ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ನಿಮಗೆ ಕೆಲಸ ಮಾಡುವ ಆಸಕ್ತಿ ಇದೆಯಾ?. ಐಟಿಐ ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಹಾಗಿದ್ದರೆ ಒಂದು ವರ್ಷದ ಅಪ್ರೆಂಟಿಸ್ ಟ್ರೈನಿಯಾಗಿ ಕೆಲಸ ಮಾಡುವ ಇಚ್ಛೆಯಿದ್ದರೆ ಕೂಡಲೇ ಎಚ್‌ಎಎಲ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸದ್ಯ ಎಚ್‌ಎಎಲ್ ನೇಮಕಾತಿ-೨೦೨೧ಗಾಗಿ ಅಧಿಸೂಚನೆ ಹೊರಡಿಸಿದೆ. ನಾಸಿಕ್ ವಿಭಾಗದ ಅಡಿಯಲ್ಲಿ 2021-22ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

RBIನಲ್ಲಿ ಕೆಲ್ಸಾ ಇದೆ: 72208 ರೂಪಾಯಿ ವೇತನ!

ಅರ್ಹ ಇಎಕ್ಸ್-ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು, ಮಾರ್ಚ್ ೧೩, 2021 ರೊಳಗೆ ಅಧಿಕೃತ ವೆಬ್‌ಸೈಟ್  apprenticeshipindia.org  ಮೂಲಕ ಎಚ್‌ಎಎಲ್ ಅಪ್ರೆಂಟಿಸ್ ನೇಮಕಾತಿ 2021 ಗೆ ಅರ್ಜಿ ಸಲ್ಲಿಸಬಹುದು. 2021 ಮಾರ್ಚ್ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಆಸಕ್ತ ಅಭ್ಯರ್ಥಿಗಳು ಎಚ್‌ಎಎಲ್ ನೇಮಕಾತಿ 2021ರಡಿ 475 ಅಪ್ರೆಂಟಿಸ್ ಹುದ್ದೆಗಳಿಗೆ apprenticeshipindia.org ನಲ್ಲಿ ಅರ್ಜಿ ಸಲ್ಲಿಸಬಹುದು. ಮಹಾರಾಷ್ಟ್ರದ ನಾಸಿಕ್‌ ವಿಭಾಗದಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ.  ಅರ್ಹತೆಯನ್ನು ನಿರೀಕ್ಷಿಸಲಾಗುತ್ತದೆ. ಆಯ್ಕೆಗೊಂಡವರು ಬೇರೆ ಬೇರೆ ಕಾರ್ಯನಿರ್ವಹಣಾ ಸ್ಥಳಗಳಿವೆ.

SSLC/ITI ಪಾಸಾ? ನೇವಿಯಲ್ಲಿ 1159 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಹಾಕಿ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಒಟ್ಟು 475 ಖಾಲೆ ಇರುವ ಹುದ್ದೆಗಳಿವೆ. ಈ ಪೈಕಿ  ಫಿಟ್ಟರ್ – 210,  ಟರ್ನರ್- 28, ಮೆಕ್ಯಾನಿಸ್ಟ್- 26, ಕಾರ್ಪೆಂಟರ್- 03, ಮೆಷಿನಿಸ್ಟ್- 06, ಎಲೆಕ್ಟ್ರಿಷಿಯನ್- 78, ಡ್ರಾಟ್ಸ್‌ಮನ್ (ಮೆಕ್ಯಾನಿಕಲ್)- 08, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್- 08, ಪೇಂಟರ್(ಸಾಮಾನ್ಯ) – 05, ಶೀಟ್ ಮೆಟಲ್ ವರ್ಕರ್ – 04, ಮೆಕ್ಯಾನಿಕ್- 04, ಕಂಪ್ಯೂಟರ್ ಆಪರೇಟರ್ ಹಾಗೂ ಪ್ರೊಗ್ರಾಮಿಂಗ್ ಅಸಿಸ್ಟೆಂಟ್ – 77, ವೆಲ್ಡರ್- 10, ಸ್ಟೆನೋಗ್ರಾಫರ್- 08 ಹುದ್ದೆಗಳಿವೆ. ಶೈಕ್ಷಣಿಕ ಅರ್ಹತೆ: ಮಾಜಿ ಐಟಿಐ ಅಭ್ಯರ್ಥಿಗಳು ಐಟಿಐ ಉತ್ತೀರ್ಣರಾಗಿರಬೇಕು ಮತ್ತು ಎನ್‌ಸಿವಿಟಿಯಿಂದ ಮಾನ್ಯತೆ ಪಡೆದಿರಬೇಕು.

ಹೇಗೆ ಅರ್ಜಿ ಸಲ್ಲಿಸುವುದು?: 

ಅರ್ಹ ಅಭ್ಯರ್ಥಿಗಳು ಹಲವು ಸ್ಟೆಪ್‌ಗಳ ಮೂಲ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಮೊದಲಿಗೆ https://apprenticeshipindia.org/ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ. ನಂತರ ಆಸಕ್ತ ಅಭ್ಯರ್ಥಿಗಳು https://apprenticeshipindia.org/ ನಲ್ಲಿ ಎಚ್‌ಎಎಲ್-ನಾಸಿಕ್‌ಅಂತ ಸರ್ಚ್ ಮಾಡಬೇಕು.

ಆಗ docs.google.com/forms/d/e/1FAIpQLSedzB_fpt897wM2tfNJNprEZargN205xKzUU4Y DKml1IkxK_g/viewform?vc=0&c=0&w=1&flr=0 ಎಂಬ ಲಿಂಕ್ ಓಪನ್ ಆಗುತ್ತದೆ. ಬಳಿಕ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಡೇಟಾವನ್ನು ನಮೂದಿಸಿ, ಬಳಿಕ ಅದನ್ನು ಸಲ್ಲಿಸಿ.

ಇಷ್ಟಾದ ಬಳಿಕ ಅರ್ಜಿ ಸಲ್ಲಿಸಿದ ನಂತರ ಯಶಸ್ವಿ ಅಪ್ಲಿಕೇಶನ್‌ನ ಸಂದೇಶ ಬರುತ್ತದೆ. ಪ್ರತಿಕ್ರಿಯೆಗಳನ್ನು ಒಳಗೊಂಡಿರುವ ಆಟೋ-ಮೇಲ್ ಸಂದೇಶವನ್ನ ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ. ನಿಮ್ಮ ಅಪ್ಲಿಕೇಶನ್ ಈಗ ಯಶಸ್ವಿಯಾಗಿದೆ ಎಂಬ ಸಂದೇಶ ಬರುತ್ತದೆ.

ಸುಪ್ರೀಂ ಕೋರ್ಟ್‌ನಲ್ಲಿ ಕೆಲ್ಸಾ ಮಾಡಬೇಕಾ? ತಡ ಯಾಕೆ, ಅರ್ಜಿ ಹಾಕಿ

ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಖಾಲಿ ಇರುವ 475 ಅಂಪ್ರೆಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 13 ಕೊನೆಯ ದಿನವಾಗಿದೆ ಎಂಬುದನ್ನು ಅರ್ಜಿ ಸಲ್ಲಿಸಲು ಇಚ್ಛಿಸುವ ಅಬ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು.