Asianet Suvarna News Asianet Suvarna News

ಐಐಟಿಯಲ್ಲಿ ಚಿನ್ನದ ಪದಕ, ನಿರೀಕ್ಷೆಯ ಮಾಡದಷ್ಟು ವೇತನ ನೀಡ್ತಿದ್ದ ಕಂಪನಿ, ಎಲ್ಲವನ್ನೂ ಬಿಟ್ಟು 28ನೇ ವಯಸ್ಸಿಗೆ ಸಂನ್ಯಾಸಿಯಾದ!

ಈಗ ಸ್ವಾಮಿ ಗೋಪಾಲ್ ಸುಂದರ್ ದಾಸ್ ಎಂದು ಕರೆಯಲ್ಪಡುವ ಸಂದೀಪ್ ಕುಮಾರ್ ಭಟ್ ಅವರು ದೆಹಲಿಯ ಐಐಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಲ್ಲದೆ, 2002 ರಲ್ಲಿ ತಮ್ಮ ಬ್ಯಾಚ್‌ನ ಚಿನ್ನದ ಪದಕ ವಿಜೇತರಾಗಿದ್ದರು.

Sandeep Kumar Bhatt  IIT gold medalist quit high paying corporate job to become saint at 28 san
Author
First Published Sep 22, 2023, 9:03 PM IST

ನವದೆಹಲಿ (ಸೆ.22): ಇಂದಿಗೂ 12ನೇ ಕ್ಲಾಸ್‌ ವಿದ್ಯಾಭ್ಯಾಸ ಮುಗಿದ ಬಳಿಕ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಕನಸು ತಾವು ಇಂಜಿನಿಯರ್‌ ಆಗಬೇಕು ಅನ್ನೋದು. ಅದರಲ್ಲೂ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಕನಸು ಇರಿಕೊಂಡವರು ಲಕ್ಷಾಂತರ ಮಂದಿ ಸಿಗುತ್ತಾರೆ. ಐಐಟಿ-ಜೆಇಇಯ ಪರೀಕ್ಷೆಗಾಗಿ 10ನೇ ಕ್ಲಾಸ್‌ನಿಂದಲೇ ತರಬೇತಿ ಆರಂಭ ಮಾಡುತ್ತಾರೆ. ಐಐಟಿ ಭಾರತದಲ್ಲಿ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಮತ್ತು IIT-JEE ಪ್ರವೇಶ ಪರೀಕ್ಷೆಯನ್ನು ಭಾರತದಲ್ಲಿನ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಅನೇಕರು ಹೇಳುತ್ತಾರೆ. ಅದು ನಿಜ ಕೂಡ. ಪ್ರತಿ ವರ್ಷ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಐಐಟಿ ಜೆಇಇ ಪ್ರವೇಶ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮತ್ತು ದೇಶಾದ್ಯಂತ ಐಐಟಿಗಳಲ್ಲಿ ಪ್ರವೇಶ ಪಡೆಯುವ ಕನಸಿನೊಂದಿಗೆ ಆಗಮಿಸುತ್ತಾರೆ, ಆದರೆ ಪ್ರತಿ ವರ್ಷ ಕೆಲವು ಸಾವಿರ ವಿದ್ಯಾರ್ಥಿಗಳು ಮಾತ್ರ ತಮ್ಮ ಗುರಿಯನ್ನು ಸಾಧಿಸಲು ಯಶಸ್ವಿಯಾಗುತ್ತಾರೆ.

ಇನ್ನು ಐಐಟಿಯೇ ಯಾಕೆ ಇವರ ಆಯ್ಕೆ ಎಂದರೆ, ಅದಕ್ಕೂ ಉತ್ತರವಿದೆ. ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳುಗೆ ಜಾಬ್‌ ಆಫರ್‌ ಬಹಳ ಸುಲಭವಾಗಿ ಸಿಗುತ್ತದೆ. ಅದರಲ್ಲೂ ಅದರಲ್ಲೂಅಂತಾರಾಷ್ಟ್ರೀಯ ಕಂಪನಿಗಳು ಐಐಟಿ ವಿದ್ಯಾರ್ಥಿಗಳೆಂದರೆ ಮೊದಲು ಪ್ರಾಧಾನ್ಯತೆ ನೀಡುತ್ತಾರೆ. ಕೆಲವು ಐಐಟಿ ವಿದ್ಯಾರ್ಥಿಗಳು ತಮ್ಮ ಪದವಿ ಮುಗಿದ ಬಳಕ, ದೊಡ್ಡ ಕಂಪನಿಗಳಲ್ಲಿ ಆಫರ್‌ ಪಡೆದು ವಿದೇಶಕ್ಕೆ ಹಾರುತ್ತಾರೆ. ಕೆಲವರು ದೇಶದಲ್ಲಿಯೇ ಉಳಿದುಕೊಳ್ಳುತ್ತಾರೆ. ಆದರೆ ಕೆಲವು ಐಐಟಿ ಪದವೀಧರರು ಐಐಟಿಯಿಂದ ಪದವಿ ಮುಗಿಸಿದ ನಂತರ ಸಂನ್ಯಾಸಿಯಾಗಲು ನಿರ್ಧರಿಸಿದ್ದು ಕೇಳಿರುವುದು ಬಹಳ ಅಪರೂ. ಈ ಲೇಖನದಲ್ಲಿ ನಾವು ಐಐಟಿಯಿಂದ ಕಲಿತ ಸಂದೀಪ್ ಕುಮಾರ್ ಭಟ್ ಅವರ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಐಐಟಿಯಲ್ಲಿ ಚಿನ್ನದ ಪದಕ, ನಿರೀಕ್ಷೆಯೇ ಮಾಡದಷ್ಟು ವೇತನ ನೀಡುತ್ತಿದ್ದ ಕಂಪನಿ ಈ ಎಲ್ಲವನ್ನೂ ತೊರೆದು, 28ನೇ ವಯಸ್ಸಿನಲ್ಲಿ ಅವರು ಸಂನ್ಯಾಸಿಯಾಗಲು ತೀರ್ಮಾನ ಮಾಡಿದ್ದರು.

