Asianet Suvarna News Asianet Suvarna News

Konkan Railway Recruitment 2022: ಕೊಂಕಣ ರೈಲ್ವೆಯಿಂದ ವಿವಿಧ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

 ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಖಾಲಿ ಇರುವ ಸಹಾಯಕ ಎಂಜಿನಿಯರ್, ಪ್ರಾಜೆಕ್ಟ್ ಎಂಜಿನಿಯರ್ ಸೇರಿ ಒಟ್ಟು 9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು,  ಮಾರ್ಚ್ 15 ರಿಂದ ಮಾರ್ಚ್ 25ರ ವರೆಗೆ ನಡೆಯುವ ನೇರ ಸಂದರ್ಶನ ನಡೆಯಲಿದೆ.

Konkan Railway Corporation Limited  Recruitment 2022   various Engineer Post gow
Author
Bengaluru, First Published Mar 13, 2022, 10:36 PM IST

ಬೆಂಗಳೂರು(ಮಾ.13): ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (Konkan Railway Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಸಹಾಯಕ ಎಂಜಿನಿಯರ್, ಪ್ರಾಜೆಕ್ಟ್ ಎಂಜಿನಿಯರ್ ಸೇರಿ ಒಟ್ಟು 9 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 15 ರಿಂದ ಮಾರ್ಚ್ 25ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://konkanrailway.com/ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಒಟ್ಟು 9 ಹುದ್ದೆಗಳ ಮಾಹಿತಿ
ಸಹಾಯಕ ಇಂಜಿನಿಯರ್ (Assistant Engineer): 2 ಹುದ್ದೆಗಳು
ಯೋಜನಾ ಇಂಜಿನಿಯರ್ (Project Engineer): 2 ಹುದ್ದೆಗಳು
ಹಿರಿಯ ತಾಂತ್ರಿಕ ಸಹಾಯಕ (Sr. Technical Assistant) : 4 ಹುದ್ದೆಗಳು
ಉಪ ಮುಖ್ಯ ಎಂಜಿನಿಯರ್ / ಯೋಜನೆ (Deputy Chief Engineer /Project): 1 ಹುದ್ದೆ

ಶೈಕ್ಷಣಿಕ ವಿದ್ಯಾರ್ಹತೆ: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರ ವಿದ್ಯಾಭ್ಯಾಸ ಮಾಡಿರಬೇಕು.

ಸಹಾಯಕ ಇಂಜಿನಿಯರ್  :  ಸಿವಿಲ್ ಇಂಚಿನಿಯರಿಂಗ್ ನಲ್ಲಿ  55% ಜೊತೆ ಪದವಿ ಮಾಡಿರಬೇಕು. ಜೊತೆಗೆ 7 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
ಯೋಜನಾ ಇಂಜಿನಿಯರ್ :  ಸಿವಿಲ್ ಇಂಚಿನಿಯರಿಂಗ್ ನಲ್ಲಿ  ಜೊತೆ ಪದವಿ ಮಾಡಿರಬೇಕು. ಜೊತೆಗೆ 6 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
ಹಿರಿಯ ತಾಂತ್ರಿಕ ಸಹಾಯಕ :  ಸಿವಿಲ್ ಇಂಚಿನಿಯರಿಂಗ್ ನಲ್ಲಿ  55% ಜೊತೆ ಪದವಿ ಮಾಡಿರಬೇಕು. ಸಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು.
ಉಪ ಮುಖ್ಯ ಎಂಜಿನಿಯರ್ / ಯೋಜನೆ  : ಸಿವಿಲ್ ಇಂಚಿನಿಯರಿಂಗ್ ನಲ್ಲಿ ಪದವಿ ಮಾಡಿರಬೇಕು. ಜೊತೆಗೆ ರೈಲು ಮತ್ತು ರಸ್ತೆ ಯೋಜನೆಯಲ್ಲಿ 14 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. 

EMPLOYEES COMPENSATION ACT: ಕಾರ್ಮಿಕರ ಮರಣದ ದಿನದಿಂದಲೇ ಪರಿಹಾರ ಎಂದು ಸುಪ್ರೀಂ ತೀರ್ಪು

ವಯೋಮಿತಿ: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 35  ರಿಂದ  ಗರಿಷ್ಠ 62 ವರ್ಷದೊಳಗಿರಬೇಕು

ವೇತನ:  ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್  ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ₹58,819 ನಿಂದ ₹1,61,261 ವೇತನ ದೊರೆಯಲಿದೆ.

ಆಯ್ಕೆ ಪ್ರಕ್ರಿಯೆ: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್  ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವಾಕ್‌ ಇನ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ. 

RCFL Recruitment 2022: ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಲ್ಲಿ ನೇಮಕಾತಿ

ಹುದ್ದೆಗೆ ಅನುಸಾರವಾಗಿ ನೇರ ಸಂದರ್ಶನ ನಡೆಯಲಿರುವ ಸ್ಥಳ ವಿವರ: ಸಹಾಯಕ ಇಂಜಿನಿಯರ್, ಯೋಜನಾ ,ಇಂಜಿನಿಯರ್  ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ ಮಾರ್ಚ್ 15 ರಂದು ನೇರ ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ಸ್ಥಳ: Executive Club, Konkan Rail Vihar, Konkan Railway Corporation Ltd. Sector-40, Seawoods (West), Navi Mumbai, 400706.

ಉಪ ಮುಖ್ಯ ಎಂಜಿನಿಯರ್ / ಯೋಜನೆ ಹುದ್ದೆಗೆ ಮಾರ್ಚ್ 25 ರಂದು ನೇರ ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ಸ್ಥಳ: Recruitment Cell, 6th Floor, Corporate office, Belapur Bhavan, Konkan Railway Corporation Ltd., CBD Belapur, Navi-Mumbai

Follow Us:
Download App:
  • android
  • ios