ಟೆಕ್ ದೈತ್ಯ ಮೈಕ್ರೋಸಾಫ್ಟ್‌ನಲ್ಲಿ 50 ಲಕ್ಷ ರೂ. ಪ್ಯಾಕೇಜ್‌ ಉದ್ಯೋಗ ಪಡೆದು ಎಐಟಿಎಚ್‌ ವಿದ್ಯಾರ್ಥಿನಿ ಇತಿಹಾಸ!

ಎಐಟಿಎಚ್‌ ವಿದ್ಯಾರ್ಥಿನಿ ಸೃಜನ್ ಅಗರ್ವಾಲ್ ಯುಎಸ್ ಟೆಕ್ ದೈತ್ಯ ಮೈಕ್ರೋಸಾಫ್ಟ್‌ನಲ್ಲಿ 50 ಲಕ್ಷ ರೂಪಾಯಿಗಳ ಬೃಹತ್ ಪ್ಯಾಕೇಜ್‌ನೊಂದಿಗೆ ಉದ್ಯೋಗವನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾಳೆ. 

AITH Kanpur student Srijan Agarwal hired for record-breaking salary in Microsoft gow

ಉತ್ತರ ಪ್ರದೇಶದ ಸೃಜನ್ ಅಗರ್ವಾಲ್ ಎಂಬ ಯುವತಿ ಯುಎಸ್ ಟೆಕ್ ದೈತ್ಯ ಮೈಕ್ರೋಸಾಫ್ಟ್‌ನಲ್ಲಿ 50 ಲಕ್ಷ ರೂಪಾಯಿಗಳ ಬೃಹತ್ ಪ್ಯಾಕೇಜ್‌ನೊಂದಿಗೆ ಉದ್ಯೋಗವನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾಳೆ. 

ವರದಿಯ ಪ್ರಕಾರ, ಸೃಜನ್ ಅಗರ್ವಾಲ್ ಕಾನ್ಪುರದ ಡಾ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ಹ್ಯಾಂಡಿಕ್ಯಾಪ್ಡ್ (AITH) ನ ವಿದ್ಯಾರ್ಥಿಯಾಗಿದ್ದಾರೆ. ಅವರು ಎಐಟಿಎಚ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಮಾಡಿದ್ದಾರೆ. ಸೃಜನ್ ಅಗರ್ವಾಲ್ (Srijan Agarwal) ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಸೃಜನ್ ಅಗರ್ವಾಲ್ ಅವರು ತಮ್ಮ ಬಿ.ಟೆಕ್ ಕೋರ್ಸ್‌ನ ಎರಡನೇ ವರ್ಷದಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದರು.

ಯುಎಸ್ ಮೂಲದ ಕಂಪೆನಿಯಿಂದ 1.35 ಕೋಟಿ ರೂ. ಪ್ಯಾಕೇಜ್ ಉದ್ಯೋಗ ಪಡೆದು

ಸೃಜನ್ ಅಗರ್ವಾಲ್ ಬೆಂಗಳೂರಿನಿಂದ ಇಂಟರ್ನ್‌ಶಿಪ್ ಮುಗಿಸಿದ್ದರು ಮತ್ತು ಈಗ ಮೈಕ್ರೋಸಾಫ್ಟ್ ಆಕೆಗೆ 50 ಲಕ್ಷ ರೂಪಾಯಿಗಳ ಉದ್ಯೋಗ ಪ್ಯಾಕೇಜ್ ನೀಡಿದೆ. 

 ವರದಿ ಪ್ರಕಾರ, ಸೃಜನ್ ಅಗರ್ವಾಲ್ ಉತ್ತರ ಪ್ರದೇಶದ ( uttara pradesh) ಹತ್ರಾಸ್‌ನ ಘಂಟಾಘರ್ ನಿವಾಸಿ. ಸೃಜನ್ ಅಗರ್ವಾಲ್ ಅವರ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿ. ಸೃಜನ್ ಅವರು ರಾಮಚಂದ್ರ ಅಗರ್ವಾಲ್ ಗರ್ಲ್ಸ್ ಇಂಟರ್ ಕಾಲೇಜಿನಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. 

ಬೆಂಗಳೂರಿನ ಕಂಪೆನಿಯಲ್ಲಿ 82.5 ಲಕ್ಷ ರೂ ವೇತನದ ಉದ್ಯೋಗ ಪಡೆದು ದಾಖಲೆ ಬರೆದ ಐಐಐಟಿ

ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಸೃಜನ್ ಅಗರ್ವಾಲ್ ಯುಪಿ ರಾಜ್ಯ ಪ್ರವೇಶ ಪರೀಕ್ಷೆಯ ಮೂಲಕ AITH ನಲ್ಲಿ ಪ್ರವೇಶ ಪಡೆದರು. 

ಹಿಂದಿ ಮಾಧ್ಯಮದ ಹಿನ್ನೆಲೆಯಿಂದಾಗಿ ಸೃಜನ್ ಅಗರ್ವಾಲ್ ಎಂಜಿನಿಯರಿಂಗ್ ತರಗತಿಗಳಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ವರದಿ ಹೇಳಿದೆ. ಆದರೆ ಆಕೆ ಅದನ್ನೇ ಸವಾಲಾಗಿ ಸ್ವೀಕರಿಸಿ  ಇಂದು ಜಯಿಸಿದ್ದಾಳೆ.

ಪ್ರತಿಭಾವಂತ ಬಡ ವಿದ್ಯಾರ್ಥಿ ಅಲ್ಪೇಶ್ ವೈದ್ಯಕೀಯ ಕಾಲೇಜು ಪ್ರವೇಶ ಜಾತಿ

ಸೃಜನ್ ಅಗರ್ವಾಲ್ ಅವರ ಪರಿಶ್ರಮದ ಫಲವೆಂದರೆ ಎರಡನೇ ವರ್ಷದಲ್ಲಿಯೇ ಆಕೆಗೆ ಮೈಕ್ರೋಸಾಫ್ಟ್‌ನಿಂದ (Microsoft) ಇಂಟರ್ನ್‌ಶಿಪ್ ಆಫರ್ ಸಿಕ್ಕಿತು ಮತ್ತು ಈಗ ಅವಳು ಯುಎಸ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಸೃಜನ್ ಅಗರ್ವಾಲ್ ಅವರ ಶಿಕ್ಷಕರು ಆಕೆಯ ಸಾಧನೆಯಿಂದ ತುಂಬಾ ಸಂತೋಷಪಟ್ಟಿದ್ದಾರೆ. 

Latest Videos
Follow Us:
Download App:
  • android
  • ios