IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ 68 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ 68 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜನವರಿ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

India Post Payments Bank hiring for 68 Specialist Officer  posts gow

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ 2024 ಅಧಿಸೂಚನೆಯನ್ನು ಅಧಿಕೃತವಾಗಿ ಈಗಾಗಲೇ ಬಿಡುಗಡೆ ಮಾಡಿದ್ದು, ಮಾಹಿತಿ ತಂತ್ರಜ್ಞಾನ (IT) ಮತ್ತು ಮಾಹಿತಿ ಭದ್ರತೆ (IS) ಇಲಾಖೆಗಳಲ್ಲಿ ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಸಂಬಂಧಿಸಿದಂತೆ 68 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೇ ಜನವರಿ10ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಪ್ರಕಿಯೆ, ವಿದ್ಯಾರ್ಹತೆ ಹಾಗೂ ನೇಮಕಾತಿ ಕುರಿತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಹುದ್ದೆ ಹೆಸರು:
*ಸೈಬರ್‌ ಭದ್ರತಾ ತಜ್ಞ ಹುದ್ದೆಗಳು

*ಸಹಾಯಕ ವ್ಯವಸ್ಥಾಪಕ ಹುದ್ದೆಗಳು
*ಮ್ಯಾನೇಜರ್‌ ಹುದ್ದೆಗಳು

*ಸೀನಿಯರ್‌ ಮ್ಯಾನೇಜರ್‌ ಹುದ್ದೆಗಳು

SBI SCO ನೇಮಕಾತಿ 2025: 150 ಹುದ್ದೆಗಳಿಗೆ ಅರ್ಜಿ ಆಹ್ವಾನ

*ಹುದ್ದೆಗಳ ಸಂಖ್ಯೆ
ಒಟ್ಟು 68 ಹುದ್ದೆಗಳು

*ವಿದ್ಯಾರ್ಹತೆ
ಬಿ.ಇ/ಬಿ.ಟೆಕ್‌/ಬಿಎಸ್ಸಿ/ ಎಂಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.

*ವಯಸ್ಸಿನ ಮಿತಿ
ಸಾಮಾನ್ಯ ವರ್ಗ 20-35 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

*ಅರ್ಜಿ ಶುಲ್ಕ
ಸಾಮಾನ್ಯ ವರ್ಗ, ಓಬಿಸಿ ಅಭ್ಯರ್ಥಿಗಳಿಗೆ 750 ರು.
ಎಸ್‌ಸಿ,ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 150

*ಆಯ್ಕೆ ಪ್ರಕ್ರಿಯೆ
ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಸಂದರ್ಶನದ ಜೊತೆಗೆ ಮೌಲ್ಯಮಾಪನ, ಗುಂಪು ಚರ್ಚೆ ಅಥವಾ ಆನ್‌ಲೈನ್‌ ಪರೀಕ್ಷೆಯನ್ನು ನಡೆಸುವ ಹಕ್ಕನ್ನು ಬ್ಯಾಂಕ್‌ ಕಾಯ್ದಿರಿಸಿಕೊಂಡಿದೆ.

ಭಾರತದಲ್ಲಿ ಅತಿ ಹೆಚ್ಚು ಸಂಬಳ ನೀಡುವ ಟಾಪ್ 5 ಉದ್ಯೋಗಗಳು

*ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು
ವೆಬ್‌ಸೈಟ್‌-www.ippbonline.com

ಅರ್ಜಿ ಸಲ್ಲಿಸಲು ಪ್ರಾರಂಭ ಮತ್ತು ಕೊನೆಯ ದಿನಾಂಕ
*ಈಗಾಗಲೇ ಡಿಸೆಂಬರ್‌ 21 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಭವಾಗಿದ್ದು, ಜನವರಿ 10 ರಂದು ಕೊನೆಯ ದಿನಾಂಕವಾಗಿದೆ.

Latest Videos
Follow Us:
Download App:
  • android
  • ios