ಲೋಕಸಭೆ ಚುನಾವಣೆಯಲ್ಲಿ ನಾವು ಏನು ಮಾಡಬಾರದು ಎಂಬುದಕ್ಕೆ ಇತ್ತೀಚಿನ ರಾಜ್ಯಗಳ ಚುನಾವಣೆ ಮಾದರಿಯಾಗಲಿದೆ. ಅದರಲ್ಲೂ ಮುಖ್ಯವಾಗಿ ಮಧ್ಯಪ್ರದೇಶದಲ್ಲಿದ್ದ 4 ಬಾರಿಯ ಅಧಿಕಾರ ವಿರೋಧಿ ಅಲೆಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್‌ ಸೋತಿದೆ. ಅಲ್ಲದೇ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಕಳೆದುಕೊಂಡಿದೆ. ಹೀಗಾಗಿ ವಿಪಕ್ಷಗಳ ಒಗ್ಗಟ್ಟು ಬಹಳ ಮುಖ್ಯ: ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ 

ನವದೆಹಲಿ(ಡಿ.23): ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಸೋತ ಬಳಿಕ, ಸಣ್ಣ ಪುಟ್ಟ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂಜರಿಕೆ ಏಕೆ ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಪಕ್ಷದ ನಾಯಕರಿಗೆ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲಿ ನಾವು ಏನು ಮಾಡಬಾರದು ಎಂಬುದಕ್ಕೆ ಇತ್ತೀಚಿನ ರಾಜ್ಯಗಳ ಚುನಾವಣೆ ಮಾದರಿಯಾಗಲಿದೆ. ಅದರಲ್ಲೂ ಮುಖ್ಯವಾಗಿ ಮಧ್ಯಪ್ರದೇಶದಲ್ಲಿದ್ದ 4 ಬಾರಿಯ ಅಧಿಕಾರ ವಿರೋಧಿ ಅಲೆಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್‌ ಸೋತಿದೆ. ಅಲ್ಲದೇ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಕಳೆದುಕೊಂಡಿದೆ. ಹೀಗಾಗಿ ವಿಪಕ್ಷಗಳ ಒಗ್ಗಟ್ಟು ಬಹಳ ಮುಖ್ಯ’ ಎಂದು ಹೇಳಿದರು.

ಅರುಣಾಚಲ ಪ್ರದೇಶದಿಂದ ಗುಜರಾತ್, ಮತ್ತೆ ಆರಂಭಗೊಳ್ಳುತ್ತಿದೆ ಭಾರತ್ ಜೋಡೋ ಯಾತ್ರೆ!

ಮಧ್ಯಪ್ರದೇಶದಲ್ಲಿ ಇಂಡಿಯಾ ಕೂಟದ ಪಕ್ಷಗಳ ಜತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿರಲಿಲ್ಲ. ಮೈತ್ರಿಗೆ ಮ.ಪ್ರ. ಕಾಂಗ್ರೆಸ್‌ ಅಂದಿನ ಅಧ್ಯಕ್ಷ ಕಮಲ್‌ನಾಥ್‌ ಅಡ್ಡ ಹಾಕಿದ್ದರು. ಹೀಗಾಗಿ ರಾಹುಲ್ ಹೇಳಿಕೆ ಕಮಲ್‌ರನ್ನು ಉದ್ದೇಶಿಸಿದಂತಿತ್ತು.
ಅಲ್ಲದೇ ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಸರಿಯಾಗಿ ಪ್ರಚಾರ ಮಾಡಿಲ್ಲ ಎಂದು ರಾಹುಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.