ಭಾರತದ ಸೆಂಟ್ರಲ್ ಬ್ಯಾಂಕ್, ಆರ್‌ಬಿಐ 29 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 23ರಿಂದಲೇ ಆನ್‌ಲೈನ್ ಅರ್ಜಿ ಸ್ಲಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಮತ್ತು ಮಾರ್ಚ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೂಡಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಿಎಸ್‌ಜಿ-ರಹಿತ ಹುದ್ದೆಗಳಿಗೆ ಈ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಫೆಬ್ರವರಿ 23, 2021 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
SSLC/ITI ಪಾಸಾ? ನೇವಿಯಲ್ಲಿ 1159 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಹಾಕಿ
ಆಸಕ್ತ ಅಭ್ಯರ್ಥಿಗಳು, ಸಹಾಯಕರು, ಅಧಿಕಾರಿಗಳು, ವ್ಯವಸ್ಥಾಪಕರು ಮತ್ತು ವಿವಿಧ ವೃತ್ತಿಪರರಂತಹ ವಿವಿಧ ಉದ್ಯೋಗ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ಸುದ್ದಿ ಪತ್ರಿಕೆಯಲ್ಲಿ ಆರ್‌ಬಿಐ ನಿಯಮಿತವಾಗಿ ಬ್ಯಾಂಕಿಂಗ್ ಉದ್ಯೋಗಗಳ ಬಗ್ಗೆ ಜಾಹೀರಾತು ನೀಡುತ್ತದೆ ಈ ಬಗ್ಗೆ ಆಸಕ್ತ ಅಭ್ಯರ್ಥಿಗಳು ಗಮನ ಹರಿಸಬೇಕು.
ಆರ್‌ಬಿಐನ ಈ ಹುದ್ದಗಳಿಗೆ ಭಾರತೀಯ ನಾಗರಿಕರು ಮಾತ್ರವೇ ಅರ್ಜಿ ಸಲ್ಲಿಸಲು ಅರ್ಹರರಾಗಿತ್ತಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ವೀಸಸ್ ಬೋರ್ಡ್ (ಆರ್‌ಬಿಐಎಸ್‌ಬಿ), ಆರ್‌ಬಿಐ ನೇಮಕಾತಿಯನ್ನು ನಡೆಸುತ್ತದೆ. ಆರ್‌ಬಿಐ ಬ್ಯಾಂಕ್ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ಕೂಡ ಆರ್‌ಬಿಐಎಸ್‌ಬಿ ನಡೆಸುತ್ತದೆ.
ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಇದೇ ತಿಂಗಳು ಅಂದರೆ ಫೆಬ್ರವರಿ 23ರಂದು ಆರಂಭವಾಗಲಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10 ಆಗಿರುತ್ತದೆ. ಆಸಕ್ತರು ಈ ಬಗ್ಗೆ ಗಮನ ಹರಿಸಬೇಕು. ಹಾಗೆಯೇ ಆನ್‌ಲೈನ್ ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10 ಆಗಿರುತ್ತದೆ. ನೆನಪಿರಲಿ.
ಖಾಲಿ ಇರುವ ಒಟ್ಟು 29 ಹುದ್ದೆಗಳಿಗೆ ಆರ್‌ಬಿಐ ಅರ್ಹರರಿಂದ ಅರ್ಜಿ ಆಹ್ವಾನಿಸಿದೆ. ಲೀಗಲ್ ಆಫೀಸರ್(ಗ್ರೇಡ್-ಬಿ) 11 ಹುದ್ದೆಗಳು, ಮ್ಯಾನೇಜರ್(ಟೆಕ್ನಿಕಲ್-ಸಿವಿಲ್) 1 ಹುದ್ದೆ, ಅಸಿಸ್ಟೆಂಟ್ ಮ್ಯಾನೇಜರ್ (ಪ್ರೊಟೊಕಾಲ್ ಆಂಡ್ ಸೆಕ್ಯೂರಿಟಿ - 5 ಹುದ್ದೆಗಳು ಅಸಿಸ್ಟೆಂಟ್ ಮ್ಯಾನೇಜರ್(ಅಧಿಕೃತ ಭಾಷೆಗಳು) 12 ಹುದ್ದೆಗಳು ಖಾಲಿ ಇದ್ದು, ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಕೆಲ್ಸಾ ಮಾಡಬೇಕಾ? ತಡ ಯಾಕೆ, ಅರ್ಜಿ ಹಾಕಿ
ವಯೋಮಿತಿ: ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸು ಆಗಿರಬೇಕು.
