ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್‌ಸಿ) ಸಂಯೋಜಿತ ಹೈಯರ್ ಸೆಕೆಂಡರಿ ಲೆವಲ್(ಸಿಎಚ್ಎಸ್ಎಲ್) ಪರೀಕ್ಷೆಯ 2020ರ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ. 

ದೇಶಾದ್ಯಂತ ಖಾಲಿ ಇರುವ ಒಟ್ಟು 4726 ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಿಎಚ್ಎಸ್ಎಲ್ ಪರೀಕ್ಷೆಯನ್ನು ನಡೆಸುತ್ತಿದೆ. 158 LDC/JSA/JPA, 3181 PA/SA ಮತ್ತು 7 DEO ಹುದ್ದೆಗಳು ಸೇರಿ ಒಟ್ಟು 4726 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 

ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ!

ಕೇಂದ್ರ ಸರ್ಕಾರದ ನಾನಾ ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎಸ್ಎಸ್‌ಸಿ ಸಿಎಚ್ಎಸ್ಎಲ್ ಮೂಲಕ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಸಂಬಳವು ಚೆನ್ನಾಗಿಯೇ ಇದೆ. ಲೋಯರ್ ಡಿವಿಸನ್ ಕ್ಲರ್ಕ್(LDC), ಕಿರಿಯ ಸೆಕ್ರೆಟಿರಿಯಟ್ ಅಸಿಸ್ಟಂಟ್(JSA) ಹುದ್ದೆಗಳಿಗೆ ಆಯ್ಕೆಯಾದವರಿಗೆ ಪೇ ಸ್ಕೇಲ್ 19900ರಿಂದ 63200 ರೂಪಾಯಿ. ಪೋಸ್ಟಲ್ ಅಸಿಸ್ಟಂಟ್(PA) ಮತ್ತು ಸಾರ್ಟಿಂಗ್ ಅಸಿಸ್ಟಂಟ್(SA), ಡೇಟಾ ಎಂಟ್ರಿ ಆಪರೇಟರ್(DEO) ಗ್ರೇಡ್ ಎ ಹುದ್ದೆಗಳಿಗೆ ಆಯ್ಕೆಯಾದವರಿಗೆ ಪೇ ಸ್ಕೇಲ್ 25500 ರೂ.ನಿಂದ 81,100 ರೂ.ವರೆಗೂ ಇದೆ. ಡೇಟಾ ಎಂಟ್ರಿ ಆಪರೇಟರ್(DEO) ಹುದ್ದೆಗಳಿಗೆ ಆಯ್ಕೆಯಾದವರಿಗೆ ಮತ್ತೊಂದು 29,200 ರೂ.ನಿಂದ 92,300 ರೂ.ವರೆಗೆ ಪೇ ಸ್ಕೇಲ್ ಇದೆ.

ಎಸ್ಎಸ್‌ಸಿ ಸಿಎಚ್ಎಸ್ಎಲ್ ಪರೀಕ್ಷೆಗೆ ಆನ್‌ಲೈನ್ ಅಪ್ಲಿಕೇಷನ್ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ssc.nic.in ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು.  ಎಸ್ಎಸ್‌ಸಿ ಸಿಎಚ್ಎಸ್ಎಲ್ 2020ರ ಮೊದಲ ಹಂತದ ಪರೀಕ್ಷೆ 2021ರ ಏಪ್ರಿಲ್ 12ರಿಂದ 27ರವರೆಗೆ ನಡೆಯಲಿದೆ.

ಬೇರೆ ಬೇರೆ ಬೆಡ್ ಮೇಲೆ 'ಖಾಸಗಿ ಕ್ಷಣ' ಕಳೆಯುವ ದಂಪತಿಗೆ 2.22 ಲಕ್ಷ ಸಂಭಾವನೆ !

ಅರ್ಹತೆ ಏನು?
LDC/ JSA, PA/ SA, DEO (except DEOs in C&AG) ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಡೇಟಾ ಎಂಟ್ರಿ ಆಪರೇಟರ್(DEO ಗ್ರೇಡ್ A) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ  ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ತತ್ಸಮಾನ ವಿಷಯವಾಗಿ ಗಣಿತದೊಂದಿಗೆ ವಿಜ್ಞಾನ ಸ್ಟ್ರೀಮ್‌ನಲ್ಲಿ 12 ನೇ ತರಗತಿ ಪಾಸ್ ಆಗಿರಬೇಕು.

ಹೆಚ್ಚಿನ ಮಾಹಿತಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್‌ನ ಜಾಲತಾಣ- ssc.nic.inಗೆ ಭೇಟಿ ನೀಡಿ.

IAS ಸಂದರ್ಶನದಲ್ಲಿ ಕೇಳುವ ಕೆಲ ಪ್ರಶ್ನೆಗಳು ತಲೆ ತಿರುಗಿಸಿಬಿಡುತ್ತವೆ