ಶಿಫ್ಟ್‌ ಮುಗಿದ ಮೇಲೆ ಕೆಲಸ ಮಾಡೋ ಹಾಗೇ ಇಲ್ಲ: ನಿಮ್ಮ ಕೆಲಸದ ಸಮಯದ ಬಳಿಕ ಮನೆಗೆ ಹೋಗಲು ಎಚ್ಚರಿಸುವ ಕಂಪ್ಯೂಟರ್‌..!

ಎಚ್ಚರಿಕೆ!!! ನಿಮ್ಮ ಶಿಫ್ಟ್ ಸಮಯ ಮುಗಿದಿದೆ. ಕಚೇರಿ ಸಿಸ್ಟಂ 10 ನಿಮಿಷಗಳಲ್ಲಿ ಸ್ಥಗಿತಗೊಳ್ಳುತ್ತದೆ. ದಯವಿಟ್ಟು ಮನೆಗೆ ಹೋಗಿ!’’ ಎಂದು ಈ ಪೋಸ್ಟ್‌ ಹೇಳುತ್ತದೆ.

madhya pradesh based it company  pops warning to remind employees to head home after working hours ash

ಹಲವು ಉದ್ಯೋಗಿಗಳಿಗೆ ದಿನಾ ಕೆಲಸ ಮಾಡೋದೇ ಬೇಸರ ತರಿಸುತ್ತೆ. ಯಾಕಂದ್ರೆ, ಹಲವು ಕಂಪನಿಗಳಲ್ಲಿ ನಿಮ್ಮ ಕೆಲಸದ ಸಮಯ ಮುಗಿದ ಮೇಲೂ ಹೆಚ್ಚುವರಿಯಾಗಿ 1 - 2 ಗಂಟೆ ಟೈಮ್‌ ಕೆಲಸ ಮಾಡಿ ಅಂತ ಬಾಸ್‌ ಹೇಳಿರ್ತಾರೆ. ಅಥವಾ ಕೆಲಸದ ಸಮಯ ಮುಗಿದ ಕೂಡಲೇ ಮನೆಗೆ ಹೊರಟ್ರೆ ನಿಮಗ್ಯಾಕ್ರೀ ಸಂಬಳ ಜಾಸ್ತಿ ಮಾಡ್ಬೇಕು ಹಾಗೆ ಹೀಗೆ ಅಂತಾರೆ. ಕೊರೊನಾ ಲಾಕ್‌ಡೌನ್‌ ಬಳಿಕ ವರ್ಕ್‌ ಫ್ರಮ್ ಹೋಂ ಶುರುವಾದ ಮೇಲಂತೂ ಬಹುತೇಕ ಐಟ ಕಂಪನಿಗಳಲ್ಲೂ ಹೆಚ್ಚುವರಿ ಅವಧಿಯ ಕೆಲಸ ಸಾಮಾನ್ಯವಾಗ್ಬಿಟ್ಟಿದೆ. ಆದ್ರೆ, ಇದಕ್ಕೆ ತಿಲಾಂಜಲಿ ಹಾಕಲು ಐಟಿ ಕಂಪನಿಯೊಂದು ಮುಂದಾಗಿದೆ ನೋಡಿ.. 

ಹೌದು, ಅನೇಕರಿಗೆ, ವೃತ್ತಿಪರ (Professional) ಮತ್ತು ವೈಯಕ್ತಿಕ ಜೀವನದ (Personal Life) ನಡುವಿನ ಸಮತೋಲನವು (Balance) ಸವಾಲಾಗಿದೆ. ಆದ್ದರಿಂದ, ಅಂತಹ ಜನರು ಸಮಯಕ್ಕೆ ಸರಿಯಾಗಿ ಲಾಗ್ ಆಫ್ ಆಗಲು ಸಹಾಯ ಮಾಡಲು, ಮಧ್ಯಪ್ರದೇಶ ಮೂಲದ ಐಟಿ ಕಂಪನಿಯು ಒಂದು ಕ್ರಮ ಜಾರಿಗೆ ತಂದಿದೆ. ಅದೇನಪ್ಪಾ ಅಂತಹ ಕ್ರಮ ಅಂದರೆ, ಈ ಕಂಪನಿಯು ವಿಶೇಷ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿದ್ದು, ಅದು ನಮ್ಮ ಕೆಲಸದ ಶಿಫ್ಟ್ ಮುಗಿದ ನಂತರ ಸಿಸ್ಟಮ್‌ಗಳನ್ನು ಫ್ರೀಜ್ ಮಾಡುತ್ತದೆ ಮತ್ತು ಮನೆಗೆ ಹೋಗಲು ಉದ್ಯೋಗಿಗಳಿಗೆ ನೆನಪಿಸುತ್ತದೆ. 

