Asianet Suvarna News Asianet Suvarna News

ಜೂಮ್ ಮೀಟಿಂಗ್ ವೇಳೆ ಧರಿಸುವ ಬಟ್ಟೆಯಲ್ಲಿ ಆಫೀಸ್‌ಗೆ ಬಂದ ಉದ್ಯೋಗಿಗಳು

  • WFH ಮಾಡ್ತಿದ್ದೀರಾ? ಆನ್‌ಲೈನ್‌ ಮೀಟಿಂಗ್ ವೇಳೆ ಹೇಗಿರುತ್ತೆ ನಿಮ್ಮ ವೇಷ
  • ಉದ್ಯೋಗಿಗಳಿಗೆ ಜೂಮ್ ಮೀಟಿಂಗ್ ವೇಳೆ ಧರಿಸುವ ಬಟ್ಟೆಯಲ್ಲಿ ಬನ್ನಿ ಎಂದ ಸಂಸ್ಥೆ
  • ಉದ್ಯೋಗಿಗಳು ಹೆಂಗೆ ಬಂದ್ರು ನೋಡಿ
Company Asks Employees to Wear Zoom Outfits To Work akb
Author
Bangalore, First Published May 22, 2022, 4:06 PM IST

ಕೋವಿಡ್‌ ಸಾಂಕ್ರಾಮಿಕ ಜಗತ್ತನ್ನು ಕಾಡಲು ಶುರು ಮಾಡಿದ ಬಳಿಕ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಜನರು ಕಳೆದ ಎರಡು ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇಂತಹ ಉದ್ಯೋಗಿಗಳಿಗೆ ಸಂಸ್ಥೆಗಳ ಆಡಳಿತ ಮಂಡಳಿ ಅನಿವಾರ್ಯ ಸಂದರ್ಭದಲ್ಲಿ ಆನ್‌ಲೈನ್‌ನಲ್ಲೇ ಮೀಟಿಂಗ್ ಮಾಡುವ ಮೂಲಕ ನೀಡಬೇಕಾದ ಸಲಹೆಗಳನ್ನು ನೀಡುತ್ತಿದ್ದಾರೆ. ಬಹುತೇಕ ಸಂಸ್ಥೆಗಳು ಜೂಮ್ ಅಥವಾ ಗೂಗಲ್ ಮೀಟ್ ಮೂಲಕ ಉದ್ಯೋಗಿಗಳನ್ನು ಮೀಟಿಂಗ್‌ಗಳಿಗೆ ಸೇರಿಸುತ್ತಿದ್ದಾರೆ. ಆದರೆ ಬಹುತೇಕ ಉದ್ಯೋಗಿಗಳು ಮನೆಯಲ್ಲಿ ಧರಿಸುವ ಉಡುಗೆಯಲ್ಲೇ ಮೀಟಿಂಗ್‌ಗೆ ಭಾಗಿಯಾದರೆ ಮತ್ತೆ ಕೆಲವರು ಕ್ಯಾಮರಾಗೆ ತಮ್ಮ ದೇಹ ಎಷ್ಟು ಕಾಣುವುದೋ ಅಷ್ಟು ಮಾತ್ರ ದೇಹವನ್ನು ಒಳ್ಳೆಯ ವೇಷ ಭೂಷಣಗಳಿಂದ ಸಿದ್ದಗೊಳಿಸುತ್ತಾರೆ. ಹೀಗಾಗಿ ಕ್ಯಾಮರಾಗೆ ಕಾಣುವಷ್ಟು ಸೊಂಟದ ಮೇಲ್ಭಾಗ ಒಳ್ಳೆಯ ಆಫೀಷಿಯಲ್ ಧಿರಿಸು ಧರಿಸುವ ಉದ್ಯೋಗಿಗಳು ಕೆಳಗೆ ಮಾಮೂಲಿ ಮನೆ ಉಡುಪು ಲಂಗ ಚಡ್ಡಿ ಶಾರ್ಟ್ಸ್‌ಗಳನ್ನು ಧರಿಸಿರುತ್ತಾರೆ. 

ಎಲ್ಲರಿಗೂ ಆರಾಮದಾಯಕ ಜೀವನ ನೀಡಿರುವ ಈ ವರ್ಕ್ ಫ್ರಮ್ ಹೋಮ್‌ ಜೂಮ್ ಹಾಗೂ ಗೂಗಲ್ ಮೀಟ್‌ನಿಂದಾಗಿ ಮತ್ತಷ್ಟು ಯಶಸ್ವಿಯಾಗಿದ್ದು, ಎಲ್ಲರನ್ನೂ ಅವರಿದ್ದಲಿಂದಲೇ ಏಕಕಾಲಕ್ಕೆ ಸಂಪರ್ಕಿಸುವ ಈ ಆನ್‌ಲೈನ್‌ ಮೀಟಿಂಗ್ ಆಪ್‌ಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸಂಪತ್ತು ನಿರ್ವಹಣಾ ಸಂಸ್ಥೆಯು ತನ್ನ ಉದ್ಯೋಗಿಗಳನ್ನು ಜೂಮ್ ಸಭೆಗಳ ಗೌರವಾರ್ಥವಾಗಿ ಕೆಲಸ ಮಾಡಲು ತಮ್ಮ 'ಜೂಮ್ ಬಟ್ಟೆಗಳನ್ನು' ಧರಿಸಲು ಕೇಳಿಕೊಂಡಿತ್ತು. ಹೀಗಾಗಿ ಉದ್ಯೋಗಿಗಳು ಕೆಳಗೆ ಪೈಜಾಮಾ ಮೇಲೆ ಕೋಟು, ಕೆಳಭಾಗಕ್ಕೆ ಚಡ್ಡಿ ಹಾಗೂ ಹವಾಯ್ ಚಪ್ಪಲಿ ಮೇಲ್ಭಾಗಕ್ಕೆ ಕೋಟು ಹೀಗೆ ಬಟ್ಟೆ ಧರಿಸಿ ಬಂದಿದ್ದರು. 

