IT ಕ್ಷೇತ್ರದಲ್ಲಿ ಹೆಚ್ಚಿದ ಬೇಡಿಕೆ, ಉದ್ಯೋಗ ನೇಮಕಾತಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ!
- ಕೊರೋನಾ ಸಂಕಷ್ಟದ ನಡುವೆ ಬೆಂಗಳೂರಿನಲ್ಲಿ ನೇಮಕಾತಿ ಬಲು ಜೋರು
- ಐಟಿ ಕ್ಷೇತ್ರದಲ್ಲಿ ಹೆಚ್ಚಿದ ಬೇಡಿಕೆಯಿಂದ ಅಗ್ರಸ್ಥಾನದಲ್ಲಿ ಸಿಲಿಕಾನ್ ನಗರ
- ಉದ್ಯೋಗ ಚಟುವಟಿಕೆಯು ವರ್ಷದಿಂದ ವರ್ಷಕ್ಕೆ ಅತಿ ಹೆಚ್ಚು (59%) ಏರಿಕೆ
ಬೆಂಗಳೂರು(ಸೆ.20): ಕೊರೋನಾ ವೈರಸ್, ಲಾಕ್‌ಡೌನ್, ಆರ್ಥಿಕ ಹೊಡೆತದಿಂದ ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಕಂಪನಿಗಳು ಉದ್ಯೋಗ ನೇಮಕಾತಿ ನಡಸುತ್ತಿದೆ. ಇದೀಗ ಉದ್ಯಾನ ನಗರಿ ಜನ ಸಂತಸ ಪಡುವ ಸುದ್ದಿಯೊಂದಿದೆ. ಭಾರತದಲ್ಲಿ ಐಟಿ ಉದ್ಯಮ(IT sector) ಶೇಕಡಾ 400 ರಷ್ಟು ಏರಿಕೆ ಕಂಡಿದೆ. ಇದರಲ್ಲಿ ಬಹುಪಾಲು ಕೊಡುಗೆ ಬೆಂಗಳೂರಿನದ್ದು. ಇಷ್ಟೇ ಅಲ್ಲ ಐಟಿ ಕ್ಷೇತ್ರದ ಬೇಡಿಕೆ ಹೆಚ್ಚಳದಿಂದ ಭಾರತದಲ್ಲಿನ ನೇಮಕಾತಿಯಲ್ಲೂ ಬೆಂಗಳೂರು(Bengaluru) ಮೊದಲ ಸ್ಥಾನ ಪಡೆದಿದೆ.
ನೌಕಾಪಡೆ ಎಸ್‌ಎಸ್‌ಸಿ 181 ಅಧಿಕಾರಿಗಳ ನೇಮಕಾತಿಗೆ ಶುರು
ಕ್ವೆಸ್ ಕಾರ್ಪ್ ಕಂಪನಿ ಮಾಸ್ಟರ್.ಕಾಂ ಬಿಡುಗಡೆ ಮಾಡಿದ ಆಗಸ್ಟ್ ವರದಿ ಪ್ರಕಾರ ಜಾಬ್ ಪೋಸ್ಟಿಂಗ್ ಚಟುವಟಿಕೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಉದ್ಯೋಗ ಚಟುವಟಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ವರ್ಷದಲ್ಲಿ ಶೇಕಡಾ 59 ರಷ್ಟು ಏರಿಕೆಯಾಗಿದೆ. ಐಟಿ ಉದ್ಯೋಗಿಗಳ ಬೇಡಿಕೆಯಿಂದ ಇದು ಸಾಧ್ಯವಾಗಿದೆ.
ಬೆಂಗಳೂರಿನಲ್ಲಿ ಐಟಿ ಉದ್ಯೋಗ ನೇಮಕಾತಿ ಶೇಕಡಾ 59 ರಷ್ಟು ಏರಿಕೆ ಕಂಡಿದ್ದರೆ, ಎರಡನೆ ಸ್ಥಾನವನ್ನು ಪುಣೆ ಅಲಂಕರಿಸಿದೆ. ಪುಣೆಯಲ್ಲಿ ಶೇಕಡಾ 40, ಚೆನ್ನೈ ಶೇಕಡಾ 37, ಹೈದರಾಬಾದ್ ಶೇಕಡಾ 34, ಮುಂಬೈ ಶೇಕಡಾ 16, ದೆಹಲಿಯಲ್ಲಿ ಶೇಕಡಾ 14 ರಷ್ಟು ಉದ್ಯೋಗ ನೇಮಕಾತಿಯಲ್ಲಿ ಏರಿಕೆ ಕಂಡಿದೆ. ಆದರೆ ಕೊಚ್ಚಿ, ಕೋಲ್ಕತಾ, ಚಂಡಿಘಡದಲ್ಲಿ ಐಟಿ ಉದ್ಯೋಗ ನೇಮಕಾತಿ ನಡೆದಿಲ್ಲ.
ಭಾರತದಲ್ಲಿ IBM ನೇಮಕಾತಿ: ಫ್ರೆಶರ್ಸ್‌ಗೆ ಅವಕಾಶ
ಬೆಂಗಳೂರಿನಲ್ಲಿ ಒಟ್ಟಾರೆ ಉದ್ಯೋಗ ನೇಮಕಾತಿ ವರ್ಷದಿಂದ ವರ್ಷಕ್ಕೆ ಶೇಕಡಾ 14 ರಷ್ಟು ಏರಿಕೆಯಾಗಿದೆ (ಆಗಸ್ಟ್ 2021 vs ಆಗಸ್ಟ್ 2020). 2ನೇ ಶ್ರೇಣಿ ನಗರಗಳ ಪೈಕಿ, ಕೊಯಮತ್ತೂರು ಶೇಕಡಾ 5 ರಷ್ಟು ಬೆಳವಣಿಗೆ ಕಂಡಿದೆ.
ಐಟಿ ಹೊರತು ಪಡಿಸಿದರೆ, ಬಟ್ಟೆ, ಜವಳಿ, ಲೆದರ್, ರತ್ನಗಳು ಮತ್ತು ಆಭರಣಗಳು ಕ್ಷೇತ್ರದಲ್ಲಿ ಶೇಕಡಾ 24 ರಷ್ಟು ಏರಿಕೆ ಕಂಡಿದೆ. ಈ ಕ್ಷೇತ್ರದಲ ಉತ್ಪಾದನೆ ಶೇಕಡಾ 8ರಷ್ಟು ಬೆಳವಣಿಗೆ ಕಂಡಿದೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
ಐಟಿ ಅಭಿವೃದ್ಧಿಗಾಗಿ ವಿದೇಶಗಳ ಜತೆ ಕರ್ನಾಟಕ ನೇರ ಒಪ್ಪಂದ
ಆದರೆ ನೇಮಕಾತಿ ನಡೆಯದ ಕುಖ್ಯಾತಿಗೆ ತೈಲ, ಅನಿಲ್, ಶಿಪ್ಪಿಂಗ್ ಮತ್ತು ಬಿಪಿಒ ಕ್ಷೇತ್ರದಲ್ಲಿ ನೇಮಕಾತಿ ನಡೆದಿಲ್ಲ. ಇನ್ನು ಎಂಜಿನಿಯರಿಂಗ್, ಸಿಮೆಂಟ್, ನಿರ್ಮಾಣ, FMCG, ಲಾಜಿಸ್ಟಿಕ್ ಮತ್ತು ಸರಕು ಸಾಗಾಣಿಕೆಯಂತ ಉದ್ಯಮದಲ್ಲಿ ನೇಮಕಾತಿ ಬೆಳವಣಿಗೆ ಕಂಡುಬಂದಿದೆ.
ಮಾರ್ಕೆಂಟಿಂಗ್ ಮತ್ತು ಸಂವಹನ ವಿಭಾದದಲ್ಲಿ ಶೇಕಡಾ 17 ರಷ್ಟು ಬೆಳವಣಿಗೆ ಕಂಡಬಂದಿದೆ. 2021ರಲ್ಲಿ ಭಾರತದಲ್ಲಿ ಉದ್ಯೋಗ ನೇಮಕಾತಿಗಳು ಏರಿಕೆ ಕಂಡಬರುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಆರ್ಥಿಕ ಚೇತರಿಕೆ ಕಾಣುತ್ತಿರುವುದೇ ಇದಕ್ಕೆಲ್ಲಾ ಕಾರಣ.