Asianet Suvarna News Asianet Suvarna News

ಪ್ರಾಸಿಕ್ಯೂಷನ್‌: ಸಿಎಂ ಸಿದ್ದರಾಮಯ್ಯಗೆ ಇಂದು ಮತ್ತೆ ಟೆನ್ಷನ್‌, ಹೈಕೋರ್ಟ್‌ನಲ್ಲಿಂದು ವಿಚಾರಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯು ಶನಿವಾರ ಮುಂದುವರೆಯಲಿದ್ದು, ಇಡೀ ರಾಜ್ಯದ ಗಮನ ಕಲಾಪದ ಮೇಲೆ ನೆಟ್ಟಿದೆ. 

Prosecution Tension again for CM Siddaramaiah today hearing in High Court gvd
Author
First Published Aug 31, 2024, 7:13 AM IST | Last Updated Aug 31, 2024, 7:13 AM IST

ಬೆಂಗಳೂರು (ಆ.31): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಯು ಶನಿವಾರ ಮುಂದುವರೆಯಲಿದ್ದು, ಇಡೀ ರಾಜ್ಯದ ಗಮನ ಕಲಾಪದ ಮೇಲೆ ನೆಟ್ಟಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಗುರುವಾರ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘೀವಾದ ಮಂಡಿಸಿ ಪ್ರಾಸಿಕ್ಯೂಷನ್ ಕ್ರಮವನ್ನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಅದರೊಂದಿಗೆ ಸಿಂಘೀ ಅವರ ವಾದ ಪೂರ್ಣಗೊಂಡಿದ್ದು, ರಾಜ್ಯಪಾಲರ ಕಚೇರಿ ಹಾಗೂ ಖಾಸಗಿ ದೂರುದಾರರ ಪರ ವಕೀಲರು ಪ್ರತಿ ವಾದ ಮಂಡನೆಗೆ ಶನಿವಾರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ಕ್ಕೆ ಆರಂಭವಾಗ ಲಿರುವ ಕಲಾಪದಲ್ಲಿ ಪ್ರತಿವಾದಿಗಳ ವಾದ ಮಂಡನೆಯಾಗಲಿದೆ. ಪ್ರತಿವಾದಿಗಳ (ರಾಜ್ಯಪಾಲರ ಕಚೇರಿ ಹಾಗೂ ಖಾಸಗಿ ದೂರುದಾರರ ಪರ ವಕೀಲರು) ವಾದಕ್ಕೆ ಉತ್ತರ ನೀಡಲು ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಿದರೆ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡುವ ಸಾಧ್ಯತೆಯಿದೆ. ಒಂದೊಮ್ಮೆ ಅರ್ಜಿದಾರರ ಪರವಕೀಲರು ಹಾಗೂ ಪ್ರತಿವಾದಿಗಳ ವಾದ-ಪ್ರತಿವಾದ ಪ್ರಕ್ರಿಯೆ ಶನಿವಾರವೇ ಪೂರ್ಣಗೊಂಡರೆ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಬಹುದು. 

ಆಗ, ಅಂತಿಮ ತೀರ್ಪು ಪ್ರಕಟವಾಗುವವರೆಗೆ ಪ್ರಾಸಿಕ್ಯೂ ಷನ್ ಆದೇಶ ಆಧರಿಸಿ ಆತುರದ ಕ್ರಮಕೈಗೊಳ್ಳಬಾರದು, ಪ್ರಕರಣ ಕುರಿತು ಸಿಬಿಐ ಅಥವಾ ಮತ್ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯತನಿಖೆಗೆ ಆದೇಶಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ದಾಖ ಲಿಸಿರುವ ದೂರಿನ ಕುರಿತು ಕಾಯ್ದಿರಿಸಿರುವ ತೀರ್ಪನ್ನು ಮುಂದೂಡಬೇಕು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸುವ ಮಧ್ಯಂತರ ಆದೇಶ ವಿಸ್ತರಿಸುವ ಸಾಧ್ಯತೆ ಇರುತ್ತದೆ. 

ಛತ್ರಪತಿ ಶಿವಾಜಿ ಮಹಾರಾಜ್‌ ಕಾಲಿಗೆ ತಲೆ ಇಟ್ಟು ಕ್ಷಮೆ ಕೋರುವೆ: ಪ್ರಧಾನಿ ಮೋದಿ

ಕುತೂಹಲ ಕೆರಳಿಸಿರುವ ಪ್ರಕರಣ: ಹೈಕೋರ್ಟ್ ವಿಚಾರಣೆಯ ಫಲಿತಾಂಶ ಏನಾಗಬಹುದು ಎಂಬ ತೀವ್ರ ಕುತೂಹಲ ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ವಲಯ ದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಶನಿವಾರವೇ ವಿಚಾರಣೆ ಪೂರ್ಣಗೊ ಳಿಸಿ ತೀರ್ಪು ಕಾಯ್ದಿರಿಸುತ್ತದೆಯೇ ಅಥವಾ ವಾದ-ಪ್ರತಿ ವಾದ ಪೂರ್ಣಗೊಳ್ಳದೆ ಅರ್ಜಿ ವಿಚಾರಣೆ ಮುಂದೂಡಿಕೆ ಕಾಣುತ್ತದೆಯೇ ಎಂಬ ಕುತೂಹಲ ಮುಂದುವರೆದಿದೆ. ಒಂದೊಮ್ಮೆ ತೀರ್ಪು ಪ್ರಕಟಿಸಿದರೆ ಸಿದ್ದರಾಮಯ್ಯ ಅವರ ಪರ ಇರಲಿದೆಯೇ? ಅಥವಾ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿಯಲಿದೆಯೇ ಎಂಬ ಕುತೂಹಲವೂ ಸಾರ್ವಜನಿಕ ಹಾಗೂ ರಾಜಕೀಯವಲಯದಲ್ಲಿದೆ.

Latest Videos
Follow Us:
Download App:
  • android
  • ios