AI ಮೇಲೆ ಹೆಚ್ಚಿನ ಗಮನ, 12,500 ಉದ್ಯೋಗಿಗಳ ವಜಾ ಮಾಡಿದ ಡೆಲ್!
ಡೆಲ್ ಟೆಕ್ನಾಲಜೀಸ್ ಕಳೆದ 15 ತಿಂಗಳುಗಳಲ್ಲಿ 2ನೇ ಸುತ್ತಿನ ಲೇಆಫ್‌ಗಳನ್ನು ಘೋಷಣೆ ಮಾಡಿದೆ. ಈ ಬಾರಿ 12500 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ತಿಳಿಸಿದೆ.
ನವದೆಹಲಿ (ಆ.7): ಡೆಲ್ ಟೆಕ್ನಾಲಜೀಸ್ ಕಳೆದ 15 ತಿಂಗಳುಗಳಲ್ಲಿ ಎರಡನೇ ಹಂತ ವಜಾ ಪ್ರಕ್ರಿಯೆಯನ್ನು ಘೋಷಣೆ ಮಾಡಿದೆ. ಕಂಪನಿಯು ಸುಮಾರು 12,500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಇದು ಡೆಲ್‌ನ ಉದ್ಯೋಗಿಗಳ ಶೇ. 10ರಷ್ಟು ಎಂದು ಹೇಳಲಾಗಿದೆ. ಆಧುನಿಕ ಐಟಿ ಪರಿಹಾರಗಳು ಹಾಗೂ ಎಐ ಮೇಲೆ ಹೆಚ್ಚಿನ ಗಮನ ನೀಡುವ ಉದ್ದೇಶದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಅದರೊಂದಿಗೆ ಕಂಪನಿಯ ಕಾರ್ಯಾಚರಣೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸುವ ಪ್ರದೇಶಗಳಲ್ಲಿ ಹೂಡಿಕೆಗಳಿಗೆ ಆದ್ಯತೆ ನೀಡುವ ಗುರಿಯನ್ನು ಹೊಂದಿದೆ. ತನ್ನ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ಸುತ್ತಿನ ವಜಾಗೊಳಿಸುವಿಕೆಯನ್ನು ದೃಢಪಡಿಸಿದೆ. ಸುಮಾರು 12,500 ಉದ್ಯೋಗಿಗಳನ್ನು ಕೈಬಿಡಲಾಗಿದೆ. ಇದು ಕಂಪನಿಯ ಶೇಕಡಾ ಹತ್ತರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ, ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮತ್ತು ವ್ಯವಹಾರವನ್ನು ಮರುಹೊಂದಿಸುವ ಪ್ರಯತ್ನದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಕೆಲಸದಿಂದ ತೆಗೆಯುವ ನಿರ್ಧಾರವು ಕಂಪನಿಯನ್ನು ವಿಶಾಲವಾಗಿ ಮರುಹೊಂದಿಸುವ ಭಾಗವಾಗಿದೆ ಎಂದು ತಿಳಿಸಿದೆ. ಗ್ರಾಹಕ ಸಂಸ್ಥೆಗಳಿಗೆ ಹೊಸ ಮೌಲ್ಯವನ್ನು ಅನ್ಲಾಕ್ ಮಾಡಲು AI ಅನ್ನು ಬಳಸುವ ಮೂಲಕ ಮಾರುಕಟ್ಟೆಯ ಬೆಳವಣಿಗೆಯನ್ನು ಮೀರಿಸುವ ಗುರಿಯನ್ನು Dell ಹೊಂದಿದೆ.