ಶೈಕ್ಷಣಿಕ ಅರ್ಹತೆ ಹಾಗೂ ಅನುಭವ: ವಿವಿಧ ಹುದ್ದೆಗಳ ಅವಶ್ಯಕತೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ.
ಲೀಗಲ್ ಆಫೀಸರ್ (ಗ್ರೇಡ್-ಬಿ) ಹುದ್ದೆಗೆ ಅಭ್ಯರ್ಥಿಗಳು ಕಾನೂನಿನಲ್ಲಿ ಪದವಿ ಜೊತೆಗೆ ಎರಡು ವರ್ಷಗಳ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.
ಮ್ಯಾನೇಜರ್ (ಟೆಕ್ನಿಕಲ್-ಸಿವಿಲ್) ಗೆ ಅಭ್ಯರ್ಥಿಗಳು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು ಮತ್ತು ಈ ಹುದ್ದೆಗೆ ಮೂರು ವರ್ಷಗಳ ಅನುಭವದ ಅಗತ್ಯವಿದೆ.
ಅಸಿಸ್ಟೆಂಟ್ ಮ್ಯಾನೇಜರ್ (ಪ್ರೋಟೋಕಾಲ್ ಮತ್ತು ಸೆಕ್ಯೂರಿಟಿ ) ಹುದ್ದೆಗೆ ಅಭ್ಯರ್ಥಿಗಳು ಸೈನ್ಯ / ನೌಕಾಪಡೆ / ವಾಯುಸೇನೆಯಲ್ಲಿ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು. ಅಸಿಸ್ಟೆಂಟ್ ಮ್ಯಾನೇಜರ್ (ಅಧಿಕೃತ ಭಾಷೆ) ಹುದ್ದೆಗೆ, ಇಂಗ್ಲೀಸ್‌ನಲ್ಲಿ ಸ್ನಾತಕೋತ್ತರ ಪದವಿ ಜೊತೆ ಹಿಂದಿಯನ್ನೂ ದ್ವಿತೀಯ ಭಾಷೆಯಾಗಿ ಓದಿರಬೇಕು. ಜೊತೆಗೆ ೨ ವರ್ಷ ಕೆಲಸದ ಅನುಭವ ಹೊಂದಿರಬೇಕು.
ಸಂಬಳ ಎಷ್ಟು?
ಅಸಿಸ್ಟೆಂಟ್ ಮ್ಯಾನೇಜರ್(ಅಧಿಕೃತ ಭಾಷೆ), ಅಸಿಸ್ಟೆಂಟ್ ಮ್ಯಾನೇಜರ್ (ಪ್ರೊಟೊಕಾಲ್ ಆಂಡ್ ಸೆಕ್ಯೂರಿಟಿ) - ಮಾಸಿಕ 63,172 ರೂ. ವೇತನ
ಲೀಗಲ್ ಆಫೀಸರ್ (ಗ್ರೇಡ್-ಬಿ), ಮ್ಯಾನೇಜರ್ (ಟೆಕ್ನಿಕಲ್-ಸಿವಿಲ್) - ಮಾಸಿಕ 77,208 ರೂಪಾಯಿ ವೇತನವನ್ನು ನೀಡಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು https://www.rbi.org.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 20, 2021, 10:45 AM IST