Asianet Suvarna News Asianet Suvarna News

15,000 ಉದ್ಯೋಗ ಕಡಿತಕ್ಕೆ ಮುಂದಾದ ಚಿಪ್ ಉತ್ಪಾದಕ ಸಂಸ್ಥೆ ಇಂಟೆಲ್‌

ಚಿಪ್ ಉತ್ಪಾದಕ ಸಂಸ್ಥೆ ಇಂಟೆಲ್ ತನ್ನ ಜಗತ್ತಿನೆಲ್ಲೆಡೆ ಇರುವ ಒಟ್ಟು ಉದ್ಯೋಗಿಗಳ ಶೇಕಡಾ 15ರಷ್ಟು ಉದ್ಯೋಗ ಕಡಿತ ಮಾಡುವ ಚಿಂತನೆ ನಡೆಸಿದೆ. ಹೀಗಾಗಿ ಶೇಕಡಾ 15 ಅಂದರೆ ಸುಮಾರು  15,000 ದಷ್ಟು ಉದ್ಯೋಗ ಕಡಿತ ಉಂಟಾಗಲಿದೆ.

Increased costs, lower profits Fierce competition in the market chip maker Intel decided to 15 thousand job cut akb
Author
First Published Aug 2, 2024, 6:57 PM IST | Last Updated Aug 2, 2024, 6:57 PM IST

ಚಿಪ್ ಉತ್ಪಾದಕ ಸಂಸ್ಥೆ ಇಂಟೆಲ್ ತನ್ನ ಜಗತ್ತಿನೆಲ್ಲೆಡೆ ಇರುವ ಒಟ್ಟು ಉದ್ಯೋಗಿಗಳ ಶೇಕಡಾ 15ರಷ್ಟು ಉದ್ಯೋಗ ಕಡಿತ ಮಾಡುವ ಚಿಂತನೆ ನಡೆಸಿದೆ. ಹೀಗಾಗಿ ಶೇಕಡಾ 15 ಅಂದರೆ ಸುಮಾರು  15,000 ದಷ್ಟು ಉದ್ಯೋಗ ಕಡಿತ ಉಂಟಾಗಲಿದೆ. ಕಾರ್ಯಾಚರಣೆಯನ್ನು ಸುವ್ಯವಸ್ಥಿತಗೊಳಿಸಲು ಹಾಗೂ ಕಡಿಮೆ ಮಾಡಲು ನಿವಿಡ ಮತ್ತು ಎಎಂಡಿ ಮುಂತಾದ ಉದ್ಯಮ ವಲಯದ ಪ್ರಮುಖ ಸಂಸ್ಥೆಗಳೊಂದಿಗೆ ಸ್ಪರ್ಧಾತ್ಮಕವಾಗಿ ಉಳಿಯುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಇಂಟೆಲ್‌ನ ಸಿಇಒ ಪ್ಯಾಟ್ ಗೆಲ್ಸಿಂಗರ್ ಅವರ ಮೆಮೊ ಪತ್ರದ ಪ್ರಕಾರ, 2025 ರ ವೇಳೆಗೆ 10 ಶತಕೋಟಿ ಡಾಲರ್‌ನಷ್ಟು ವೆಚ್ಚ ಉಳಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿ ಈ ವ್ಯಾಪಕ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸರಳವಾಗಿ ಹೇಳುವುದಾದರೆ, ನಾವು ನಮ್ಮ ಹೊಸ ಕಾರ್ಯತಂತ್ರ ಮಾದರಿಯೊಂದಿಗೆ ನಮ್ಮ ವೆಚ್ಚದ ಮೊತ್ತವನ್ನು ಸರಿಪಡಿಸಬೇಕು ಹಾಗೂ ನಾವು ಕಾರ್ಯನಿರ್ವಹಿಸುವ ವಿಧಾನವನ್ನು ಕೂಡ ಮೂಲಭೂತವಾಗಿ ಬದಲಾಯಿಸಬೇಕು ಎಂದು ಗೆಲ್ಸಿಂಗರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  ನಿರಾಶಾದಾಯಕವಾದ ಆದಾಯದ ಬೆಳವಣಿಗೆ ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನವನ್ನು ನಿಧಾನವಾಗಿ ಅಳವಡಿಸಿಕೊಳ್ಳುತ್ತಿರುವುದು ಇವು ಕಂಪನಿಯ ಈ ಉದ್ಯೋಗ ಕಡಿತದಂತಹ ಗಂಭೀರ ಕ್ರಮಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿದು ಬಂದಿದೆ. 

ಉದ್ಯೋಗ ಕಡಿತದಿಂದ ಬೀದಿಪಾಲಾದ 115 ನೌಕರರ ಮರು ನೇಮಕ ಮಾಡಿಸಿದ ರತನ್ ಟಾಟಾ!

ತ್ರೈಮಾಸಿಕದಲ್ಲಿ ಆದ ಕೆಲ ಸವಾಲಿನ ನಂತರ ಇಂಟೆಲ್ ಸಂಸ್ಥೆ ಉದ್ಯೋಗ ಕಡಿತದ ನಿರ್ಧಾರ ಮಾಡಿದೆ. ಎಪ್ರಿಲ್‌ನಿಂದ ಜೂನ್‌ ಗಳಿಕೆಯ ವರದಿಯ ಪ್ರಕಾರ  ಸಂಸ್ಥೆ 1.6 ಶತಕೋಟಿ ಡಾಲರ್‌ ನಷ್ಟವನ್ನು ಅನುಭವಿಸಿದೆ. ಇದರ ಜೊತೆಗೆ ಆದಾಯವೂ ಕೂಡ 12.8  ಶತಕೋಟಿ ಡಾಲರ್‌ಗೆ ಕುಸಿತ ಕಂಡಿದೆ.  ಈ ನಿರಾಶ ಪ್ರತಿಕ್ರಿಯೆಯಿಂದಾಗಿ ಇಂಟೆಲ್‌ ಷೇರುಗಳು ಕೂಡ ಐದು ಗಂಟೆಗಳ ಟ್ರೇಡಿಂಗ್ ನಂತರ ಶೇಕಡಾ 19ರಷ್ಟು ಕುಸಿತಕ್ಕೆ ಕಾರಣವಾಗಿತ್ತು. ಹಾಗೆಯೇ ಇಂದು ಮಾರುಕಟ್ಟೆ ಆರಂಭವಾದ ಸಮಯದಲ್ಲಿ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ ಸಂಭಾವ್ಯ 24 ಶತಕೋಟಿ ಡಾಲರ್ ನಷ್ಟ ಸೂಚಿಸಿದೆ ಎಂದು ತಿಳಿದು ಬಂದಿದೆ.

ಉದ್ಯೋಗ ಕಡಿತವು ಇಂಟೆಲ್‌ಗೆ ಸವಾಲಿನ ತ್ರೈಮಾಸಿಕವನ್ನು ಅನುಸರಿಸುತ್ತದೆ, ಇದು ತನ್ನ ಏಪ್ರಿಲ್-ಜೂನ್ ಗಳಿಕೆಯ ವರದಿಯಲ್ಲಿ $1.6 ಶತಕೋಟಿ ನಷ್ಟವನ್ನು ವರದಿ ಮಾಡಿದೆ, ಜೊತೆಗೆ ಸ್ವಲ್ಪ ಆದಾಯವು $12.8 ಶತಕೋಟಿಗೆ ಕುಸಿದಿದೆ. ನಿರಾಶಾದಾಯಕ ಕಾರ್ಯಕ್ಷಮತೆಯು ಇಂಟೆಲ್‌ನ ಸ್ಟಾಕ್‌ನಲ್ಲಿ ನಂತರದ-ಗಂಟೆಗಳ ವಹಿವಾಟಿನ ಸಮಯದಲ್ಲಿ 19% ಕುಸಿತಕ್ಕೆ ಕಾರಣವಾಯಿತು, ಶುಕ್ರವಾರ ವ್ಯಾಪಾರ ಪುನರಾರಂಭಿಸಿದಾಗ ಮಾರುಕಟ್ಟೆ ಮೌಲ್ಯದಲ್ಲಿ ಸಂಭಾವ್ಯ $24 ಶತಕೋಟಿ ನಷ್ಟವನ್ನು ಸೂಚಿಸುತ್ತದೆ.

 

ಇದರ ಜೊತೆಗೆ ವೆಚ್ಚಗಳ ಮೊತ್ತವನ್ನು ಮೊಟುಕುಗೊಳಿಸಲು ಇಂಟೆಲ್ ತನ್ನ ಸ್ಟಾಕ್ ಡಿವಿಡೆಂಟ್ ಹಂಚಿಕೆಯನ್ನು ಕೂಡ ಸ್ಥಗಿತಗೊಳಿಸಿದೆ. ಇದು ಸಂಸ್ಥೆಯ ಹಣಕಾಸಿನ ತೊಂದರೆಯನ್ನು ಒತ್ತಿ ಹೇಳುತ್ತಿದೆ. ಉದ್ಯೋಗಿಗಳ ವಜಾ ಹಾಗೂ ಇತರ ವೆಚ್ಚ ಕಡಿತಗೊಳಿಸುವ ಕ್ರಮಗಳು ವರ್ಷಾಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದು ತಮ್ಮ ವೃತ್ತಿ ಜೀವನದಲ್ಲೇ ತಾವು ತೆಗೆದುಕೊಂಡ ಬಹಳ ಕಠಿಣ ನಿರ್ಧಾರವಾಗಿದೆ ಎಂದು ಹೇಳಿಕೊಂಡಿರುವ ಗೆಲ್ಸಿಂಗರ್ ಕಂಪನಿಯೂ ವಿಸ್ತೃತ ನಿವೃತ್ತಿ ಆಯ್ಕೆಗಳನ್ನು ಹಾಗೂ ಅರ್ಹ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಅವಕಾಶವನ್ನು ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಆದರೂ ಉದ್ಯಮ ವಿಶ್ಲೇಷಕರು ಮಾತ್ರ, ವೇಗವಾಗಿ ವಿಕಸನಗೊಳ್ಳುತ್ತಿರುವ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ(semiconductor market) ಇಂಟೆಲ್ ಅನ್ನು ಮರುಸ್ಥಾಪಿಸಲು ಈ ಕಡಿತಗಳು ಮಾತ್ರ ಸಾಕಾಗಬಹುದೇ ಎಂದು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಉದ್ಯೋಗ ಕಡಿತ, ವೆಚ್ಚ ಕಡಿತ ಮುಂತಾದ ಯೋಜನೆಗಳು ಇಂಟೆಲ್‌ನ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಬಹುದು ಆದರೆ ವೇಗವಾಗಿ ವಿಕಾಸಗೊಳ್ಳುತ್ತಿರುವ ಚಿಪ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಸಧೃಡಗೊಳಿಸಲು ಈ ಕ್ರಮಗಳು ಸಾಕಾಗದು ಎಂಬುದು ಇ ಮಾರುಕಟ್ಟೆ ವಿಶ್ಲೇಷಕ ಜಾಕೋಬ್ ಬೌರ್ನ್‌ (eMarketer analyst Jacob Bourne) ಅಭಿಪ್ರಾಯವಾಗಿದೆ. 

ಇಂಟೆಲ್ ತನ್ನ ಸ್ಪರ್ಧಿಯಾಗಿರುವ ಎನ್ವಿಡಿಯಾದಂತಹ (Nvidia) ಸಂಸ್ಥೆಗಳ ವೇಗಕ್ಕೆ ತಕ್ಕಂತೆ ತನ್ನನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿದೆ. ಎಐ ಚಿಪ್ ಮಾರುಕಟ್ಟೆಯಲ್ಲಿ ಎನ್ವಿಡಿಯಾ ಬಹಳ ವೇಗವಾಗಿ ಪ್ರಾಬಲ್ಯ ಸಾಧಿಸಿದ್ದು, ಇದು ಇಂಟೆಲ್‌ಗೆ ದೊಡ್ಡ ಸವಾಲಾಗಿದೆ. 

Latest Videos
Follow Us:
Download App:
  • android
  • ios