Asianet Suvarna News Asianet Suvarna News

ಉದ್ಯೋಗಿಗಳಿಗೆ ಬೋನಸ್‌ ನೀಡಲು ಚೀನಾ ಕಂಪನಿಯ ಸ್ಪೆಷಲ್‌ ನೀತಿ!

ಡಾಂಗ್ಪೋ ಪೇಪರ್ ಕಂಪನಿ ಹೇಳುವ ಪ್ರಕಾರ, ‘ಕಂಪನಿಯು ತನ್ನ ಉದ್ಯೋಗಿಗಳು ಆರೋಗ್ಯವಾಗಿದ್ದಾಗ ಕಂಪನಿಯೂ ಕೂಡ ದೀರ್ಘಕಾಲ ಬಾಳಿಕೆ ಬರಬಹುದು' ಎನ್ನುವ ತತ್ವದಲ್ಲಿ ನಂಬಿಕೆ ಇರಿಸಿದೆ.
 

To Make bonuses Chinese company employees must run san
Author
First Published Dec 19, 2023, 8:14 PM IST

ನವದೆಹಲಿ (ಡಿ.19): ಚೀನಾ ಮೂಲದ ಕಾಗದ-ತಯಾರಿಕೆ ಕಂಪನಿಯಾದ ಡಾಂಗ್‌ಪೋ ಪೇಪರ್ ತನ್ನ ಉದ್ಯೋಗಿಗಳಿಗೆ ಬೋನಸ್‌ಗಳನ್ನು ನಿರ್ಧರಿಸಲು ಹೊಸ ನೀತಿಯನ್ನು ರೂಪಿಸಿದೆ. ತನ್ನ ಸಾಂಪ್ರದಾಯಿಕ ಕಾರ್ಯಕ್ಷಮತೆ ಆಧಾರಿತ ವಾರ್ಷಿಕ ಬೋನಸ್‌ಗಳನ್ನು ರದ್ದುಗೊಳಿಸಿರುವ ಕಂಪನಿ, ಉದ್ಯೋಗಿ ಪ್ರತಿ ತಿಂಗಳು ಮಾಡುವ ವ್ಯಾಯಾಮದ ಆಧಾರದ ಮೇಲೆ ಬೋನಸ್‌ಗಳನ್ನು ನೀಡಲು ತೀರ್ಮಾನ ಮಾಡಿದೆ.ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಹೊಸ ನೀತಿಯು ಉದ್ಯೋಗಿಯು ತಿಂಗಳಿಗೆ 50 ಕಿಮೀ ಓಡಿದರೆ 100% ಮಾಸಿಕ ಬೋನಸ್‌ಗೆ ಅರ್ಹನಾಗಿರುತ್ತಾನೆ, 40 ಕಿಮೀಗೆ 60% ಮತ್ತು 30 ಕಿಮೀಗೆ 30% ಬೋಸನ್‌ಗೆ ಅರ್ಹನಾಗಿದ್ದಾನೆ ಎಂದು ತಿಳಿಸುತ್ತದೆ. ಹಾಗೇನಾದರೂ ಉದ್ಯೋಗಿ ಒಂದು ತಿಂಗಳಲ್ಲಿ 100 ಕಿಲೋಮೀಟರ್‌ ಓಡಿದಲ್ಲಿ ಮಾಸಿಕ ಪೂರ್ಣ ಬೋನಸ್‌ನೊಂದಿಗೆ ಶೆ.30ರಷ್ಟು ಹೆಚ್ಚುವರಿ ಬೋನಸ್‌ಗೆ ಅರ್ಹರಾಗಿರುತ್ತಾರೆ.

ಈ ಯೋಜನೆಯು ಮೌಂಟೇನ್ ಹೈಕಿಂಗ್ ಮತ್ತು ವೇಗದ ನಡಿಗೆಯನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳುತ್ತದೆ, ಇವುಗಳು ಕ್ರಮವಾಗಿ 60% ಮತ್ತು 30% ರಷ್ಟು ಅಗತ್ಯವಿರುವ ಒಟ್ಟು ವ್ಯಾಯಾಮವನ್ನು ತೆಗೆದುಕೊಳ್ಳುತ್ತವೆ. ಅಲ್ಲದೆ, ದೂರವನ್ನು ಲೆಕ್ಕಾಚಾರ ಮಾಡಲು, ಡಾಂಗ್ಪೋ ಪೇಪರ್, ಉದ್ಯೋಗಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನೂ ಇನ್ಸ್‌ಟಾಲ್‌ ಮಾಡಿದೆ.

ಯಾಕೆ ಈ ನೀತಿ?: "ಒಂದು ಕಂಪನಿಯು ತನ್ನ ಉದ್ಯೋಗಿಗಳು ಆರೋಗ್ಯವಾಗಿದ್ದಾಗ ಮಾತ್ರವೇ ದೀರ್ಘಕಾಲ ಉಳಿಯಬಹುದು" ಎಂದು ಮುಖ್ಯಸ್ಥ ಲಿನ್ ಝಿಯಾಂಗ್ ತಿಳಿಸಿದ್ದಾರೆ. ಸಂಸ್ಥೆಯ ಅಧಿಕೃತ WeChat ಖಾತೆಯು ಲಿನ್  'ಅವರು ಏನು ಬೋಧಿಸುತ್ತಾರೋ ಅದನ್ನು ಅಭ್ಯಾಸ ಮಾಡುತ್ತಾರೆ' ಎಂದು ಹೇಳುತ್ತದೆ. ಇವರು ಮೌಂಟ್‌ ಎವರೆಸ್ಟ್‌ಅನ್ನು ಎರಡು ಬಾರಿ ಏರಿದ್ದಾರೆ ಎಂದು ಇಂಗ್ಲಿಷ್ ಭಾಷೆಯ ದಿನಪತ್ರಿಕೆ ಹೇಳಿದೆ. ಮತ್ತು, ಲಿನ್ ಪ್ರಕಾರ, ಎಲ್ಲಾ ಸಿಬ್ಬಂದಿಗಳು ತಮ್ಮ ಸಂಪೂರ್ಣ ಬೋನಸ್‌ಗಳಿಗೆ ಅರ್ಹರಾಗಿರುತ್ತಾರೆ.

ರತನ್‌ ಟಾಟಾ ಮಾಲೀಕತ್ವದ ಕಂಪನಿಯ 6.70 ಕೋಟಿ ಷೇರು ಮಾರಾಟ ಮಾಡಿದ ಎಲ್‌ಐಸಿ!

ನೌಕರರು ಹೇಳೋದೇನು?: ಈ ಯೋಜನೆಯು ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಕೊಲ್ಲುತ್ತದೆ,’ ‘ನಾವು ಆರೋಗ್ಯ ಮತ್ತು ಹಣ ಎರಡನ್ನೂ ಪಡೆಯಬಹುದು’ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು ಅದು ಅವರ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡಿತು ಎಂಬುದನ್ನು ತಿಳಿಸಿದ್ದಾರೆ.

Nano Plant in Singur: ಮಮತಾ ಬ್ಯಾನರ್ಜಿಗೆ ಮುಖಭಂಗ, ಟಾಟಾ ಮೋಟಾರ್ಸ್‌ಗೆ 1356 ಕೋಟಿ ಪಾವತಿಸಲು ಆದೇಶ!

Follow Us:
Download App:
  • android
  • ios