Asianet Suvarna News Asianet Suvarna News

Vijayapura: ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿ: ಬಿ.ಎಲ್‌.ಸಂತೋಷ್

ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ವೇಗ ಹೆಚ್ಚಿಸಬೇಕಿದ್ದು, ಮತ್ತೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಹೇಳಿದರು. 

Work hard for BJP to come to Power Says BL Santosh At Vijayapura gvd
Author
First Published Jan 30, 2023, 11:58 PM IST

ವಿಜಯಪುರ (ಜ.30): ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ವೇಗ ಹೆಚ್ಚಿಸಬೇಕಿದ್ದು, ಮತ್ತೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಹೇಳಿದರು. ನಗರದ ಗುರು ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಆಂತರಿಕ ಸಭೆ ಚಾಲನೆ ನೀಡಿ ಮಾತನಾಡಿದ ಅವರು, ಮಂಡಳವಾರು ಪಕ್ಷ ಸಂಘಟನೆ ಮಾಡಬೇಕಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಅಭಿವೃದ್ಧಿಗಳನ್ನು ಜನತೆಗೆ ಮುಟ್ಟಿಸಲು ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಮಾತನಾಡಿ, ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ವಿಜಯಶಾಲಿಯಾಗಿಸುವ ವಿಜಯ ಸಂಕಲ್ಪವನ್ನು ಸ್ವೀಕರಿಸಬೇಕು. ಪಕ್ಷದ ಕಾರ್ಯಕರ್ತರು ಇನ್ನಷ್ಟು ಪರಿಣಾಮಕಾರಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ವೇಳೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್‌. ಪಾಟೀಲ್‌ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಪಿ.ಎಚ್‌. ಪೂಜಾರ ಮುಂತಾದವರು ಈ ಸಂದರ್ಭದಲ್ಲಿ ಇದ್ದರು. 

ಶಾಸಕರೇ ಉದ್ಘಾಟಿಸಬೇಕೆಂದು ಬೀಗ ಹಾಕಿದ್ದ 3 ಕೋಟಿಯ ಕಾಂಕ್ರೀಟ್ ರಸ್ತೆ ಢಮಾರ್!

ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ಅಧ್ಯಕ್ಷ ವೀರೇಶ ವಾಲಿ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಿದರು. ಬಸವರಾಜ ಬಿರಾದಾರ ಸ್ವಾಗತಿಸಿದರು. ಶಿವರುದ್ರ ಬಾಗಲಕೋಟ ಕಾರ್ಯಕ್ರಮ ನಿರೂಪಿಸಿದರು. ಕೆಲ ದಿನಗಳ ಹಿಂದಷ್ಟೇವಿಜಯಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟಿ್ರೕಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಕಾರ್ಯಕ್ರಮಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೈರು ಹಾಜರಾಗಿದ್ದರು. ಆದರೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಡೀ ಜೀವನ ಭಕ್ತರಿಗೋಸ್ಕರ ಸವೆಸಿದವರು ಸಿದ್ದೇಶ್ವರ ಶ್ರೀಗಳು: ಸಿದ್ದೇಶ್ವರ ಶ್ರೀಗಳು ಪ್ರಕೃತಿ ನಿಯಮಕ್ಕೆ ಅನುಗುಣವಾಗಿ ಅವರು ಭೌತಿಕವಾಗಿ ನಮ್ಮ ಮಧ್ಯ ಇಲ್ಲ. ಆದರೆ ಅವರ ಚೇತನ ನಮ್ಮಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ ಹೇಳಿದರು. ನಗರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಲಿಂ.ಸಿದ್ದೇಶ್ವರ ಶ್ರೀಗಳಿಗೆ ಅವರು ನುಡಿನಮನ ಸಲ್ಲಿಸಿದ ಅವರು, ಪ್ರಕೃತಿ ನಿಯಮಕ್ಕೆ ಯಾರಿಗೂ ಅತೀತನಾಗಿರಲು ಸಾಧ್ಯವಿಲ್ಲ. ಪೂಜ್ಯ ಸಿದ್ದೇಶ್ವರ ಶ್ರೀಗಳು ಭೌತಿಕವಾಗಿಲ್ಲದಿರಬಹುದು ಆದರೆ, ಅವರ ವಿಚಾರದಲ್ಲಿದ್ದಾರೆ. ಅವರ ಚೇತನ ನಮ್ಮಲ್ಲಿದೆ. ನಾಡಿಗೋಸ್ಕರ ಅದಕ್ಕೂ ಮೀರಿ ಮನುಕುಲಕ್ಕೋಸ್ಕರ ಬದುಕಿದವರು ಸಿದ್ದೇಶ್ವರ ಶ್ರೀಗಳು. 

ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆ ಮುಕ್ತಾಯ, ಜಂಟಿ ಅಧಿವೇಶನ ಕುರಿತು ನಾಳೆ ರಾಷ್ಟ್ರಪತಿ ಭಾಷಣ

ಅವರ ಬಳಿ ಹೋದರೆ ಸಾಕು ಮನಸ್ಸು ಶಾಂತ ಸ್ಥಿತಿಗೆ ತಲುಪುತ್ತಿತ್ತು. ನೂರಾರು ವರ್ಷಗಳ ಕಾಲ ಅವರು ನಮ್ಮಲ್ಲಿರುತ್ತಾರೆ ಎಂದು ಹೇಳಿದರು. ಸಿದ್ದೇಶ್ವರ ಶ್ರೀಗಳು ಈ ಸಮಾಜಕ್ಕೆ ತಂಗಾಳಿ, ಸುಹಾಸನೆ, ನೆಮ್ಮದಿ, ಶಾಂತಿ ನೀಡಿದ್ದಾರೆ. ಯಾರು ಪ್ರತ್ಯಕ್ಷವಾಗಿ ಅವರನ್ನು ನೋಡಿರಲಿಲ್ಲವೋ ಅವರು ಮುಂದೊಂದು ದಿನ ಇಂತಹ ಸ್ವಾಮೀಜಿಗಳು ನಮ್ಮ ಮಧ್ಯೆ ಬದುಕಿದ್ದರಾ? ಎಂಬ ಅಚ್ಚರಿ ಮೂಡದೇ ಇರದು ಎಂದರು. ಹಣ ಇಲ್ಲದಿದ್ದರೆ ಸಾಕು ಮನಸು ತಲ್ಲಣಗೊಳ್ಳುತ್ತದೆ. ಆದರೆ ಒಬ್ಬ ಮನುಷ್ಯ ಜೇಬಿಲ್ಲದೇ, ಮೊಬೈಲ್‌ ಇಲ್ಲದೇ ಹಣವೇ ಇಲ್ಲದೇ ಇಡೀ ಜೀವನ ಭಕ್ತರಿಗೋಸ್ಕರ ಸವೆಸಿದರು ಎಂದರೆ ಮುಂದಿನ ಪೀಳಿಗೆ ಅಚ್ಚರಿಗೊಳ್ಳುವುದು ಸಹಜ ಎಂದರು.

Follow Us:
Download App:
  • android
  • ios