Asianet Suvarna News Asianet Suvarna News

Council Election Karnataka : ಯಡಿಯೂರಪ್ಪ ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ

  • ಬಿಜೆಪಿ ನಾಯಕರಾದ ಯಡಿಯೂರಪ್ಪ ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ
  • ಈ ವರೆಗೆ ಯಡಿಯೂರಪ್ಪ ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ
Yediyurappa asks JDS leaders  to support BJP in Council polls  snr
Author
Bengaluru, First Published Dec 5, 2021, 1:20 PM IST

ಮೈಸೂರು(ಡಿ.05): ಬಿಜೆಪಿ (BJP) ನಾಯಕರಾದ ಯಡಿಯೂರಪ್ಪ (Yediyurappa) ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ. ಈ ವರೆಗೆ ಯಡಿಯೂರಪ್ಪ  ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಸಿಎಂ ಬೊಮ್ಮಾಯಿ (BasavarajaBommai) ಕೂಡ ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ ಎಂದು  ವಿಧಾನ ಪರಿಷತ್ ಚುನಾವಣೆ (MLC Election) ಮೈತ್ರಿ ವಿಚಾರದ ಸಂಬಂಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟನೆ ನೀಡಿದರು.  ಮೈಸೂರಿನಲ್ಲಿಂದು ಮಾತನಾಡಿದ  ಎಚ್ಡಿಕೆ  ಬಿಜೆಪಿಗೆ (BJP)  ಬೆಂಬಲ ನೀಡುವ ಬಗ್ಗೆ ಪರೋಕ್ಷವಾಗಿ  ಮಾತನಾಡಿದರು. 

ಇನ್ನು ಕಾಂಗ್ರೆಸ್ (congress) ಬಹಿರಂಗವಾಗಿಯೇ ನಮಗೆ ಯಾರ ಬೆಂಬಲ ಬೇಡ ಎಂದಿದ್ದಾರೆ. ಬೇಡ ಎಂದವರಿಗೆ ನಾವೇ ಹೋಗಿ ಬೆಂಬಲ ಕೊಡಲು ಸಾಧ್ಯವಿಲ್ಲ.ಈ ಎಲ್ಲಾ ಅಂಶ ಮುಂದಿಟ್ಟು ಕೊಂಡು ನಾಳೆ ಬೆಂಬಲದ ತೀರ್ಮಾನ ಮಾಡುವೆ. ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಟಿ ನಡೆಸಿ ಹೇಳುತ್ತೇನೆ ಎಂದು ಸ್ಪಷ್ಟನೆ ನೀಡಿದರು. 
 
ವಿಧಾನ ಪರಿಷತ್ ಚುನಾವಣೆ : ಸದ್ಯ ಜೆಡಿಎಸ್ 6 ಕ್ಷೇತ್ರಗಳಲ್ಲಿ ಜೆಡಿಎಸ್ (JDS) ಗೆಲ್ಲುವ ಸನ್ನಿವೇಶ ಇದೆ.  6 ಕ್ಷೇತ್ರಗಳನ್ನು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಮೈಸೂರಿನಲ್ಲಿ (Mysuru) ಮೊದಲ ಬಾರಿ ಕಾರ್ಯಾಗಾರದ ಅಂಶಗಳನ್ನು ಅಳವಡಿಕೆ ಮಾಡಲಾಗಿದೆ.  ಹಿಂದೆ ಇಲ್ಲಿ ಎರಡು  ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ.  ಈ ಬಾರಿ ಕೂಡ ನಮ್ಮ ಅಭ್ಯರ್ಥಿ ಮಂಜೇಗೌಡ ಗೆಲ್ಲುವ ವಿಶ್ವಾಸ ನನಗಿದೆ. ವರುಣಾ ಕ್ಷೇತ್ರದಲ್ಲೂ ನಾಯಕರ ಕೊರತೆ ನಡುವೆಯೂ ಸಭೆ ಯಶಸ್ವಿ ಆಗಿದೆ.  ಇದೆಲ್ಲವನ್ನು ಗಮನಿಸಿದರೆ ಜೆಡಿಎಸ್ ಮುಂದಿನ ಚುನಾಗಣೆಯಲ್ಲಿಯೂ ಉತ್ತಮ ಫಲಿತಾಂಶ ಪಡೆದುಕೊಳ್ಳಲಿದೆ ಎಂದರು. 
 