ಈ ನಿರ್ಧಾರವನ್ನು ಗ್ಲೋಬಲ್ ಸೇಲ್ಸ್ ಮತ್ತು ಗ್ರಾಹಕ ಕಾರ್ಯಾಚರಣೆಗಳ ಅಧ್ಯಕ್ಷ ಬಿಲ್ ಸ್ಕ್ಯಾನೆಲ್ ಮತ್ತು ಗ್ಲೋಬಲ್ ಚಾನೆಲ್‌ಗಳ ಅಧ್ಯಕ್ಷ ಜಾನ್ ಬೈರ್ನ್ ಅವರು ಮೆಮೊ ಮೂಲಕ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಕಂಪನಿಯನ್ನಿ ನಿರ್ವಹಣೆ ಮಾಡುವ ಹಾಗೂ ಸುವ್ಯವಸ್ಥಿತಗೊಳಿಸುವ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ. ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸಲು ನೋವಿನ ಆದರೆ ಅಗತ್ಯ ಕ್ರಮಗಳ ಬಗ್ಗೆ ಸುಳಿವು ನೀಡಿದ್ದಾರೆ. ಎಕ್ಸಿಟ್ ಮೀಟಿಂಗ್ ಮೂಲಕ ಎಚ್‌ಆರ್‌ಗಳು ವಜಾ ಮಾಡಿರುವ ಕುರಿತಾಗಿ ತಿಳಿಸಿದ್ದಾರೆ.
ಐಟಿ ಕ್ಷೇತ್ರದಲ್ಲಿ ಅಲ್ಲೋಲ- ಕಲ್ಲೋಲ, ಏಳೇ ತಿಂಗಳಲ್ಲಿ 1.24 ಲಕ್ಷ ಟೆಕ್ ನೌಕರರು ಮನೆಗೆ!
ವಜಾ ಆಗಿರುವ ಉದ್ಯೋಗಿಗಳಿಗೆ ಎರಡು ತಿಂಗಳ ವೇತನ ಮತ್ತು ಪ್ರತಿ ವರ್ಷಕ್ಕೆ ಹೆಚ್ಚುವರಿ ವಾರ, ಗರಿಷ್ಠ 26 ವಾರಗಳವರೆಗೆ ಬೇರ್ಪಡಿಕೆ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ, ದೀರ್ಘಾವಧಿಯ ಉದ್ಯೋಗಿಗಳಲ್ಲಿ ಪ್ರೋತ್ಸಾಹ ಮತ್ತು ಸ್ಟಾಕ್ ಆಯ್ಕೆಗಳ ನಷ್ಟದ ಬಗ್ಗೆ ಅಸಮಾಧಾನವಿದೆ. ಕೆಲವು ಉದ್ಯೋಗಿಗಳು ಈಗಾಗಲೇ ಲೇಆಫ್‌ನ ನಿರೀಕ್ಷೆ ಕೂಡ ಮಾಡಿದ್ದರು. ಕಂಪನಿಯ ಬಜೆಟ್‌ನಲ್ಲಿ ಕಡಿತ ಹಾಗೂ ರದ್ದುಗೊಂಡ ಯೋಜನೆಯನ್ನು ಗಮನಿಸಿ ಅವರು ಅಂದಾಜು ಮಾಡಿದ್ದರು. 2023ರ ಆರ್ಥಿಕ ವರ್ಷದಲ್ಲಿ 13 ಸಾವಿರ ಉದ್ಯೋಗಿಗಳನ್ನು ಡೆಲ್ ವಜಾ ಮಾಡಿತ್ತು. ಈ ನಿರ್ಧಾರದೊಂದಿಗೆ ಡೆಲ್ ಕಂಪನಿಯ ಉದ್ಯೋಗಿಗಳ ಸಂಖ್ಯೆ 1.20 ಲಕ್ಷದಿಂದ 1 ಲಕ್ಷಕ್ಕೆ ಇಳಿದಂತಾಗಿದೆ.
15,000 ಉದ್ಯೋಗ ಕಡಿತಕ್ಕೆ ಮುಂದಾದ ಚಿಪ್ ಉತ್ಪಾದಕ ಸಂಸ್ಥೆ ಇಂಟೆಲ್