Asianet Suvarna News Asianet Suvarna News

ಹೀಗೆ ಮಾಡದಿದ್ರೆ ನನ್ನ ಯಡಿಯೂರಪ್ಪ ಅಂತಾ ಕರೆಯಬೇಡಿ: ಸಿದ್ದುಗೆ ಸಿಎಂ ಓಪನ್ ಚಾಲೆಂಜ್

ಬಜೆಟ್​ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೊಂದು ಸವಾಲು ಹಾಕಿದ್ದಾರೆ.

Yediyurappa Hits out at Siddaramaiah after Budget rbj
Author
Bengaluru, First Published Mar 8, 2021, 6:10 PM IST

ಬೆಂಗಳೂರು, (ಮಾ.08): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು (ಸೋಮವಾರ) ಮಧ್ಯಾಹ್ನ 12.05ಕ್ಕೆ ಬಜೆಟ್ ಭಾಷಣ ಆರಂಭಿಸಿದ್ದು, 105 ಪುಟಗಳನ್ನು ಬರೋಬ್ಬರಿ ಎರಡು ತಾಸಲ್ಲಿ ಓದಿ ಮುಗಿಸಿದರು.

ಬಜೆಟ್​ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಸಂಕಷ್ಟ ಕಾಲದಲ್ಲಿಯೂ ಒಂದು ರೂಪಾಯಿ ತೆರಿಗೆ ಹೆಚ್ಚಿಸದ ಐತಿಹಾಸಿಕ ಬಜೆಟ್​ ಇದು ಎಂದು ಸಮರ್ಥಿಸಿಕೊಂಡರು. 

ಮಾಜಿ ಸಿಎಂ ಬೇಡಿಕೆ ಈಡೇರಿಸಿದ ಬಿಎಸ್‌ವೈ: ಬಜೆಟ್‌ನಲ್ಲಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂಪರ್

ಈ ವೇಳೆ ವಿಪಕ್ಷ ನಾಯಕರ ಸದನ ಬಹಿಷ್ಕಾರ ವಿಚಾರಕ್ಕೆ ಉತ್ತರಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು, ದೇಶದ ಇತಿಹಾಸದಲ್ಲಿ ಬಜೆಟ್ ಅಧಿವೇಶನ ಬಹಿಷ್ಕಾರ ಮಾಡಿರುವ ನಿದರ್ಶನ ಇದೆಯಾ..? ಫೇಸ್​​ ಮಾಡಲು ಯೋಗ್ಯತೆ ಇಲ್ಲದೇ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ 130-35 ಸ್ಥಾನ ಗೆಲ್ಲುವ ಮೂಲಕ ಅವರನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತೇನೆ. ಹೆಚ್ಚು ಸ್ಥಾನ ಗೆಲ್ಲಲಿಲ್ಲ ಎಂದರೇ ನನ್ನನ್ನು ಯಡಿಯೂರಪ್ಪ ಅಂತಾನೇ ಕರೆಯಬೇಡಿ ಎಂದು ಸವಾಲು ಹಾಕಿದರು.

ಮುಂದಿನ ಚುನಾವಣೆಗೆ ಶಾಶ್ವತವಾಗಿ ಸಿದ್ದರಾಮಯ್ಯ ಅವರನ್ನು ವಿಪಕ್ಷದಲ್ಲೇ ಕೂರುವಂತೆ ಮಾಡುತ್ತೇನೆ. ಸಿದ್ದರಾಮಯ್ಯ ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲೇ ಕೂರಬೇಕು. ಅವರಿಗೆ ಪ್ರಶ್ನೆ ಮಾಡುವ ನೈತಿಕತೆ ಏನಿದೆ? ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ಸಮಸ್ಯೆಯಾಗಿದೆ. ಅವರು ಏನು ಮಾತನಾಡುತ್ತಿದ್ದಾರೆ ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಏನು ನಮ್ಮ ಬಗ್ಗೆ ಹೇಳೋದು? ಅವರು ಸದನಕ್ಕೆ ಬರಲಿ, ನಾವು ಅವರ ಕಾಲದಲ್ಲಿ ಏನೇನು ಆಗಿದೆ ಎಂದು ಸದನದಲ್ಲಿ ಬಿಚ್ಚಿಡುತ್ತೇವೆ. ಅಲ್ಲದೇ ಸಿಡಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ವಿರೋಧ ಪಕ್ಷಗಳು ಹೇಗೆ ಹೇಳುತ್ತಾರೆ ಅದರಂತೆ ತನಿಖೆ ಮಾಡಿಸಲು ನಾನು ಸಿದ್ಧವದ್ದೇನೆ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios