ಮುಡಾ ಕೇಸ್‌ನಲ್ಲಿ ಸಿಎಂ ತಪ್ಪು ಮಾಡಿಲ್ಲ ಎಂದರೆ ಚಿಂತೆ ಏಕೆ?: ಹೈಕೋರ್ಟ್‌ನಲ್ಲಿ ರಾಜ್ಯಪಾಲರ ವಾದ
ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಪ್ರಕರಣದಲ್ಲಿ ಸಂಪುಟದ ಸಲಹೆ ಒಪ್ಪಬೇಕಿಲ್ಲ. ಮಂತ್ರಿಗಳನ್ನು ಸಿಎಮ್ಮೇಆಯ್ಕೆ ಮಾಡಿರುವಾಗ ಅಂಥ ಸಂಪುಟದ ನಿರ್ಣಯ, ಸಲಹೆಯನ್ನು ರಾಜ್ಯಪಾಲರು ಒಪ್ಪಬೇಕಾಗಿಲ್ಲ ಎಂದು ರಾಜ್ಯಪಾಲರ ಪರ ಸಾಲಿಸಿಟರ್ ಜನ ರಲ್ ತುಷಾರ್ ಮೆಸ್ತಾ ಪ್ರಬಲವಾಗಿ ಹೈಕೋರ್ಟ್‌ನಲ್ಲಿ ವಾದಿಸಿದಾರೆ.
ಬೆಂಗಳೂರು (ಸೆ.01): ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಪ್ರಕರಣದಲ್ಲಿ ಸಂಪುಟದ ಸಲಹೆ ಒಪ್ಪಬೇಕಿಲ್ಲ. ಮಂತ್ರಿಗಳನ್ನು ಸಿಎಮ್ಮೇಆಯ್ಕೆ ಮಾಡಿರುವಾಗ ಅಂಥ ಸಂಪುಟದ ನಿರ್ಣಯ, ಸಲಹೆಯನ್ನು ರಾಜ್ಯಪಾಲರು ಒಪ್ಪಬೇಕಾಗಿಲ್ಲ ಎಂದು ರಾಜ್ಯಪಾಲರ ಪರ ಸಾಲಿಸಿಟರ್ ಜನ ರಲ್ ತುಷಾರ್ ಮೆಸ್ತಾ ಪ್ರಬಲವಾಗಿ ಹೈಕೋರ್ಟ್‌ನಲ್ಲಿ ವಾದಿಸಿದಾರೆ. 'ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಮುನ್ನ ರಾಜ್ಯಪಾಲರು ಸಂಬಂಧಪಟ್ಟ ಪ್ರತಿ ದಾಖಲೆ ಪರಿಶೀಲಿಸಿ, ಟಿಪ್ಪಣಿ ಮಾಡಿಕೊಂಡು ತಮ್ಮ ವಿವೇಚನೆ ಬಳಸಿ ನಿರ್ಧಾರ ಮಾಡಿದ್ದಾರೆ. ಮುಡಾ ವಿಚಾರದಲ್ಲಿ ಸಿಎಂ ಯಾವುದೇ ನಿರ್ಣಯ ಮಾಡಿಲ್ಲ, ಶಿಫಾರಸು ಮಾಡಿಲ್ಲ ಎಂದಾದರೆ ಅವರಿಗೇಕೆ ಚಿಂತೆ' ಎಂದು ಪ್ರಶ್ನಿಸಿದ್ದಾರೆ. ಮುಡಾ ಪ್ರಕರಣ ಸಂಬಂಧ ಪ್ರಾಸಿಕ್ಯೂ ಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾ| ಎಂ.ನಾಗ ಪ್ರಸನ್ನ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಮೆಸ್ತಾ ವಾದ ಮಂಡಿಸಿದ ನಂತರ ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದ ಸಿಂಗ್, ಮತ್ತೊಬ್ಬ ದೂರುದಾರ ಪ್ರದೀಪ್ ಪರ ಪ್ರಭುಲಿಂಗ ನಾವದಗಿ ಹಾಗೂ ಟಿ.ಜೆ.ಅಬ್ರಹಾಂ ಪರ ರಂಗನಾಥ ರೆಡ್ಡಿ ಅವರೂ ತಮ್ಮ ವಾದ ಮಂಡಿಸಿದರು. ಎಲ್ಲರವಾದಆಲಿಸಿದನ್ಯಾಯಮೂರ್ತಿಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು. ಇದೇ ವೇಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡ ಬೇಕು ಮತ್ತು ಯಾವುದೇ ಆತುರದ ಕೈಗೊಳ್ಳಬಾರದು' ಎಂಬ ಈ ಹಿಂದಿನ ಆದೇಶವನ್ನು ಸೆ.2ರವರೆಗೆ ವಿಸ್ತರಿಸಿತು.
ಪ್ರಾಸಿಕ್ಯೂಷನ್: ಸಿಎಂ ಸಿದ್ದರಾಮಯ್ಯಗೆ ಇಂದು ಮತ್ತೆ ಟೆನ್ಷನ್, ಹೈಕೋರ್ಟ್‌ನಲ್ಲಿಂದು ವಿಚಾರಣೆ
ತುಷಾರ್ ಮೆಸ್ತಾ ವಾದ: ತುಷಾರ್‌ಮೆಪ್ತಾ ವಾದಿಸಿ, ಸಚಿವ ಸಂಪುಟದ ಸಚಿವರನ್ನು ಮುಖ್ಯಮಂತ್ರಿಗಳೇ ಆಯ್ಕೆ ಮಾಡುತ್ತಾರೆ. ಹೀಗಾಗಿ ಇಂತಹ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಒಪ್ಪಬೇಕಿಲ್ಲ. ಮುಖ್ಯಮಂತ್ರಿಗಳು ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸದೇ ಇರಬಹುದು. ಆದರೆ ಅವರು ನೇಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ಸಭೆ ನೇತೃತ್ವ ವಹಿಸಿದ್ದಾರೆ. ಹೀಗಾಗಿ ಅಂತಹ ಸಭೆಯ ನಿರ್ಣಯಕ್ಕೆ ಯಾವುದೇ ಮಹತ್ವವಿಲ್ಲ ಎಂದರು. ಸಂಪುಟ ತಾರತಮ್ಯ ಪೂರಿತ ನಿರ್ಣಯ ಕೈಗೊಂಡಿದೆ. ಹೀಗಾಗಿ ಸಂಪುಟ ಸೂಚನೆ ಪಾಲಿಸದೇ ಸ್ವಂತ ವಿವೇಚನೆ ಬಳಸುತ್ತಿದ್ದೇನೆ ಎಂದು ರಾಜ್ಯಪಾಲರು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ರಾಜ್ಯಪಾಲರ ಕಡತವನ್ನು ಸಲ್ಲಿಸುತ್ತಿದ್ದೇವೆ. ರಾಜ್ಯಪಾಲರು ತರಾತುರಿಯ ತೀರ್ಮಾನ ಕೈಗೊಂಡಿದ್ದಾರೆಂಬುದು ಸುಳ್ಳು. ಆಗಸ್ಟ್ 14ರಂದೇ ಎಲ್ಲ ಕಡತ ಓದಿ ಟಿಪ್ಪಣಿ ಮಾಡಿದ್ದಾರೆ.
ಸಂಪುಟ ಸಲಹೆಯನ್ನೂ ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ ಎಂದು ವಿವರಿಸಿದರು. ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್ 17ಎ ಎಲ್ಲಾ ಕಡೆ ಅನ್ವಯವಾಗುತ್ತದೆ. ಇದು ಎಲ್ಲಾ ಸರ್ಕಾರಿ ಸೇವಕರಿಗೆ ಅನ್ವಯಿಸುತ್ತದೆ. ಟಿ.ಜೆ.ಅಬ್ರಹಾಂ ದೂರನ್ನು ಓದಿ, ದಾಖಲೆ ಗಮನಿಸಿದ್ದೇನೆ ಎಂದು ರಾಜ್ಯಪಾಲರು ಹೇಳಿದ್ದರು. ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆ ಕಂಡುಬಂದಿರುವ ಕಾರಣ ಮುಖ್ಯಮಂತ್ರಿಗೆ ಶೋಕಾಸ್ ಜಾರಿ ಮಾಡಿದ್ದರು' ಎಂದು ನೋಟಿಸ್ ಸಮರ್ಥಿಸಿಕೊಂಡರು. ಸಚಿವ ಸಂಪುಟ ನಿರ್ಣಯ ಕೈಗೊಳ್ಳುವಾಗ ತನ್ನ ವಿವೇಚನೆಯನ್ನೇ ಬಳಸಿಲ್ಲ. ಮುಖ್ಯ ಕಾರ್ಯದರ್ಶಿ ನೋಟ್ ಸಿದ್ಧಪಡಿಸುತ್ತಾರೆ. ಅಡ್ವಕೇಟ್ ಜನರಲ್ ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ನಂತರ ನಡೆದಿದ್ದ ಕ್ಯಾಬಿನೆಟ್ ಅಡ್ವಕೇಟ್ ಜನರಲ್ ಅಭಿಪ್ರಾಯವನ್ನು ನಿರ್ಣಯವಾಗಿ ರೂಪಿಸಿದೆ.
ಎ.ಜಿ. ಅಭಿಪ್ರಾಯದಲ್ಲಿದ್ದ ಅಲ್ಪವಿರಾಮ, ಪೂರ್ಣವಿರಾಮವನ್ನೂ ಬಿಟ್ಟಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಸಾಮೂಹಿಕ ಮೂರ್ಖತನ ಮುಖ್ಯಮಂತ್ರಿಗಳು ತಮ್ಮ ಪ್ರತಿಕ್ರಿಯೆ ನೀಡುವಾಗಲೂ ಸ್ವಂತ ವಿವೇಚನೆಯನ್ನೇ ಬಳಸಿಲ್ಲ. ಎಜಿ ಅಭಿಪ್ರಾಯ, ಕ್ಯಾಬಿನೆಟ್ ನಿರ್ಣಯದ ಭಾಗಗಳನ್ನೇ ತಮ್ಮ ಪ್ರತಿಕ್ರಿಯೆ ಎಂದು ನೀಡಿದ್ದಾರೆ. ಬೆಂಗಳೂರು ಐಟಿ ಹಬ್, ಆದರೆ ಇವರು ಕಾಪಿಯನ್ನೂ ಸರಿಯಾಗಿ ಮಾಡಿಲ್ಲ. ಕಾಪಿ ಹೊಡೆಯಲು ಎಐ ಅನ್ನಾದರೂ ಬಳಸ ಬಹುದಿತ್ತು. ಇದು ಎಂಬುದು ಮೇಲ್ನೋಟಕ್ಕೇ ಕಾಣುತ್ತಿದೆ ಎಂದು ಮೆಸ್ತಾ ವ್ಯಂಗ್ಯವಾಡಿದರು. ವಾದದ ಒಂದು ಹಂತದಲ್ಲಿ ಮುಖ್ಯ ಮಂತ್ರಿಯ ಪ್ರಾಸಿಕ್ಯೂಷನ್ ವೇಳೆ ಸಚಿವ ಸಂಪುಟದ ನಿರ್ಣಯ ಬೇಕಿಲ್ಲ ಎಂದು ಹಲವು ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಹೇಳಿದೆ' ಎಂದು ನ್ಯಾ.ಎಂ. ನಾಗಪ್ರಸನ್ನ ಹೇಳಿದಾಗ, ಮೆಪ್ತಾ ಅವರು, ಸಾಂವಿಧಾನಿಕ ಕರ್ತವ್ಯದಲ್ಲಿ ಇರುವಾಗ ಕೆಲವೊಮ್ಮೆ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು. ವಿಳಂಬ ಆದಷ್ಟೂ ಸಮಸ್ಯೆ ಹೆಚ್ಚುತ್ತದೆ ಎಂದರು.
ಸ್ನೇಹಮಹಿ ಕೃಷ್ಣಪರವಾದ: ದೂರುದಾರಸ್ನೇಹಮಯಿ ಕೃಷ್ಣ ಪರ ಮಣೀಂದರ್‌ಸಿಂಗ್ ವಾದಿಸಿ, ಸ್ವತಂತ್ರ ತನಿಖಾ ಸಂಸ್ಥೆಯಿಂದ ಈ ಪ್ರಕರಣವನ್ನು ತನಿಖೆ ಮಾಡಿಸಬೇಕು. ಲೆಕ್ಕಪರಿಶೋಧಕರೂ ತನಿಖೆಯ ಭಾಗವಾಗಿರಬೇಕು. ರಾಜ್ಯ ಸರ್ಕಾರದ ಅಡಿಯ ತನಿಖಾಧಿಕಾರಿಯಿಂದ ಈ ಕೇಸ್ ತನಿಖೆ ನಡೆಸುವುದು ಸಾಧ್ಯವೇ? ಭೂಸ್ವಾಧೀನ ಆದಾಗ ಅದರ ಮೌಲ್ಯ ಕ3 ಲಕ್ಷ 24 ಸಾವಿರ, ಮಾರಾಟವಾದಾಗ ಕ್ರಯಪತ್ರದಲ್ಲಿ ಕ5 ಲಕ್ಷ98 ಸಾವಿರ ಮೌಲ್ಯ ಎಂದು ಉಲ್ಲೇಖಿಸಲಾಗಿದೆ. ಈಗ 14 ನಿವೇಶನದ ಮೌಲ್ಯ ಕ55 ಕೋಟಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಪ್ರಕರಣ ಸ್ವತಂತ್ರ ತನಿಖೆ ನಡೆಯಬೇಕಾದಷ್ಟು ಅಂಶಗಳನ್ನು ಒಳಗೊಂಡಿದೆ ಎಂದರು.
ಸ್ವಾಧೀನವಾದ ಜಮೀನಿನಲ್ಲಿ 2001, 2004 ನಡುವೆ ಮುಡಾ ನಿವೇಶನ ಹಂಚಿಕೆ ಮಾಡಲಾಗಿದೆ. ಭೂಮಿ ಸ್ವಾಧೀನವಾಗಿ ಪರಿಹಾರದ ಹಣವನ್ನು ನೀಡಿದರೂ ಮಾಲೀಕರು ಪಡೆದಿಲ್ಲ. 2004ರಲ್ಲಿ ಕೃಷಿ ಜಮೀನೆಂದು ನಮೂದಿಸಿ ಮುಖ್ಯಮಂತ್ರಿಗಳ ಭಾಮೈದ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ' ಎಂದರು. 'ಭೂಮಿ ಅಭಿವೃದ್ಧಿಯಾದ ಮೇಲೆ ಹೇಗೆ ಕೃಷಿ ಜಮೀನಾಯಿತು? ಎಂದು ನ್ಯಾ.ನಾಗಪ್ರಸನ್ನ ಪ್ರಶ್ನಿಸಿದರು. 'ಅದೇ ಈ ಕೇಸಿನಲ್ಲಿ ಮ್ಯಾಜಿಕ್, ಹೀಗಾಗಿ ತನಿಖೆನಡೆಯಬೇಕು.ತನಿಖಾಧಿಕಾರಿಸಮರ್ಥವಾಗಿದ್ದರೆ ಕಂಡುಹಿಡಿಯಬಹುದು. ತನಿಖೆ ನಡೆಯದಿದ್ದರೆ ಇದು ಟ್ರಾಜಿಕ್ ಆಗಲಿದೆ' ಎಂದು ಮಣಿಂದರ್ ಸಿಂಗ್ ಹೇಳಿದರು.
ಒಂದೆಡೆ ಸಮರ್ಥನೆ, ಇನ್ನೊಂದೆಡೆ ವಾದ: ಸರ್ಕಾರ ತನಿಖೆಗೆಂದು ಆಯೋಗ ರಚಿಸಿದೆ. ಸರ್ಕಾರಕ್ಕೇ ಮೇಲ್ನೋಟಕ್ಕೆ ಅಕ್ರಮ ಕಂಡುಬಂದಿದೆ. ಒಂದೆಡೆ ಅಕ್ರಮವಾಗಿಲ್ಲ ಎಂದು ಹೇಳುತ್ತಿದ್ದಾರೆ ಇನ್ನೊಂದೆದೆಡೆ ತನಿಖೆಗೆ ನಿವೃತ್ತ ನ್ಯಾಯಮೂರ್ತಿ, ಐಎಎಸ್ ಅಧಿಕಾರಿ ನೇತೃತ್ವದ ಸಮಿತಿ ಆಯೋಗ ರಚಿಸಿದೆ. ರಾಜ್ಯಪಾಲರು ಅನುಮತಿ ನೀಡುವಾಗ ಇದನ್ನೇ ಉಲ್ಲೇಖಿಸಿದ್ದಾರೆ ಎಂದರು. ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದು ಮಾಡಿತ್ತು. ಆದರೆ ಹೈಕೋರ್ಟ್ ಆ ತೀರ್ಪು ಯಾವುದೇ ಕಾನೂನು ಆಗಿರುವುದಿಲ್ಲ. ಹೀಗಾಗಿ ಆ ತೀರ್ಪನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಗ ಸಚಿವ ಸಂಪುಟ ನೀಡಿದ್ದ ಸೂಚನೆಯನ್ನು ರಾಜ್ಯಪಾಲರು ಉಲ್ಲೇಖಿಸಿರಲಿಲ್ಲ.ಹೀಗಾಗಿ ವಿಭಾಗೀಯ ಪೀಠ ಅದನ್ನು ರಾಜ್ಯಪಾಲರ ಮರುಪರಿಶೀಲನೆಗೆ ಸೂಚಿಸಿತ್ತು. ಎಫ್ ಐಆದಾಖಲಾದ ಬಳಿಕವೂ ಮುಖ್ಯಮಂತ್ರಿಗಳಿಗೆ ದೊರೆಯಲಿದೆ. ಪ್ರಶ್ನಿಸಲು ಅವಕಾಶ ರಾಜ್ಯಪಾಲರ ಆದೇಶ ರದ್ದುಪಡಿಸದಂತೆ ಮನವಿ ಮಾಡಿದರು.
ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್
ಟಿ.ಜೆ. ಅಬ್ರಾಹಂ ಪರ ವಕೀಲರ ವಾದ: ಟಿ.ಜೆ. ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದಿಸಿ, ಈ ಕೇಸ್ ನಲ್ಲಿ ಮೊದಲಿಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸದ್ದಕ್ಕೆ ರಾಜ್ಯಪಾಲರ ಅನುಮತಿ ಕೇಳಲಾಯಿತು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 17ಎ ಅಡಿ ಖಾಸಗಿ ದೂರುದಾರರು ಅನುಮತಿ ಪಡೆಯಬಹುದು. ಹೀಗಾಗಿ ರಾಜ್ಯಪಾಲರ ಅನುಮತಿ ಪಡೆದು ದೂರು ದಾಖಲಿಸಲಾಗಿದೆ ಎಂದರು. ಭೂಮಿಯ ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಭೂಮಿ ಪರಿವರ್ತನೆ ಆದಾಗಲೂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಈ ಬೆಳವಣಿಗೆ ನಡೆದಾಗಲೆಲ್ಲಾ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರು. 2021ರಲ್ಲಿ ಪರಿಹಾರದ ನಿವೇಶನಗಳನ್ನು ನೀಡುವ ಕುರಿತ ನಿರ್ಣಯಗಳನ್ನು ಕೈಗೊಳ್ಳುವ ಸಭೆಗಳಲ್ಲಿ ಮುಖ್ಯಮಂತ್ರಿಯವರ ಪುತ್ರ (ಡಾ.ಯತೀಂದ್ರ) ಸಹ ಭಾಗಿಯಾಗಿದ್ದರು ಎಂದರು.