Asianet Suvarna News Asianet Suvarna News

ಝೂಮ್‌ ಕಂಪನಿಯಲ್ಲಿ 1,300 ಜನರ ವಜಾ : ಶೇ. 98 ರಷ್ಟು ವೇತನ ಕಡಿತಗೊಳಿಸಿಕೊಂಡ ಸಿಇಒ

ಝೂಮ್‌ ಕಂಪನಿಯ ಪ್ರತಿ ವಿಭಾಗವು ವಜಾಗೊಳಿಸುವಿಕೆಯಿಂದ ಪ್ರಭಾವಿತವಾಗಿರುತ್ತದೆ. ತಾನು ಸ್ವತಃ 98 ಪ್ರತಿಶತದಷ್ಟು ವೇತನ ಕಡಿತವನ್ನು ತೆಗೆದುಕೊಳ್ಳುತ್ತೇನೆ ಎಂದು ಎರಿಕ್‌ ಯುವಾನ್‌ ಬಹಿರಂಗಪಡಿಸಿದ್ದಾರೆ.

zoom announces 1300 layoffs ceo to take 98 percent pay cut ash
Author
First Published Feb 8, 2023, 1:25 PM IST

ವಾಷಿಂಗ್ಟನ್‌ (ಫೆಬ್ರವರಿ 8, 2023): ಜಾಗತಿಕ ದೈತ್ಯ ಟೆಕ್‌ ಕಂಪನಿಗಳ ಹಾಗೂ ಹಲವು ಪ್ರಮುಖ ಸಂಸ್ಥೆಗಳ ಉದ್ಯೋಗ ಕಡಿತ ಪರ್ವ ಮುಂದುವರೆದಿದೆ. ಸಂವಹನ ತಂತ್ರಜ್ಞಾನ ಸಂಸ್ಥೆ ಝೂಮ್ ಸುಮಾರು 1,300 ಉದ್ಯೋಗಿಗಳನ್ನು ಅಥವಾ ಅದರ ಶೇಕಡಾ 15 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಎರಿಕ್ ಯುವಾನ್ ಮಂಗಳವಾರ ಕಂಪನಿಯ ಅಧಿಕೃತ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ. ವಜಾಗೊಂಡಿರುವ ಉದ್ಯೋಗಿಗಳನ್ನು "ಕಠಿಣ ಕೆಲಸ ಮಾಡುವ, ಪ್ರತಿಭಾವಂತ ಸಹೋದ್ಯೋಗಿಗಳು" ಎಂದು ಸಂಸ್ಥೆಯ ಸಿಇಒ ಎರಿಕ್ ಯುವಾನ್ ಹೇಳಿದ್ದಾರೆ.

ಅಲ್ಲದೆ, ಈ ಉದ್ಯೋಗಿಗಳು (Employees) ಅಮೆರಿಕದಲ್ಲಿದ್ದರೆ (United States of America) ಅವರು ಇಮೇಲ್ (E - Mail) ಪಡೆಯುತ್ತಾರೆ ಮತ್ತು ಸ್ಥಳೀಯ ಅವಶ್ಯಕತೆಗಳನ್ನು ಅನುಸರಿಸಿ ಅಮೆರಿಕದಲ್ಲಿಲ್ಲದ ಉಳಿದ ಎಲ್ಲ ಸಿಬ್ಬಂದಿಗೆ (Non US Employees) ತಿಳಿಸಲಾಗುವುದು ಎಂದೂ ಹೇಳಿದರು.  "ನೀವು ಲೇಆಫ್‌ನಿಂದ (LayOff) ಪ್ರಭಾವಕ್ಕೊಳಗಾದ ಅಮೆರಿಕ ಆಧಾರಿತ ಉದ್ಯೋಗಿಯಾಗಿದ್ದರೆ, ಮುಂದಿನ 30 ನಿಮಿಷಗಳಲ್ಲಿ ನಿಮ್ಮ ಝೂಮ್ (Zoom) ಮತ್ತು ವೈಯಕ್ತಿಕ ಇನ್‌ಬಾಕ್ಸ್‌ಗಳಿಗೆ ನೀವು ಇಮೇಲ್ ಅನ್ನು ಸ್ವೀಕರಿಸುತ್ತೀರಿ. ಈ ಮೇಲ್‌ [ಇಂಪ್ಯಾಕ್ಟೆಡ್‌] ಝೂಮ್‌ನಿಂದ ನಿರ್ಗಮಿಸುತ್ತಿದ್ದೀರಾ: ನೀವು ತಿಳಿದುಕೊಳ್ಳಬೇಕಾದದ್ದು ಎಂದು ಹೇಳುತ್ತದೆ. ಅಲ್ಲದೆ, ಅಮೆರಿಕದಲ್ಲಿಲ್ಲದ ಉದ್ಯೋಗಿಗಳಿಗೆ ಸ್ಥಳೀಯ ಅವಶ್ಯಕತೆಗಳನ್ನು ಅನುಸರಿಸಿ ಸೂಚಿಸಲಾಗುತ್ತದೆ ಎಂದೂ ಎರಿಕ್‌ ಯುವಾನ್ ತಿಳಿಸಿದ್ದಾರೆ. 