ಇದನ್ನು ಓದಿ: Udupi: ವಿದೇಶದಲ್ಲಿ ಉದ್ಯೋಗ ಪಡೆಯೋ ಕನಸಿದ್ಯಾ..? ಹಾಗಿದ್ರೆ, ಇಲ್ಲಿದೆ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ

ಇದನ್ನ ನಾವ್‌ ಹೇಳ್ತಿಲ್ಲ, ಸಾಫ್ಟ್‌ಗ್ರಿಡ್ ಕಂಪ್ಯೂಟರ್‌ನಲ್ಲಿ ಮಾನವ ಸಂಪನ್ಮೂಲ ತಜ್ಞರಾಗಿ ಕೆಲಸ ಮಾಡುತ್ತಿರುವ ತಾನ್ವಿ ಖಂಡೇಲ್ವಾಲ್ ಅವರು ಲಿಂಕ್ಡ್‌ಇನ್ ಪೋಸ್ಟ್ ಮೂಲಕ ಈ ಉತ್ತಮ ಕೆಲಸದ ಸಂಸ್ಕೃತಿಯನ್ನು ಹಂಚಿಕೊಂಡಿದ್ದಾರೆ. “ಇದು ಪ್ರಚಾರದ ಮತ್ತು ಕಾಲ್ಪನಿಕ ಪೋಸ್ಟ್ ಅಲ್ಲ..! ಇದು ನಮ್ಮ ಆಫೀಸಿನ ವಾಸ್ತವ..!! ಸಾಫ್ಟ್ ಗ್ರಿಡ್ ಕಂಪ್ಯೂಟರ್ಸ್. ನನ್ನ ಉದ್ಯೋಗದಾತರು #WorkLifeBalance ಅನ್ನು ಬೆಂಬಲಿಸುತ್ತಾರೆ. ಅವರು ಈ ವಿಶೇಷ ಜ್ಞಾಪನೆಯನ್ನು ಹಾಕುತ್ತಾರೆ, ಇದು ಕೆಲಸದ ಸಮಯದ ನಂತರ ನನ್ನ ಡೆಸ್ಕ್‌ಟಾಪ್ ಅನ್ನು ಲಾಕ್ ಮಾಡುತ್ತದೆ ಮತ್ತು ಎಚ್ಚರಿಕೆಯನ್ನು ನೀಡುತ್ತದೆ’’ ಎಂದು ಪೋಸ್ಟ್‌ ಮಾಡಿದ್ದಾರೆ. 

ಆಹಾ.. ಎಷ್ಟು ಚೆನ್ನಾಗಿದೆ ಅಲ್ವಾ..? ಇದಿಷ್ಟೇ ಅಲ್ಲ, ಉದ್ಯೋಗಿಗಳು ಕೆಲಸದ ಸಮಯದ ಹೊರಗೆ ಫೋನ್‌ ಕಾಲ್‌ ಮತ್ತು ಇಮೇಲ್‌ಗಳಿಗೆ ಸಹ ಉತ್ತರಿಸಬೇಕಾಗಿಲ್ಲವಂತೆ. ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿರುವ ಅವರು, “ವ್ಯವಹಾರ ಸಮಯದ ಹೊರಗೆ ಇನ್ನು ಮುಂದೆ ಕರೆಗಳು ಮತ್ತು ಮೇಲ್‌ಗಳಿಲ್ಲ. ಇದು ಅದ್ಭುತ ಅಲ್ಲವೇ? ಆದ್ದರಿಂದ, ನೀವು ಈ ರೀತಿಯ ಸಂಸ್ಕೃತಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ನಿಮಗೆ ಯಾವುದೇ #MondayMotivation ಅಥವಾ #FunFriday ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ..!’’ ಎಂದೂ ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬೋಳುತಲೆ ಎಂದು ಕೆಲಸ ತೊರೆಯುವಂತೆ ಒತ್ತಡ: ಸಂಸ್ಥೆಯಿಂದ 71 ಲಕ್ಷ ಪರಿಹಾರ ಗೆದ್ದ ಉದ್ಯೋಗಿ

