Asianet Suvarna News Asianet Suvarna News

ಪಾರ್ಟ್‌ಟೈಮ್‌ ಉದ್ಯೋಗಾಸಕ್ತರಿಗೆ ವಿವಿಧ ಅವಕಾಶಗಳು

ವರ್ಕ್ ಫ್ರಂಮ್ ಹೋಮ್ ಉದ್ಯೋಗಕ್ಕೆ ದಿನಗಳೆದಂತೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಅಂತಹ ಉದ್ಯೋಗಾಸಕ್ತರಿಗೆ ಈ ಉದ್ಯೋಗಗಳಲ್ಲಿರುವ ವೇತನ, ಉದ್ಯೋಗಗಳು ಯಾವ್ಯಾವು ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.

Various opportunities for part time job aspirants gow
Author
Bengaluru, First Published Aug 23, 2022, 12:30 AM IST

ವರ್ಕ್ ಫ್ರಂಮ್ ಹೋಮ್ ಉದ್ಯೋಗಕ್ಕೆ ದಿನಗಳೆದಂತೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಆನ್‌ಲೈನ್‌ ಮೂಲಕ ದುಡಿಯುಲು ಆರಂಭಿಸಿದವರು ವಿವಿಧ ಕೌಶಲಗಳನ್ನು ಕಲಿಯುವುದರೊಂದಿಗೆ ಮನೆಯಲ್ಲಿಯೇ ಕೆಲಸ ಮಾಡುವವರು ಇದ್ದಾರೆ. ಅಂತಹ ಉದ್ಯೋಗಾಸಕ್ತರಿಗೆ ಈ ಉದ್ಯೋಗಗಳಲ್ಲಿರುವ ವೇತನ, ಉದ್ಯೋಗಗಳು ಯಾವ್ಯಾವು ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ. ಆನ್‌ಲೈನ್‌ ಮೂಲಕ ದುಡಿಯುವವರಿಗಾಗಿ ವಿವಿಧ ಬಗೆಯ ಉದ್ಯೋಗಗಳಿವೆ. ಉದ್ಯೋಗಿಗಳು ಇರುವ ಪ್ರದೇಶದಲ್ಲೇ ದುಡಿಯಲೂ ಅವಕಾಶಗಳು ಇವೆ. ಆದರೆ ಆನ್‌ಲೈನ್‌ನಲ್ಲಿ ಉದ್ಯೋಗ ಎಂದರೆ ಅದಕ್ಕಾಗಿ ಹಲವು ಕೌಶಲಗಳು, ಕಾರ್ಯವೈಖರಿ, ಪ್ರಸ್ತುತದ ಸನ್ನಿವೇಶಗಳು ಹಾಗೂ ತಂತ್ರಜ್ಞಾನಗಳ ಕುರಿತು ತಿಳಿಲೇಬೇಕಿದೆ. ಮೊದಲನೆಯದಾಗಿ ಎಚ್‌ಆರ್‌ ಎಕ್ಸಿಕ್ಯೂಟಿವ್‌ / ಫ್ರೀಲ್ಯಾನ್ಸರ್‌: ವಿಶೇಷವಾಗಿ ಈ ಉದ್ಯೋಗಕ್ಕೆ ಉತ್ತಮ ಬರವಣಿಗೆ ಮತ್ತು ಸಂವಹನ ಕೌಶಲ್ಯ ಅಗತ್ಯ. ಅದು ಪ್ರಚುರಪಡಿಸಲು ಯೋಗ್ಯವೂ ಆಗಿರಬೇಕು. ಹೊಸ ಅಭ್ಯರ್ಥಿಗಳಿಗೂ ಅವಕಾಶವಿದ್ದು, ಎಚ್‌ಆರ್‌ ವಿಭಾಗದ ಮ್ಯಾನೇಜ್ಮೆಂಟ್‌ ಟ್ರೈೕನಿಗಳು ಸಹ ಉದ್ಯೋಗ ಪಡೆಯಬಹುದು.