ಸಂದೀಪ್‌ ಕುಮಾರ್‌ ಭಟ್‌, ಐಐಟಿ ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. 2002ರಲ್ಲಿ ಅವರು ತಮ್ಮ ಇಡೀ ಬ್ಯಾಚ್‌ನಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಎನಿಸಿದ್ದರು. 2004ರ ವೇಳೆ ಎಂಟೆಕ್‌ ಪೂರೈಸಿದ್ದ ಸಂದೀಪ್‌ ಕುಮಾರ್‌ ಭಟ್‌ಗೆ ಅದರ ಬೆನ್ನಲ್ಲಿಯೇ ದೇಶದ ಪ್ರತಿಷ್ಠಿತ ಲಾರ್ಸೆನ್‌ ಆಂಡ್‌ ಟೌರ್ಬೋ ಕಂಪನಿ ಜಾಬ್‌ ಆಫರ್‌ ನೀಡಿತ್ತು. ಈ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಸಂದೀಪ್‌ ಕುಮಾರ್‌ ಉನ್ನತ ಮಟ್ಟದಲ್ಲಿ ಕೆಲಸ ಮಾಡಿದ್ದರು. ಆದರೆ, ಅದಾಗಲೇ ಲೌಕಿಕ ಜಗತ್ತಿನ ಬಗ್ಗೆ ಬೇಸರ ಅವರನ್ನು ಕಾಡಿತ್ತು. ಭರಪೂರ ವೇತನ ನೀಡುವ ಕೆಲಸ, ಐಷಾರಾಮಿ ಜೀವನ ಈ ಎಲ್ಲವನ್ನೂ 2007ರ ವೇಳೆಗೆ ತೊರೆಯುವ ತೀರ್ಮಾನ ಮಾಡಿದರು. 28ನೇ ವರ್ಷದ ವೇಳೆಗೆ ಸಂನ್ಯಾಸಿಯಾಗಬೇಕು ಎಂದು ನಿರ್ಧರಿಸಿದ ಸಂದೀಪ್‌ ಕುಮಾರ್‌ ಭಟ್‌, ಸ್ವಾಮಿ ಸುಂದರ್‌ ಗೋಪಾಲ್‌ ದಾಸ್‌ ಆಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡರು.

ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಆರ್ ಒ ಕಂಪನಿ ಸ್ಥಾಪಿಸಿದ ಐಐಟಿ ಪದವೀಧರ, ಇಂದು 1100 ಕೋಟಿ ಒಡೆಯ

ಸನ್ಯಾಸಿಯಾಗುವ ತಮ್ಮ ನಿರ್ಧಾರದ ಬಗ್ಗೆ ಮಾತನಾಡುತ್ತಾ, ಸ್ವಾಮಿ ಸುಂದರ್ ಗೋಪಾಲ್ ದಾಸ್ ಒಮ್ಮೆ ಸಂದರ್ಶನವೊಂದರಲ್ಲಿ ಜನರು ಸಮಾಜದಲ್ಲಿ ಅನೇಕ ಇಂಜಿನಿಯರ್‌ಗಳು, ವೈದ್ಯರು, ಐಎಎಸ್, ನ್ಯಾಯಾಧೀಶರು, ವಿಜ್ಞಾನಿಗಳು ಮತ್ತು ನಾಯಕರನ್ನು ಹುಡುಕುತ್ತಾರೆ ಆದರೆ ಸಮಾಜಕ್ಕೆ ವಿಭಿನ್ನ ಮಾರ್ಗವನ್ನು ತೋರಿಸಲು ಅಥವಾ ಜನರ ವ್ಯಕ್ತಿತ್ವವನ್ನು ನಿರ್ಮಿಸಲು ಉದ್ದೇಶವನ್ನು ಹೊಂದಿರುವ ಯಾರನ್ನೂ ನಾವು ಹುಡುಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. 

ಯುಎಸ್ ಮೂಲದ ಕಂಪೆನಿಯಿಂದ 1.35 ಕೋಟಿ ರೂ. ಪ್ಯಾಕೇಜ್ ಉದ್ಯೋಗ ಪಡೆದು ಬೆಂಗಳೂರು ಯುವಕ ಐತಿಹಾಸಿಕ ಸಾಧನೆ

Follow Us:
Download App:
  • android
  • ios