Asianet Suvarna News Asianet Suvarna News

ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ!

ಯಾವುದೇ ಡಿಗ್ರಿ ಅಥವಾ ಕೋರ್ಸು ಮುಗಿಸಿ ಹೊರ ಬಂದ ವಿದ್ಯಾರ್ಥಿಗಳಿಗೆ ಮತ್ತು ಕೆಲವೊಮ್ಮೆ ಅನುಭವಿಗಳಿಗೂ ರೆಸ್ಯೂಮ್ ಹೇಗೆ ತಯಾರಿಸುವುದು ಹೇಗೆ ಪ್ರಶ್ನೆ ಕಾಡಿಯೇ ಕಾಡಿರುತ್ತದೆ. ಉದ್ಯೋಗದಾತ ಕಂಪನಿಗಳನ್ನು ಹೇಗೆ ಇಂಪ್ರೆಸ್ ಮಾಡಬೇಕು ಎಂಬುದಕ್ಕೆ ಇಲ್ಲಿವೆ ಸಲಹೆಗಳು.
 

tips to write a wonderful resume for impressing companies
Author
Bengaluru, First Published Dec 9, 2020, 4:39 PM IST

ಕೆಲಸ ಹುಡುಕೋದೇ ಒಂದು ಟೆನ್ಷನ್. ಅದರಲ್ಲೂ ಆಗಷ್ಟೇ ವಿದ್ಯಾಭ್ಯಾಸ ಮುಗಿಸಿ ಹೊರಬಂದಿರೋ ಫ್ರೆಶರ್ಸ್ಗೆ ಅಂದವಾಗಿ ಚೆಂದವಾಗಿ ರೆಸ್ಯೂಮ್ ಅಥವಾ ಸ್ವವಿವರ ಪತ್ರವನ್ನ ತಯಾರಿಸೋದೇ ಒಂದು ದೊಡ್ಡ ಸವಾಲು. ಉದ್ಯೋಗದಾತರು ಅಥವಾ ಕಂಪನಿಗಳನ್ನ ಹೇಗೆ ಇಂಪ್ರೆಸ್ ಮಾಡೋದು?  ಆಕರ್ಷಣೀಯವಾಗಿ ರೆಸ್ಯೂಮ್ ಬರೆಯುವುದು ಹೇಗೆ? ಯಾವೆಲ್ಲಾ ಅಂಶಗಳು ನಮ್ಮ ಸಿವಿಯಲ್ಲಿ ಇರಬೇಕು?- ಹೀಗೆ ಹತ್ತಾರು ಪ್ರಶ್ನೆಗಳು ಫ್ರೆಶರ್ಸ್ ಅನ್ನ ಕಾಡೋದು ಸಹಜ. ಅಂಥವರು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು.