ಎಲ್ಲಿಂದ ಬೇಕಾದ್ರು ಕೆಲ್ಸ ಮಾಡಿ, ಸ್ಯಾಲರಿ ಕಡಿಮೆ ಮಾಡಲ್ಲ: ಉದ್ಯೋಗಿಗಳಿಗೆ Airbnb ಆಫರ್

ಉದ್ಯೋಗಿಗಳ ಈ ವೇಷಭೂಷಣದ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಲಿಂಕ್ಡ್‌ಇನ್‌ನಲ್ಲಿ ಡೇನಿಯಲ್ ಅಬ್ರಹಾಮ್ಸ್ ಅವರು ಪೋಸ್ಟ್ ಮಾಡಿದ್ದಾರೆ. ಇದನ್ನು ಲಕ್ಷಾಂತರ ಜನ ಮೆಚ್ಚಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. 'ಜೂಮ್ ಮೀಟಿಂಗ್‌ಗಳಲ್ಲಿ ಅವರು ಧರಿಸುತ್ತಿದ್ದ ಬಟ್ಟೆಗಳೊಂದಿಗೆ ಕೆಲಸ ಮಾಡಲು ಕಂಪನಿಯು ಅವರನ್ನು ಕೇಳಿದೆ' ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ. 

ವಾರಕ್ಕೆ 3 ದಿನ ಕಚೇರಿಗೆ ಬನ್ನಿ ಎಂದಿದ್ದಕ್ಕೆ ಟೆಕ್ಕಿಗಳೆಲ್ಲಾ ಗರಂ, ಬಹುತೇಕರು ರಾಜೀನಾಮೆಗೆ ಒಲವು!

ಕೆಲಸದ ದಿನದಂದು ನಿಮ್ಮ ಜೂಮ್ ಉಡುಪನ್ನು ಧರಿಸಿ' ಐವರು ಪುರುಷರು ಮತ್ತು ಇಬ್ಬರು ಮಹಿಳೆಯರು ತಮ್ಮ ಆಫೀಸ್ ರಿಸೆಪ್ಶನ್‌ನಲ್ಲಿ ತಮ್ಮ ಜೂಮ್ ಬಟ್ಟೆಗಳಲ್ಲಿ ಫೋಟೋಗೆ ಪೋಸ್ ನೀಡುವುದನ್ನು ಫೋಟೋದಲ್ಲಿ ಕಾಣಬಹುದು. ಎಲ್ಲಾ ಪುರುಷರು ಶರ್ಟ್, ಜಾಕೆಟ್ ಮತ್ತು ಟೈನೊಂದಿಗೆ ಸೂಟ್‌ಗಳನ್ನು ಧರಿಸಿದ್ದರೆ, ಚಪ್ಪಲಿಯೊಂದಿಗೆ ಪ್ಯಾಂಟ್‌ಗಳ ಬದಲಿಗೆ ಶಾರ್ಟ್ಸ್ ಅಥವಾ ಪೈಜಾಮಾವನ್ನು ಧರಿಸಿದ್ದರು. ಒಬ್ಬ ವ್ಯಕ್ತಿ ಸಾಕ್ಸ್ ಮತ್ತು ಫ್ಲಿಪ್ ಫ್ಲಾಪ್‌ಗಳನ್ನು ಧರಿಸಿದ್ದರು. ಇಬ್ಬರು ಮಹಿಳೆಯರು ಸ್ಕರ್ಟ್‌ಗಳು ಅಥವಾ ಪ್ಯಾಂಟ್‌ಗಳ ಬದಲಿಗೆ ಫಾರ್ಮಲ್ ಶರ್ಟ್‌ಗಳು ಮತ್ತು ಪೈಜಾಮಾಗಳನ್ನು ಧರಿಸಿದ್ದರು. ಮಹಿಳೆಯರು ಔಪಚಾರಿಕ ಹೀಲ್ಸ್ ಅಥವಾ ಸ್ಯಾಂಡಲ್‌ಗಳ ಬದಲಿಗೆ ಮನೆಯಲ್ಲಿ ಧರಿಸುವ ಸಾಮಾನ್ಯ ಚಪ್ಪಲಿಗಳನ್ನು ಧರಿಸಿದ್ದರು. ಗುಲಾಬಿ ಬಣ್ಣದ ಶರ್ಟ್‌ನ ಮಹಿಳೆ ತನ್ನ ಬಿಳಿ ಬನ್ನಿ ಚಪ್ಪಲಿಯಲ್ಲಿ ಮುದ್ದಾಗಿ ಕಾಣುತ್ತಿದ್ದಳು.

 ಕೋವಿಡ್‌ ಸೋಂಕು ಇಳಿಕೆಯಾಗುತ್ತಿದ್ದಂತೆ ಜಗತ್ತು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳಾದ ಆ್ಯಪಲ್‌, ಗೂಗಲ್‌ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಉದ್ಯೋಗಿಗಳಿಗೆ ಮತ್ತೆ ಆಫೀಸಿಗೆ ಮರಳಲು ಸೂಚನೆ ನೀಡಿವೆ. ಆದರೆ ಕಳೆದ 2 ವರ್ಷಗಳಿಂದಲೂ ವರ್ಕ್ ಫ್ರಂ ಹೋಮ್‌ನಲ್ಲಿದ್ದ ಉದ್ಯೋಗಿಗಳು ಈ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios