Asianet Suvarna News Asianet Suvarna News

ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ವಿವಿಧ ಕಾರಣಗಳಿಂದ ಖಾಲಿ ಆಗಿರುವ ಗ್ರಾಮ ಲೆಕ್ಕಿಗರ ಹುದ್ದೆಗಳ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

Chitradurga Recruitment 2020 Apply For 59 Village Accountant Jobs
Author
Bengaluru, First Published Jan 26, 2020, 4:15 PM IST
  • Facebook
  • Twitter
  • Whatsapp

ಬೆಂಗಳೂರು, (ಜ.26): ಚಿತ್ರದುರ್ಗ ಜಿಲ್ಲಾ ಕಂದಾಯ ವಿಭಾಗದಲ್ಲಿ ಖಾಲಿ ಇರುವ 59 ಗ್ರಾಮ ಲೆಕ್ಕಿಗರ (VA) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 21/2/2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದ್ದು, ಯಾವುದೇ ಪರೀಕ್ಷೆ ಇಲ್ಲದೇ ನೇರ ನೇಮಕಾತಿ ನಡೆಯಲಿದೆ.

ಗ್ರಾಮಲೆಕ್ಕಾಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೇ ನೇರ ನೇಮಕಾತಿ

ವಿದ್ಯಾರ್ಹತೆ: ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ  ಅಥವ ಸಿಬಿಎಸ್‌ಇ/ಐಸಿಎಸ್‌ಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ: 21/2/2020ಕ್ಕೆ ಅನ್ವಯವಾಗುಂತೆ ಕನಿಷ್ಠ 18 ವರ್ಷ ಪೂರೈಸಿರತಕ್ಕದ್ದು. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, 2A/2B/3A/3B ಅಭ್ಯರ್ಥಿಗಳಿಗೆ 38 ವರ್ಷ ಹಾಗೂ SC/ST ಮತ್ತು ಪ್ರವರ್ಗ1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ವೇತನ ಶ್ರೇಣಿ:  21,400 ರಿಂದ 42,000 ರೂ. ತಿಂಗಳಿಗೆ 

ಅರ್ಜಿ ಶುಲ್ಕ: ಸಾಮಾನ್ಯ/ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 200 ರೂ. SC/ST ಹಾಗೂ ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಯಲ್ಲಿ ಆನ್‌ಲೈನ್‌ ಮೂಲಕ ಜಮಾ ಮಾಡತಕ್ಕದ್ದು.

ಆಯ್ಕೆ ಪ್ರಕ್ರಿಯೆ: ದ್ವಿತೀಯ ಪಿಯುಸಿ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

Follow Us:
Download App:
  • android
  • ios