ಚಿಕ್ಕದಾಗಿ ಮತ್ತು ಸ್ಪಷ್ಟವಾಗಿ ಇರಲಿ
ರೆಸ್ಯೂಮ್ ಬರೆಯಲು ಪ್ರಾರಂಭಿಸುವ ಮುನ್ನ ನಿಮ್ಮ ರೆಸ್ಯೂಮ್ ಅಥವಾ ಸಿವಿ ಯಾವ ಸ್ವರೂಪದಲ್ಲಿರಬೇಕು ಅನ್ನೋದನ್ನ ಆಯ್ಕೆಮಾಡಿಕೊಳ್ಳಿ. ರೆಸ್ಯೂಮ್‌ನ ಮೇಲ್ಭಾಗದಲ್ಲಿ ನಿಮ್ಮ ಪ್ರಮುಖ ಕೌಶಲ್ಯಗಳು ಹಾಗೂ ಅನುಭವದಂತಹ ಪ್ರಮುಖ ಮಾಹಿತಿ ಇರಲಿ. ರೆಸ್ಯೂಮ್ ನೋಡಿದ ತಕ್ಷಣ ಈ ಮಾಹಿತಿಗಳು ಕಾಣಿಸುವಂತೆ ಸ್ಪಷ್ಟವಾಗಿ ಬರೆಯಿರಿ. ಆನ್‌ಲೈನ್ ಜಾಬ್ ಪೋರ್ಟಲ್‌ಗಳಲ್ಲಿ ಬಹಳಷ್ಟು ನೇಮಕಾತಿದಾರರು ಕೌಶಲ್ಯ ಆಧಾರಿತ ಹುಡುಕಾಟ ನಡೆಸುತ್ತಾರೆ. ಹೀಗಾಗಿ ನಿಮ್ಮ ಸಿವಿಯಲ್ಲಿ ಸಂಬಂಧಿತ ಕೌಶಲ್ಯಗಳನ್ನು ಉಲ್ಲೇಖಿಸಿದ್ದರೆ, ಅದು ನೇಮಕಾತಿಗೆ ಹೆಚ್ಚಿನ ಹೊಂದಾಣಿಕೆ ತೋರಿಸುತ್ತದೆ. ಆಗ ನಿಮ್ಮನ್ನು ಕೆಲಸಕ್ಕೆ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಪ್ರೊಫೈಲ್, ಸಾಧನೆಗಳು, ಅನುಭವ, ವಿಶೇಷ ಕೌಶಲ್ಯಗಳು (ಭಾಷೆಗಳು / ಕಂಪ್ಯೂಟರ್‌ಗಳು), ಶಿಕ್ಷಣ, ತರಬೇತಿ ಮತ್ತು ಆಸಕ್ತಿಗಳನ್ನು (ನೀವು ಬಯಸಿದರೆ) -ಇವು ನೀವು ರೆಸ್ಯೂಮ್‌ನಲ್ಲಿ ಸಾಮಾನ್ಯವಾಗಿ ಸೇರಿಸಬೇಕಾದ ವಿಭಾಗಗಳು. ನಿಮ್ಮ ಸಿವಿ ಎರಡು ಪುಟಕ್ಕಿಂತ ಹೆಚ್ಚಿಗೆ ಉದ್ದ ಇರಬಾರದು.

ಜಾಬ್ ಆಫರ್ ಲೆಟರ್ ಸ್ವೀಕರಿಸುವ ಮುನ್ನ ಈ ಸಂಗತಿಗಳು ತಿಳಿದಿರಲಿ

ಚೆಂದವಾಗಿ ಕಾಣುವಂತೆ ಮಾಡಿರಿ
ನಿಮ್ಮ ಸಿವಿ ಎದ್ದು ಕಾಣಬೇಕಂದ್ರೆ ಸ್ಪಷ್ಟ, ಆಕರ್ಷಕ ಪ್ರೆಸೆಂಟೇಷನ್ ಅತ್ಯಂತ  ಮುಖ್ಯ. ನೇಮಕಾತಿದಾರರು ಒಂದು ದಿನದಲ್ಲಿ ನೂರಾರು ಸಿವಿಗಳನ್ನ ನೋಡುತ್ತಾರೆ. ಅವರು ಜಸ್ಟ್ ಒಮ್ಮೆ ಕಣ್ಣಾಡಿಸಿ ಸಿವಿಗಳನ್ನು  ಮೌಲ್ಯಮಾಪನ ಮಾಡುವಲ್ಲಿ ಪರಿಣತರಾಗಿರುತ್ತಾರೆ. ಸಾಮಾನ್ಯವಾಗಿ ನೇಮಕಾತಿದಾರರು, ಕೇವಲ 2-3 ಸೆಕೆಂಡುಗಳಲ್ಲಿ ರೆಸ್ಯೂಮ್ ಸ್ಕ್ಯಾನ್ ಮಾಡುತ್ತಾರೆ. ಜೊತೆಗೆ ಆ ಸಿವಿಯನ್ನು ಮುಂದೆ ಓದಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ. ಗೊಂದಲಮಯವಾಗಿರುವ ಸಿವಿಯಲ್ಲಿ ನಿಮ್ಮ ಆಲೋಚನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ನಿಮ್ಮನ್ನು ಪರಿಗಣಿಸದಿರಲು ಕಾರಣವಾಗಬಹುದು. ಆದ್ದರಿಂದ, ಪ್ರಮುಖ ಅಂಶಗಳನ್ನು ಗುರುತಿಸಲು ಸುಲಭವಾಗುವಂತೆ ಸಿವಿ ರಚಿಸಿ. ಬುಲೆಟ್ ಪಾಯಿಂಟ್‌ಗಳನ್ನು ಬಳಸಿ ಮತ್ತು ವಾಕ್ಯಗಳನ್ನು ತುಲನಾತ್ಮಕವಾಗಿ ಚಿಕ್ಕದಾಗಿ ಬರೆಯಿರಿ. ಬಾರ್ಡರ್ ಸುತ್ತಲೂ ಮತ್ತು ಪ್ರತಿಯೊಂದು ವಿಭಾಗದ ನಡುವೆ ಸಾಕಷ್ಟು ಸ್ಪೇಸ್ ಕೊಡಿ. 