ಇದನ್ನು ಓದಿ: Layoff: ಕಂಪನಿಯ ಶೇ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಶೇರ್‌ಚಾಟ್‌..!

ಝೂಮ್‌ ವಿಡಿಯೋ ಕಮ್ಯುನಿಕೇಷನ್ಸ್ ಮಂಗಳವಾರ ತನ್ನ 15% ಉದ್ಯೋಗಿಗಳನ್ನು ಅಥವಾ ಸುಮಾರು 1,300 ಉದ್ಯೋಗಗಳನ್ನು ಆರ್ಥಿಕ ವಾತಾವರಣದ ಹವಾಮಾನ ಸರಿ ಮಾಡಲು ಕಡಿತಗೊಳಿಸುತ್ತಿದೆ ಎಂದು ಹೇಳಿದೆ. ಅಲ್ಲದೆ, ಝೂಮ್‌ ಸಿಇಒ ಎರಿಕ್ ಯುವಾನ್ (Eric Yuan) ಅವರು ವಜಾಗೊಳಿಸುವಿಕೆಗೆ ಕಾರಣವಾದ ತಪ್ಪುಗಳಿಗೆ ನಾನು ಜವಾಬ್ದಾರನಾಗಿರುತ್ತೇನೆ ಮತ್ತು ಮುಂಬರುವ ಆರ್ಥಿಕ ವರ್ಷಕ್ಕೆ (Financial Year) ತಮ್ಮ ಸಂಬಳವನ್ನು 98% ರಷ್ಟು ಕಡಿತಗೊಳಿಸುವುದಾಗಿಯೂ ಕಂಪನಿಯ ಸಿಬ್ಬಂದಿಗೆ ಕಳಿಸಿರುವ ಇಮೇಲ್‌ನಲ್ಲಿ ಹೇಳಿದ್ದಾರೆ. 
ಜೊತೆಗೆ ತಮ್ಮ ಕಾರ್ಪೊರೇಟ್ ಬೋನಸ್ ಅನ್ನು ತೆಗೆದುಕೊಳ್ಳುವುದಿಲ್ಲ ಎಂದೂ ಅಅವರು ಹೇಳಿದರು.

ಸಾಂಕ್ರಾಮಿಕ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಝೂಮ್‌ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ ಮತ್ತು ಬೆಳೆಯುತ್ತಿರುವ ಬೇಡಿಕೆಯನ್ನು ಬೆಂಬಲಿಸಲು ವೇಗವಾಗಿ ಹೆಚ್ಚು ಜನರನ್ನು ನೇಮಿಸಿಕೊಂಡಿದೆ ಎಂದೂ ಎರಿಕ್‌ ಯುವಾನ್ ಹೇಳಿದರು. ನಾವು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ ಮತ್ತು ನಮ್ಮ ಗ್ರಾಹಕರು ಹಾಗೂ ಬಳಕೆದಾರರಿಗೆ ಝೂಮ್ ಅನ್ನು ಉತ್ತಮಗೊಳಿಸಿದ್ದೇವೆ. ಆದರೆ ನಾವೂ ತಪ್ಪು ಮಾಡಿದ್ದೇವೆ. ನಮ್ಮ ತಂಡಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲು ಅಥವಾ ನಾವು ಸುಸ್ಥಿರವಾಗಿ ಹೆಚ್ಚಿನ ಆದ್ಯತೆಗಳ ಕಡೆಗೆ ಬೆಳೆಯುತ್ತಿದ್ದೇವೆಯೇ ಎಂದು ನಿರ್ಣಯಿಸಲು ನಾವು ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿಲ್ಲ ಎಂದೂ ಅವರು ತಮ್ಮ ಫೆಬ್ರವರಿ 7 ರ ಇಮೇಲ್‌ನಲ್ಲಿ ಉದ್ಯೋಗಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಗುಡ್‌ ನ್ಯೂಸ್‌: ಐಟಿ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪರ್ಸೆಂಟ್‌ ವೇತನ ಹೆಚ್ಚಳ..!

ಝೂಮ್‌ ಕಂಪನಿಯ ಪ್ರತಿ ವಿಭಾಗವು ವಜಾಗೊಳಿಸುವಿಕೆಯಿಂದ ಪ್ರಭಾವಿತವಾಗಿರುತ್ತದೆ. ತಾನು ಸ್ವತಃ 98 ಪ್ರತಿಶತದಷ್ಟು ವೇತನ ಕಡಿತವನ್ನು ತೆಗೆದುಕೊಳ್ಳುತ್ತೇನೆ ಎಂದು ಎರಿಕ್‌ ಯುವಾನ್‌ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಕಾರ್ಯನಿರ್ವಾಹಕ ನಾಯಕತ್ವದ ತಂಡದ ಸದಸ್ಯರು ಸಹ ತಮ್ಮ ಮೂಲ ವೇತನವನ್ನು 20 ಪ್ರತಿಶತದಷ್ಟು ಕಡಿಮೆ ಮಾಡಿಕೊಳ್ಳಲಿದ್ದಾರೆ ಮತ್ತು 2023 ಕ್ಕೆ ಅವರ ಕಾರ್ಪೊರೇಟ್ ಬೋನಸ್ ಅನ್ನು ಸಹ ಕಳೆದುಕೊಳ್ಳಲಿದ್ದಾರೆ ಎಂದೂ ಅವರು ಉದ್ಯೋಗಿಗಳಿಗೆ ತಿಳಿಸಿದರು.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಕಳೆದ ವರ್ಷ ಎರಿಕ್‌ ಯುವಾನ್‌ನ ಮೂಲ ವೇತನವು 301,731 ಡಾಲರ್‌ ಆಗಿದೆ, ಆದರೆ ಅವರ ಒಟ್ಟು ಪರಿಹಾರ ಹಣವು 1.1 ಮಿಲಿಯನ್ ಡಾಲರ್‌ ಆಗಿದೆ. ಇನ್ನು, 98 ಪ್ರತಿಶತ ವೇತನ ಕಡಿತದೊಂದಿಗೆ, 2023 ರ ಜೂಮ್ ಸಿಇಒನ ನೂತನ ಸಂಬಳವು 6,034.62 ಡಾಲರ್‌ ಆಗಿರುತ್ತದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಮೈಕ್ರೋಸಾಫ್ಟ್‌ನಿಂದ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ವಜಾ: ಟೆಕ್‌ ಸಂಸ್ಥೆಗಳಿಂದ ದಿನಕ್ಕೆ 1,600 ಸಿಬ್ಬಂದಿಗೆ ಗೇಟ್‌ಪಾಸ್..!

Follow Us:
Download App:
  • android
  • ios