ಯಾರು ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ನಮಗೆ ಬೇಕಿಲ್ಲ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಸ ನಾಯಕರ ಹುಡುಕಾಟದಲ್ಲಿ ಇದ್ದೇವೆ. ಇದೇ ಅಂಶಕ್ಕೆ ನಾನು ಬದ್ದನಿದ್ದೇನೆ ಎಂದು ಜೆಡಿಎಸ್ (JDS) ತೊರೆದು ಕಾಂಗ್ರೆಸ್ (Congress) ಸೇರಲು ಸಜ್ಜಾಗಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡರಿಗೆ (GT Devegowda) ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಟಾಂಗ್ ಕೊಟ್ಟರು.   

ನಮ್ಮ ಕಾರ್ಯಾಕರ್ತರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೊಸ ನಾಯಕರನ್ನು ಹಾಕುವಂತೆ ಕೇಳಿದ್ದಾರೆ. ನಾನು ಅದೇ ಕೆಲಸದಲ್ಲಿ ಇದ್ದೇನೆ.  ಹಿಂದೆ ಇದ್ದವರಿಗೂ ರಾಜಕೀಯ (politics) ಉಳಿವು ಮುಖ್ಯ ಅಲ್ಲವೆ. ಅದಕ್ಕೆ ಅವರು ಅವರ ತಂಡ ರೆಡಿ ಮಾಡಿಕೊಳ್ಳುತ್ತಿದ್ದಾರೆ.  ಅವರಂತೆ ಮೂರೂ ಪಕ್ಷಗಳಲ್ಲೂ ನಮ್ಮ ಪರ ಕೆಲಸ ಮಾಡುವವರು ಇದ್ದಾರೆ. ಕಾಂಗ್ರೆಸ್, ಬಿಜೆಪಿಯಲ್ಲೂ (BJP) ನಮ್ಮ ಪರ ಇರುವವರು ಇದ್ದಾರೆ. ನಾಯಕರು ಏನೇ ಹೇಳಿದರೂ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಎರಡನೇ ಪ್ರಾಶಸ್ತ್ಯ ಮತ ಜೆಡಿಎಸ್‌ಗೆ ಕೊಡುತ್ತಾರೆ.  ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಎರಡನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಪಾತ್ರ ಬಹಳ ಮುಖ್ಯವಾಗಿದೆ‌ ಎಂದು ಎಚ್ಡಿಕೆ ಹೇಳಿದರು.

ಯಡಿಯೂರಪ್ಪ ಹೇಳಿಕೆ  :  ಮಂಡ್ಯದಲ್ಲಿಂದು (Mandya) ಚುನಾವಣಾ ಪ್ರಚಾರ ಕಾರ್ಯಕ್ಕೆ ತೆರಳಿದ  ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ  ಈಗ ನಡೆಯುತ್ತಿರುವ ಪರಿಷತ್ ಚುನಾವಣೆಯಲ್ಲಿ ನಾವು 15 ರಿಂದ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ರಾಜ್ಯದಲ್ಲಿ ಕಾಂಗ್ರೆಸ್ ಒಂದಿಬ್ಬರಿಂದಾಗಿ ಉಸಿರಾಡೊ ಸ್ಥಿತಿಯಲ್ಲಿದೆ.  ಆ ಉಸಿರನ್ನ ನಿಲ್ಲಿಸಲು ನಾವು ಈಗಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ 3 ರಿಂದ 4 ಸ್ಥಾನ ಗೆಲ್ಲಬೇಕಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲು ಶ್ರಮಿಸುತ್ತೇನೆ ಎಂದು ಹೇಳಿದರು.

ಇತ್ತ 6 ಕ್ಷೇತ್ರ ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲವಾಗಿ ನಿಲ್ಲಲು ಸಜ್ಜಾಗಿದೆ. ಎರಡು ಪಕ್ಷಗಳು ಮೈತ್ರಿಯಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಇದರಿಂದ ಬಿಜೆಪಿ ನಾಯಕರು ಹೆಚ್ಚಿನ ಸ್ಥಾನಗಳಲ್ಲೇ ಗೆಲ್ಲುವ ಭರವಸೆಯಲ್ಲಿ ಇದ್ದಾರೆ.  

Follow Us:
Download App:
  • android
  • ios