tips to write a wonderful resume for impressing companies

ತೀರಾ ಇತ್ತೀಚಿನದು ಮೊದಲಿರಲಿ
ನಿಮ್ಮ ಉದ್ಯೋಗ ಅನುಭವವನ್ನು ರಿವರ್ಸ್ ಕಾಲಾನುಕ್ರಮದಲ್ಲಿ ಬರೆಯಿರಿ. ತೀರಾ ಇತ್ತೀಚಿನದು ಫಸ್ಟ್ ಇರಲಿ. ಆನಂತರ ಹಳೆಯ ಸಂಸ್ಥೆಗಳ ಅನುಭವವನ್ನು ಉಲ್ಲೇಖಿಸಿ. ಕೆಲವು ಕಾರಣಗಳಿಗಾಗಿ ಗ್ಯಾಪ್ ತೆಗೆದುಕೊಂಡಿದ್ದರೆ ಅದನ್ನು ನಮೂದಿಸಿ. ನೀವು 10 ವರ್ಷಗಳ ಹಿಂದೆ ಹೊಂದಿದ್ದ ಸ್ಥಾನಗಳು ಅಥವಾ ಇಂಟರ್ನ್‌ಶಿಪ್‌ಗಳ ಬಗ್ಗೆ ವಿವರವಾಗಿ ಹೋಗಬೇಡಿ. ನೀವು ಅರ್ಜಿ ಸಲ್ಲಿಸುತ್ತಿರುವ ಕೆಲಸಕ್ಕೆ ಸಂಬಂಧಪಟ್ಟರೆ ಮಾತ್ರ ರಜಾದಿನ ಅಥವಾ ತಾತ್ಕಾಲಿಕ ಕೆಲಸದ ವಿವರಗಳನ್ನು ಸೇರಿಸಿ.

ಸತ್ಯವಾದ ಮಾಹಿತಿಯನ್ನ ಸೇರಿಸಿ
ಪ್ರತಿ ಸ್ಥಾನದ ಕೆಳಗೆ ನಿಮ್ಮ ಕೆಲಸದ ಕರ್ತವ್ಯಗಳನ್ನು ಪಟ್ಟಿ ಮಾಡಿ. ನಿಮ್ಮ ಸಾಧನೆಗಳು, ಜವಾಬ್ದಾರಿಗಳು ಮತ್ತು ಫಲಿತಾಂಶಗಳನ್ನು ಪಟ್ಟಿ ಮಾಡಿ. ಹಿಂದಿನ ಕೆಲಸದ ಅನುಭವವನ್ನು ಬರೆಯುವಾಗ ಪಾಸ್ಟ್ ಟೆನ್ಸ್ ಬಳಕೆ ಇರಲಿ. ಪ್ರಸ್ತುತ ಕೆಲ್ಸದ ಅನುಭವ ತಿಳಿಸುವಾಗ ಪ್ರೆಸೆಂಟ್ ಟೆನ್ಸ್ ವಾಕ್ಯವಿರಲಿ.

ಹೆಚ್ಚು ಪಟ್ಟಿಗಳನ್ನು ಮಾಡಬೇಡಿ
ನಿಮ್ಮ ಸಿವಿಯಲ್ಲಿ ಪ್ರತ್ಯೇಕ ವಿಭಾಗದಲ್ಲಿ ಆಡಳಿತಾತ್ಮಕ, ಕ್ರಿಯಾತ್ಮಕ ಅಥವಾ ಕಂಪ್ಯೂಟಿಂಗ್ ನಂತಹ ನಿರ್ದಿಷ್ಟ ಕೌಶಲ್ಯಗಳನ್ನು ಸೇರಿಸಿ. ಆದ್ರೆ  ಅವುಗಳನ್ನು ಬಳಸಿದ ಪ್ರತಿಯೊಂದು ಕೆಲಸದ ಬಗ್ಗೆ ಮರುಪಟ್ಟಿ ಮಾಡುವ ಅವಶ್ಯತೆಯಿಲ್ಲ.  

ನಿಮ್ಮ ಬಗ್ಗೆ ಆಕರ್ಷಣೀಯವಾಗಿರಲಿ
ನೀವು ಯಾವ ರೀತಿಯ ವ್ಯಕ್ತಿಯಾಗಿದ್ದೀರಿ ಮತ್ತು ನೀವು ಏನು ಮಾಡಬಹುದು ಎಂಬುದರ ಬಗ್ಗೆ ಉದ್ಯೋಗದಾತನು ಬಯಸುತ್ತಾನೆ ಎಂಬುದನ್ನು ನೆನಪಿರಲಿ. ನೀವು ಸಮಯಪ್ರಜ್ಞೆಯುಳ್ಳವರಾ, ಆತ್ಮಸಾಕ್ಷಿಯವರಾಗಿದ್ದೀರಾ ಅಥವಾ ಪ್ರೇರೇಪಿತರಾಗಿದ್ದೀರಾ? ನೀವು ಸವಾಲಿಗೆ ಸದಾ ಸಿದ್ಧರಿರುತ್ತೀರಾ? ಅನ್ನೋದು ನಿಮ್ಮ ಸಿವಿಯಲ್ಲಿ ಇರಲಿ. 

ನಿಖರವಾಗಿರಿ
ರೆಸ್ಯೂಮ್‌ನಲ್ಲಿ ದೋಷಗಳನ್ನ ಪರಿಶೀಲಿಸಿ. ಕಾಗುಣಿತ ಮತ್ತು ವ್ಯಾಕರಣವನ್ನ ಚೆಕ್ ಮಾಡಿಕೊಳ್ಳಿ. ಒಮ್ಮೆ ಬರೆದ ಮೇಲೆ ಅದನ್ನು ಓದಲು ಬೇರೊಬ್ಬರಿಗೆ ಹೇಳಿ, ಗಟ್ಟಿಯಾಗಿ ಓದಿಸಿ. ನಿಮ್ಮ ಸಿವಿ ತಪ್ಪುಗಳಿಂದ ತುಂಬಿದ್ದರೆ ನೀವು ಉತ್ತಮ ಸಂವಹನಕಾರರೆಂದು ಉದ್ಯೋಗದಾತ ನಂಬುವುದಿಲ್ಲ.

