ಜೇಬಲ್ಲಿ, ವ್ಯಾಲೆಟ್‌ನಲ್ಲಿ ದುಡ್ಡು ಇರಲಿ, ಇಲ್ಲದಿರಲಿ. ಆದ್ರೆ ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು. ಯಾಕಂದ್ರೆ ಮೊಬೈಲ್‌ನಲ್ಲಿ ಫೋನ್ ಪೇ, ಪೇಟಿಎಂ, ಗೂಗಲ್ ಪೇ-ಯಾವುದಾದ್ರೂ ಒಂದು ಆಪ್ ಇದ್ದೇ ಇರುತ್ತೆ. ಅದರಲ್ಲೂ ಆಲ್ ಮೋಸ್ಟ್ ಎಲ್ಲರ ಮೊಬೈಲ್‌ನಲ್ಲಿ ಫೋನ್ ಪೇ ಅಂತು ಇದ್ದೇ ಇರುತ್ತದೆ. ಅಷ್ಟು ಚಿರಪರಿಚಿತವಾಗಿದೆ ಈ ಫೋನ್ ಪೇ. ಸದ್ಯ ಈ ಫೋನ್ ಪೇ ಸಾಕಷ್ಟು ಫೇಮಸ್ ಆಗಿದ್ದು, ಉದ್ಯೋಗ ಅವಕಾಶ ಒದಗಿಸಲು ಮುಂದಾಗಿದೆ.

ವಾಲ್ ಮಾರ್ಟ್ ಒಡೆತನದ ಫೋನ್‌ ಪೇ ಮುಂದಿನ ಮೂರುರಿಂದ ಆರು ತಿಂಗಳಲ್ಲಿ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ 700 ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆಯಿದೆ. ಡಿಜಿಟಲ್ ಪಾವತಿ ಸೇವೆ ಹೆಚ್ಚಾಗುವುದರ ಜೊತೆಗೆ ವ್ಯಾಪಾರ ವಹಿವಾಟು ಕೂಡ ಹೆಚ್ಚಾಗುತ್ತಿರುವ ಪರಿಣಾಮ ಕಂಪನಿ ಹೆಚ್ಚನ ಸಿಬ್ಬಂದಿಯ ನೇಮಕಕ್ಕೆ ಮುಂದಾಗಿದೆ.

ಕೇಂದ್ರ ಸರ್ಕಾರ ಅಧೀನದ ಬೆಳಗಾವಿ ಶಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಕಂಪನಿಯು ಅನೇಕ ಎಂಜಿನಿಯರಿಂಗ್ ಮತ್ತು ಎಂಜಿನಿಯರಿಂಗ್ ಅಲ್ಲದ ಕಾರ್ಯಗಳಾದ ವ್ಯಾಪಾರ ಅಭಿವೃದ್ಧಿ, ಉತ್ಪನ್ನ ನಿರ್ವಹಣೆ, ವ್ಯಾಪಾರಿ ಸ್ವಾಧೀನ, ಮಾರ್ಕೆಟಿಂಗ್, ಹಣಕಾಸು, ಕಾನೂನು ಮುಂತಾದವುಗಳಲ್ಲಿ ಮುಕ್ತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ ಎಂದು ಫೋನ್‌ಪೇಯ ಮುಖ್ಯ ಸಾರ್ವಜನಿಕ ಅಧಿಕಾರಿ ಮನ್‌ಮೀತ್ ಸಂಧು ತಿಳಿಸಿದ್ದಾರೆ.

"ನಾವು 700ಕ್ಕೂ ಹೆಚ್ಚು ಖಾಲಿ ಸ್ಥಾನಗಳನ್ನು ಹೊಂದಿದ್ದೇವೆ, ಅದನ್ನು ಶೀಘ್ರ ನಾವು ಭರ್ತಿ ಮಾಡುವ ಗುರಿ ಹೊಂದಿದ್ದೇವೆ. ನಮ್ಮ ವ್ಯವಹಾರ ಕಾರ್ಯತಂತ್ರ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ" ಅಂತಾರೆ ಮನ್‌ಮೀತ್ ಸಂಧು. 

ಫೋನ್‌ಪೇ ಗ್ರಾಮೀಣ ಭಾಗದಲ್ಲೂ ತನ್ನ ಜಾಲವನ್ನು ವಿಸ್ತರಿಸಲು ಚಿಂತನೆ ನಡೆಸಿದೆ. ಹೀಗಾಗಿ ಈ ನೆಟ್‌ವರ್ಕ್‌ನಲ್ಲಿ ಸೇವೆ ಸಲ್ಲಿಸಲು ಸ್ಥಳೀಯ ಪ್ರತಿಭೆಗಳನ್ನು ನೇಮಿಸಿಕೊಳ್ಳಲಿದೆ.

SSC CHSL 2020: 4726 ಹುದ್ದೆಗಳಿಗೆ ಭರ್ತಿ, ಡಿ.15 ಅರ್ಜಿ ಸಲ್ಲಿಸಲು ಕೊನೆಯ ದಿನ

ಕಳೆದ ಫೆಬ್ರವರಿ ಅಂತ್ಯದಿಂದ, ಸಾಂಕ್ರಾಮಿಕ ರೋಗದ ಮಧ್ಯೆ ಕಂಪನಿಯು 500 ಜನರನ್ನು ಅನೇಕ ಹುದ್ದೆಗಳಲ್ಲಿ ನೇಮಕ ಮಾಡಿಕೊಂಡಿದ್ದು, ತನ್ನ ಉದ್ಯೋಗಿಗಳ ಸಂಖ್ಯೆಯನ್ನು 2,200 ಕ್ಕೆ ಏರಿಸಿದೆ. "ಲಾಕ್ ಡೌನ್ ಸಮಯದಲ್ಲಿ, ನಾವು ನೌಕರರನ್ನು ವರ್ಚುವಲ್ ಆಗಿ ಭೇಟಿ ಮಾಡುತ್ತಿದ್ದೆವು.ಅವರ ಇಂಡಕ್ಷನ್ ಮತ್ತು ಆನ್‌ಬೋರ್ಡಿಂಗ್ ಅನ್ನು ಯಾವುದೇ ಅಡೆತಡೆಯಿಲ್ಲದೆ ಮಾಡಲಾಗುತ್ತಿತ್ತು" ಅಂತಾರೆ ಸಂಧು.

COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿ ಸೇವೆಗಳು ಮತ್ತು ಆನ್‌ಲೈನ್ ಶಾಪಿಂಗ್ ಹೆಚ್ಚು ಜನಪ್ರಿಯವಾಗಿದೆ. ಕಳೆದ ನವೆಂಬರ್‌ನಲ್ಲಷ್ಟೇ ವಾಲ್‌ಮಾರ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡೌಗ್ ಮೆಕ್‌ಮಿಲನ್, ಫ್ಲಿಪ್‌ಕಾರ್ಟ್ ಮತ್ತು ಫೋನ್‌ಪೆಯಲ್ಲಿ ಮಾಸಿಕ ಸಕ್ರಿಯ ಗ್ರಾಹಕರ ಸಂಖ್ಯೆ ಸಾರ್ವಕಾಲಿಕ ಗರಿಷ್ಠಮಟ್ಟದಲ್ಲಿದೆ ಎಂದು ಹೇಳಿದ್ದರು.

ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ

ಈ ಹಿಂದೆ, ಕಂಪನಿಯು 2021 ರ ಅಂತ್ಯದ ವೇಳೆಗೆ ತನ್ನ ಆಫ್‌ಲೈನ್ ವ್ಯಾಪಾರಿ ಜಾಲವನ್ನು 25 ಮಿಲಿಯನ್‌ಗೆ ವಿಸ್ತರಿಸುವ ಉದ್ದೇಶವನ್ನು ಘೋಷಿಸಿತ್ತು. ಈಗಿನಂತೆ, ಫೋನ್‌ಪೇ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ 13 ಮಿಲಿಯನ್ ಆಫ್‌ಲೈನ್ ವ್ಯಾಪಾರಿಗಳನ್ನು ಪೂರೈಸುತ್ತದೆ. "ಇದು 5,500 ತಾಲ್ಲೂಕುಗಳಲ್ಲಿ 10,000 ಉದ್ಯೋಗಗಳನ್ನು ಸೃಷ್ಟಿಸಲಿದೆ, ಇದರಲ್ಲಿ ನಮ್ಮ ವ್ಯಾಪಾರಿಗಳ ಜಾಲಕ್ಕೆ ಸೇವೆ ಸಲ್ಲಿಸಲು ಸ್ಥಳೀಯವಾಗಿ ಲಭ್ಯವಿರುವ ಪ್ರತಿಭಾವಂತ ಜನರನ್ನು ನೇಮಿಸಿಕೊಳ್ಳಲಾಗುತ್ತದೆ" ಎಂದು ಸಂಧು ತಿಳಿಸಿದ್ದಾರೆ.