Asianet Suvarna News Asianet Suvarna News

ಕೆಲಸದ ಒತ್ತಡ ಸಹಿಸದೇ ಬಜಾಜ್​ ಫೈನಾನ್ಸ್​ ಸಿಬ್ಬಂದಿ ಸಾವಿಗೆ ಶರಣು! 5 ಪುಟಗಳಲ್ಲಿ ಆಘಾತಕಾರಿ ವಿವರ

ಕೆಲಸದ ಒತ್ತಡ ಸಹಿಸದೇ ಮೂರನೆಯ ಸಾವು! ಬದುಕು ಕೊನೆಗೊಳಿಸಿಕೊಂಡ ಬಜಾಜ್​ ಫೈನಾನ್ಸ್​ ಸಿಬ್ಬಂದಿ. ಸಾವಿಗೂ ಮುನ್ನ ಐದು ಪುಟಗಳಲ್ಲಿ ಬರೆದದ್ದೇನು? 
 

another Work Pressure death by  bajaj finance employee who ended his life tragically suc
Author
First Published Oct 1, 2024, 9:04 PM IST | Last Updated Oct 1, 2024, 9:04 PM IST

ಕೆಲಸದ ಒತ್ತಡ ಸಹಿಸದೇ ಕಳೆದ ಹತ್ತು ದಿನಗಳಲ್ಲಿ ಈಗ ಮೂರನೆಯ ಸಾವು ಸಂಭವಿಸಿದೆ. ಪುಣೆಯ ಇವೈ ಕಂಪೆನಿಯ ಯುವತಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್​ ಉದ್ಯೋಗಿ ಕೆಲಸದ ಒತ್ತಡ ತಾಳದೇ ಮೃತಪಟ್ಟಿದ್ದರೆ, ಈಗ ಉತ್ತರ ಪ್ರದೇಶದ ಝಾನ್ಸಿಯ ತರುಣ್ ಸಕ್ಸೇನಾ ಎನ್ನುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ!  ಬಜಾಜ್ ಫೈನಾನ್ಸ್‌ನಲ್ಲಿ ಏರಿಯಾ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ  42 ವರ್ಷದ ತರುಣ್​ ಅವರು,  ಅತ್ಯುತ್ತಮ ಪ್ರಯತ್ನ ಮಾಡಿದರೂ ಟಾರ್ಗೆಟ್​ ರೀಚ್​ ಆಗಲು ಸಾಧ್ಯವಾಗದ ಕಾರಣ ಅಪಾರ ಒತ್ತಡಕ್ಕೆ ಒಳಗಾಗಿರುವುದಾಗಿ ಹೇಳಿ ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬೇರೆ ಕೊಠಡಿಯಲ್ಲಿ ಇರಿಸಿ ತಾವು ಇನ್ನೊಂದು ಕೊಠಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಐದು ಪುಟಗಳ ಡೆತ್​ನೋಟ್​ನಲ್ಲಿ  ತಮ್ಮ ಸಾವಿನ ಕಾರಣವನ್ನು ತರುಣ್​ ಬರೆದಿಟ್ಟಿದ್ದು, ಇದರಲ್ಲಿ ಅಧಿಕಾರಿಗಳ ಬಗ್ಗೆಯೂ ವಿವರಿಸಿದ್ದಾರೆ.  ಕಳೆದ ಎರಡು ತಿಂಗಳಿಂದ  ಟಾರ್ಗೆಟ್​ ಪೂರೈಸುವಂತೆ ಮೇಲಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇಲ್ಲದಿದ್ರೆ ಸಂಬಳ ಕಟ್​ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಏನು ಮಾಡಿದರೂ ನನಗೆ ಟಾರ್ಗೆಟ್​ ರೀಚ್​ ಆಗಲು ಸಾಧ್ಯವಾಗುತ್ತಿಲ್ಲ.  ನನ್ನ ಸಾವಿಗೆ ಕಂಪೆನಿಯ ಇಬ್ಬರು ಅಧಿಕಾರಿಗಳನ್ನು ಹೊಣೆಗಾರರು ಎಂದು ಅದರಲ್ಲಿ ಅವರು ಉಲ್ಲೇಖಿಸುರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರು ಬಜಾಜ್ ಫೈನಾನ್ಸ್ ಸಾಲಗಳ ಇಎಂಐ  ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಆದರೆ ಹಲವಾರು ಸಮಸ್ಯೆಗಳಿಂದಾಗಿ ಟಾರ್ಗೆಟ್​ ರೀಚ್​ ಆಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ವರುಣ್​ ತನ್ನ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದರಂತೆ. ಈ ಹಿನ್ನಲೆ ಹಿರಿಯ ಅಧಿಕಾರಿಗಳು ಪದೇ ಪದೇ ಅವಮಾನ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ? ಕಾರ್ಯನಿರ್ವಹಿಸುತ್ತಲೇ ಎಚ್​ಡಿಎಫ್​ಸಿ ಬ್ಯಾಂಕ್​ ಮಹಿಳಾ ಉದ್ಯೋಗಿ ಸಾವು!
 
