ಬಿಜೆಪಿಗರು 75ಕ್ಕೆ ನಿವೃತ್ತಿ ಆಗ್ತಾರೆ, ನಿಮ್ದು 83 ಆಯ್ತು, ಇನಿಂಗ್ಸ್‌ ಮುಗಿಸಿ: ಶರದ್‌ ಪವಾರ್‌ಗೆ ಅಜಿತ್‌ ಟಾಂಗ್‌

ಜೀವನದಲ್ಲಿ 25-75ರ ವಯೋಮಿತಿ ಯಾವುದೇ ಸ್ಥಾನ ಹೊಂದಲು ಸೂಕ್ತ ವಯಸ್ಸು. ಆದರೆ ನಿಮಗೆ 83 ವರ್ಷ ಆದರೂ ನೀವು ಕೆಳಗಿಳಿಯುವ ಸೂಚನೆ ಇಲ್ಲ ಎಂದು ಶರದ್‌ ಪವಾರ್‌ಗೆ ಅಜಿತ್‌ ಪವಾರ್‌ ಟಾಂಗ್‌ ನೀಡಿದರು.

you are 83 arent you going to stop ajit pawar takes a swipe at sharad pawar s u turn on retirement ash

ಮುಂಬೈ (ಜುಲೈ 6, 2023): ಎನ್‌ಸಿಪಿ ಅಧ್ಯಕ್ಷ ಗಾದಿಯನ್ನು ಹಸ್ತಾಂತರಿಸಲು ನಿರಾಕರಿಸಿರುವ ತಮ್ಮ ದೊಡ್ಡಪ್ಪ ಶರದ್‌ ಪವಾರ್‌ ವಿರುದ್ಧ ತೀವ್ರ ವಾಗ್ದಾಳಿ ನಡೆದಿರುವ ಬಂಡಾಯ ನಾಯಕ ಅಜಿತ್‌ ಪವಾರ್‌, ‘ನಿಮಗೆ 83 ವರ್ಷ ಆಯ್ತು, ಇದು ನಿವೃತ್ತಿಯ ಸಮಯ’ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ಶರದ್‌ ಅನೇಕ ಸಲ ತಮ್ಮನ್ನು ಅವಕಾಶ ವಂಚಿತರನ್ನಾಗಿ ಮಾಡಿದ್ದರು ಎಂದಿರುವ ಅಜಿತ್‌, ‘ನನಗೆ ಮುಖ್ಯಮಂತ್ರಿ ಆಗುವ ಅಸೆ ಇದೆ. ಸಿಎಂ ಆದರೆ ನನ್ನ ಕನಸಿನ ಯೋಜನೆ ಜಾರಿ ಮಾಡುವೆ’ ಎಂದು ಘೋಷಿಸಿದ್ದಾರೆ.

ಬುಧವಾರ ಇಲ್ಲಿ ಆಯೋಜಿಸಲಾಗಿದ್ದ ಬಂಡಾಯ ಶಾಸಕರ ಸಭೆಯಲ್ಲಿ ಮಾತನಾಡಿದ ಅಜಿತ್‌ ಪವಾರ್‌, ‘ಐಎಎಸ್‌ ಅಧಿಕಾರಿಗಳು 60 ವರ್ಷಕ್ಕೆ ನಿವೃತ್ತಿಯಾಗ್ತಾರೆ. ಬಿಜೆಪಿ ನಾಯಕರು 75ಕ್ಕೆ ನಿವೃತ್ತಿ ಪಡೀತಾರೆ. ಈ ವಿಷಯದಲ್ಲಿ ನೀವು ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರ ಉದಾಹರಣೆ ನೋಡಬಹುದು. ಪ್ರತಿಯೊಬ್ಬರಿಗೂ ಅವರದ್ದೇ ಆದ ಇನಿಂಗ್ಸ್‌ ಇರುತ್ತದೆ. ಜೀವನದಲ್ಲಿ 25-75ರ ವಯೋಮಿತಿ ಯಾವುದೇ ಸ್ಥಾನ ಹೊಂದಲು ಸೂಕ್ತ ವಯಸ್ಸು. ಆದರೆ ನಿಮಗೆ 83 ವರ್ಷ ಆದರೂ ನೀವು ಕೆಳಗಿಳಿಯುವ ಸೂಚನೆ ಇಲ್ಲ’ ಎಂದು ಶರದ್‌ ಪವಾರ್‌ಗೆ ಟಾಂಗ್‌ ನೀಡಿದರು.

ಇದನ್ನು ಓದಿ: ಶಿವಸೇನೆ, ಎನ್‌ಸಿಪಿ ಬಳಿಕ ಕಾಂಗ್ರೆಸ್‌ ಹೋಳು? ಬಿಜೆಪಿ ಸಂಪರ್ಕದಲ್ಲಿ 'ಕೈ' ನಾಯಕರು!

ಇದೇ ವೇಳೆ, ‘ನಮ್ಮ ಪಾಲಿಗೆ ಸಾಹೇಬ್‌ (ಶರದ್‌ ಪವಾರ್‌) ದೇವರಿದ್ದಂತೆ ಮತ್ತು ನಾವು ಅವರ ಬಗ್ಗೆ ಅಪಾರವಾದ ಗೌರವ ಹೊಂದಿದ್ದೇವೆ. ಆದರೆ 2004ರಲ್ಲಿ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದ್ದರೂ, ಅದನ್ನು ತಪ್ಪಿಸಲಾಯ್ತು. ಕಾಂಗ್ರೆಸ್‌ಗಿಂತ ನಾವು ಹೆಚ್ಚು ಸ್ಥಾನ ಗೆದ್ದಿದ್ದರೂ ನಮ್ಮ ಹಿರಿಯ ನಾಯಕರು ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿದರು’ ಎಂದು ಹೆಸರು ಹೇಳದೆಯೇ ಪವಾರ್‌ ವಿರುದ್ಧ ಕಿಡಿಕಾರಿದರು.

ಅಲ್ಲದೆ, ‘ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ವಿರೋಧಿಸಿದವರಲ್ಲಿ ಶರದ್‌ ಪ್ರಮುಖರು. ಈಗ ಸೋನಿಯಾ ಜತೆ ಅವರು ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಇಂದು ಪವಾರ್‌ ಬಣಗಳ ಶಕ್ತಿ ಪ್ರದರ್ಶನ: ಶರದ್‌, ಅಜಿತ್‌ ಬಣದಿಂದ ಪ್ರತ್ಯೇಕ ಸಭೆ ಆಯೋಜನೆ; ಶಾಸಕರ ಮೇಲೆ ಎಲ್ಲರ ಚಿತ್ತ

ಯೋಚಿಸಿಯೇ ನಿರ್ಧಾರ:
ಈ ನಡುವೆ ಬಿಜೆಪಿ- ಶಿವಸೇನೆ ಸರ್ಕಾರ ಸೇರುವ ಕುರಿತು ಸಾಕಷ್ಟು ಯೋಚಿಸಿಯೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಜಿತ್‌ ಪವಾರ್‌ ಬಣದ ನಾಯಕ ಛಗನ್‌ ಭುಜಬಲ್‌ ಹೇಳಿದ್ದಾರೆ. ಇದ್ದಕ್ಕಿದ್ದಂತೆ ಬೆಳಗ್ಗೆ ಎದ್ದು ಸರ್ಕಾರ ಸೇರಿಬಿಟ್ಟೆವು ಎಂಬಂತೆ ಬೆಳವಣಿಗೆ ನಡೆದಿಲ್ಲ. ಸರ್ಕಾರ ಸೇರುವ ಬಗ್ಗೆ ನಾವು ಸಾಕಷ್ಟು ಯೋಚಿಸಿದ್ದೇವೆ. ಶರದ್‌ ಪವಾರ್‌ ರಾಜಕೀಯದಲ್ಲಿ 57-58 ವರ್ಷ ಅನುಭವ ಹೊಂದಿದ್ದಾರೆ. ನಾನು ಕೂಡಾ ಇದೇ ಕ್ಷೇತ್ರದಲ್ಲಿ 56 ವರ್ಷಗಳ ಅನುಭವ ಹೊಂದಿದ್ದೇನೆ. ನಾವು ಸೋದರ ಸಂಬಂಧಿಯನ್ನೇ ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಶರದ್‌ ಪವಾರ್‌ಗೆ ಗುರುದಕ್ಷಿಣೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪವಾರ್‌ ಕದನ: ಅಜಿತ್‌ ಅನರ್ಹತೆಗೆ ಶರದ್‌ ಅಸ್ತ್ರ: ಶರದ್‌ ಬಣದ ಪ್ರಮುಖರ ಅನರ್ಹತೆಗೆ ಅಜಿತ್ ಮೊರೆ; ಯಾರ ಪಾಲಾಗುತ್ತೆ ಪಕ್ಷ?

Latest Videos
Follow Us:
Download App:
  • android
  • ios