ನೀವು ನೀಡೋ ಉಡುಗೊರೆ ಬದುಕು ಬೆಳಗಲಿ..! ಪ್ರೀತಿ, ಕಾಳಜಿ ಜೊತೆ ಚಂದದ್ದೊಂದು ಗಿಫ್ಟ್    

ಕೆಲಸಕ್ಕೆ ತಕ್ಕಂತೆ ಸಿವಿ ರಚಿಸಿ
ನೀವು ಪ್ರತಿ ಬಾರಿಯೂ ಒಂದೇ ಸಿವಿಯನ್ನು ಬಳಸಬೇಕಾಗಿಲ್ಲ. ಪ್ರತಿಯೊಂದೂ ವಿಭಿನ್ನ ರೀತಿಯ ಕೆಲಸಕ್ಕಾಗಿ ನೀವು ಎರಡು ಅಥವಾ ಮೂರು ರೀತಿಯ ಸಿವಿಗಳನ್ನ ರಚಿಸಬಹುದು. ಸಿವಿ ಒಂದು ಗಾತ್ರಕ್ಕೆ ಸೀಮಿತವಾಗಿರಬಾರದು. ಬಹಳಷ್ಟು ಕಂಪನಿಗಳು ಮೊದಲ ಸುತ್ತಿನ ಸಿವಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಸ್ವಯಂಚಾಲಿತ ಪ್ರಕ್ರಿಯೆಗಳನ್ನು ಬಳಸುತ್ತವೆ. ಇದರಿಂದಾಗಿ ನಿಮ್ಮ ಕೆಲಸದ ವಿವರಣೆಯನ್ನು ಓದುವುದು ಮತ್ತು ಅದರಲ್ಲಿ ನಮೂದಿಸಲಾದ ಕೀವರ್ಡ್‌ಗಳನ್ನು ಆರಿಸುವುದು ಬಹಳ ಮುಖ್ಯವಾಗುತ್ತದೆ.

ರೆಸ್ಯೂಮ್‌ಗೊಂದು ಸ್ವರೂಪವಿರಲಿ
ಸಣ್ಣ ವಿಚಾರವಾದರೂ, ಸಿವಿಯನ್ನ ಹೇಗೆ ಹೆಸರಿಸುತ್ತೀರಿ. ಅದನ್ನು ಯಾವ ಸ್ವರೂಪದಲ್ಲಿ ನಮೂದಿಸುತ್ತೀರಿ ಅನ್ನೋದು ಬಹಳ ಮುಖ್ಯ. ಸಾಮಾನ್ಯವಾಗಿ ಅಭ್ಯರ್ಥಿಗಳು ಫೈಲ್ ಹೆಸರನ್ನು ಬದಲಾಯಿಸುವುದಿಲ್ಲ. ಆದರೆ ಸಿವಿಗಳನ್ನು ಸಿವಿ ಅಥವಾ ಬಯೋ ಡೇಟಾ ಅಥವಾ ನನ್ನ ಸಿವಿ ವರ್ಷನ್ 4 ಎಂದು ಲೇಬಲ್ ಹಾಕಿ ಕಳುಹಿಸುತ್ತಾರೆ. ಇದು ನೇಮಕಾತಿ ಮಾಡುವವರ ಮೇಲೆ ಕಳಪೆ ಪ್ರಭಾವ ಬೀರುತ್ತದೆ. ರೆಸ್ಯೂಮ್‌ಗಳನ್ನು ಪಿಡಿಎಫ್‌ ಫಾರ್ಮೆಟ್‌ನಲ್ಲಿ ರಚಿಸಬೇಡಿ. ಜನಪ್ರಿಯವಾಗಿರುವ ಎಂಎಸ್-ವರ್ಡ್‌ನಲ್ಲೇ ಸಿವಿ ರಚಿಸಿ. ಯಾಕಂದ್ರೆ ಎಲ್ಲರ ಲ್ಯಾಪ್‌ಟಾಪ್ ನವೀಕರಣ ಆಗಿರುವುದಿಲ್ಲ.  ಹೆಚ್‌ಆರ್‌ಗೆ ನಿಮ್ಮ ಸಿ.ವಿ ತೆರೆಯಲು ಸಾಧ್ಯವಾಗದಿದ್ದರೆ, ಅವರು ಅದನ್ನು ನಿಜವಾಗಿಯೂ ಮೌಲ್ಯಮಾಪನ ಮಾಡಲು ಆಗುವುದಿಲ್ಲ. ರೆಸ್ಯೂಮ್‌ನಲ್ಲಿ ನಿಮ್ಮ ವಿವರಗಳು ಅತ್ಯಂತ ಮುಖ್ಯ ಅನ್ನೋದು ನೆನಪಿರಲಿ.

ರೋಡ್ಸ್ ಸ್ಕಾಲರ್‌ಶಿಫ್ ಗೆದ್ದ ಮೊದಲ ವಿದ್ಯಾರ್ಥಿಗೆ ಶಾಲಾ ಶಿಕ್ಷಕಿಯೇ ಸ್ಫೂರ್ತಿ

Follow Us:
Download App:
  • android
  • ios