ಸರ್ಚ್ ಇಂಜಿನ್‌/ಮಾರ್ಕೆಟಿಂಗ್‌: ಈ ವಿಭಾಗಗಳಲ್ಲಿ ಡೇ ಶಿಫ್‌್ಟಕೆಲಸ ಇರುತ್ತದೆ. ಯಾವುದೇ ನಿರ್ದಿಷ್ಟಗುರಿಗಳು ಇರುವುದಿಲ್ಲ. ಕರೆಯು ಇರುವುದಿಲ್ಲ. ವರ್ಕ್ ಫ್ರಂ ಹೋಂ ಉದ್ಯೋಗ ನಿರ್ವಹಣೆಯೊಂದಿಗೆ ಪ್ರತಿ ತಿಂಗಳು ರೂ.40,000 ವರೆಗೆ ದುಡಿಯಬಹುದು. ಈಗಾಗಲೇ ಈ ವೃತ್ತಿ ಮಾಡುತ್ತಿರುವವರು ಬ್ಯುಸಿನೆಸ್‌ / ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರನ್ನು ನೋಡಬಹುದು. ಪಾರ್ಟ್‌ಟೈಮ್‌ ಮತ್ತು ಫುಲ್ ಟೈಂ ಎರಡು ಉದ್ಯೋಗಗಳು ಲಭ್ಯ. ಯಾವುದೇ ಸ್ಥಳದಲ್ಲಿ ಇದ್ದುಕೊಂಡು ಉದ್ಯೋಗ ಮಾಡಬಹುದು.

ಆನ್ಲೈ ಜಾಹಿರಾತು / ಹ್ಯವಾಸಿ ಬರವಣಿಗೆ: ಮನೆಯಿಂದಲೇ ಕೆಲಸ ನಿರ್ವಹಿಸಿ ಸಂಪಾದನೆ ಮಾಡಲು ಈ ಉದ್ಯೋಗಗಳು ಉತ್ತಮ ಅವಕಾಶ. ಫುಲ್ ಟೈಂ ಮತ್ತು ಪಾರ್ಟ್‌ಟೈಮ್‌ ಎರಡು ಉದ್ಯೋಗಗಳು ಇವೆ. ಎಲ್ಲರೂ ಉದ್ಯೋಗವನ್ನು ಮಾಡಬಹುದು. ಇಂಟರ್ನೆಚ್‌ ಸಂಪರ್ಕ ಹೊಂದಿದ್ದಲ್ಲಿ, ಯಾವುದೇ ಸ್ಥಳ/ಊರುಗಳಿಂದಲೇ ಉದ್ಯೋಗ ನಿರ್ವಹಿಸಬಹುದು.

ಪಾರ್ಟ್‌ಟೈಮ್‌ ಡಿಜಿಟಲ್ ಮಾರ್ಕೆಟಿಂಗ್‌: ನಿರ್ದಿಷ್ಟಕಂಪನಿಯೊಂದು ತನ್ನನ್ನು ಪ್ರಮೋಟ್‌ ಮಾಡಿಕೊಳ್ಳಲು, ಫ್ರೀಲ್ಯಾನ್ಸ್‌ ಉದ್ಯೋಗಗಿಳಾಗಿ ಹುಡುಕುತ್ತಿರುತ್ತದೆ. ಇಂಟರ್ನೆಚ್‌ ಸಂಪರ್ಕದೊಂದಿಗೆ ವಿವಿಧ ಆನ್‌ಲೈನ್‌ ವೇದಿಕೆಗಳಲ್ಲಿ ಕಂಪನಿಯನ್ನು ಪ್ರಮೋಟ್‌ ಮಾಡಬೇಕಾಗುತ್ತದೆ. ಇದು ಪಾರ್ಟ್‌ಟೈಮ್‌… ವರ್ಕ್ ಫ್ರಮ್‌ ಹೋಮ್‌ ಜಾಬ್‌ ಆಗಿದೆ. ಇಲ್ಲಿ ನೇಮಕವಾದ ಮೇಲೆ ಅಗತ್ಯ ತರಬೇತಿಗಳನ್ನು ನೀಡಲಾಗುತ್ತದೆ. ತಿಂಗಳಿಗೆ ರೂ.15,000 ದಿಂದ 40,000 ವರೆಗೆ ಸಂಪಾದನೆ ಮಾಡಬಹುದು.

