ಯುವತಿಯೊಬ್ಬಳು ತಾನು ಕೆಲಸ ನಿರ್ವಹಿಸುತ್ತಿದ್ದ ಸ್ಟಾರ್ಟಪ್‌ನಲ್ಲಿ ಬಡ್ತಿ ಕೊಡ್ತಿಲ್ಲ ಎಂದು ಕೆಲಸ ಬಿಟ್ಟಳು. ನಂತರ ಅದೇ ಕಂಪನಿಗೆ ಮುಂಚಿನ ಸಂಬಳಕ್ಕಿಂತ 2.5ರಷ್ಟು ಸಂಬಳಕ್ಕೆ ಸೇರಿಕೊಂಡಳು! 

ಯುವತಿಯೊಬ್ಬಳು ತಾನು ಕೆಲಸ ನಿರ್ವಹಿಸುತ್ತಿದ್ದ ಸ್ಟಾರ್ಟಪ್‌ನಲ್ಲಿ ಬಡ್ತಿ ಕೊಡ್ತಿಲ್ಲ ಎಂದು ಕೆಲಸ ಬಿಟ್ಟಳು. ನಂತರ ಅದೇ ಕಂಪನಿಗೆ ಮುಂಚಿನ ಸಂಬಳಕ್ಕಿಂತ 2.5ರಷ್ಟು ಸಂಬಳಕ್ಕೆ ಸೇರಿಕೊಂಡರು! 

ಇದೇನಿದು ಹೀಗೆ ಎಂದು ಅಚ್ಚರಿಯಾಯಿತಾ? ಈ ಯುವತಿಯ ಕತೆಯನ್ನು ಎಕ್ಸ್‌ನಲ್ಲಿ ಬೆಂಗಳೂರು ಮೂಲದ ವೃತ್ತಿಪರ ಆದಿತ್ಯ ವೆಂಕಟೇಶನ್ ಎಂಬವರು ಹಂಚಿಕೊಂಡಿದ್ದಾರೆ.

ಆದಿತ್ಯ ಡೇಟಿಂಗ್‌ಗೆ ಹೋದ ಈ ಯುವತಿಯ ಕತೆ ಇದು. ಮಹಿಳೆ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುತ್ತಿದ್ದಳು, ಆದರೆ ತನ್ನನ್ನು ಕಚೇರಿಯಲ್ಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅತೃಪ್ತಿ ಹೊಂದಿದ್ದಳು ಎಂದು 
ವೆಂಕಟೇಶನ್ ಹೇಳಿದ್ದಾರೆ. ತನ್ನ ಸಹೋದ್ಯೋಗಿಗಳು ತನ್ನನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಮತ್ತು ಅವಳು ಐವಿ ಲೀಗ್ ಪದವಿಯನ್ನು ಹೊಂದಿಲ್ಲದ ಕಾರಣ ಆಕೆಗೆ ಬಡ್ತಿ ನೀಡಲಾಗುತ್ತಿಲ್ಲ ಎಂದು ಅವಳು ಭಾವಿಸಿದಳು.

ಏಲಿಯನ್‌ಗಳು ನಮ್ಮ ಮಧ್ಯೆನೇ ಮನುಷ್ಯರ ಹಾಗೆ ವೇಷ ಮರೆಸಿಕೊಂಡು ಬದುಕ್ತಿರ್ಬೋದು! ಹಾರ್ವರ್ಡ್ ಅಧ್ಯಯನ

ಕಡಗೆ ಕೆಲಸ ಬಿಟ್ಟ ಮಹಿಳೆ ಐವಿ ಲೀಗ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಳು. ಮತ್ತು ಮುಂಚೆ ಕೆಲಸ ಮಾಡುತ್ತಿದ್ದ ಅದೇ ಕಂಪನಿಗೆ ಉದ್ಯೋಗಕ್ಕೆ ಸೇರಿಕೊಂಡಳು. ಈ ಬಾರಿ ಆಕೆಯ ಸಂಬಳ ಮುಂಚಿನದಕ್ಕಿಂತ 2.5 ಪಟ್ಟು ಹೆಚ್ಚಿತ್ತು!

ಒಂದು ದಿನದ ಹಿಂದೆ X ನಲ್ಲಿ ಹಂಚಿಕೊಂಡ ನಂತರ, ಪೋಸ್ಟ್ 1.2 ಲಕ್ಷ ವೀಕ್ಷಣೆಗಳು ಮತ್ತು ಡಜನ್ಗಟ್ಟಲೆ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ.

ಕಾಮೆಂಟ್‌ಗಳ ವಿಭಾಗದಲ್ಲಿ, ವೇತನ ಹೆಚ್ಚಳವು ಆಕೆಯ ಸಾಲವನ್ನು ತೀರಿಸಲು ಅವಕಾಶ ಮಾಡಿಕೊಟ್ಟಿತು ಎಂದು ವೆಂಕಟೇಶನ್ ಹೇಳಿದ್ದಾರೆ. 'ತನ್ನ ವಿರುದ್ಧ ಎಲ್ಲ ಇದ್ದಾರೆ ಎನಿಸಿದಾಗ ಯಾವುದೇ ಅಹಂಕಾರ ಇಲ್ಲದೆ, ಅದರ ವಿರುದ್ಧ ಹೋರಾಡಿದಳು' ಎಂದು ವೆಂಕಟೇಶನ್ ಮಹಿಳೆಯನ್ನು ಹೊಗಳಿದ್ದಾರೆ. 


ಹಲವು ಎಕ್ಸ್ ಬಳಕೆದಾರರು ಮಹಿಳೆಯ ಕೆಲಸವನ್ನು ಮೆಚ್ಚಿದ್ದಾರೆ. 'ಕೆಲಸಕ್ಕಾಗಿ ಹೊಸ ಕೌಶಲ್ಯ ಕಲಿಯುವುದು, ಹೊಸ ಪದವಿ ಪಡೆಯುವುದು, ಕೌಶಲ್ಯ ವಿಸ್ತರಿಸುವುದು ತುಂಬಾ ಒಳ್ಳೆಯ ವಿಷಯ- ಪರಿಶ್ರಮಕ್ಕೆ ತಕ್ಕ ಫಲ' ಎಂದೊಬ್ಬರು ಹೇಳಿದ್ದಾರೆ. 

'ಆಕೆಗೆ ಉತ್ತಮ ಸಂಬಳ ಸಿಕ್ಕಿದ್ದು ಒಳ್ಳೆಯದೇ. ಆದರೆ, ಮೊದಲು ಸರಿಯಾಗಿ ನಡೆಸಿಕೊಳ್ಳದ ಅದೇ ಕಂಪನಿಯನ್ನು ಆಕೆ ಸೇರಬಾರದಿತ್ತು' ಎಂದು ಮತ್ತೊಬ್ಬರು ಹೇಳಿದ್ದಾರೆ.

Scroll to load tweet…