ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ರತನ್ ಟಾಟಾ ಕಂಪನಿಯಲ್ಲಿ ತನ್ನ ಪ್ರಮುಖ ಪಾಲನ್ನು ಕಡಿಮೆ ಮಾಡಿದೆ. ಈ ಹಿಂದೆ ವಿಮಾ ಕಂಪನಿಯು 169,802,847 ಷೇರುಗಳನ್ನು ಹೊಂದಿತ್ತು ಮತ್ತು ಈಗ ಅದು 102,752,081 ಷೇರುಗಳಿಗೆ ಇಳಿಸಿದೆ. 

ಮುಂಬೈ (ಡಿ.19): ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ರತನ್ ಟಾಟಾ ಅವರ ಕಂಪನಿ ಟಾಟಾ ಮೋಟಾರ್ಸ್‌ನಲ್ಲಿ ತನ್ನ ಪ್ರಮುಖ ಪಾಲನ್ನು ಕಡಿಮೆ ಮಾಡಿದೆ. ಮಂಗಳವಾರ, ಎಲ್‌ಐಸಿ ಟಾಟಾ ಮೋಟಾರ್ಸ್ ಲಿಮಿಟೆಡ್‌ನಲ್ಲಿ ತನ್ನ ಪಾಲನ್ನು ಮೊದಲು ಶೇ. 5.11 ಎಂದು ಘೋಷಣೆ ಮಾಡಿತ್ತು. ಅದನ್ನು ಶೇ. 3.09ಕ್ಕೆ ಎಲ್‌ಐಸಿ ಇಳಿಸಿದೆ. ಈ ಸುದ್ದಿ ತಿಳಿದ ತಕ್ಷಣ ಎರಡೂ ಕಂಪನಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಮಾರಾಟವಾದವು. ಮಂಗಳವಾರದಂದು ಟಾಟಾ ಮೋಟಾರ್ಸ್ ಷೇರುಗಳು ಶೇ. 0.11ರಷ್ಟು ಕಡಿಮೆಯಾಗಿ, ಪ್ರತಿ ಷೇರಿಗೆ ರೂ 730 ಕ್ಕೆ ಕೊನೆಗೊಂಡರೆ, ಎಲ್ಐಸಿ ಷೇರುಗಳು 0.87% ನಷ್ಟು ಕಡಿಮೆಯಾಗಿ ರೂ 794.70 ಕ್ಕೆ ತಲುಪಿದವು. ಲೈಫ್ ಇನ್ಶುರೆನ್ಸ್ ಆಫ್ ಇಂಡಿಯಾ (ಎಲ್‌ಐಸಿ) ಫೈಲಿಂಗ್‌ನಲ್ಲಿ ಟಾಟಾ ಮೋಟಾರ್ಸ್‌ನಲ್ಲಿನ ತನ್ನ ಪಾಲನ್ನು ಸೆಬಿ ರೆಗ್ಯುಲೇಷನ್ಸ್, 2015 ರ ಅಡಿಯಲ್ಲಿ ಕಡಿಮೆ ಮಾಡಿಕೊಂಡಿದ್ದಾಗಿ ತಿಳಿಸಿದೆ. ಟಾಟಾ ಮೋಟಾರ್ಸ್‌ನಲ್ಲಿನ ಎಲ್‌ಐಸಿಯ ಈಕ್ವಿಟಿ ಷೇರುಗಳು 169,802,847 ರಿಂದ 102,752,081 ಕ್ಕೆ ಇಳಿದಿದೆ. ಇದರರ್ಥ ಶೇ. 3.09ಕ್ಕೆ ಷೇರು ಇಳಿಕೆಯಾಗಿದೆ. 2015 ರಿಂದ ಆಗಸ್ಟ್‌ 28 ರಿಂದ 2023ರ ಡಿಸೆಂಬರ್‌ 18 ರಿಂದ ಕಂಪನಿಯಲ್ಲಿ ತನ್ನ ಪಾಲನ್ನು ಶೇ. 2ರಷ್ಟು ಕಡಿಮೆ ಮಾಡಿಕೊಳ್ಳಲಾಗಿದೆ ಎಂದು ಎಲ್‌ಐಸಿ ತಿಳಿಸಿದೆ. ಅಂದಾಜು 6.70 ಕೋಟಿ ಷೇರುಗಳನ್ನು ಎಲ್‌ಐಸಿ ಮಾರಾಟ ಮಾಡಿದೆ.

2015ರ ಆಗಸ್ಟ್ 28 ರಿಂದ 2023ರ ಡಿಸೆಂಬರ್ 18ರ ಅವಧಿಯಲ್ಲಿ ರತನ್ ಟಾಟಾ ಅವರ ಕಂಪನಿ ಟಾಟಾ ಮೋಟಾರ್ಸ್‌ನಲ್ಲಿ ಎಲ್‌ಐಸಿ, ಶೇ. 2.018 ಪಾಲನ್ನು ಸರಾಸರಿ 711.65 ರೂಪಾಯಿಗೆ ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಷೇರುಗಳು ಪ್ರಸ್ತುತ 730 ರೂಪಾಯಿ ಆಗಿದ್ದು, ಒಂದು ತಿಂಗಳಲ್ಲಿ ಶೇ.8.10ರಷ್ಟು ಏರಿಕೆಯಾಗಿದ್ದು, ಇದು ಕಳೆದ 6 ತಿಂಗಳಲ್ಲಿ ಶೇ. 25 ಹಾಗೂ ಒಂದು ವರ್ಷದಲ್ಲಿ ಸುಮಾರು 75 ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ.

ಟಾಟಾ ಗ್ರೂಪ್ ಕಂಪನಿ ಟಾಟಾ ಮೋಟಾರ್ಸ್ ಭಾರತದಲ್ಲಿ ಹಾಗೂ ವಿಶ್ವದ ಹಲವು ದೇಶಗಳಲ್ಲಿ ವಾಹನಗಳನ್ನು ಮಾರಾಟ ಮಾಡುತ್ತದೆ. ಟಾಟಾ ಮೋಟಾರ್ಸ್ ವಿಶ್ವದ ಅಗ್ರ ಆಟೋಮೊಬೈಲ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ. ಇದು ವಿಶ್ವಕ್ಕೆ ರಕ್ಷಣಾ ಬಳಕೆಗಾಗಿ ಕಾರುಗಳು, ಎಸ್‌ಯುವಿಗಳು, ಟ್ರಕ್‌ಗಳು, ಬಸ್‌ಗಳು ಮತ್ತು ವಾಹನಗಳನ್ನು ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.

ಟಾಟಾ ಮೋಟಾರ್ಸ್‌ ಉದ್ಯಮಕ್ಕೆ ಅಂಬಾನಿ ಪೈಪೋಟಿ ; ಬೃಹತ್ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್‌ಅಪ್‌ಗೆ ಹೂಡಿಕೆ

ಎಲ್‌ಐಸಿ ಷೇರು ಬೆಲೆಯೂ ಕುಸಿತ: ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಷೇರುಗಳು ಮಂಗಳವಾರದ ವಹಿವಾಟಿನ ಅಂತ್ಯಕ್ಕೆ 794.70 ಕ್ಕೆ ಕೊನೆಗೊಂಡಿತು. ಹಿಂದಿನ ರೂ 801.35 ಕ್ಕಿಂತ 0.87% ನಷ್ಟು ಕಡಿಮೆಯಾಗಿದೆ. ಕೌಂಟರ್‌ನಲ್ಲಿನ ವಹಿವಾಟು 5.29 ಕೋಟಿ ರೂ.ಗಳಷ್ಟಿದ್ದು, ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) 5,03,817.69 ಕೋಟಿ ರೂ. ಕಳೆದ ಒಂದು ತಿಂಗಳಲ್ಲಿ ಎಲ್ ಐಸಿ ಷೇರುಗಳು ಶೇ.30ರಷ್ಟು ಏರಿಕೆ ಕಂಡಿವೆ.

Nano Plant in Singur: ಮಮತಾ ಬ್ಯಾನರ್ಜಿಗೆ ಮುಖಭಂಗ, ಟಾಟಾ ಮೋಟಾರ್ಸ್‌ಗೆ 1356 ಕೋಟಿ ಪಾವತಿಸಲು ಆದೇಶ!