ಪ್ರವಾಸೋದ್ಯಮ ಮಾಹಿತಿ: ಇಂದು ಬಹುಬೇಡಿಕೆಯ ಪಾರ್ಚ್‌ಟೈಮ್‌ ಜಾಬ್‌ಗಳಲ್ಲಿ ಪ್ರವಾಸೋದ್ಯಮದ ಮಾಹಿತಿ ಪ್ರಚಾರ ಮಾಡುವಿಕೆಯು ಒಂದಾಗಿದೆ. ಈ ಪಾರ್ಚ್‌ಟೈಮ್‌ ವೃತ್ತಿಯನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲಾಗುತ್ತಿದೆ. ಅಲ್ಲದೇ ದುಡಿಯುವಿಕೆಯೂ ಕೂಡ ಕಡಿಮೆ ಅವಧಿಯದ್ದಾಗಿದ್ದು, ಆದಾಯ ಮಾತ್ರ ಹೆಚ್ಚಾಗಿರುತ್ತದೆ. ಉದ್ಯೋಗವು ಸಂಪೂರ್ಣ ಇಂಟರ್‌ನೆಟ್‌ ಆಧರಿತವಾಗಿದ್ದು, ದಿನದಲ್ಲಿ ಕೇವಲ 3ರಿಂದ 4 ತಾಸುಗಳು ನಿರ್ವಹಿಸಿದರೂ ಸಾಕು.

ಆಫೀಸಿನಲ್ಲಿ ತುಂಬಾ ನಿದ್ರೆ ಬರುತ್ತಾ? ಓವರ್‌ಕಮ್ ಮಾಡಲಿವೆ ಟಿಪ್ಸ್

ಆನ್‌ಲೈನ್‌ ಟ್ಯೂಟರ್‌/ ಟ್ಯೂಷನ್‌: ಇಂದು ಹಲವು ಆಯಾಮಗಳಲ್ಲಿ ಆನ್ಲೈನ್‌ ಟ್ಯೂಟರ್‌ ಆಗಿ ಪಾರ್ಚ್‌ಟೈಮ್‌ ಉದ್ಯೋಗ ಪಡೆಯಬಹುದು. ಅಲ್ಲಿ ವಿವಿಧ ಟಾಪಿಕ್‌ಗಳ ಕುರಿತು ವಿಡಿಯೋ ನೀಡಿ, ಹಣ ಸಂಪಾದನೆ ಮಾಡಬಹುದು. ಆನ್‌ಲೈನ್‌ ಟ್ಯೂಷನ್‌ ಮಾಡುವ ಉದ್ಯೋಗಗಳನ್ನು ಸಹ ಮಾಡಬಹುದು. ಈ ಉದ್ಯೋಗಕ್ಕೆ ಉತ್ತಮ ಬೋಧನಾ ಕೌಶಲ್ಯ ಅತ್ಯಗತ್ಯ. ಆಗ ಮಾತ್ರ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯ. ಅಲ್ಲದೇ ಈ ಪಾರ್ಚ್‌ಟೈಮ್‌ ಉದ್ಯೋಗವು ಅತ್ಯಂತ ಹೆಚ್ಚಿನ ಬೇಡಿಕೆಯನ್ನೂ ಹೊಂದಿದೆ.

ಉದ್ಯೋಗಿಗಳನ್ನು ಉಳಿಸಿಕೊಳ್ಳಲು ವೇತನ ಹೆಚ್ಚಳಕ್ಕೆ ಮುಂದಾದ ಭಾರತದ ಐಟಿ ಕಂಪೆನಿಗಳು!

ನಿತ್ಯ ಜೀವನದೊಂದಿಗೆ ಉದ್ಯೋಗ: ವರ್ಕ್ ಫ್ರಂ ಹೋಂ ಉದ್ಯೋಗ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ದೈನಂದಿನ ಜೀವನದೊಂದಿಗೆ ಉದ್ಯೋಗವನ್ನು ಮಾಡುವುದು ತುಂಬಾ ಆರಾಮ ಎನಿಸುತ್ತದೆ. ಕೇವಲ ಒಂದೇ ಕಂಪನಿಗೆ ಮಾತ್ರವಲ್ಲದೇ ವಿವಿಧ ಕಂಪನಿಗಳಿಗಾಗಿ ಏಕಕಾಲದಲ್ಲಿ ಕೆಲಸ ಹೆಚ್ಚು ಆದಾಯ ಗಳಿಸಬಹುದಾಗಿದೆ.

Follow Us:
Download App:
  • android
  • ios