ಜಾರ್ಖಂಡ್‌ನ  ಇರ್ಫಾನ್ ಭಾಟಿ ಅವರು ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ ಲಂಡನ್ ಕಚೇರಿಯಿಂದ 1.2 ಕೋಟಿ ರೂಪಾಯಿ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಜಾರ್ಖಂಡ್‌ನ ಬೊಕಾರೊ ಮೂಲದ ಇರ್ಫಾನ್ ಭಾಟಿ ಅವರು ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ ಲಂಡನ್ ಕಚೇರಿಯಿಂದ 1.2 ಕೋಟಿ ರೂಪಾಯಿ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇರ್ಫಾನ್ ಭಾಟಿ ಅವರು ಟೆಕ್‌ ದೈತ್ಯ ಗೂಗಲ್ ನ ಲಂಡನ್‌ ಕಛೇರಿಯಲ್ಲಿರುವ ಸಂಶೋಧನಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಗಸ್ಟ್ 29 ರಿಂದ ಕಂಪನಿಯನ್ನು ಸೇರುವ ಸಾಧ್ಯತೆಯಿದೆ. 

ಇರ್ಫಾನ್ ಭಾಟಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಗೂಗಲ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಇರ್ಫಾನ್ ಭಾಟಿ 2014 ರಲ್ಲಿ ಗೋಮಿಯಾದ ಪಿಟ್ಸ್ ಮಾಡರ್ನ್ ಪಬ್ಲಿಕ್ ಸ್ಕೂಲ್‌ನಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು 2019 ರಲ್ಲಿ ಪಶ್ಚಿಮ ಬಂಗಾಳದ ಹಲ್ದಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಮಾಡಿದರು. ಇದರ ಜೊತೆಗೆ ಬೈಜುಸ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಅಮೆರಿಕ ಕಂಪೆನಿಯಲ್ಲಿ 1 ಕೋಟಿಗೂ ಅಧಿಕ ಉದ್ಯೋಗ ಆಫರ್‌ ಪಡೆದ ವೆಲ್ಲೂರು ವಿಐಟಿ ವಿದ್ಯಾರ್ಥಿ!

ಇರ್ಫಾನ್ ಭಾಟಿ ಅವರು ಬಾಲ್ಯದಿಂದಲೂ ಕಂಪ್ಯೂಟರ್ ಬಗ್ಗೆ ಆಸಕ್ತಿ ಹೊಂದಿದ್ದರು. 10ನೇ ತರಗತಿಯಲ್ಲಿದ್ದಾಗ ಸ್ವಂತವಾಗಿ ಮೊಬೈಲ್ ಅಪ್ಲಿಕೇಶನ್ ನಿರ್ಮಿಸಿದ್ದರು. ಬಳಿಕ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಲು ನಿರ್ಧರಿಸಿದರು ಮತ್ತು ತಮ್ಮ ಗುರಿಯನ್ನು ಸಾಧಿಸಲು ಶ್ರಮಿಸಲು ಪ್ರಾರಂಭಿಸಿದರು. ಇಂದಿನ ಯುಗದಲ್ಲಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಸಾಕಷ್ಟು ಸಾಮರ್ಥ್ಯವಿದೆ ಎಂದು ಇರ್ಫಾನ್ ಯಶಸ್ವಿ ಎಂಜಿನಿಯರ್ ಆಗಲು ಬಯಸುವ ಯುವಕರಿಗೆ ಸಲಹೆ ನೀಡಿದ್ದಾರೆ. ಉದಾಹರಣೆಗೆ, ಯುವಕರು ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್ ಮತ್ತು ವೆಬ್‌ಸೈಟ್ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ವೃತ್ತಿಜೀವನವನ್ನು ಮಾಡಬಹುದು ಎಂದಿದ್ದಾರೆ.

ಇರ್ಫಾನ್ ಭಾಟಿ ಸರಳ ಕುಟುಂಬದಿಂದ ಬಂದವರು. ಅವರ ತಂದೆ ಅಬ್ದುಲ್ ಖಾದಿರ್ ಸ್ಕ್ರ್ಯಾಪ್ ಸಾರಿಗೆಗೆ ಸಂಬಂಧಿಸಿದ ವ್ಯಾಪಾರ ಮಾಡುತ್ತಾರೆ. ಇರ್ಫಾನ್ ತನ್ನ ಯಶಸ್ಸಿನ ಶ್ರೇಯಸ್ಸನ್ನು ತಂದೆ ಅಬ್ದುಲ್ ಖಾದಿರ್ ಮತ್ತು ದಿವಂಗತ ತಾಯಿ ರುಖ್ಸಾನಾ ಖಾತೂನ್ ಅವರಿಗೆ ನೀಡಿದ್ದಾರೆ. ತಂದೆ ತಾಯಿ ಪ್ರತೀ ಹಂತದಲ್ಲೂ ತನ್ನನ್ನು ಪ್ರೋತ್ಸಾಹಿಸಿದ ಬಗ್ಗೆ ನೆನಪಿಸಿಕೊಂಡಿದ್ದಾರೆ.

ಪ್ರತಿಷ್ಠಿತ ಕಂಪೆನಿಯಲ್ಲಿ ದಾಖಲೆಯ 60 ಲಕ್ಷ ಪ್ಯಾಕೇಜ್‌ ಉದ್ಯೋಗ ಗಿಟ್ಟಿಸಿಕೊಂಡ

ಮತ್ತೊಂದೆಡೆ, ಇರ್ಫಾನ್ ಅವರ ತಂದೆ ಅಬ್ದುಲ್ ಖಾದಿರ್ ಅವರು ತಮ್ಮ ಮಗನ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಇರ್ಫಾನ್ ತನ್ನ ಕಠಿಣ ಪರಿಶ್ರಮವನ್ನು ಮುಂದುವರೆಸುತ್ತಾರೆ. ಮತ್ತು ತನ್ನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.