ ಹೆಚ್ಚು ತೊಂದರೆಯಾಗಿರೋದು ಮಹಿಳೆ (Women)ಯರಿಗೇ ಅಂತೆ. ವರ್ಕ್ ಫ್ರಂ ಹೋಮ್‌ನಲ್ಲಿ ಗಂಡಸರೆಲ್ಲಾ ಸೋಮಾರಿಗಳು, ಹೈಯೆಸ್ಟ್ ಕೆಲಸ ಮಾಡಿದ್ದು ಮಹಿಳೆಯರೇ ಅಂತಿದೆ ಅಧ್ಯಯನ. ಹೌದು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಮನೆಕೆಲಸದಲ್ಲಿ ಮಹಿಳೆಯರು ಸಿಂಹಪಾಲು ಕೆಲಸ ಮಾಡಿದ್ದು, ಗಂಡಸರು ಆರಾಮವಾಗಿ ಸಮಯವನ್ನು ಕಳೆದಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಮನೆಯಿಂದ ಕೆಲಸ ಮಾಡಲು ಸಾಧ್ಯವಾಗುವುದು ಒಂದು ಅವಕಾಶವಾಗಿದೆ. ನ್ಯೂಜಿಲೆಂಡ್ ಅಧ್ಯಯನದ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡಲು ಇಷ್ಟಪಟ್ಟರೂ, ಮಹಿಳೆಯರಿಗೆ ಇದರ ಬಗ್ಗೆ ಹೆಚ್ಚು ಅಸಮಾಧಾನವಿತ್ತು. ಯಾಕೆಂದರೆ ಈ ವರ್ಕ್ ಫ್ರಂ ಹೋಮ್ ಆಪ್ಶನ್‌ನಿಂದ ಅತಿ ಹೆಚ್ಚು ತೊಂದರೆಗೊಳಗಾದವರು ಮಹಿಳೆಯರೇ. ಮಹಿಳೆಯರು ವರ್ಕ್ ಫ್ರಂ ಹೋಮ್ ಜತೆಗೆ ಮನೆಕೆಲಸಗಳ ಜವಾಬ್ದಾರಿಯನ್ನು ನಿಭಾಯಿಸಬೇಕಾಯಿತು. ಇದರಿಂದಾಗಿ ಮಾನಸಿಕವಾಗಿ ಒತ್ತಡವನ್ನು ಅನುಭವಿಸಬೇಕಾಯಿತು.