ಕಂಪನಿಯು ಹೊಂದಿಕೊಳ್ಳುವ ಬದಲಾವಣೆಗಳನ್ನು ನಂಬುತ್ತದೆ ಮತ್ತು ಅದರ ಉದ್ಯೋಗಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತದೆ ಎಂದೂ ತಾನ್ವಿ ಖಂಡೇಲ್ವಾಲ್‌ ಶೇರ್‌ ಮಾಡಿದ್ದಾರೆ. “ಮತ್ತು ಇದು ನಮ್ಮ ಕಚೇರಿಯ ವಾಸ್ತವ!! ಹೌದು ಈ ಯುಗದಲ್ಲಿ ನಾವು ಹೊಂದಿಕೊಳ್ಳುವ ಕೆಲಸದ ಸಮಯ ಮತ್ತು ಸಂತೋಷದ ವಾತಾವರಣವನ್ನು ನಂಬುತ್ತೇವೆ. ನಮ್ಮೆಲ್ಲರಿಗೂ ಶುಭಾಶಯಗಳು!! ನೀವು ಸಹ ನಮ್ಮೊಂದಿಗೆ ಸೇರಿಕೊಳ್ಳಬಹುದು’’ ಎಂದು ಅವರು ನಗುತ್ತಿರುವ ಎಮೋಟಿಕಾನ್‌ನೊಂದಿಗೆ ಇತರೆ ಕಂಪನಿಗಳ ಉದ್ಯೋಗಿಗಳಿಗೆ ಆಹ್ವಾನವನ್ನೂ ನೀಡಿದ್ದಾರೆ. 

ಜೊತೆಗೆ, ಅವರು ತನ್ನ ಡೆಸ್ಕ್‌ಟಾಪ್ ಮುಂದೆ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಪರದೆಯ ಮೇಲೆ ಒಂದು ಎಚ್ಚರಿಕೆ, “ಎಚ್ಚರಿಕೆ!!! ನಿಮ್ಮ ಶಿಫ್ಟ್ ಸಮಯ ಮುಗಿದಿದೆ. ಕಚೇರಿ ಸಿಸ್ಟಂ 10 ನಿಮಿಷಗಳಲ್ಲಿ ಸ್ಥಗಿತಗೊಳ್ಳುತ್ತದೆ. ದಯವಿಟ್ಟು ಮನೆಗೆ ಹೋಗಿ!’’ ಎಂದು ಈ ಪೋಸ್ಟ್‌ ಹೇಳುತ್ತದೆ.

ಇದನ್ನೂ ಓದಿ : ಝೂಮ್‌ ಕಂಪನಿಯಲ್ಲಿ 1,300 ಜನರ ವಜಾ : ಶೇ. 98 ರಷ್ಟು ವೇತನ ಕಡಿತಗೊಳಿಸಿಕೊಂಡ ಸಿಇಒ

ಕೆಳಗಿನ ಅವರ ಪೋಸ್ಟ್ ಅನ್ನು ನೋಡಿ:

ಲಿಂಕ್ಡ್‌ಇನ್‌ನಲ್ಲಿ 6 ದಿನಗಳ ಹಿಂದೆ ಪೋಸ್ಟ್‌ ಮಾಡಿದ್ದು, ಈ ಪೋಸ್ಟ್ 3.3 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಮತ್ತು 9,270 ಕ್ಕೂ ಹೆಚ್ಚು ರೀಪೋಸ್ಟ್‌ಗಳನ್ನು ಗಳಿಸಿದೆ. ಈ ಪೋಸ್ಟ್‌ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ ಮಾಡಿದ್ದಾರೆ.
.
"ನನ್ನ ಕೆಲಸ ನನ್ನ ಸಂತೋಷ" ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು “ವಾವ್. ನಂಬಲಸಾಧ್ಯ.” ಎಂದು ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ, "ನಾನು ನಿಮ್ಮ ಕೆಲಸದ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ" ಎಂದು ಮೂರನೆಯವರು ಕಾಮೆಂಟ್‌ ಮಾಡಿದ್ದಾರೆ.

ಇದನ್ನು ಓದಿ: Layoff: ಕಂಪನಿಯ ಶೇ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಶೇರ್‌ಚಾಟ್‌..!

Latest Videos
Follow Us:
Download App:
  • android
  • ios