AI Job: ಇಂದು ಕೆಲಸವನ್ನು ಗಿಟ್ಟಿಸಿಕೊಳ್ಳುವುದು ಕಷ್ಟವಾಗಿದೆ. AI, Chat GPt ಎಲ್ಲವನ್ನು ಬಳಕೆ ಮಾಡಿಕೊಂಡಿದ್ದರ ಪರಿಣಾಮವಾಗಿ ಉದ್ಯೋಗ ಕಡಿತ ಆಗಿದೆ. ಹೀಗಿರುವಾಗ ಬೆಂಗಳೂರಿನ ಇಂಜಿನಿಯರ್‌ವೊಬ್ಬರು 100% ಹೈಕ್‌ ಪಡೆದಿದ್ದಾರೆ. ಹೇಗೆ? 

ಇಂದಿನ ಉದ್ಯೋಗದ ರೂಪುರೇಷೆ ಎಲ್ಲವೂ ಬದಲಾಗುತ್ತಿದೆ. AI, ಚಾಟ್‌ಜಿಪಿಟಿ ಎಂದು ಅನೇಕ ಉದ್ಯೋಗಗಳಿಗೆ ಹೊಡೆತ ಬಿದ್ದಿದೆ. AI ಎನ್ನೋದು ಈಗ ಕೆಲಸದ ಭಾಗ ಆಗಿದೆ. ಆದರೆ ಇದನ್ನು ಅನೇಕರು ಅರ್ಥ ಮಾಡಿಕೊಳ್ತಿಲ್ಲ.

Add Asianetnews Kannada as a Preferred SourcegooglePreferred

ಕಂಪೆನಿಗಳಲ್ಲಿ ಉದ್ಯೋಗ ಕಡಿತ

ಎಐ ಬಳಕೆಯಿಂದ ಸಾಕಷ್ಟು ಸಮಯ ಹಿಡಿಯುವ ಕೆಲಸಗಳು, ಕೆಲವೇ ಕೆಲವು ಜನರಿಂದ ಬಹಳ ಬೇಗ ಆಗುವುದು. ಈಗಾಗಲೇ ಸಾಕಷ್ಟು ಕಂಪೆನಿಗಳು ಲೇಆಫ್‌ ಮಾಡಿದೆ. ಅದರಲ್ಲಿಯೂ ಐಟಿ ಉದ್ಯಮದಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತ ಆಗಿದೆ. ಇನ್ನು ಉದ್ಯೋಗ ಬದಲಾಯಿಸೋದು ಕೂಡ ಸುಲಭ ಇಲ್ಲದಂತಾಗಿದೆ.

ಸಾಫ್ಟ್‌ವೇರ್‌ ಇಂಜಿನಿಯರ್‌ ಮಾಡಿದ್ದೇನು?

ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರು ಇದನ್ನು ಬಳಕೆ ಮಾಡಿಕೊಂಡು, ದೊಡ್ಡ ಮಟ್ಟದ ಹೈಕ್‌ ಪಡೆದಿದ್ದಾರೆ. ಆ ಇಂಜಿನಿಯರ್‌ ಒಟ್ಟಾರೆಯಾಗಿ ಬ್ಯಾಕೆಂಡ್‌ ಸಿಸ್ಟಮ್‌ನಲ್ಲಿ ಎಂಟು ವರ್ಷದ ಕೆಲಸದ ಅನುಭವ ಹೊಂದಿದ್ದಾರೆ. ಇವರಿಗೆ ಕೆಲಸ ಮಾಡಲು ಚೆನ್ನಾಗಿ ಗೊತ್ತಿದೆ. ಅಷ್ಟೇ ಅಲ್ಲದೆ ಉತ್ತಮ ಕರಿಯರ್‌ ಸೃಷ್ಟಿ ಮಾಡಿಕೊಂಡಿದ್ದಾರೆ. ಆದರೆ ಅವರ ಕಂಪೆನಿಯಲ್ಲಿ ಎಲ್ಲವೂ ಬದಲಾಯಿತು. ಟೀಂ ಸಣ್ಣದಾಗುತ್ತ ಬಂತು, ಎಐ ಕೂಡ ದೊಡ್ಡ ಪಾತ್ರ ವಹಿಸಿತು. ಆದರೆ ಎಐ ಮಾತ್ರ ಇಂಜಿನಿಯರ್‌ಗಳನ್ನು ಬದಲಿಸಲು ಆಗೋದಿಲ್ಲ ಎಂದು ಕೆಲವರು ಹೇಳಿದರು. ಆದರೆ ಎಐನಿಂದ ಕೆಲಸದ ವಿಧಾನ ಕೂಡ ಬದಲಾಗುತ್ತ ಬಂತು. ಹೀಗಾಗಿ ದೂರುವ ಬದಲು ಕಲಿಯುವುದನ್ನು ಆರಂಭಿಸಿದರು.

ಆ ಇಂಜಿನಿಯರ್‌ ಮಾಡಿದ್ದೇನು?

ನಿಜಕ್ಕೂ ಏನಾಗ್ತಿದೆ ಎಂದು ಅವರು ತಿಳಿದುಕೊಳ್ಳಲು ಆರಂಭಿಸಿದರು. ಎಐ ಟೂಲ್‌ನ್ನು ಅವರು ಸರಿಯಾಗಿ ಕಲಿಯಲು ಆರಂಭಿಸಿದರು. ಕೇವಲ ಬೇಸಿಕ್‌ ಪ್ರೊಂಪ್ಟ್ಸ್‌ ಸೋಶಿಯಲ್‌ ಮೀಡಿಯಾ ಟ್ರೆಂಡ್ಸ್‌ಬಿಟ್ಟು ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್ಸ್‌ ಎಂಬೆಡ್ಡಿಂಗ್ಸ್‌, ಎಐ ಏಜೆಂಟ್ಸ್‌, ಸಿಸ್ಟಮ್‌ ಲಿಮಿಟ್ಸ್‌ಎಲ್ಲವನ್ನು ಕಲಿಯಲು ಆರಂಭಿಸಿದರು. ಇದನ್ನು ಬಳಸಿಕೊಂಡು ನಿಜವಾದ ಪ್ರೊಡಕ್ಟ್‌ಗಳು ಹೇಗೆ ತಯಾರಾಗುತ್ತವೆ ಎಂದು ಕಲಿಯಲು ಆರಂಭಿಸಿದರಂತೆ.

ಏನು ಮಾಡಬೇಕು?

ಕೋಡ್‌ ಎನ್ನೋದು ಯೋಚನೆಯ ಪ್ರತಿಫಲವಾಗಿದೆ. AI ಕೇವಲ ಬರೆಯುವುದು. ಎಐ ಎನ್ನೋದು ಜಾಬ್‌ ಹುದ್ದೆಗಳ ರೂಪುರೇಷೆ, ಕಾರ್ಯವಿಧಾನಗಳನ್ನು ಬದಲಿಸುವುದು. ಇದನ್ನು ಕಲಿಯಲು ಆರಂಭಿಸುವವರಿಗೆ ಇದು ಚಾಲೆಂಜ್‌ ಆಗೋದಿಲ್ಲ, ಬದಲಾಗಿ ಅವಕಾಶ ಆಗುವುದು.