ಗಯಾ(ಸೆ.  14) ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ನಟಿ ಕಂಗನಾ ರಣಾವತ್ ಗೆ ಸೋಶಿಯಲ್  ಮೀಡಿಯಾ ಸೇರಿ ದೇಶಾದ್ಯಂತ ವ್ಯಾಪಕ ಬೆಂಬಲ ಸಿಕ್ಕಿದೆ. ಅವರ ಕಚೇರಿ ಧ್ವಂಸ ಮಾಡಿದ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರವನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ನಡುವೆ ಕಂಗನಾ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.  ಬಿಹಾರದಲ್ಲಿ ಚುನಾವಣೆ ಕಾವು ಏರುತ್ತಿದ್ದು ಕಂಗನಾ ಅವರನ್ನು ಎನ್‌ಡಿಎ ಸ್ಟಾರ್ ಕ್ಯಾಂಪೇನರ್ ಆಗಿ ಮಾಡಲಿದೆಯೇ? ಎಂಬ ಪ್ರಶ್ನೆಯನ್ನು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಗೆ ಕೇಳಲಾಗಿದೆ.

ಮಹಾ ಸರ್ಕಾರವನ್ನೇ ನಡುಗಿಸಿ ವಾಪಸ್ ಹೊರಟ ಕಂಗನಾ

ನಮಗೆ ಪ್ರಧಾನಿ ನರೇಂದ್ರ ಮೋದಿ ಇರುವಾಗ ಯಾವ ಸ್ಟಾರ್ ಕ್ಯಾಂಪೇನರ್ ಅಗತ್ಯ ಇಲ್ಲ ಎಂದು ಫಡ್ನವೀಸ್ ತಿಳಿಸಿದ್ದಾರೆ. ಬಿಹಾರದ ಬಿಜೆಪಿ ಚುನಾವಣಾ ರಣತಂತ್ರದ ಉಸ್ತುವಾರಿ ಫಡ್ನವೀಸ್ ಕೈಯಲ್ಲಿದೆ.

ಕೊರೋನಾ ವಿರುದ್ಧ ಹೋರಾಟ ಮಾಡುವುದಕ್ಕಿಂತ ಹೆಚ್ಚಾಗಿ ಕಂಗನಾ ವಿರುದ್ಧ ಹೋರಾಟ ಮಾಡುವುದು ಶಿವಸೇನೆ ಮತ್ತು ಉದ್ಧವ್ ಠಾಕ್ರಗೆ ಮುಖ್ಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ತಾಕತ್ತಿದ್ದರೆ  ತಡೆಯಿರಿ ಎಂದು ಮುಂಬೈಗೆ ಬಂದಿದ್ದ ನಟಿ ಕಂಗನಾ ರಣಾವತ್ ಈಗ ಮುಂಬೈನಿಂದ ಹಿಂದಿರುಗುವ ದಿನಾಂಕವನ್ನು ಪ್ರಕಟ ಮಾಡಿದ್ದಾರೆ.  ಕೇಂದ್ರ ಸರ್ಕಾರ ನಟಿಗೆ ವೈ ಪ್ಲಸ್ ಸೆಕ್ಯೂರಿಟಿಯನ್ನು ನೀಡಿತ್ತು.