Asianet Suvarna News Asianet Suvarna News

ಕರ್ನಾಟಕದಲ್ಲಿ ಹೊಸ ಬಿಟಿ ನೀತಿ: 5 ವರ್ಷದಲ್ಲಿ 30,000 ಉದ್ಯೋಗ

ಕರ್ನಾಟಕವನ್ನು ಜಾಗತಿಕ ಜೈವಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಉದ್ಯೋಗ ಮತ್ತು ಉದ್ಯಮ ಶೀಲತೆ ಬೆಂಬಲಿಸುವುದು, ವ್ಯವಹಾರ ಸುಗಮಗೊಳಿ ಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಜೈವಿಕ ತಂತ್ರಜ್ಞಾನ ನಿಯಮಗಳನ್ನು ಸರಳಗೊಳಿಸುವುದು ಹಾಗೂ ಜೀನೋಮಿಕ್, ಅಗ್ನಿಕ ಜೀವಶಾಸ್ತ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಾಣೀಜ್ಜೀಕರಣಕ್ಕೆ ಬೆಂಬಲ ನೀಡುವ ಅಂಶಗಳನ್ನು ನೀತಿಯಲ್ಲಿ ಸೇರಿಸಲಾಗಿದೆ. 

30000 jobs in 5 years from the announcement of the new biotechnology policy in Karnataka grg
Author
First Published Sep 7, 2024, 10:00 AM IST | Last Updated Sep 7, 2024, 10:00 AM IST

ಬೆಂಗಳೂರು(ಸೆ.07):  ಕರ್ನಾಟಕವನ್ನು ಜಾಗತಿಕ ಜೈವಿಕ ತಂತ್ರಜ್ಞಾನ (ಬಿಟಿ)ದ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿಯ ಜತೆಗೆ 2029ರ ವೇಳೆ ಬಿಟಿ ಕ್ಷೇತ್ರದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ ಮತ್ತು 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿಯೊಂದಿಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ 2024-29ನೇ ಸಾಲಿನ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದೆ. 

ಕರ್ನಾಟಕದ ಐಟಿ ಕೇತ್ರಕ್ಕೆ ಹೊಸ ನವೋದ್ಯಮ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪ್ರದೇಶಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡ 2024-29 ಅನ್ನು ಸಿದ್ಧವಡಿಸಲಾಗಿದೆ. ಕೌಶಲ್ಯಾಭಿವೃದ್ಧಿ, ಬಿಟಿ ಕ್ಷೇತ್ರದ ಚಟುವಟಿಕೆಗಳಿಗೆ ಬೆಂಬಲ ಹಾಗೂ ಬಿಟ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಹಣಕಾಸಿನ ಪ್ರೋತ್ಸಾಹ ಹಾಗೂ ವಿವಿಧ ರಿಯಾಯಿತಿಗಳನ್ನು ನೀಡುವ ಅಂಶಗಳು ನೂತನ ನೀತಿಯಲ್ಲಿದೆ. ನಿಯಂತ್ರಣವನ್ನು ವ್ಯವಸ್ಥಿತಗೊಳಿಸುವುದು, 2025ರ ವೇಳೆಗೆ 50 ನವೀನ ಸಂಸ್ಥೆಗಳು ಸೇರಿದಂತೆ 300 ಜೈವಿಕ ತಂತ್ರಜ್ಞಾನ ಕಂಪನಿಗಳನ್ನು ರಚಿಸುವಂತೆ ಮಾಡುವುದು, 30 ಸಾವಿರ ಉದ್ಯೋಗ ಸೃಷ್ಟಿಸಿ, 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡಲು 200ಕ್ಕೂ ಹೆಚ್ಚಿನ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದುವ ಗುರಿಯನ್ನು ನೀತಿ ಹೊಂದಿದೆ. 

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶಕ್ಕೆ ಕರ್ನಾಟಕ ನಂಬರ್‌ 2..!

ಕರ್ನಾಟಕವನ್ನು ಜಾಗತಿಕ ಜೈವಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಉದ್ಯೋಗ ಮತ್ತು ಉದ್ಯಮ ಶೀಲತೆ ಬೆಂಬಲಿಸುವುದು, ವ್ಯವಹಾರ ಸುಗಮಗೊಳಿ ಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಜೈವಿಕ ತಂತ್ರಜ್ಞಾನ ನಿಯಮಗಳನ್ನು ಸರಳಗೊಳಿಸುವುದು ಹಾಗೂ ಜೀನೋಮಿಕ್, ಅಗ್ನಿಕ ಜೀವಶಾಸ್ತ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಾಣೀಬ್ರೇಕರಣಕ್ಕೆ ಬೆಂಬಲ ನೀಡುವ ಅಂಶಗಳನ್ನು ನೀತಿಯಲ್ಲಿ ಸೇರಿಸಲಾಗಿದೆ. 

ಹಣಕಾಸು ಪ್ರೋತ್ಸಾಹ-ರಿಯಾಯಿತಿ: 

ನೀತಿ ಅಡಿಯಲ್ಲಿ ನವೋದ್ಯಮಗಳಿಗೆ ರಾಜ್ಯ ಜಿಎಸ್‌ಟಿ, ಮಾರುಕಟ್ಟೆ ವೆಚ್ಚ, ಪೇಟೆಂಟ್ ವೆಚ್ಚ, ಗುಣಮಟ್ಟ ಪ್ರಮಾಣಣರಣ ವೆಚ್ಚ ಮರುಪಾವತಿಯನ್ನು ನೀಡುವುದಾಗಿ ಘೋಷಿಸಲಾಗಿದೆ. ಆದೇ ರೀತಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪೇಟೆಂಟ್ ವತ್ರ ಮಾರುಕಟ್ಟೆ ವೆಚ್ಚ, ಗುಣಮಟ್ಟ ಪ್ರಮಾಣಿಕರಣ ವೆಚ್ಚ, ಪ್ರೋಟೋಟೈಪಿಂಗ್ ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಸ್ಟಾಂಪ್ ಡ್ಯೂಟಿ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ಪ್ರೋಣಾಹ ಹಾಗೂ ವಿದ್ಯುತ್ ದರ ರಿಯಾಯಿತಿ ನೀಡುವ ಕುರಿತು ಉಲ್ಲೇಖಿಸಲಾಗಿದೆ. ಹಾಗೆಯೇ ದೊಡ್ಡ ಕೈಗಾರಿಕೆಗಳಿಗೆ ಪೇಟೆಂಟ್ ವೆಚ್ಚ ಮಾರುಕಟ್ಟೆ ವೆಚ್ಚ, ಎಸ್‌ಟಿಪಿ ವೆಚ್ಚ ಮಳೆ ನೀರು ಕೊಯ್ದು ವೆಚ್ಚ, ಭೂ ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕಗಳು ಹಾಗೂ ವಿದ್ಯುತ್ ದರ ರಿಯಾಯಿತಿ ನೀಡುವ ಕುರಿತು ಘೋಷಿಸಲಾಗಿದೆ.

Latest Videos
Follow Us:
Download App:
  • android
  • ios