ಅಂದಹಾಗೆ, ತರುಣ್ ಅವರು ನವಾಬಾದ್‌ನ ಗುಮ್ನವಾರ ಪಿಚೋರ್‌ನಲ್ಲಿ ವಾಸಿಸುತ್ತಿದ್ದರು. ಅವರು ಜೊಂಕನ್ ಬಾಗ್‌ನಲ್ಲಿರುವ ಹಣಕಾಸು ಕಂಪೆನಿಯಲ್ಲಿ ಏರಿಯಾ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ ಮತ್ತು ಮಕ್ಕಳು ಬೇರೆ ಕೊಠಡಿಯಲ್ಲಿ ಇರುವಾಗ ಇನ್ನೊಂದು ಕೊಠಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕೆಲ ಹೊತ್ತಿನ ಬಳಿಕ ಕುಟುಂಬಸ್ಥರಿಗೆ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾನು ಭವಿಷ್ಯದ ಬಗ್ಗೆ ತುಂಬಾ ಉದ್ವಿಗ್ನನಾಗಿದ್ದೇನೆ, ನಾನು ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇನೆ, ನಾನು ಹೋಗುತ್ತಿದ್ದೇನೆ ಎಂದು ಅದರಲ್ಲಿ ಬರೆದಿದ್ದಾರೆ. 

ಟಾರ್ಗೆಟ್​ ರೀಚ್​ ಆಗಲು ಇರುವ ಸಮಸ್ಯೆಗಳ ಬಗ್ಗೆ ಸೀನಿಯರ್​ಗಳಲ್ಲಿ ಪದೇ  ಪದೇ ಹೇಳಿಕೊಳ್ಳುತ್ತಿದ್ದೆ. ಆದರೂ ಅವರು ನನ್ನ ಮಾತು ಕೇಳಲಿಲ್ಲ.  ಇದೇ ಕಾರಣಕ್ಕೆ  45 ದಿನಗಳಿಂದ ನಿದ್ದೆ ಮಾಡಲಿಲ್ಲ. ಊಟವೂ ಸೇರುತ್ತಿರಲಿಲ್ಲ. ತೀವ್ರ ಒತ್ತಡಕ್ಕೆ ಸಿಲುಕಿರುವೆ. ಆದ್ದರಿಂದ ಸಾವೇ ದಾರಿಯಾಗಿದೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.  ಡೆತ್​ನೋಟ್​ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಟಾರ್ಗೆಟ್​ ತಲುಪೋ ಭರದಲ್ಲಿ ಒತ್ತಡದಿಂದ ಕೆಲಸ ಮಾಡಿ ಯುವತಿಯ ಸಾವು! ಕಂಪೆನಿ ಮಾಡಿದ್ದೇನು ನೋಡಿ..

Latest Videos
Follow Us:
Download App:
  • android
  • ios