ಬೆಂಗಳೂರು, (ಜ.28): ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು 8 ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.

1 ಪ್ರೊಗ್ರಾಮರ್, 1. ಸೀನಿಯರ್ ಪ್ರೊಗ್ರಾಮರ್, 2. ವೆಬ್ ಡಿಸೈನ್ ಕಮ್ ಡೆವಲಪರ್, 03. ನೆಟ್‌ವರ್ಕ್ ಇಂಜಿನಿಯರ್, 1. ಸೆಕ್ಯುರಿಟಿ ಆಡಿಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. 

ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಫೆಬ್ರವರಿ 7,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. 

ವಿದ್ಯಾರ್ಹತೆ: ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಎಂಸಿಎ, ಎಂ,ಟೆಕ್, ಎಂ.ಎಸ್ಸಿ, ಬಿಸಿಎ, ಬಿಎಸ್ಸಿ, ಬಿ.ಇ ಅಥವಾ ಬಿ.ಟೆಕ್ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.

ವಿವಿಧ ಹುದ್ದೆ ನೇಮಕಾತಿಗೆ ಕೇಂದ್ರ ಲೋಕ ಸೇವಾ ಆಯೋಗ ಅರ್ಜಿ ಆಹ್ವಾನ

ವೇತನ ಶ್ರೇಣಿ: ಪ್ರೊಗ್ರಾಮರ್, ವೆಬ್ ಡಿಸೈನ್ ಕಮ್ ಡೆವಲಪರ್, ನೆಟ್‌ವರ್ಕ್ ಇಂಜಿನಿಯರ್ ಮತ್ತು ಸೆಕ್ಯುರಿಟಿ ಆಡಿಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000 ರಿಂದ 50,000 ರೂ. ತಿಂಗಳಿಗೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. 

ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಕೆ ವಿಧಾನ: ಆಸಕ್ತವುಳ್ಳ ಅಭ್ಯರ್ಥಿಗಳು ತಮ್ಮ ಸ್ವ-ವಿವರವನ್ನು (Resume) ಖುದ್ಪೋದಾಗಿ/ಪೋಸ್ಟ್/ಇ-ಮೇಲ್ keauthority-ka@nic.in ಮುಖಾಂತರ ದಿನಾಂಕ 7/2/2020ರೊಳಗೆ ಸಲ್ಲಿಸಬಹುದಾಗಿದೆ. 

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