ದೈತ್ಯ ಗೂಗಲ್ ಸಂಸ್ಥೆ ತನ್ನ ಬೆಂಗಳೂರು ಕಛೇರಿಯಲ್ಲಿ ಖಾಲಿ ಇರುವ  ನೆಟ್ ‌ ವರ್ಕ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ.  

ಬೆಂಗಳೂರು (ಮಾ.13): ದೈತ್ಯ ಗೂಗಲ್ ಸಂಸ್ಥೆ (google company ) ತನ್ನ ಬೆಂಗಳೂರು (Bengaluru) ಕಛೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ನೆಟ್ ‌ ವರ್ಕ್ ಎಂಜಿನಿಯರ್ (Network Engineer) ಹುದ್ದೆಗಳನ್ನು ಭರ್ತಿ ಮಾಡಲು ಗೂಗಲ್ ಅಧಿಸೂಚನೆ ಹೊರಡಿಸಿದ್ದು, ಎಂಜಿನಿಯರ್ ಪದವೀಧರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು https://www.google.com/about/careers/applications ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ದೈತ್ಯ ಗೂಗಲ್ ಸಂಸ್ಥೆಯ ಬೆಂಗಳೂರು ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಯಾವುದೇ ತಾಂತ್ರಿಕ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಆಪರೇಟಿಂಗ್ ಎಂಟರ್‌ಪ್ರೈಸ್ ಕ್ಲಾಸ್ ರೂಟರ್‌ಗಳು ಮತ್ತು ಸ್ವಿಚ್‌ಗಳಲ್ಲಿ ಕೆಲಸ ಮಾಡುವ ಅನುಭವ ಇರುವ ಅಭ್ಯರ್ಥಿಗಳಿಗೆ ಗೂಗಲ್ ಕಂಪೆನಿ ಮೊದಲ ಪ್ರಾಶಸ್ತ್ಯ ನೀಡಲಿದೆ.

Employees Compensation Act: ಕಾರ್ಮಿಕರ ಮರಣದ ದಿನದಿಂದಲೇ ಪರಿಹಾರ ಎಂದು ಸುಪ್ರೀಂ ತೀರ್ಪು

ಬ್ಯಾಕ್‌ಪ್ಲೇನ್, ASIC ಕಾರ್ಯನಿರ್ವಹಣೆ ಮತ್ತು ವಿತರಣಾ ಆರ್ಕಿಟೆಕ್ಚರ್ ಸೇರಿದಂತೆ ನೆಟ್‌ವರ್ಕ್ ಹಾರ್ಡ್‌ವೇರ್ (ರೂಟರ್‌ಗಳು, ಸ್ವಿಚ್‌ಗಳು) ಆರ್ಕಿಟೆಕ್ಚರ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಈಥರ್ನೆಟ್, ವೈ-ಫೈ, ಟಿಸಿಪಿ / ಐಪಿ, ಎಚ್‌ಟಿಟಿಪಿಯಂತಹ ನೆಟ್‌ವರ್ಕಿಂಗ್ ಮತ್ತು ಅಪ್ಲಿಕೇಶನ್ ಪ್ರೋಟೋಕಾಲ್‌ಗಳ ಬಗ್ಗೆ ಅನುಭವ ಹೊಂದಿರುವವರು ಕೂಡ ದೈತ್ಯ ಗೂಗಲ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ದೈತ್ಯ ಗೂಗಲ್ ಸಂಸ್ಥೆಯ ಬೆಂಗಳೂರು ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಟಿಕ್ನಿಕಲ್ ಟೆಸ್ಟ್​, ಕಂಪ್ಯೂಟರ್ ಟೆಸ್ಟ್, ಸಂದರ್ಶನ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

KONKAN RAILWAY RECRUITMENT 2022: ಕೊಂಕಣ ರೈಲ್ವೆಯಿಂದ ವಿವಿಧ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

ಇಂಜಿನಿಯರ್ ಸೇರಿ ವಿವಿಧ ಹುದ್ದೆಗಳಿಗೆ ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ನೇಮಕಾತಿ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ (Indian Railway Construction Company Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಸೀನಿಯರ್ ವರ್ಕ್ಸ್ ಇಂಜಿನಿಯರ್ (senior Work Engineer), ವ್ಯವಸ್ಥಾಪಕ (Manager) ಸೇರಿ ಒಟ್ಟು 29 ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 30 ,2022 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ ತಾಣ https://www.ircon.org ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿದ LLB, ಡಿಪ್ಲೊಮಾ, PG ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಸೀನಿಯರ್ ವರ್ಕ್ ಇಂಜಿನಿಯರ್/ಸರ್ವೆ , ಸುರಕ್ಷತಾ ಇಂಜಿನಿಯರ್, ಸೀನಿಯರ್ ವರ್ಕ್ಸ್ ಇಂಜಿನಿಯರ್ / ಗುಣಮಟ್ಟ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳ ಮಿತಿ ನಿಗದಿಪಡಿಸಲಾಗಿದೆ. ಮಿಕ್ಕ ಹುದ್ದೆಗಳಿಗೆ ಗರಿಷ್ಠ 50 ವರ್ಷಗಳು, OBC ಅವರಿಗೆ ಗರಿಷ್ಠ 38 ವರ್ಷ, SC / ST ಅಭ್ಯರ್ಥಿಗಳಿಗೆ 40 ವರ್ಷಗಳ ವಯೋಮಿತಿ ನೀಡಲಾಗಿದೆ. 

ಆಯ್ಕೆ ಪ್ರಕ್ರಿಯೆ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.